ಅಗತ್ಯ ಕೆಲಸಗಳಿಗೆ ಆನ್‌ಲೈನ್‌ ಸೇವೆ ಬಳಸಿ; ಲಾಕ್‌ಡೌನ್‌ ಬೆಂಬಲಿಸಿ!


ಕೊರೊನಾ ವೈರಸ್‌ ಹರಡದಂತೆ ತಡೆಯಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಅಗತ್ಯ ಕ್ರಮಗಳನ್ನು ಕೈಗೊಂಡಿವೆ. ಸರ್ಕಾರ ದೇಶದಲ್ಲಿ 21 ದಿನಗಳ ಲಾಕ್‌ಡೌನ್ ಘೋಷಿಸಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ಮನೆಯಿಂದ ಹೊರಗೆ ಓಡಾಡದಂತೆ ಹೇಳಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ. ಮನೆಯಲ್ಲಿದ್ದರೇ ಅಗತ್ಯ ಕೆಲಸಗಳನ್ನು ಹೇಗೆ ನಿರ್ವಹಿಸುವುದು ಎನ್ನುವ ಆಲೋಚನೆ ಇದ್ದರೆ ಬಿಟ್ಟು ಬಿಡಿ. ಏಕೆಂದರೇ ಮನೆಯಿಂದಲೇ ನಿಮ್ಮ ಕೆಲಸಗಳನ್ನು ನಿರ್ವಹಿಸಲು ಆನ್‌ಲೈನ್ ತಾಣಗಳು ನೆರವಾಗುತ್ತವೆ.

Advertisement

ಹೌದು, ಆನ್‌ಲೈನ್ ಸೇವೆಗಳು ಬಳಕೆದಾರರ ಅಗತ್ಯ ಕೆಲಸಗಳನ್ನು ಸರಳವಾಗಿಸಿದ್ದು, ಸ್ಮಾರ್ಟ್‌ಫೋನ್ ಮೂಲಕವೇ ಎಲ್ಲ ಕಾರ್ಯಗಳನ್ನು ಮಾಡಿ ಬಿಡಬಹುದು. ವಿದ್ಯುತ್ ಬಿಲ್, ನೀರಿನ ಬಿಲ್, ಪ್ರಾಪರ್ಟಿ ಟ್ಯಾಕ್ಸ್‌, ಇನ್ಸೂರೆನ್ಸ್‌ ಕಂತು ಪಾವತಿ, ರೀಚಾರ್ಜ್ ನಂತಹ ಸೇವೆಗಳನ್ನು ಆನ್‌ಲೈನ್ ಮೂಲಕ ಮನೆಯಿಂದಲೇ ಪಾವತಿಸಬಹುದಾಗಿದೆ. ಆನ್‌ಲೈನ್‌ನಲ್ಲಿ ಪಾವತಿಸುವ ಪ್ರತಿ ಶುಲ್ಕ ಹಾಗೂ ಕಂತಿಗೂ ಇ-ರಶೀದಿ ಸಹ ಲಭ್ಯವಾಗುತ್ತದೆ. ಆನ್‌ಲೈನ್‌ ಸೇವೆಗಳಿಗೆ ಅಗತ್ಯವಾಗಿರುವ ಆಪ್ಸ್‌ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

Advertisement
ಗೂಗಲ್‌ ಪೇ

ಟೆಕ್ ದೈತ್ಯ ಗೂಗಲ್ ಸಂಸ್ಥೆಯ ಗೂಗಲ್‌ ಪೇ ಬಹುತೇಕ ಎಲ್ಲ ಸೇವೆಗಳನ್ನು ಒಂದೇ ಸೂರಿನಡಿ ನೀಡಿದೆ. ಬಳಕೆದಾರರು ಇಲ್ಲಿ ವಿದ್ಯುತ್ ಬಿಲ್, ಇನ್ಸೂರೆನ್ಸ್‌ ಪ್ರೀಮಿಯಂ, ಡಿಟಿಎಚ್ ರೀಚಾರ್ಜ್, ಮೊಬೈಲ್ ರೀಚಾರ್ಜ್, ಕೆಲವು ಮೆಟ್ರೊ ಸಿಟಿಗಳಲ್ಲಿ ಸಿಲಿಂಡರ್/ಗ್ಯಾಸ್ ಬುಕ್ಕಿಂಗ್ ಸೇವೆಗಳನ್ನು ಒಳಗೊಂಡಿದೆ. ಈಗಾಗಲೇ ಹಣ ವರ್ಗಾವಣೆಗೆ ಈ ಆಪ್‌ ಅನ್ನು ಅನೇಕರು ಬಳಕೆ ಮಾಡುತ್ತಿದ್ದಾರೆ.

ಪೋನ್‌ ಪೇ-PhonePe

ಪೋನ್ ಪೇ ಸಹ ಒಂದು ಉತ್ತಮ ಆನ್‌ಲೈನ್ ಪೇಮೆಂಟ್ ಮಾಡುವ ಆಪ್‌ ಆಗಿದ್ದು, ಮೊದಲು ನಿಮ್ಮ ಬ್ಯಾಂಕ್ ಖಾತೆಯನ್ನು ಆಪ್‌ನಲ್ಲಿ ಲಿಂಕ್ ಮಾಡಿಕೊಂಡು ನಂತರ ನೀವು ಈ ಆಪ್‌ನಲ್ಲಿ ವಿದ್ಯುತ್ ಬಿಲ್, ನೀರಿನ ಬಿಲ್, ಇನ್ಸೂರೆನ್ಸ್‌ ಕಂತು, ಹಣ ವರ್ಗಾವಣೆ. ಸೇರಿದಂತೆ ಇನ್ನು ಅನೇಕ ಅಗತ್ಯ ಸೇವೆಗಳು ಲಭ್ಯ ಇವೆ. ಬಳಕೆಯು ಸಹ ಸರಳ ಮತ್ತು ಸುರಕ್ಷಿತವಾಗಿದೆ. ಪೇಮೆಂಟ್ ನಂತರ ಫೋನ್ ಪೇ ವತಿಯಿಂದ ಗಿಫ್ಟ್ ಕಾರ್ಡ್‌(ಸ್ಕ್ರಾಚ್ ಕಾರ್ಡ್‌) ಸಿಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ಇದರಲ್ಲಿ ಕ್ಯಾಶ್ ಬ್ಯಾಕ್ ಹಣ ಕೂಡ ದೊರೆಯಬಹುದು.

ಪೇಟಿಎಮ್-PayTM

ಪೆಟಿಎಮ್ ಮುಖಾಂತರ ನೀವು ವಿದ್ಯುತ್ ಬಿಲ್, ನೀರಿಲ್ ಬಿಲ್, ಮತ್ತು ಡಿಟಿಎಚ್, ರೀಚಾರ್ಜ್ ಇತರೆ ಯಾವುದೇ ಬಿಲ್ ಪೇಮೆಂಟ್ ಸಹ ಮಾಡಬಹುದಾಗಿದೆ. ಪ್ರತಿ ಪೇಮೆಂಟ್ ಕಾರ್ಯವೂ ಸುರಕ್ಷಿತವಾಗಿ ನಡೆಯುತ್ತದೆ. ಇದರೊಂದಿಗೆ ಪೇಟಿಎಮ್ ನವರು ಪೇಟಿಎಮ್ ಮಾಲ್ ಎಂಬ ಆನ್‌ಲೈನ್‌ ಶಾಪಿಂಗ್ ತಾಣವನ್ನು ಸಹ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿರುವ ಈ ಆಪ್ ಅನ್ನು ಅತ್ಯುತ್ತಮ ಆನ್‌ಲೈನ್ ಪೇಮೆಂಟ್ ತಾಣ ಎನ್ನಬಹುದು.

ಮೋಬಿಕ್ವಿಕ್-MobiKwik

ಮೊಬೈಲ್ ಪರ್ಸ್‌ಎಂದೇ ಕರೆಸಿಕೊಳ್ಳುವ ಈ ಮೋಬಿಕ್ವಿಕ್ ಸಹ ಒಂದು ಸುರಕ್ಷಿತ ಪೇಮೆಂಟ್ ತಾಣ ಆಗಿದ್ದು, ಇದರಲ್ಲಿ ವಿದ್ಯುತ್ ಬಿಲ್, ನೀರಿನ್ ಬಿಲ್, ಸೇರಿದಂತೆ ಇತರೆ ಬಿಲ್ ಪಾವತಿಯನ್ನು ಅತಿ ಸುಲಭವಾಗಿ ಹಾಗೂ ಸುರಕ್ಷಿತವಾಗಿಯು ಮಾಡಬಹುದಾಗಿದೆ. ನಿಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಬಹುದು ಮತ್ತು ನಿಮ್ಮ ಮೋಬಿಕ್ವಿಕ್ ಆಪ್ ಅಕೌಂಟ್‌ನಲ್ಲಿ ಹಣವನ್ನು ಜಮಾ ಮಾಡಿಡಬಹುದು ಪೇಮೆಂಟ್ ಮಾಡುವುದಿದ್ದಾಗ ಬಳಸಬಹುದು.

ಇಲಾಖೆ ವೆಬ್‌ಸೈಟ್‌

ಯುಪಿಐ ಪೇಮೆಂಟ್ ಆಪ್ಸ್‌ಗಳ ಜೊತೆಗೆ ಸಂಬಂಧಪಟ್ಟ ಇಲಾಖೆಯ ಅಧಿಕೃತ ವೈಬ್‌ಸೈಟ್‌ಗಳಲ್ಲಿಯೂ ಆನ್‌ಲೈನ್‌ ಪೇಮೆಂಟ್‌ ಪಾವತಿಸುವ ಅವಕಾಶ ನೀಡಲಾಗಿದೆ. ಇನ್ನು ಕೆಲವೊಂದು ಸಂಸ್ಥೆಗಳು ಆನ್‌ಲೈನ್ ಸೇವೆ ಒದಗಿಸುವ ಸಲುವಾಗಿ ಅಧಿಕೃತ ಆಪ್ಸ್‌ಗಳನ್ನು ಹೊಂದಿವೆ. ಗ್ರಾಹಕರು ಈ ತಾಣಗಳ ಮೂಲಕವು ಸೇವೆ ಪಡೆಯಬಹುದಾಗಿದೆ.

Best Mobiles in India

English Summary

Support Lockdown And Use These Online Services For Mandatory Tasks.