ನೋಕಿಯಾದ 55 ಇಂಚಿನ ಸ್ಮಾರ್ಟ್‌ ಟಿವಿ ಖರೀದಿಗೆ ಯೋಗ್ಯವೇ?..ಒಂದು ನೋಟ!


ಸದ್ಯ ಸ್ಮಾರ್ಟ್‌ ಟಿವಿಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಇದ್ದು, ಈ ನಿಟ್ಟಿನಲ್ಲಿ ಮಾರುಕಟ್ಟೆಗೆ ಹಲವು ಕಂಪನಿಗಳ ಸ್ಮಾರ್ಟ್‌ ಟಿವಿಗಳು ಲಗ್ಗೆ ಇಡುತ್ತಿವೆ. ಈ ಸಾಲಿಗಿಗ ಮೊಬೈಲ್ ಲೋಕದ ಅಘೋಷಿತ ದಿಗ್ಗಜ ನೋಕಿಯಾ ಸಂಸ್ಥೆಯು ಸಹ ಎಂಟ್ರಿ ನೀಡಿದೆ. ಇತ್ತೀಚಿಗಷ್ಟೆ ನೋಕಿಯಾ 55 ಇಂಚಿನ 'ಸ್ಮಾರ್ಟ್‌ಟಿವಿಯೊಂದನ್ನು ಲಾಂಚ್ ಮಾಡಿದ್ದು, ಇದೀಗ ಗ್ರಾಹಕರು ಅಚ್ಚರಿಯಿಂದ ನೋಡುವಂತಾಗಿದೆ.

Advertisement

ಹೌದು, ನೋಕಿಯಾ ಸಂಸ್ಥೆಯು ದೇಶಿಯ ಮಾರುಕಟ್ಟೆಗೆ ಹೊಸದಾಗಿ 55 ಇಂಚಿನ ಡಿಸ್‌ಪ್ಲೇಯ ಸ್ಮಾರ್ಟ್‌ ಟಿವಿಯನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ ಟಿವಿಯು 4K ಪ್ಯಾನೆಲ್ ಒಳಗೊಂಡಿದೆ. ಆಕರ್ಷಕ ಡಿಸೈನ್ ಸಹ ಪಡೆದಿದೆ. ಈ ಟಿವಿವು ಆಂಡ್ರಾಯ್ಡ್ ಆಧಾರಿಯವಾಗಿದ್ದು, ಆಂಡ್ರಾಯ್ಡ್ 9 ಪೈ ಓಎಸ್‌ನ ಸಪೋರ್ಟ್ ಹೊಂದಿದೆ. ಪ್ರೊಸೆಸರ್ ಸಹ ಉತ್ತಮ ಸಾಮರ್ಥ್ಯದಲ್ಲಿದೆ. ಇನ್ನು ನೋಕಿಯಾ ಸ್ಮಾರ್ಟ್‌ ಟಿವಿಯ ಇತರೆ ಫೀಚರ್ಸ್‌ಗಳ ಕಾರ್ಯವೈಖರಿ ಹೇಗಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

Advertisement
ಡಿಸ್‌ಪ್ಲೇ ರಚನೆ ಮತ್ತು ಡಿಸೈನ್

ನೋಕಿಯಾದ 55 ಇಂಚಿನ ಸ್ಮಾರ್ಟ್‌ಟಿವಿಯ ರಚನೆಯು ಮೊದಲ ನೋಟದಲ್ಲಿಯೇ ಗಮನಸೆಳೆಯುವಂತಿದೆ. ಇದರ ಡಿಸ್‌ಪ್ಲೇಯು ಅಲ್ಟ್ರಾ ಹೆಚ್‌ಡಿ ಮಾದರಿಯಲ್ಲಿದೆ. ಹಾಗೆಯೇ ಈ ಟಿವಿಯು ಡಿಸ್‌ಪ್ಲೇಯ ಸುತ್ತಲೂ ಅಂಚು ರಹಿತ ಡಿಸೈನ್‌ ಪಡೆದುಕೊಂಡಿದ್ದು, ಟಿವಿಯ ಬಾಹ್ಯ ಸೌಂದರ್ಯವನ್ನು ಮತ್ತಷ್ಟಿ ಹೆಚ್ಚಿಸಿದೆ. ಎಚ್‌ಡಿಆರ್‌ 10 ಬೆಂಬಲ್ ಸಹ ಒಳಗೊಂಡಿದೆ. ಟಿವಿ ಬಾಟಮ್‌ನಲ್ಲಿ ಸ್ಪೀಕರ್ಸ್‌ಗಳ ರಚನೆಯನ್ನು ಪಡೆದಿದೆ. ಮಾರುಕಟ್ಟೆಯಲ್ಲಿನ ಇತರೆ ಸ್ಮಾರ್ಟ್‌ ಟಿವಿಗಳಿಗೆ ಪೈಪೋಟಿ ನೀಡುವ ಅಂಶಗಳು ಹೆಚ್ಚಿವೆ.

ಪ್ರೊಸೆಸರ್ ಮತ್ತು ಓಎಸ್‌ ಯಾವುದು

ನೋಕಿಯಾದ 55 ಇಂಚಿನ ಸ್ಮಾರ್ಟ್‌ಟಿವಿಯು ಕ್ವಾಡ್‌ ಕೋರ್ ಪ್ಯೂರ್‌ಎಕ್ಸ್‌ (PureX) ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಪ್ರೊಸೆಸರ್‌ಗೆ ಪೂರಕವಾಗಿ ಆಂಡ್ರಾಯ್ಡ್‌ 9 ಪೈ ಓಎಸ್‌ ಬೆಂಬಲವನ್ನು ಒದಗಿಸಲಾಗಿದೆ. ಇನ್ನು ಪ್ರೊಸೆಸರ್ ವೇಗಕ್ಕೆ 2.25GB RAM ಸಾಮರ್ಥ್ಯ ಸಹ ಹೆಚ್ಚುವರಿ ಸಪೋರ್ಟ್‌ ನೀಡಲಾಗಿದೆ. ಹಾಗೆಯೇ ಇಂಟೆಲಿಜೆಂಟ್ ಡಿಮ್ಮಿಂಗ್ (Dimming) ತಂತ್ರಜ್ಞಾನವನ್ನು ಈ ಟಿವಿಯು ಒಳಗೊಂಡಿರುವುದು ಪ್ಲಸ್‌ ಪಾಯಿಂಟ್ ಆಗಿದೆ.

ಸೌಂಡ್‌ ಹೇಗಿದೆ ಮತ್ತು ವಿಶೇಷ ಫೀಚರ್ಸ್‌

ನೋಕಿಯಾದ 55 ಇಂಚಿನ ಸ್ಮಾರ್ಟ್‌ಟಿವಿಯು ಸೌಂಡ್ ವಿಷಯದಲ್ಲಿ ರಾಜಿ ಮಾಡಿಕೊಂಡಿಲ್ಲ ಎನ್ನಬಹುದಾಗಿದೆ. ಏಕೆಂದರೇ ಈ ಟಿವಿಯು ಕ್ಲಿಯರ್‌ ವ್ಯೂವ್ ಮತ್ತು ಕ್ಲಿಯರ್ ಸೌಂಡ್‌ ತಂತ್ರಜ್ಞಾನ್‌ವನ್ನು ಹೊಂದಿದ್ದು, ಜೆಬಿಎಲ್‌ ಸೌಂಡ್‌ ಸಪೋರ್ಟ್‌ ಸಹ ಟಿವಿಯಲ್ಲಿದೆ. ಜೊತೆಗೆ ಡಾಲ್ಬಿ ಅಟೋಮ್, ಡಾಲ್ಬಿ ಡಿಜಿಟಲ್ ಮತ್ತು ಡಿಟಿಎಸ್‌ TruSurround ತಂತ್ರಜ್ಞಾನದ ಸೌಂಡ್‌ ಕ್ವಾಲಿಟಿ ಸೌಲಭ್ಯಗಳನ್ನು ಪಡೆದುಕೊಂಡಿದೆ. ಟಿವಿ ಬಾಟಮ್‌ನಲ್ಲಿ ಫೈರಿಂಗ್ ಸ್ಪೀಕರ್ಸ್‌ಗಳಿವೆ. ಮ್ಯೂಸಿಕ್ ಪ್ರಿಯರಿಗೆ ಸಂಪೂರ್ಣ ಇಷ್ಟವಾಗುವುದರಲ್ಲಿ ಇನ್ನೊಂದು ಮಾತಿಲ್ಲ.

ಆಪ್ಸ್‌ ಬೆಂಬಲ ಮತ್ತು ವಾಯಿಸ್‌ ಕಂಟ್ರೋಲ್

ನೋಕಿಯಾದ ಹೊಸ ಸ್ಮಾರ್ಟ್‌ಟಿವಿಯು ಅಂಡ್ರಾಯ್ಡ್ ಮಾದರಿಯದ್ದಾಗಿದ್ದು, ಜನಪ್ರಿಯ ಆಪ್ಸ್‌ಗಳಿಗೆ ವೇದಿಕೆ ಒದಗಿಸುತ್ತದೆ. ಅದರಂತೆ ನೆಟ್‌ಫ್ಲಿಕ್ಸ್‌, ಯೂಟ್ಯೂಬ್ ಹಾಗೂ ಗೂಗಲ್ ಅಸಿಸ್ಟಂಟ್ ಸೌಲಭ್ಯಗಳನ್ನು ಸಹ ಈ ಟಿವಿವು ಹೊಂದಿರುವುದು ಪ್ರಮುಖ ಹೈಲೈಟ್ಸ್‌ಗಳಲ್ಲಿ ಒಂದಾಗಿದೆ. ಹಾಗೆಯೇ ಕ್ರೋಮ್‌ಕಾಸ್ಟ್‌ ಕನೆಕ್ಟ್ ಆಯ್ಕೆ ನೀಡಲಾಗದ್ದು, ಈ ಆಯ್ಕೆ ಮೂಲಕ ಸ್ಮಾರ್ಟ್‌ಫೋನ್‌ಗೆ ಸರಳವಾಗಿ ಕನೆಕ್ಟ್‌ ಮಾಡಬಹುದಾಗಿದೆ.

ಟಿವಿಯ ಬೆಲೆ ಮತ್ತು ಲಭ್ಯತೆ

ದೇಶಿಯ ಮಾರುಕಟ್ಟೆಗೆ ಎಂಟ್ರಿ ಆಗಿರುವ ನೋಕಿಯಾದ 55 ಇಂಚಿನ ಸ್ಮಾರ್ಟ್‌ಟಿವಿಯು 41,999ರೂ. ಪ್ರೈಸ್‌ಟ್ಯಾಗ್ ಅನ್ನು ಹೊಂದಿದೆ. ಇತ್ತೀಚಿಗಷ್ಟೆ ಪ್ರಮುಖ ಇ-ಕಾಮರ್ಸ್‌ ತಾಣಗಳಲ್ಲಿ ಮೊದಲ ಸೇಲ್ ಸಹ ಆರಂಭಿಸಿತ್ತು. ಗ್ರಾಹಕರು ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ಮತ್ತು ನೋಕಿಯಾ ವೆಬ್‌ಸೈಟ್‌ನಲ್ಲಿ ಖರೀದಿಸಬಹುದಾಗಿದೆ.

ಕೊನೆಯ ಮಾತು

ನೋಕಿಯಾ 55 ಇಂಚಿನ ಸ್ಮಾರ್ಟ್‌ ಟಿವಿಯು ಮಾರುಕಟ್ಟೆಯಲ್ಲಿರುವ ಪ್ರಮುಖ ಸ್ಮಾರ್ಟ್‌ ಟಿವಿಗಳಿಗೆ ಪ್ರಬಲ ಪೈಪೋಟಿ ಎನ್ನಬಹುದಾಗಿದೆ. ಏಕೆಂದರೇ ಇದರಲ್ಲಿ ಪ್ರಸ್ತುತ ಅಗತ್ಯ ಫೀಚರ್ಸ್‌ಗಳನ್ನು ಒದಗಿಸಲಾಗಿದೆ. ಹಾಗೆಯೇ ಡಿಸ್‌ಪ್ಲೇ ಗುಣಮಟ್ಟವು ಸಹ ಉನ್ನತ ಮಟ್ಟದಲ್ಲಿ ಇರುವುದು ವಿಶೇಷವಾಗಿದೆ. ಹೀಗಾಗಿ ನೋಕಿಯಾದ ಈ ಸ್ಮಾರ್ಟ್‌ ಟಿವಿ ಖರೀದಿಗೆ ಯೋಗ್ಯ ಎಂದು ಹೇಳಲು ಅಡ್ಡಿಯಿಲ್ಲ.

Best Mobiles in India

English Summary

Nokia Smart TV packs a quad-core processor and 2.25GB RAM. to know more visit to kannada.gizbot.com