ನಿಮ್ಮ ಫೋಟೊ ಸ್ಟೈಲ್ ಬದಲಿಸಲು ನೆರವಾಗಲಿವೆ ಈ 5 ಆಪ್‌ಗಳು!


ಪ್ರಸ್ತುತ ಇಂದಿನ ಸ್ಮಾರ್ಟ್‌ಫೋನ್‌ಗಳಲ್ಲಿ 48ಎಂಪಿ ಅಥವಾ 64ಎಂಪಿ ಸೆನ್ಸಾರ್ ಇರುವ ಕ್ಯಾಮೆರಾಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅವುಗಳು ಅತ್ಯುತ್ತಮ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದ್ದು, ಫೋಟೊಗಳು ಉತ್ತಮವಾಗಿ ಮೂಡಿಬರಲಿವೆ. ಅದಾಗ್ಯೂ ಬಹುತೇಕ ಬಳಕೆದಾರರು ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಿಗೆ ಫೋಸ್ಟ್‌ ಮಾಡುವ ಮುನ್ನ ಫೋಟೊವನ್ನು ಎಡಿಟ್ ಮಾಡಲು ಮುಂದಾಗುತ್ತಾರೆ.

Advertisement

ಫೋಟೊ ಎಡಿಟ್‌ ಮಾಡಲು ಅನೇಕ ಆಪ್ಸ್‌ಗಳು ಲಭ್ಯ ಇದ್ದು, ಅವುಗಳಲ್ಲಿ ಕೆಲವು ಆಪ್ಸ್‌ ಅತ್ಯುತ್ತಮ ಫೀಚರ್ಸ್‌ ಹೊಂದಿವೆ. ಅವುಗಳ ಮೂಲಕ ಫೋಟೊಗಳ ಅಂದವನ್ನು ‌ದುಪ್ಪಟ್ಟು ಮಾಡಿಕೊಳ್ಳಬಹುದಾಗಿದೆ. ಅಗತ್ಯ ಮತ್ತು ಬೇಸಿಕ್ ಫೀಚರ್ಸ್‌ಗಳ ಜೊತೆಗೆ ವಿಶೇಷ ಎಫೆಕ್ಟ್‌, ಬ್ಲರ್, ಫಿಲ್ಟರ್ ಆಯ್ಕೆಗಳನ್ನು ಸಹ ಎಡಿಟಿಂಗ್ ಆಪ್ಸ್‌ಗಳು ಒಳಗೊಂಡಿವೆ. ಫೋನಿನಲ್ಲಿಯೇ ಸುಲಭವಾಗಿ ಫೋಟೊ ಎಡಿಟ್ ಮಾಡಲು ಬಳಕೆದಾರರಿಗೆ ನೆರವಾಗುವ ಐದು ಟಾಪ್ ಫೋಟೊ ಎಡಿಟ್ ಆಪ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

Advertisement
ಫೋಟೊಶಾಪ್ ಎಕ್ಸ್‌ಪ್ರೆಸ್ ಆಪ್‌

ಅಡೊಬ್ ಬಗ್ಗೆ ಬಹಳಷ್ಟು ಬಳಕೆದಾರರಿಗೆ ತಿಳಿದೆ ಇರುತ್ತದೆ. ಅಡೊಬ್‌ನ ಫೋಟೊಶಾಪ್‌ ಎಕ್ಸ್‌ಪ್ರೆಸ್‌ ಫೋಟೊ ಎಡಿಟಿಂಗ್ ಆಪ್‌ ಅತ್ಯುತ್ತಮ ಎಡಿಟಿಂಗ್ ಆಯ್ಕೆಗಳನ್ನು ಹೊಂದಿದೆ. ಈ ಆಪ್‌ ತ್ವರಿತ ಎಡಿಟ್‌ಗೆ ಅಗತ್ಯ ಫೀಚರ್‌ಗಳಾದ ಕ್ರಾಪ್‌, ರೋಟೇಟ್‌, ಫ್ಲಿಪ್‌ ಆಯ್ಕೆಗಳ ಜೊತೆಗೆ ಹಲವು ಎಫೆಕ್ಟ್‌, ಕಲರ್‌ ಆಯ್ಕೆ, ಆಟೋ ಫಿಕ್ಸ್‌, ಫ್ರೇಮ್‌, ಲಾರ್ಜ್‌ ಫೈಲ್‌ ಫೋಟೊಗಳ ಗಾತ್ರ ರೀಸೈಜ್‌ ಮಾಡುವ ಆಯ್ಕೆ ಸಹ ಇದೆ. ಇದರೊಂದಿಗೆ ಸಾಮಾಜಿಕ ತಾಣಗಳಿಗೆ ಶೇರ್‌ ಮಾಡುವ ಆಯ್ಕೆಗಳು ಇವೆ.

ಸ್ನಾಪ್‌ಸೀಡ್‌ ಫೋಟೊ ಎಡಿಟ್ ಆಪ್

ಆಂಡ್ರಾಯ್ಡ್‌ ಓಎಸ್‌ ಡಿವೈಸ್‌ಗಳಿಗಾಗಿಯೇ ಗೂಗಲ್ ಸ್ನಾಪ್‌ಸೀಡ್‌ ಫೋಟೊ ಎಡಿಟ್‌ ಆಪ್‌ ಅನ್ನು ಸಿದ್ಧಪಡಿಸಿದೆ. ಈ ಆಪ್ ಸುಮಾರು 29 ವಿವಿಧ ಎಡಿಟಿಂಗ್ ಟೂಲ್‌ ಆಯ್ಕೆಗಳನ್ನು ಹೊಂದಿದೆ. ಡ್ರಾಗ್‌ ಆಯ್ಕೆ, ಫಿಲ್ಟರ್‌ ಎಫೆಕ್ಟ್‌ಗಳ ಆಯ್ಕೆ, ರೋಟೇಟ್, ಎಚ್‌ಆರ್‌ಡಿ, ಬ್ರಶ್, ಗ್ಲಾಮರ್‌ ಗ್ಲೋ ಸೇರಿದಂತೆ ಹಲವು ಭಿನ್ನ ಆಯ್ಕೆಗಳು ಫೋಟೊಗಳಿಗೆ ವಿಶೇಷ ಟಚ್ ನೀಡಲಿವೆ. ಎಡಿಟ್‌ ಮಾಡಿರೊ ಫೋಟೊವನ್ನು ಸರಳವಾಗಿ ಗ್ಯಾಲರಿಗೆ ಸೇವ್ ಮಾಡಬಹುದು ಮತ್ತು ಅವುಗಳನ್ನು ಶೇರ್ ಮಾಡಬಹುದು.

ಯ್ಯೂಕ್ಯಾಮ್‌ ಪರ್ಫೆಕ್ಟ್‌ ಫೋಟೊ ಎಡಿಟ್ ಆಪ್

ಯ್ಯೂಕ್ಯಾಮ್ ಪರ್ಫೆಕ್ಟ್‌ ಆಪ್‌ನಲ್ಲಿ ಪೋರ್ಟರೆಟ್‌ ಫೋಟೊವನ್ನು ಬೇಗನೇ ಎಡಿಟ್ ಮಾಡಬಹುದಾಗಿದೆ. ಈ ಆಪ್‌ನಲ್ಲಿ ಒನ್‌ ಟಚ್‌ ಫಿಲ್ಟರ್, ಕ್ರಾಪ್, ರೋಟೇಟ್‌ ಆಯ್ಕೆಗಳನ್ನು ನೀಡಲಾಗಿದೆ. ಹಾಗೆಯೇ ಬ್ಯಾಕ್‌ಗ್ರೌಂಡ್‌ ಬ್ಲರ್, ಹೆಚ್‌ಆರ್‌ಡಿ, ಐ ಬ್ಯಾಗ್ ರಿಮೋವರ್, ಬಾಡಿ ಸ್ಲಿಮ್ಮರ್, ಥಿನ್ನರ್ ಆಯ್ಕೆಗಳು ಸಹ ಕಾಣಬಹುದಾಗಿದೆ. ಫೋಟೊವನ್ನು ಗ್ಯಾಲರಿಗೆ ಸೇವ್ ಮಾಡುವ ಆಯ್ಕೆ ಮತ್ತು ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ಇತರೆ ಸಾಮಾಜಿಕ ತಾಣಗಳಲ್ಲಿ ಶೇರ್ ಮಾಡುವ ಆಯ್ಕೆ ಸಹ ನೀಡಲಾಗಿದೆ.

ಪಿಕ್ಸಲರ್ ಫೋಟೊ ಎಡಿಟಿಂಗ್ ಆಪ್

ಪಿಕ್ಸಲರ್ ಫೋಟೊ ಎಡಿಟಿಂಗ್ ಆಪ್‌ ಸಹ ಹಲವು ಆಕರ್ಷಕ ಎಡಿಟಿಂಗ್ ಫೀಚರ್ಸ್‌ಗಳನ್ನು ಹೊಂದಿದೆ. ಡ್ಯೂಡೆಲ್, ಪೆನ್ಸಿಲ್ ಡ್ರಾಯಿಂಗ್, ಇಂಕ್ ಸ್ಕೆಚ್‌ ಆಯ್ಕೆಗಳಿಂದ ಫೋಟೊವನ್ನು ಸ್ಟೈಲಿಶ್ ಲುಕ್‌ಗೆ ಸುಲಭವಾಗಿ ಬದಲಿಸಬಹುದು. ಅಷ್ಟೆಅಲ್ಲದೇ ಫೋಟೊ ಕೊಲಾಜ್, ಫೋಟೊ ಬ್ಯಾಕ್‌ಗ್ರೌಂಡ್‌ ಬ್ಲರ್ ಹಾಗೂ ಚೇಂಜ್, ಲೇಔಟ್‌, ಸ್ಪೇಸಿಂಗ್ ಆಯ್ಕೆಗಳನ್ನು ಈ ಆಪ್ ಒಳಗೊಂಡಿದೆ. 25 ಫೋಟೊಗಳ ಕೊಲಾಜ್ ಮಾಡಬಹುದಾಗಿದ್ದು, ಆಟೋ ಬ್ಯಾಲೆನ್ಸಿಂಗ್ ಆಯ್ಕೆ ಸಹ ಕಾಣಬಹುದಾಗಿದೆ.

ಫೋಟೊ ಡೈರೆಕ್ಟರ್ ಅಪ್ಲಿಕೇಶನ್

ಫೋಟೊ ಡೈರೆಕ್ಟರ್ ಮಲ್ಟಿಪರ್ಪಸ್ ಫೋಟೊ ಎಡಿಟಿಂಗ್ ಆಪ್‌ ಆಗಿದೆ. ಕ್ವಿಕ್ ಫೋಟೊ ಎಡಿಟಿಂಗ್ ಆಯ್ಕೆಗಳನ್ನು ಈ ಆಪ್ ಹೊಂದಿದ್ದು, ಇದರೊಂದಿಗೆ ನೇರವಾಗಿ ಫೋಟೊ ತೆಗೆಯುವಾಗಲೇ ಫೋಟೊ ಎಫೆಕ್ಟ್‌ಗಳನ್ನು ಬಳಸಬಹುದಾಗಿದೆ. ಬಳಕೆದಾರರು ಎಡಿಟ್‌ ಮಾಡಿರೊ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ನೇರವಾಗಿ ಶೇರ್ ಮಾಡುವ ಆಯ್ಕೆಯನ್ನು ನೀಡಲಾಗಿದೆ. ಆರ್ಟಿಸ್ಟಿಕ್ ಎಫೆಕ್ಟ್, ಎಚ್‌ಡಿಆರ್‌ ಆಯ್ಕೆ, ಫಾಗ್‌ನಂತಹ ಆಯ್ಕೆಗಳು ಇವೆ.

Best Mobiles in India

English Summary

Useing of these best photo editing apps you can edit your photos or may add filters to make it picture perfect. to know more visit to kannada.gizbot.com