ವಾಟ್ಸ್‌ಆಪ್‌ಗೆ ಸೆಡ್ಡು ಹೊಡೆದ ಟೆಲಿಗ್ರಾಮ್‌..! ಬಂದಿವೆ ಹೊಸ ಫೀಚರ್ಸ್‌..!


ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿರುವ ಟೆಲಿಗ್ರಾಮ್ ಪ್ರತಿ ತಿಂಗಳು ಅಪ್‌ಡೇಟ್‌ ಆಗುವುದರೊಂದಿಗೆ ಉತ್ತಮ ವೈಶಿಷ್ಟ್ಯಗಳು ಮತ್ತು ಸುಧಾರಣೆಗಳನ್ನು ಕಾಣುತ್ತಿದೆ. ಈ ವರ್ಷದ ಆರಂಭದಲ್ಲಿ ಥೀಮ್ ಬಿಲ್ಡರ್, ಟೆಲಿಗ್ರಾಮ್ ಸಮೀಕ್ಷೆಗಳು, ಪರಿಶೀಲಿಸಬಹುದಾದ ಬಿಲ್ಡ್‌ಗಳು ಸೇರಿ ಹಲವು ವೈಶಿಷ್ಟ್ಯಗಳನ್ನು ಅಪ್ಲಿಕೇಶನ್ ಹೊರತಂದಿದೆ. ಬಳಕೆದಾರರ ಅನುಭವವನ್ನು ಹೆಚ್ಚಿಸಲು ಈ ಬಾರಿ ಟೆಲಿಗ್ರಾಮ್‌ ಉತ್ತಮ ಮತ್ತು ಸುಧಾರಿತ ವೈಶಿಷ್ಟ್ಯಗಳನ್ನು ಪರಿಚಯಿಸಿದೆ.

Advertisement

ಟೆಲಿಗ್ರಾಮ್ V5.15 ಅಪ್‌ಡೇಟ್‌ ಆವೃತ್ತಿ, ಫಾಸ್ಟ್ ಮೀಡಿಯಾ ವೀವರ್‌, ನವೀಕರಿಸಿದ ಪ್ರೊಫೈಲ್ ಪುಟಗಳು, ಪೀಪಲ್‌ ನಿಯರ್‌ಬೈ 2.0 ಮತ್ತು ಹೆಚ್ಚಿನವುಗಳಂತಹ ಹೊಸ ಫೀಚರ್‌ಗಳನ್ನು ಪರಿಚಯಿಸಿದೆ. ವಾಟ್ಸ್‌ಆಪ್‌ನೊಂದಿಗೆ ಸ್ಪರ್ಧೆಯಲ್ಲಿರುವ ಟೆಲಿಗ್ರಾಮ್ ನವೀಕರಣಗಳಿಂದ ಬಳಕೆದಾರರನ್ನು ಆಕರ್ಷಿಸುತ್ತಿದೆ. ಟೆಲಿಗ್ರಾಮ್ V5.15 ಅಪ್‌ಡೇಟ್‌ನಲ್ಲಿ ಪರಿಚಯಿಸಲಾದ ಹೊಸ ಫೀಚರ್‌ಗಳ ಬಗ್ಗೆ ಒಂದಿಷ್ಟು ಮಾಹಿತಿ.

Advertisement
ಫಾಸ್ಟ್‌ ಮೀಡಿಯಾ ವೀವರ್‌

ಮೊದಲನೆಯದಾಗಿ, ಟೆಲಿಗ್ರಾಮ್ ಫಾಸ್ಟ್‌ ಮೀಡಿಯಾ ವೀವರ್‌ ಫೀಚರ್‌ನ್ನು ಹೊರತಂದಿದೆ, ಇದು ಬಳಕೆದಾರರು ಸ್ಕ್ರೀನ್‌ ಮೇಲೆ ಬಲ ಅಥವಾ ಎಡ ಅಂಚುಗಳನ್ನು ಟ್ಯಾಪ್ ಮಾಡುವ ಮೂಲಕ ಮೀಡಿಯಾ ಫೈಲ್‌ಗಳನ್ನು ಬ್ರೌಸ್ ಮಾಡಲು ಅನುಮತಿಸುತ್ತದೆ. ಈ ಅಪ್‌ಡೇಟ್‌ ಅಪ್ಲಿಕೇಶನ್‌ನ ಎಲ್ಲಾ ಮಾಧ್ಯಮ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಬಳಕೆದಾರರು ಗಮನಿಸಬೇಕು. ಟೆಲಿಗ್ರಾಮ್ ಹೊರತಂದಿರುವ ಇತರ ಹೊಸ ನವೀಕರಣಗಳೊಂದಿಗೆ ಫಾಸ್ಟ್ ಮೀಡಿಯಾ ವೀವರ್‌f ಸಹ ಕಾರ್ಯನಿರ್ವಹಿಸುತ್ತದೆ.

ನವೀಕರಿಸಿದ ಪ್ರೊಫೈಲ್ ಪುಟಗಳು

ಟೆಲಿಗ್ರಾಮ್ ಅಪ್ಲಿಕೇಶನ್‌ನಲ್ಲಿನ ಎಲ್ಲಾ ಪ್ರೊಫೈಲ್ ಪುಟಗಳನ್ನು ನವೀಕರಿಸಲಾಗಿದ್ದು, ಮರುವಿನ್ಯಾಸಗೊಳಿಸಿದೆ. ಅಪ್‌ಡೇಟ್‌ಗಳೊಂದಿಗೆ, ಬಳಕೆದಾರರು ತಮ್ಮ ಉಳಿಸಿದ ಸಂಪರ್ಕಗಳ ಪ್ರೊಫೈಲ್ ಚಿತ್ರಗಳ ಮೂಲಕ ಸುಲಭವಾಗಿ ಬ್ರೌಸ್ ಮಾಡಲು ಸಾಧ್ಯವಾಗುತ್ತದೆ. ಇದಷ್ಟೇ ಅಲ್ಲದೇ, ಟೆಲಿಗ್ರಾಮ್‌ನ ಬ್ಲಾಗ್ ಪೋಸ್ಟ್‌ ಪ್ರಕಾರ, ಅಪ್ಲಿಕೇಶನ್‌ನಲ್ಲಿನ ಎಲ್ಲಾ ಪ್ರೊಫೈಲ್‌ಗಳು ಹೆಚ್ಚು ಕ್ರಿಯಾತ್ಮಕವಾಗಿರುತ್ತವೆ. ಬಳಕೆದಾರರು ಅಪ್ಲಿಕೇಶನ್‌ನಲ್ಲಿ ಇತರ ವ್ಯಕ್ತಿಗಳೊಂದಿಗೆ ಹಂಚಿಕೊಂಡಿರುವ ಫೋಟೋಗಳು, ವಿಡಿಯೋಗಳು ಮತ್ತು ಲಿಂಕ್‌ಗಳನ್ನು ಸುಲಭವಾಗಿ ನೋಡಲು ಸಾಧ್ಯವಾಗುತ್ತದೆ.

ಪೀಪಲ್‌ ನಿಯರ್‌ಬೈ 2.0

ಟೆಲಿಗ್ರಾಮ್ ಪೀಪಲ್‌ ನಿಯರ್‌ಬೈ 2.0 ಅನ್ನು ಪರಿಚಯಿಸಿದೆ. ಈ ನವೀಕರಣವನ್ನು ಕಂಪನಿಯು ಜೂನ್‌ನಲ್ಲಿ ಬಳಕೆದಾರರ ಬಳಕೆಗೆ ತಂದಿತ್ತು. ಇದು ಬಳಕೆದಾರರಿಗೆ ತಮ್ಮ ಸಂಪರ್ಕ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಇತ್ತೀಚಿನ ನವೀಕರಣದೊಂದಿಗೆ, ಬಳಕೆದಾರರು ಹೊಸ ಜನರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಭೇಟಿ ಮಾಡಲು ಸಾಧ್ಯವಾಗುತ್ತದೆ. ಇತ್ತೀಚಿನ ಅಪ್‌ಡೇಟ್‌ ಅನುಭವಿಸಲು, ಬಳಕೆದಾರರು ಸಂಪರ್ಕಗಳ ವಿಭಾಗಕ್ಕೆ ಹೋಗಬೇಕು ಮತ್ತು ಪೀಪಲ್‌ ನಿಯರ್‌ಬೈ ಸೇರಿಸಿ ಕ್ಲಿಕ್ ಮಾಡಿ. ಈ ವಿಭಾಗದಲ್ಲಿ, ಹೊಸ ಫೀಚರ್‌ ಸಕ್ರಿಯಗೊಳಿಸಿದ ನಂತರ ಹತ್ತಿರದ ಎಲ್ಲಾ ಸಕ್ರಿಯ ಪ್ರೊಫೈಲ್‌ಗಳನ್ನು ಬಳಕೆದಾರರು ನೋಡಲು ಸಾಧ್ಯವಾಗುತ್ತದೆ. ಮೇಕ್ ಮೈಸೆಲ್ಫ್ ಗೋಚರಿಸುವಿಕೆಯನ್ನು ಟ್ಯಾಪ್ ಮಾಡುವ ಮೂಲಕ ಬಳಕೆದಾರರು ತಮ್ಮ ಪ್ರೊಫೈಲ್ ಅನ್ನು ಗೋಚರಿಸುವ ಆಯ್ಕೆಯನ್ನು ಸಹ ಪಡೆಯುತ್ತಾರೆ, ಇದು ನಿಮ್ಮ ಪ್ರೊಫೈಲ್ ಅನ್ನು ಇತರ ಜನರಿಗೆ ಹುಡುಕಲು ಅನುವು ಮಾಡಿಕೊಡುತ್ತದೆ.

ಅನಿಮೇಟೆಡ್‌ ಎಮೋಜಿಗಳು

ಕೊನೆಯದಾಗಿ, ಟೆಲಿಗ್ರಾಮ್ ಹೊಸ ಆನಿಮೇಟೆಡ್ ಎಮೋಜಿಗಳನ್ನು ಸಹ ಹೊರತಂದಿದೆ. ಅಪ್‌ಡೇಟ್‌ ನಂತರ ಬಳಕೆದಾರರು 17 ಆನಿಮೇಟೆಡ್ ಎಮೋಜಿಗಳನ್ನು ಪಡೆಯುತ್ತಾರೆ. ಹೊಸ ಫೀಚರ್‌ಗಳನ್ನು ಆನಂದಿಸಲು ಬಳಕೆದಾರರು ತಮ್ಮ ಅಪ್ಲಿಕೇಶನ್‌ಗಳನ್ನು ಆಯಾ ಆಪ್ ಸ್ಟೋರ್‌ಗಳಲ್ಲಿ ನವೀಕರಿಸಬೇಕು.

Best Mobiles in India

English Summary

Telegram New Features Like PeopleNearby 2.0 Introduced For Android, iOS.