ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲು ಟ್ರೂಕಾಲರ್‌ನಿಂದ ಹೊಸ ಫೀಚರ್‌..!


ಟ್ರೂ ಕಾಲರ್ ಇರುವುದೇ ನಮ್ಮ ರಕ್ಷಣೆಗೆ. ಅದೆಷ್ಟೋ ಸಂದರ್ಬದಲ್ಲಿ ಅಪರಿಚಿತ ಕರೆಗಳಿಂದ ಆಗುವ ಕಿರಿಕಿರಿಯನ್ನು ತಪ್ಪಿಸಿದ ಆಪ್ ಇದು. ಇದೀಗ ಈ ಆಪ್ ಮತ್ತಷ್ಟು ಮುಂದುವರಿದಿದ್ದು ಫೇಕ್ ನ್ಯೂಸ್ ಮತ್ತು ಸ್ಪ್ಯಾಮ್ ನ್ಯೂಸ್ ಗಳಿಗೆ ಕಡಿವಾಣ ಹಾಕುವುದಕ್ಕೂ ಮುಂದೆ ಬಂದಿದೆ.

Advertisement

ಮತ್ತೆ ಸಾರ್ವಜನಿಕರ ರಕ್ಷಣೆಗೆ ನಿಂತ ಟ್ರೂಕಾಲರ್:

Advertisement

ಹೌದು ಟ್ರೂ ಕಾಲರ್ ಮೂಲಕ ಇನ್ನು ಮುಂದೆ ನೀವು ಸುಳ್ಳು ಸುದ್ದಿ ಅಥವಾ ಅನುಮಾನಾಸ್ಪದ ಲಿಂಕ್ ಗಳನ್ನು ಕೂಡ ಪತ್ತೆ ಮಾಡಿಕೊಳ್ಳಬಹುದು. ಭಾರತದಲ್ಲಿ ಇತ್ತೀಚೆಗೆ ಸುಳ್ಳು ಸುದ್ದಿಗಳನ್ನು ವಾಟ್ಸ್ ಆಪ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿದೆ ಎಂಬ ವರದಿಯ ಅನ್ವಯ ಅದಕ್ಕೆ ಕಡಿವಾಣ ಹಾಕಲು ಎಲ್ಲಾ ಸಾಮಾಜಿಕ ಜಾಲತಾಣಗಳೂ ಕೂಡ ಪ್ರಯತ್ನಿಸುತ್ತಿದೆ. ಇದಕ್ಕೆ ಟ್ರೂ ಕಾಲರ್ ತನ್ನದೊಂದು ಟೂಲ್ ಬಿಡುಗಡೆ ಮಾಡುವ ಮೂಲಕ ಮತ್ತಷ್ಟು ಬೆಂಬಲವನ್ನು ಫೇಕ್ ನ್ಯೂಸ್ ಗಳ ತಡೆಗೆ ನೀಡುತ್ತಿದೆ.

ಟ್ರೂ ಕಾಲರ್ ಚಾಟ್ ನ ಆಂಡ್ರಾಯ್ಡ್ ಬೇಟಾ ವರ್ಷನ್ ಸದ್ಯ ಲಭ್ಯವಿದ್ದು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಇನ್ನು ಕೆಲವೇ ವಾರಗಳಲ್ಲಿ ಎಲ್ಲರಿಗೂ ಲಭ್ಯವಾಗುವ ಸಾಧ್ಯತೆ ಇದೆ.

Advertisement

ನಿರ್ಧಾರ ಕೈಗೊಳ್ಳಲು ಸಹಾಯಕ:

ಹೊಸ ಟ್ರೂ ಕಾಲರ್ ಚಾಟ್ ವೈಶಿಷ್ಟ್ಯತೆಯು ಸುಳ್ಳು ಲೇಖನಗಳು, ತಪ್ಪು ಮಾಹಿತಿ ನೀಡುವ ಬ್ಲಾಗ್ ಗಳು ಮತ್ತು ವೈರಸ್ ಅಥವಾ ಇತರೆ ತೊಂದರೆಗಳನ್ನು ನೀಡುವ ವೆಬ್ ಸೈಟ್ ಗಳ ಮಾಹಿತಿ ನೀಡುತ್ತದೆ. ಈ ಮಾಹಿತಿಯು ಪ್ರತಿಯೊಬ್ಬರಿಗೂ ನಿರ್ಧಾರವನ್ನು ಕೈಗೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಯಾವುದು ಸತ್ಯ, ಯಾವುದು ಅಸತ್ಯ ಎಂದು ತಿಳಿದು ಸುಳ್ಳು ಸುದ್ಧಿಗಳನ್ನು ಫಾರ್ವರ್ಡ್ ಮಾಡದೇ ಇರಲು ಸಹಾಯಕವಾಗಿರುತ್ತದೆ.


ಇದೊಂದು ಸ್ಪ್ಯಾಮ್ ಪ್ರೊಟೆಕ್ಷನ್ ಟೂಲ್:

ಎಸ್ಎಂಎಸ್ ಮತ್ತು ಚಾಟ್ ನಡುವೆ ಆಟೋ ಸ್ವಿಚ್, ಫುಲ್ ಮೀಡಿಯಾ ಸಪೋರ್ಟ್ ಸೇರಿದಂತೆ ಇತರೆ ಹಲವು ಇತರೆ ವೈಶಿಷ್ಟ್ಯತೆಗಳು ಕೂಡ ಇದರಲ್ಲಿ ಸೇರಿಕೊಳ್ಳುತ್ತಿದೆ. ಟ್ರೂ ಕಾಲರ್ ನ ಚಾಟ್ ಫೀಚರ್ ಸ್ಪ್ಯಾಮ್ ಪ್ರೊಟೆಕ್ಷನ್ ಟೂಲ್ ಆಗಿದ್ದು, ಭಾರತದಲ್ಲಿ ಹರಡುತ್ತಿರುವ ಮತ್ತು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿರುವ ಸುಳ್ಳು ಸುದ್ಧಿಗಳನ್ನು ತಡೆಯೆಂದೇ ನಿರ್ಮಿಸಲಾಗಿದೆಯಂತೆ.

ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಕೂಡ ಸಾಮಾಜಿಕ ಜಾಲತಾಣಗಳಿಗೆ ಸುಳ್ಳು ಸುದ್ದಿಗಳು ಹರಡದಂತೆ ಜಾಗೃತೆ ವಹಿಸುವಂತೆ ಎಚ್ಚರಿಗೆ ನೀಡಿತ್ತು. ಸುಳ್ಳು ಸುದ್ದಿ ರಹಿತ ಸಮಾಜ ನಿರ್ಮಾಣದ ಗುರಿಯನ್ನು ಈ ಫೀಚರ್ ಮೂಲಕ ಹೊಂದಲಾಗಿದೆ ಟ್ರೂ ಕಾಲರ್ ಸಂಸ್ಥೆಯ ಅಭಿಪ್ರಾಯವಾಗಿದೆ.

Best Mobiles in India

Advertisement

English Summary

Truecaller Chat With Spam, Fake News Protection Tool Launched for Android Users. To know more this visit kannada.gizbot.com