ಟೆಲಿಗ್ರಾಮ್‌ನಲ್ಲಿ ಬಂತು ಅಪ್‌ಡೇಟ್‌..! ಬಂದಿವೆ ಸಾಲು, ಸಾಲು ಹೊಸ ಫೀಚರ್ಸ್‌..!


ಜನಪ್ರಿಯ ಚಾಟ್‌ ಆಪ್‌ ಟೆಲಿಗ್ರಾಮ್‌ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಹೊಸ ಆವೃತ್ತಿ 5.13 ಅಪ್‌ಡೇಟ್‌ನ್ನು ಬಿಡುಗಡೆ ಮಾಡಿದೆ. ನವೀಕರಣದಲ್ಲಿ ಕಲರ್‌ ಗ್ರೆಡಿಯಂಟ್ಸ್‌, ಮಾದರಿಗಳೊಂದಿಗೆ ಸುಧಾರಿತ ಥೀಮ್ ಎಡಿಟರ್‌ ತರಲಾಗಿದೆ. ಇದರ ಜೊತೆ ಮೆಸೇಜ್‌ ಸೆಡ್ಯೂಲ್‌ನಲ್ಲೂ ಹೊಸ ಆಯ್ಕೆ ಸೇರಿಸುತ್ತಿದ್ದು, ರಿಸಿವರ್‌ ಆನ್‌ಲೈನ್‌ಗೆ ಬಂದಾಗ ಸಂದೇಶವನ್ನು ಕಳುಹಿಸುತ್ತದೆ. ಹೆಚ್ಚುವರಿಯಾಗಿ, ಟೆಲಿಗ್ರಾಮ್ ಬಳಕೆದಾರರು ಸ್ಥಳವನ್ನು ಹಂಚಿಕೊಳ್ಳುವಾಗ ಸುಲಭದ ಆಯ್ಕೆಗಳನ್ನು ಹೊಂದುತ್ತಾರೆ.

Advertisement

ಪ್ಲೇ ಸ್ಟೋರ್‌ನಲ್ಲಿ ಲಭ್ಯ

ಟೆಲಿಗ್ರಾಂನ ಹೊಸ ಅಪ್‌ಡೇಟ್‌ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಬಳಕೆದಾರರಿಗೆ ಲಭ್ಯವಿದೆ. ಮತ್ತು ಅದನ್ನು ಡೌನ್‌ಲೋಡ್ ಮಾಡಲು ಬಳಕೆದಾರರಿಗೆ ಶಿಫಾರಸು ಮಾಡಲಾಗುತ್ತಿದೆ. ಏಕೆಂದರೆ ಇದು ದೋಷ ಪರಿಹಾರ ಮತ್ತು ಕಾರ್ಯಕ್ಷಮತೆಯಲ್ಲಿ ಸುಧಾರಣೆಗಳನ್ನು ಸಹ ತರುತ್ತದೆ.

Advertisement
ಥೀಮ್ ಎಡಿಟರ್ 3.0

ಟೆಲಿಗ್ರಾಮ್ V5.13 ಅಪ್‌ಡೇಟ್ ಹೊಸ ಥೀಮ್ ಎಡಿಟರ್ 3.0 ಅನ್ನು ಸೆಟ್ಟಿಂಗ್ಸ್‌ನಲ್ಲಿ ತರುತ್ತದೆ, ಇದು ಟೆಲಿಗ್ರಾಮ್ ಚಾಟ್‌ಗಳಲ್ಲಿನ ಹೊಸ ಗ್ರೆಡಿಯಂಟ್ಸ್‌ನೊಂದಿಗೆ ಶೈಲಿಯನ್ನು ಬದಲಾಯಿಸಲು ಅನುವು ಮಾಡಿಕೊಡುತ್ತದೆ, ಹೊಸ ಬ್ಯಾಕ್‌ಗ್ರೌಂಡ್ ಮಾದರಿಗಳು ಮತ್ತು ಹೊಸ ಪೂರ್ವನಿರ್ಧರಿತ ಬಣ್ಣ ಯೋಜನೆಗಳನ್ನು ಸಹ ಒಳಗೊಂಡಿದೆ.

ಸೆಂಡ್‌ ವೆನ್‌ ಆನ್‌ಲೈನ್‌

ಈ ಅಪ್‌ಡೇಟ್‌ನೊಂದಿಗೆ ಬಂದಿರುವ ಮತ್ತೊಂದು ದೊಡ್ಡ ಫೀಚರ್‌ ಅಂದರೆ, ಸ್ವೀಕರಿಸುವವರು ಆನ್‌ಲೈನ್‌ಗೆ ಬಂದಾಗ ಸಂದೇಶಗಳನ್ನು ತಲುಪಿಸುವ ಸೆಂಡ್‌ ವೆನ್‌ ಆನ್‌ಲೈನ್‌ ಫೀಚರ್‌. ಈ ಹೊಸ ಆಯ್ಕೆಯನ್ನು ಸೆಡ್ಯೂಲ್‌ ಮೆಸೇಜ್‌ನಲ್ಲಿ ಸೇರಿಸಲಾಗಿದೆ. ಮತ್ತು ಇದು ತ್ವರಿತ ಸಂದೇಶ ಕಳುಹಿಸುವಿಕೆಯ ಅಪ್ಲಿಕೇಶನ್‌ಗೆ ಮತ್ತೊಂದು ಆಸಕ್ತಿದಾಯಕ ಸೇರ್ಪಡೆಯಾಗಿದೆ. ಸ್ವೀಕರಿಸುವವರ ಆನ್‌ಲೈನ್ ಸ್ಥಿತಿಯನ್ನು ನೋಡಲು ನಿಮಗೆ ಅನುಮತಿಸಿದರೆ ಮಾತ್ರ ಈ ಆಯ್ಕೆ ಲಭ್ಯವಿರುತ್ತದೆ.

ಲೊಕೇಷನ್ ಶೇರಿಂಗ್‌

ಈ ನವೀಕರಣದೊಂದಿಗೆ, ಟೆಲಿಗ್ರಾಮ್ ಸ್ಥಳಗಳನ್ನು ಹುಡುಕುವ ಪ್ರಕ್ರಿಯೆಯನ್ನು ಸುಲಭವಾಗಿಸಲು ನೋಡುತ್ತಿದೆ. ಲೊಕೇಷನ್‌ ಶೇರಿಂಗ್‌ನ್ನು ನವೀಕರಿಸಲಾಗಿದೆ, ಮತ್ತು ಬಳಕೆದಾರರು ಎಲ್ಲಾ ಆಯ್ಕೆಗಳ ಪಟ್ಟಿಯ ಮೂಲಕ ಸ್ಕ್ರೋಲ್ ಮಾಡುವ ಬದಲು, ಸ್ಥಳ ಆಯ್ಕೆ ಮಾಡಲು ನಕ್ಷೆಯಲ್ಲಿ ನೇರವಾಗಿ ಟ್ಯಾಪ್ ಮಾಡಬಹುದು.

ಸರ್ಚ್ ಆಯ್ಕೆ

ಅಪೇಕ್ಷಿತ ಕೀವರ್ಡ್ ಹೊಂದಿರುವ ಸಂದೇಶಗಳ ನಡುವೆ ಸುಲಭವಾಗಿ ಹುಡುಕಲು ಅನುವು ಆಗುವಂತೆ ಹೊಸ ಹುಡುಕಾಟ ಕಾರ್ಯವೂ ಟೆಲಿಗ್ರಾಮ್‌ನಲ್ಲಿ ಲಭ್ಯವಿದೆ. ಬಳಕೆದಾರರು ಎಲ್ಲಾ ಫಲಿತಾಂಶಗಳನ್ನು ಒಂದು ಪುಟದಲ್ಲಿ ನೋಡಲು ಬಯಸಿದರೆ ಬಾಟಮ್‌ ಬಾರ್‌ ಟ್ಯಾಪ್ ಮಾಡುವುದರಿಂದ ಲಿಸ್ಟ್‌ ವೀವ್‌ಗೆ ಬದಲಾಗುತ್ತದೆ. 20 ನಿಮಿಷಗಳಿಗಿಂತ ಹೆಚ್ಚಿನ ಸಮಯದ ಆಡಿಯೊ ಫೈಲ್‌ಗಳ ಪ್ಲೇಬ್ಯಾಕ್ ಅನ್ನು ಪುನರಾರಂಭಿಸುವಾಗ ಟೆಲಿಗ್ರಾಮ್ ಈಗ ನಿಮ್ಮ ಕೊನೆಯ ಬಾರಿ ಎಲ್ಲಿದ್ದಿರಿ ಎಂಬುದನ್ನು ನೆನಪಿಸುತ್ತದೆ.

ಕ್ವಿಕ್ ನೈಟ್‌ ಮೋಡ್‌

ಆಂಡ್ರಾಯ್ಡ್‌ಗಾಗಿ ಟೆಲಿಗ್ರಾಮ್ ನೈಟ್ ಮೋಡ್ ಸ್ವಿಚ್‌ಗೆ ತ್ವರಿತ ಪ್ರವೇಶದಂತಹ ಹೆಚ್ಚುವರಿ ಹೊಸ ವೈಶಿಷ್ಟ್ಯಗಳನ್ನು ಪಡೆಯುತ್ತದೆ, ಮತ್ತು ಮ್ಯಾಪ್ಸ್‌ ಕೂಡ ನೈಟ್ ಮೋಡ್ ಬೆಂಬಲವನ್ನು ಪಡೆಯುತ್ತವೆ. ಅಪ್‌ಡೇಟ್‌ ಹೊಸ ಅನಿಮೇಷನ್‌ಗಳನ್ನು ಸಹ ಪ್ಯಾಕ್ ಮಾಡುತ್ತದೆ. ಮತ್ತು ಪೂರ್ಣ ಟೆಕ್ಸ್ಟ್‌ ಬದಲು ನಕಲು ಮಾಡಲು ಅಥವಾ ಹಂಚಿಕೊಳ್ಳಲು ಮೆಸೇಜ್‌ನ ಒಂದು ಭಾಗವನ್ನು ಆಯ್ಕೆ ಮಾಡಲು ನಿಮಗೆ ಅನುಮತಿಸುತ್ತದೆ. ಐಒಎಸ್‌ನಲ್ಲಿ, ಟೆಲಿಗ್ರಾಮ್ ಅಪ್ಲಿಕೇಶನ್‌ನಾದ್ಯಂತ ಫಾಂಟ್ ಗಾತ್ರ ಸರಿಹೊಂದಿಸುವ ಫೀಚರ್‌ ತರುತ್ತದೆ, ಖಾತೆಗಳನ್ನು ವೇಗವಾಗಿ ಬದಲಾಯಿಸುವುದಷ್ಟೇ ಅಲ್ಲದೇ, ಲಿಂಕ್‌ಗಳನ್ನು ತೆರೆಯಲು ಬಾಹ್ಯ ಬ್ರೌಸರ್‌ಗಳನ್ನು ಕೂಡ ಈಗ ಬೆಂಬಲಿಸುತ್ತದೆ.

Best Mobiles in India

English Summary

Telegram Now Has A New Feature Called "Send When Online" With Improved Location Sharing