ಫೋನ್‌ಪೇನಲ್ಲಿ ಇನ್ಮುಂದೆ ದೊರೆಯಲಿದೆ ಲಿಕ್ವಿಡ್‌ ಫಂಡ್‌..! ಎಫ್‌ಡಿಗಿಂತಲೂ ಹೆಚ್ಚಿನ ಲಾಭ..!


ಸಣ್ಣ ನಗರ ಮತ್ತು ಪಟ್ಟಣಗಳಲ್ಲಿನ ಬಳಕೆದಾರರನ್ನು ಗುರಿಯಾಗಿಸಿಕೊಂಡಿರುವ ಡಿಜಿಟಲ್ ಪೇಮೆಂಟ್‌ ವೇದಿಕೆ ಫೋನ್‌ಪೇ ಅನನ್ಯ ಉಳಿತಾಯ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆ ಜನರು ತಮ್ಮ ಉಳಿತಾಯ ಖಾತೆಗಳಲ್ಲಿರುವ ಹಣದ ಮೇಲೆ ಹೆಚ್ಚಿನ ಅಲ್ಪಾವಧಿಯ ಎಫ್‌ಡಿ ಮಾದರಿ ಲಾಭ ಗಳಿಸಲು ಸಹಾಯ ಮಾಡುತ್ತದೆ.

Advertisement

ಭಾರತದಲ್ಲಿ 175 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಕಂಪನಿಯಾಗಿರುವ ಫೋನ್‌ಪೇ ಮ್ಯೂಚುವಲ್ ಫಂಡ್‌ಗಳ ಮಾದರಿಯಲ್ಲಿ 'ಲಿಕ್ವಿಡ್ ಫಂಡ್' ಎಂದು ಕರೆಯಲ್ಪಡುವ ಯೋಜನೆ ಮೂಲಕ ಬ್ಯಾಂಕ್ ಮತ್ತು ಸರ್ಕಾರಿ ಸೆಕ್ಯುರಿಟಿಗಳಂತಹ ಸುರಕ್ಷಿತ ಸಾಧನಗಳಲ್ಲಿ ಹಣ ಹೂಡಿಕೆ ಮಾಡಲಿದೆ ಎಂದು ಕಂಪನಿ ತಿಳಿಸಿದೆ.

Advertisement
ಮಿನಿಮಮ್ ಬ್ಯಾಲೆನ್ಸ್‌ ಬೇಕಿಲ್ಲ

ಯಾವುದೇ ಲಾಕ್-ಇನ್ ಅವಧಿ ಇಲ್ಲ ಮತ್ತು ಗ್ರಾಹಕರು ಕನಿಷ್ಠ ಬ್ಯಾಲೆನ್ಸ್‌ ಕಾಯ್ದುಕೊಳ್ಳುವ ಅವಶ್ಯಕತೆಯು ಇಲ್ಲ. "ತೆರಿಗೆ ಉಳಿತಾಯ ನಿಧಿಗಳ ನಂತರ ಮ್ಯೂಚುಯಲ್ ಫಂಡ್‌ಗಳ ಜಾಗದಲ್ಲಿ ಇದು ನಮ್ಮ ಎರಡನೇ ಉತ್ಪನ್ನವಾಗಿದೆ, ನಮ್ಮ ಬಳಕೆದಾರರಿಗಾಗಿ ಸಂಪೂರ್ಣವಾಗಿ ಡಿಜಿಟಲ್ ಹೂಡಿಕೆ ಹರಿವನ್ನು ನಾವು ರಚಿಸಿದ್ದೇವೆ" ಎಂದು ಫೋನ್‌ಪೇ ಮ್ಯೂಚುವಲ್ ಫಂಡ್‌ಗಳ ಮುಖ್ಯಸ್ಥ ಟೆರೆನ್ಸ್ ಲೂಸಿಯನ್ ಹೇಳಿದ್ದಾರೆ.

ಸುರಕ್ಷಿತ ಮತ್ತು ಕಾಗದ ರಹಿತ

"ನಮ್ಮ ಬಳಕೆದಾರರು ತಮ್ಮ ಹಣದ ನಿರ್ವಹಣೆ ಮತ್ತು ಅವರ ಜೀವನವನ್ನು ಉತ್ತಮವಾಗಿ ನಿರ್ವಹಿಸಲು ನಾವು ಇಂತಹ ಹೆಚ್ಚಿನ ಆರ್ಥಿಕ ಪರಿಹಾರಗಳನ್ನು ನೀಡುವುದನ್ನು ಮುಂದುವರಿಸುತ್ತೇವೆ" ಎಂದು ಲೂಸಿಯನ್ ಹೇಳಿದರು. ಬಳಕೆದಾರರು ಸಂಪೂರ್ಣವಾಗಿ ಸುರಕ್ಷಿತ ಮತ್ತು ಕಾಗದರಹಿತ ಪ್ರಕ್ರಿಯೆಯಲ್ಲಿ 5 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಕನಿಷ್ಟ 500 ರೂ.ಗಳಷ್ಟು ಉಳಿತಾಯವನ್ನು ಪ್ರಾರಂಭಿಸಬಹುದು.

ತ್ವರಿತ ವಾಪಸಾತಿ

ಗ್ರಾಹಕರು ತಮ್ಮ ಹಣವನ್ನು ತಕ್ಷಣ ಹಿಂಪಡೆಯಬಹುದು. ಖಾತೆಯ ಶೇ.90ರಷ್ಟು ಹಣವನ್ನು ತ್ವರಿತವಾಗಿ ಹಿಂಪಡೆಯಬಹುದು. ದಿನಕ್ಕೆ 50,000 ರೂ. ಮಿತಿಯಿದೆ. ಹಾಗೂ 30 ನಿಮಿಷಗಳಲ್ಲಿ ಬಳಕೆದಾರರ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ.

80 ಲಕ್ಷಕ್ಕೂ ಹೆಚ್ಚು ಮಳಿಗೆ

'ಲಿಕ್ವಿಡ್ ಫಂಡ್' ಯೋಜನೆಯು ನಗರಗಳನ್ನು ಒಳಗೊಂಡಂತೆ ಸಣ್ಣ ಪಟ್ಟಣಗಳ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ, ಅವರು ಉಳಿತಾಯ ಖಾತೆಗಳನ್ನು ಮೀರಿದ ಪರಿಹಾರಗಳನ್ನು ಅನುಭವಿಸಲ್ಲ. ಫೋನ್‌ಪೇ ಈಗಾಗಲೇ ತನ್ನ ವಹಿವಾಟಿನ ಶೇ.56 ಕ್ಕಿಂತ ಹೆಚ್ಚು ಟೈಯರ್‌ II ಮತ್ತು ಟೈಯರ್ III ನಗರಗಳಿಂದ ನೋಡಿದೆ. 80 ಲಕ್ಷಕ್ಕೂ ಹೆಚ್ಚು ವ್ಯಾಪಾರಿ ಮಳಿಗೆಗಳಲ್ಲಿ ಫೋನ್‌ಪೇಯನ್ನು ಸ್ವೀಕರಿಸಲಾಗುತ್ತಿದೆ.

Best Mobiles in India

English Summary

PhonePe Users Can Now Earn FD Return Like Income, Thanks To Liquid Fund