ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಈ ಆಪ್ ಇದ್ದರೇ, ಆಧಾರ್ ಕಾರ್ಡ್ ಬೇಕಿಲ್ಲ!


ಸಾಮಾನ್ಯವಾಗಿ ಎಷ್ಟೋ ಬಾರಿ ಯಾವುದೇ ಅಗತ್ಯ ಕೆಲಸಕ್ಕೆ ಹೋಗಿರುವಾಗ ಆಧಾರ ಕಾರ್ಡ್ ತರುವುದನ್ನೇ ಮರೆತಿರುತ್ತೆವೆ. ಕಡೆಗೆ ಆಧಾರ ನಂಬರ್ ಕೂಡಾ ಸಹ ನೆನಪಿರುವುದಿಲ್ಲ. ಆಗ ಮನೆಯವರಿಗೆ ಕರೆ ಮಾಡಿ ವಾಟ್ಸಪ್‌ಗೆ ಆಧಾರ ಫೋಟೊ ಕಳಿಸಲು ಹೇಳ್ತೆವೆ. ಆದರೆ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ 'ಎಂಆಧಾರ ಆಪ್' (mAadhaar) ಇದ್ದರೇ, ಇಂತಹ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

ಹೌದು, ಅನೇಕ ಕೆಲಸಗಳಿಗೆ ಆಧಾರವಾಗಿರುವ ಆಧಾರ ಕಾರ್ಡ್‌ ದೇಶದ ಪ್ರತಿಯೊಬ್ಬರಿಗೂ ಪ್ರಮುಖ ಮತ್ತು ಅಗತ್ಯ ಗುರುತಿನ ಕಾರ್ಡ್ ಆಗಿದೆ. ಸರ್ಕಾರದ ಬಹುತೇಕ ಸೌಲಭ್ಯಗಳನ್ನು ಪಡೆಯಲು ಆಧಾರ ಕಡ್ಡಾಯ ಆಗಿದೆ. ಪ್ರಸ್ತುತ ಆಧಾರಕಾರ್ಡ್‌ ಅನ್ನು ಸಾಫ್ಟ್‌ಕಾಫಿ ರೂಪದಲ್ಲಿಯೂ ಸ್ವೀಕರಿಸಲಾಗುತ್ತಿದೆ. ಅದಕ್ಕಾಗಿ UIDAI ಸಂಸ್ಥೆಯ ''ಎಂಆಧಾರ್‌ ಆಪ್''-mAadhaar ಆಪ್‌ ಅನ್ನು ಪರಿಚಯಿಸಿದೆ. ಈ ಆಪ್‌ ಹಲವು ಅನುಕೂಲಗಳನ್ನು ಒಳಗೊಂಡಿದೆ. ಹಾಗಾದರೆ mAadhaar ಆಪ್‌ನ ಅಗತ್ಯ ಪ್ರಯೋಜನೆಗಳೆನು ಎನ್ನುವ ಬಗ್ಗೆ ಮುಂದೆ ತಿಳಿಯೋಣ.

ಫೋನಿನಲ್ಲಿರಲಿ ಈ ಆಪ್

ಆಂಡ್ರಾಯ್ಡ್‌ ಮತ್ತು ಐಓಎಸ್‌ ಓಎಸ್‌ ಆಪ್‌ ಸ್ಟೋರ್‌ಗಳಲ್ಲಿ mAadhaar ಆಪ್ ಲಭ್ಯ ಇದೆ. ಹೀಗಾಗಿ ಸ್ಮಾರ್ಟ್‌ಫೋನ್‌ ಹಾಗೂ ಐಫೋನ್ ಬಳಕೆದಾರರಿಬ್ಬರೂ ಸಹ mAadhaar ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು.

13 ಭಾಷೆಗಳು ಬೆಂಬಲ

UIDAI ಸಂಸ್ಥೆಯ ಪರಿಚಯಿಸಿರುವ mAadhaar ಆಪ್‌ನಲ್ಲಿ ಒಟ್ಟು 13 ಭಾಷೆಗಳ ಆಯ್ಕೆ ಇವೆ. ಅವುಗಳೆಂದರೇ ಇಂಗ್ಲಿಷ್, ಹಿಂದಿ, ಕನ್ನಡ, ಉರ್ದು, ಮರಾಠಿ, ತಮಿಳ, ತೆಲಗು, ಪಂಜಾಬಿ, ಓಡಿಯಾ, ಬೆಂಗಾಲಿ, ಗುಜರಾತಿ, ಅಸ್ಸಾಂ, ಮಲಯಾಳಂ ಭಾಷೆಗಳ ಆಯ್ಕೆ ಇದೆ. ಮೆನು ಆಯ್ಕೆಯಲ್ಲಿ ಅಗತ್ಯ ಭಾಷೆ ಸೆಟ್ ಮಾಡಿಕೊಳ್ಳಬಹುದು.

ರೈಲ್ವೆ ಪ್ರಯಾಣಕ್ಕೂ mAadhaar

ನಿಮ್ಮ ಸ್ಮಾರ್ಟ್‌ಫೋನನಲ್ಲಿ mAadhaar ಆಪ್ ಇದ್ದರೇ, ನೀವು ರೈಲ್ವೆ ಪ್ರಯಾಣ ಮಾಡುವಾಗ ಗುರುತಿನ ಪುರಾವೆಗೆ ಇ-ಆಧಾರ ಕಾರ್ಡ್‌ ಅನ್ನೇ ತೋರಿಸಬಹುದು. ಹೀಗಾಗಿ ಆಧಾರ ಕಾರ್ಡ್ ಹಾರ್ಡ್‌ಕಾಪಿ ಜೊತೆಗೆ ತೆಗೆದುಕೊಂಡು ಹೋಗುವ ಅಗತ್ಯ ಇಲ್ಲ. ಏರ್‌ಪೋರ್ಟ್‌ನಲ್ಲಿಯೂ ಸಹ ಗುರುತಿನ ಪುರಾವೆಗೆ ಆಪ್‌ನಲ್ಲಿನ ಆಧಾರ ಕಾರ್ಡ್ ತೋರಿಸಬಹುದಾಗಿದೆ.

ಡೌನ್‌ಲೋಡ್ ಮಾಡಿರಿ

mAadhaar ಆಪ್‌ನಲ್ಲಿ ಆಧಾರ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವು ಸಹ ಇದೆ. ಹಾಗೆಯೇ ಅಗತ್ಯ ಸಂದರ್ಭಗಳಲ್ಲಿ ಆಧಾರ ಕಾರ್ಡ್‌ ಅನ್ನು ಲಾಕ್ ಮಾಡುವ ಸೌಲಭ್ಯವು ಸಹ ಈ ಆಪ್‌ನಲ್ಲಿ ಇದೆ.

ಇತರೆ ಪ್ರಯೋಜನಗಳು

* mAadhaarನಲ್ಲಿ ಸಮೀಷದ ಆಧಾರ ಕೇಂದ್ರಗಳನ್ನು ಹುಡುಕಬಹುದು. ತಿದ್ದುಪಡಿ, ವಿಳಾಸ ಬದಲಾವಣೆಯ ಸ್ಟೇಟಸ್‌ ಮಾಹಿತಿಯನ್ನು ಈ ಆಪ್‌ನಲ್ಲಿಯೇ ತಿಳಿದುಕೊಳ್ಳಬಹುದಾಗಿದೆ.

* ಈ ಆಪ್ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ದೃಢಿಕರಣ ಮಾಡಿಕೊಳ್ಳುವ ಆಯ್ಕೆ ಹೊಂದಿದೆ.

* ಕಳೆದುಹೋದ ಆಧಾರ ಎನ್‌ರೋಲ್‌ಮೆಂಟ್ ಐಡಿಯ ನಂಬರ್‌ ಅನ್ನ ಈ ಆಪ್‌ ನಲ್ಲಿ ಹಿಂಪಡೆಯಬಹುದಾಗಿದೆ.

* ಈ ಆಪ್ ಮೂಲಕ ಆನ್‌ಲೈನ್ ವಿಳಾಸ ಬದಲಾವಣೆ ಕೋರಿಕೆ ಸಲ್ಲಿಸಬಹುದಾಗಿದೆ.

Most Read Articles
Best Mobiles in India
Read More About: aadhar card services Download

Have a great day!
Read more...

English Summary

mAadhaar app is available for both Android and Apple users. by using mAadhaar app you can verify Email ID. to know more visit to kannada.gizbot.com