ಸದ್ಯದಲ್ಲಿಯೇ ಬರಲಿವೆ ನಿಮ್ಮ ಊಹೆಗೂ ನಿಲುಕದ ಸ್ಮಾರ್ಟ್‌ ಟೆಕ್ ಉತ್ಪನ್ನಗಳು!


ಸದ್ಯ ವಿಶ್ವ ತಂತ್ರಜ್ಞಾನ ಕ್ಷೇತ್ರವು ಶರವೇಗದಲ್ಲಿ ಬೆಳವಣಿಗೆ ಆಗುತ್ತಿದ್ದು, ಜನಸಾಮಾನ್ಯರು ಊಹಿಸಲಾರದಂತಹ ಟೆಕ್ ಉತ್ಪನ್ನಗಳು, ಸ್ಮಾರ್ಟ್‌ ಡಿವೈಸ್‌ಗಳು ಮಾರುಕಟ್ಟೆಗೆ ಆವಿಷ್ಕಾರ ಆಗುತ್ತಿವೆ. ಮನುಷ್ಯರ ದೈನಂದಿನ ಅಗತ್ಯ ಕೆಲಸಗಳಿಗೂ ಪ್ರಸ್ತುತ ಪ್ರತ್ಯೇಕ ಸ್ಮಾರ್ಟ್‌ ಡಿವೈಸ್‌ಗಳು ಅಭಿವೃದ್ಧಿ ಆಗುತ್ತಿವೆ. ಎಷ್ಟೋ ಸ್ಮಾರ್ಟ್‌ ಡಿವೈಸ್‌ಗಳನ್ನು ಬಳಕೆದಾರರು ಕೇವಲ ಒಂದು ಬಟನ್ ಒತ್ತುವ ಮೂಲಕ, ಇಲ್ಲವೇ ಧ್ವನಿಯ ಸೂಚನೆ ನೀಡಿದರೇ ಸಾಕು ಕೆಲಸಗಳನ್ನು ಮಾಡಿ ಮುಗಿಸಿಬಿಡುವಂತಹ ಗ್ಯಾಡ್ಜೆಟ್ಸ್‌ಗಳು ಅನಾವರಣವಾಗುತ್ತಿವೆ.

Advertisement

ಹೌದು, ಟೆಕ್ ವಲಯದಲ್ಲಿ ಭಾರಿ ಹೊಸತನದ ಸ್ಮಾರ್ಟ್‌ ಡಿವೈಸ್‌ಗಳು ಎಂಟ್ರಿ ಕೊಟ್ಟಿವೆ. ಇಂತಹ ಊಹೆಗೆ ನಿಲುಕದ ಅಚ್ಚರಿಯ ಡಿವೈಸ್‌ಗಳು ಲಾಸ್ ವೇಗಸ್‌ನಲ್ಲಿ ನಡೆದ CES 2020 ಕಾರ್ಯಕ್ರಮದಲ್ಲಿ ಪ್ರದರ್ಶನ ಕಂಡಿವೆ. ಈ ಡಿವೈಸ್‌ಗಳು ಎಷ್ಟು ಸ್ಮಾರ್ಟ್‌ ಎನ್ನುವುದನ್ನು ನೀವು ಗೆಸ್‌ ಮಾಡಲು ಅಸಾಧ್ಯ ಎನ್ನಬಹುದು. ಏಕೆಂದರೇ ಅಚ್ಚರಿಯ ಸ್ಮಾರ್ಟ್‌ ಡಿವೈಸ್‌ಗಳು AI ತಂತ್ರಜ್ಞಾನವನ್ನು ಒಳಗೊಂಡಿದ್ದು, ಆಟೋಮ್ಯಾಟಿಕ್ ಕಾರ್ಯನಿರ್ವಹಣೆಯ ಸೌಲಭ್ಯ ಪಡೆದಿವೆ. ಇಂದಿನ ಈ ಲೇಖನದಲ್ಲಿ ನಾವು ತಿಳಿಸಿರುವ ಕೆಲವು ಸ್ಮಾರ್ಟ್‌ ಟೆಕ್ ಉತ್ಪನ್ನಗಳು ಖಂಡಿತಾ ನೀವು ಕಲ್ಪನೆಗೆ ಮೀರಿದ ಉತ್ಪನ್ನಗಳಾಗಿವೆ. ಹಾಗಾದರೇ ಆ ಅಚ್ಚರಿಯ ಉತ್ಪನ್ನಗಳು ಯಾವುವು ತಿಳಿಯಲು ಮುಂದೆ ಓದಿರಿ.

Advertisement
ಸ್ಯಾಂಗ್‌ಸಂಗ್ ಬಿಲ್ಲೆ-Samsung’s Ballie

ಸ್ಯಾಂಗ್‌ಸಂಗ್ ಸಂಸ್ಥೆಯ ಈ ಬಿಲ್ಲೆ ಚಂಡಿನಾಕಾರದ ಈ ಡಿವೈಸ್ ಸ್ಮಾರ್ಟ್‌ ಹೋಮ್ ಡಿವೈಸ್‌ ಮತ್ತು ರೋಬೋಟಿಕ್ ಮಾದರಿಯಲ್ಲಿದೆ. ಈ ಡಿವೈಸ್ ವೃತ್ತಾಕಾರರ ರಚನೆಯನ್ನು ಹೊಂದಿದ್ದು, ಕ್ಯಾಮೆರಾ ಹಾಗೂ ಸೆನ್ಸಾರ್ ಸೌಲಭ್ಯಗಳನ್ನು ಒಳಗೊಂಡಿದೆ. ಸೆನ್ಸಾರ್ ಮೂಲಕ ಸ್ಮಾರ್ಟ್‌ ಹೋಮ್ ಡಿವೈಸ್‌ಗಳನ್ನು ನಿಯಂತ್ರಿಸಬಹುದಾಗಿದೆ. ಬಳಕೆದಾರರು ಮನೆಯಲ್ಲಿ ಇಲ್ಲದಿದ್ದಾಗ ಅಗತ್ಯ ಕೆಲಸಗಳ ಫೋಟೊಗಳನ್ನು ಸೆರೆಹಿಡಿದು ಬಳಕೆದಾರರಿಗೆ ಕಳುಹಿಸುತ್ತದೆ. ನೋಡಲು ಬಾಲ್ ನಂತಿರುವ ಈ ಡಿವೈಸ್ ರೋಬೊಟ್ ತರಹ ಮನೆಯಲ್ಲಿ ಓಡಾಡುತ್ತಾ ಕಾರ್ಯನಿರ್ವಹಿಸುತ್ತದೆ. ಬಳಕೆದಾರರಿಗೆ ಅತ್ಯುತ್ತಮ ಸ್ಮಾರ್ಟ್‌ ಡಿವೈಸ್ ಕಂಟ್ರೋಲ್ ಸಾಧನವಾಗಿ ಗಮನಸೆಳೆಯಲಿದೆ.

ಬಿಎಮ್‌ಡ್ಲ್ಯೂ ಅರ್ಬನ್ ಸೂಟ್-BMW i3 Urban Suite

ಲಕ್ಸುರಿ ಕಾರುಗಳಿಂದ ಹೆಸರುವಾಸಿಯಾಗಿರುಬ ಬಿಎಮ್‌ಡ್ಲ್ಯೂ ಈಗ ಭಾರಿ ಬದಲಾವಣೆಯ ಕಾರು ಮಾದರಿನ್ನು ಪ್ರದರ್ಶಿಸಿದೆ. ಅದುವೇ ಬಿಎಮ್‌ಡ್ಲ್ಯೂ ಅರ್ಬನ್ ಸೂಟ್. ಈ ಹೊಸ ನಮೂನೆಯ ಕಾರು ಅದ್ದೂರಿ ತನದಿಂದ ಕೂಡಿದೆ. ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿದೆ. ಇದರಲ್ಲಿ ಕೋಟ್‌ಗಳಿಗೆ ಹ್ಯಾಂಗರ್, ಬಿಸಿಮಾಡಿದ ಕಪ್‌ಹೋಲ್ಡರ್‌ಗಳು ಮತ್ತು ಅಕ್ಷರಶಃ ಮೇಜಿನ ದೀಪದಂತಹ ವಿಶ್ವಾಸಗಳನ್ನು ಒಳಗೊಂಡಿದೆ. ಸಿಮ್ಯುಲೇಟೆಡ್ ಅಕೌಸ್ಟಿಕ್ ಸೀಲಿಂಗ್ ಮತ್ತು ನಿಮಗೆ ಎರಡನೇ ಪರದೆಯ ಅಗತ್ಯವಿರುವಾಗ ಸ್ಮಾರ್ಟ್ಫೋನ್ ಮಿರರಿಂಗ್ ಅನ್ನು ಬೆಂಬಲಿಸುವಂತಹ ಕೆಲವು ಆಹ್ಲಾದಕರ ಗೌಪ್ಯತೆ-ಕೇಂದ್ರಿತ ವೈಶಿಷ್ಟ್ಯಗಳಿವೆ.

ಡೆಲ್ ಗೇಮಿಂಗ್ ಕಿಟ್- Dell Alienware Concept UFO

ಕಂಪ್ಯೂಟರ್ ವಲಯದಲ್ಲಿ ಜನಪ್ರಿಯವಾಗಿರುವ ಡೆಲ್ ಸಂಸ್ಥೆಯು ಗೇಮಿಂಗ್‌ಗೆ ಭಿನ್ನ ಆಯಾಮ ನೀಡುವ ಉದ್ದೇಶದಿಂದ ಹೊಸ ಡಿವೈಸ್ ಅನಾವರಣ ಮಾಡಿದೆ. ಡೆಲ್ ಏಲಿನ್‌ವೇರ್ ಕಾನ್ಸೆಪ್ಟ್ ಯುಪಿಎಫ್ಓ ಹೆಸರಿನ ಡಿವೈಸ್ ಪ್ರದರ್ಶನ ಮಾಡಿದ್ದು, ಇದು ಗೇಮಿಂಗ್ ಸಂಬಧಿತ ಸಾಧನವಾಗಿದೆ. 8 ಇಂಚಿನ ಡಿಸ್‌ಪ್ಲೇ ಕಿಟ್ ಅನ್ನು ಹೊಂದಿದ್ದು, ಕಿಕ್‌ಸ್ಟ್ಯಾಂಡ್, ಡಿಟ್ಯಾಚೆಬಲ್ ಕಂಟ್ರೋಲ್, ಜೊತೆಗೆ ಎಕ್ಸ್‌ನಲ್ ಡಿವೈಸ್‌ಗೆ ಕನೆಕ್ಟ್‌ ಮಾಡಬಹುದಾಗಿದೆ. ಗೇಮ್ ಪ್ರಿಯರಿಗೆ ಈ ಡಿವೈಸ್ ಹೆಚ್ಚು ಕಂಫರ್ಟ್ ಅನುಭವ ನೀಡಲಿದೆ.

ಕೆನಾನ್ ಕ್ಯಾಮೆರಾ- Canon EOS-1D X Mark III

ಕ್ಯಾಮೆರಾ ಖರೀದಿಸುವಾಗ ಮೊಲದು ನೆನಪಾಗುವುದೇ ಕೆನಾನ್. ಅನೇಕ ಭಿನ್ನ ವಿಭಿನ್ನ ಕ್ಯಾಮೆರಾ ಮಾದರಿಗಳಿಂದ ಛಾಯಾಚಿತ್ರಗಾರರ ಗಮನ ಸೆಳೆದಿದೆ. ಕಕೆನಾನ್ ಈಗ ಮತ್ತೆ ಹೊಸ ಕೆನಾನ್ EOS-1D X Mark III ಕ್ಯಾಮೆರಾ ಅನಾವರಣ ಮಾಡಿದೆ. ಈ ಕ್ಯಾಮೆರಾವು ಫಾಸ್ಟೆಸ್ಟ್‌ ಡಿಜಿಕ್ ಎಕ್ಸ್‌ ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದೆ. ಪ್ರತಿ ಸೆಕೆಂಡ್‌ಗೆ 16 ಫ್ರೇಮ್‌ ಶೂಟ್ ಸಾಮರ್ಥ್ಯ ಒಳಗೊಂಡಿದ್ದು, 5.5K RAW ವಿಡಿಯೊ ಸೆರೆ ಹಿಡಿಯುವ ಸೌಲಭ್ಯ ಹೊಂದಿದೆ. ಹಾಗೆಯೇ ಪ್ರತಿ ಸೆಕೆಂಡ್‌ಗೆ 60 ಫ್ರೇಮ್‌ನ 4K ಗುಣಮಟ್ಟದ ವಿಡಿಯೊ ಮಾಡುವ ಸೌಲಭ್ಯ ಪಡೆದಿದೆ.

ಸ್ವೆಗ್ಗೆ ಎಸ್‌-ಪಾಡ್-Segway S-Pod

CES ಕಾರ್ಯಕ್ರಮದಲ್ಲಿ ಸ್ವೆಗ್ಗೆ ಎಸ್‌-ಪಾಡ್ ಸಹ ಹೆಚ್ಚು ಗಮನ ಸೆಳೆದಿದ್ದು, ಇದೊಂದು ಸೆಲ್ಫಿ ಬ್ಯಾಲೆನ್ಸ್‌ನ ವಾಹನ ಮಾದರಿ ಆಗಿದೆ. ಎರಡು ಗಾಲಿಗಳನ್ನು ಒಳಗೊಂಡಿದ್ದು, ಒಬ್ಬ ವ್ಯಕ್ತಿ ಪ್ರಯಾಣಿಸಬಹುದಾಗಿದೆ. ಪ್ರತಿ ಗಂಟೆಗೆ ಸುಮಾರು 24 ಮೈಲ್‌ ಚಲನೆಯ ಸಾಮರ್ಥ್ಯ ಹೊಂದಿದೆ. ಈ ಸ್ವೆಗ್ಗೆ ವಾಹನವನ್ನು ಪ್ರಯಾಣಿಕ S-Pod ಕಂಟ್ರೋಲ್‌ರನಿಂದ ನಿಯಂತ್ರಿಸಬಹುದಾಗಿದೆ. S-Pod ವಾಹನದಲ್ಲಿ ಇರುತ್ತದೆ. ನೋಡಲು ಹೀಗೆ ಕಾಣುವ ಈ ವಾಹನ ಹಲವು ಸುರಕ್ಷಾ ಕ್ರಮಗಳನ್ನು ಪಡೆದಿದೆ. ರಸ್ತೆ ತಿರುವುಗಳಲ್ಲಿ, ಸಿಗ್ನಲ್‌ ಮತ್ತು ಅಪಾಯದ ಸನ್ನಿವೇಶಗಳಲ್ಲಿ ತನ್ನಿಂದ ತಾನೆ ಬ್ರೇಕ್ ಹಿಡಿಯುವ ಸೌಲಭ್ಯ ಇದೆ.

ಲೆನೊವೊ ಫೋಲ್ಡ್‌-Lenovo ThinkPad X1 Fold

ಹಲವು ಗ್ಯಾಡ್ಜೆಟ್‌ ಉತ್ಪನ್ನಗಳಿಂದ ಲೆನೊವೊ ಸಂಸ್ಥೆ ಗ್ರಾಹಕರ ಮೆಚ್ಚುಗೆ ಪಡೆದಿದೆ. ಇದೀಗ ಹೊಸ ಪ್ರಯತ್ನಕ್ಕೆ ಮುಂದಾಗಿದ್ದು, ಫೋಲ್ಡೆಬಲ್ ಡಿಸ್‌ಪ್ಲೇಯ ಟ್ಯಾಬ್ಲೆಟ್‌ ಡಿವೈಸ್‌ ಪ್ರದರ್ಶಿಸಿದೆ. ThinkPad X1 ಹೆಸರಿನ ಈ ಡಿವೈಸ್ 13.3 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, stylus input ಮತ್ತು windows ink ಪೆನ್ ಆಪ್‌ರೇಟಿಂಗ್ ಸಪೋರ್ಟ್ ಪಡೆದಿದೆ. ಟೈಪಿಂಗ್ ಮಾಡಲು ಮ್ಯಾಗ್ನೇಟಿಕ್ ಕೀಬೋರ್ಡ್‌ ನೀಡಲಾಗಿದೆ. ನಾರ್ಮಲ್ ಲ್ಯಾಪ್‌ಟಾಪ್‌ಗಿಂತ ಭಿನ್ನವಾಗಿ ಕಾಣಿಸುತ್ತದೆ.

ಸ್ಯಾಮ್‌ಸಂಗ್ G9 ಮಾನಿಟರ್-Samsung Odyssey G9 Monitor

ಸದ್ಯ ಗೇಮಿಂಗ್ ಸಂಬಂಧಿತ ಮಾನಿಟರ್‌ಗಳಿಗೆ, ಪಿಸಿಗಳಿಗೆ, ಲ್ಯಾಪ್‌ಟಾಪ್‌ಗಳಿಗೆ ಭಾರಿ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಸ್ಯಾಮ್‌ಸಂಗ್ ಸಹ ಸ್ಯಾಮ್‌ಸಂಗ್ ಓಡಿಸಿಸ್ G9 ಮಾನಿಟರ್ ಅನಾವರಣ ಮಾಡಿದೆ. ಇನ್ನು ಈ ಗೇಮಿಂಗ್ ಮಾನಿಟರ್ 49 ಇಂಚಿನ ಗಾತ್ರದಲ್ಲಿದ್ದು, ಕರ್ವ್ ರಚನೆಯನ್ನು ಪಡೆದುಕೊಂಡಿದೆ. QLED, 1440P, ಡಿಸ್‌ಪ್ಲೇಯು ದೃಶ್ಯಗಳನ್ನು ನೈಜತೆ ಇವೆ ಎಂಬ ಅನುಭವ ಒದಗಿಸುವಂತಿದೆ. ಡಿಸ್‌ಪ್ಲೇಯು 1440 ಪಿಕ್ಸಲ್ ರೆಸಲ್ಯೂಶನ್ ಪಡೆದಿದ್ದು, ಅಡೆ ತಡೆ ಇಲ್ಲದ ಗೇಮಿಂಗ್‌ಗಾಗಿ AMD's FreeSync 2 and Nvidia's G-Sync ಸೌಲಭ್ಯ ಪಡೆದಿದೆ.

ರೋಬೊಟಿಕ್ ಡಾ.ಕಾರೊ-Dimension Robotics Dr. CaRo

ಈ ಸಾಧನದ ಹೆಸರು ಇದೆನಪ್ಪಾ ಈ ರೀತಿ ಇದೆ ಎಂದು ಅಚ್ಚರಿ ಆಗಬೇಡಿ. ಇದೊಂದು ಚಿಕಿತ್ಸಾ ಡಿವೈಸ್ ಆಗಿದ್ದು, ಪಾರ್ಶ್ವವಾಯು ಪೀಡಿತರಿಗೆ ಚಲನಶೀಲತೆಯನ್ನು ಸುಧಾರಿಸುವ ಉದ್ದೇಶದಿಂದ ತಯಾರಿಸಲಾಗಿದೆ ಎನ್ನಲಾಗಿದೆ. ರೋಗಿಯ ಕೈಕಾಲುಗಳ ನರ ಸಂಪರ್ಕ, ಶಕ್ತಿಯನ್ನು ವ್ಯವಸ್ಥೆಯನ್ನು ಉತ್ತಮಗೊಳಿಸುವುದು. ಸ್ನಾಯುಗಳನ್ನು ಬಲಪಡಿಸುವುದು. ಆದರೆ ಚಿಕಿತ್ಸೆ ವೆಚ್ಚ ದಿಬಾರಿಯಾಗಿರಲಿದೆ ಎನ್ನಲಾಗಿದೆ.

ಫಿಸ್ಕರ್ ಓಶಿಯನ್-Fisker Ocean

ಲಕ್ಸುರಿ ಎಸ್‌ಯುವಿ ಎಲೆಕ್ಟ್ರಾನಿಕ್ ಕಾರು ತಯಾರಿಕೆಯಿಂದ ಗುರುತಿಸಿಕೊಂಡಿರುವ ಫಿಸ್ಕರ್ ಸಂಸ್ಥೆಯು ಹೊಸದಾಗಿ ಓಶಿಯನ್ ಹೆಸರಿನ ದುಬಾರಿ ಕಾರೊಂದನ್ನು ಪರಿಚಯಿಸಿದೆ. ಈ ಕಾರಿನ ವಿಶೇಷವೆನು ಅಂತಾ ಕೇಳ್ತಿರಾ?. ಇದೊಂದು ಪರಿಸರಿ ಸ್ನೇಹಿ ಕಾರು ಆಗಿದ್ದು, ಕಾರಿನ ಇಂಟಿರಿಯರ್ ವಿನ್ಯಾಸ್‌ದಲ್ಲಿ ನೈಲಾನ್, ಪಾಲಿಸ್ಟರ್ ಮಟಿರಿಯಲ್‌ ಬಳಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಕಾರ ಮೇಲ್ಭಾಗದಲ್ಲಿ ಸೋಲಾರ ಪ್ಯಾನೆಲ್ ರಚನೆ ನೀಡಿದ್ದು, ಇದು ಬ್ಯಾಟರಿ ಚಾರ್ಜ್ ಮಾಡಲು ನೆರವಾಗಲಿದೆ. California Mode ಆಯ್ಕೆ ಇದ್ದು, ಹೊರಗಿನ ಗಾಳಿ ತೆಗೆದುಕೊಳ್ಳಲು ಈ ಆಯ್ಕೆಯು ಸಹಕಾರಿ, ಈ ಆಯ್ಕೆ ಒತ್ತಿದಾಗ ಕಾರಿನ ವಿಂಡೊ ತೆರೆದುಕೊಳ್ಳುತ್ತವೆ.

ಕೋರ್ ಮೆಡಿಟೆಷನ್ ಟ್ರೈನರ್- Core Meditation Trainer

ಇಂದಿನ ದಿನಮಾನಗಳಲ್ಲಿ ವಿಶ್ವದ ಎಲ್ಲರು ಧ್ಯಾನದ ಮೊರೆ ಹೋಗಬಯಸುತ್ತಾರೆ. ಮೇಡಿಟೆಷನ್‌ ಕಲಿಯಲು ತರಗತಿಗಳಿಗೆ ಭೇಟಿ ನೀಡುತ್ತಾರೆ. ಈ ನಿಟ್ಟಿನಲ್ಲಿ ಟೆಕ್ ಮಾರುಕಟ್ಟೆಯಲ್ಲಿ ಹೊಸದಾಗಿ ಕೋರ್ ಮೇಡಿಟೆಷನ್ ಟ್ರೈನರ್ ಡಿವೈಸ್ ಪರಿಚಿತವಾಗಿದೆ. ಈ ಡಿವೈಸ್‌ ಬಳಕೆದಾರರಿಗೆ ಧ್ಯಾನದ ತರಬೇತಿ ಒದಗಿಸುತ್ತದೆ. ಉಸಿರಾಟದ ಮೇಲೆ ನಿಗಾ ಇಡುವುದು, ರಿಲಾಕ್ಸೆಶನ್, ಹೀಗೆ ಅಗತ್ಯ ಹಂತಗಳಲ್ಲಿ ಗೈಡ್ ಮಾಡುವ ಆಯ್ಕೆಗಳನ್ನು ಇದು ಪಡೆದುಕೊಂಡಿದೆ.

ಏಸರ್ ಕಾನ್ಸೆಪ್ಟ್‌- ಲ್ಯಾಪ್‌ಟಾಪ್ - Acer Concept D 7 Ezel

ಪ್ರಮುಖ ಲ್ಯಾಪ್‌ಟಾಪ್ ಸಂಸ್ಥೆಗಳಲ್ಲಿ ಏಸರ್ ಸಹ ಒಂದಾಗಿದೆ. ಏಸರ್ ಸಂಸ್ಥೆಯು ಈಗ ಏಸರ್ ಕಾನ್ಸೆಪ್ಟ್‌ D 7 Ezel ಹೆಸರಿನ ಮಡಚುವ ಲ್ಯಾಪ್‌ಟಾಪ್ ಅನ್ನು ಪ್ರದರ್ಶಿಸಿದೆ. ಈ ಲ್ಯಾಪ್‌ಟಾಪ್ 15.6 ಇಂಚಿನ ಡಿಸ್‌ಪ್ಲೇ ಮಾದರಿಯನ್ನು ಹೊಂದಿದೆ. ಡಿಸ್‌ಪ್ಲೇಯು 4K ಗುಣಮಟ್ಟವನ್ನು ಒಳಗೊಂಡಿರುವುದು ವಿಶೇಷ. ಡಿಸ್‌ಪ್ಲೇಯು ಫೋಲ್ಡ್‌ ರಚನೆ ಪಡೆದಿದ್ದು, ಡ್ರಾಯಿಂಗ್ ವರ್ಕ, ಸ್ಕೇಚ್ ವರ್ಕ್ ಮಾದರಿಯ ಕೆಲಸಗಳಿಗೆ ಅತ್ಯುತ್ತಮ ಕಂಫರ್ಟ್ ಇದಾಗಿದೆ. Nvidia ಗ್ರಾಫಿಕ್ಸ್ ಸಪೋರ್ಟ್ ಪಡೆದಿದೆ.

ಕಮ್ ಪ್ಲೇ ಪೆಟ್ಲ್ - Come Play Petl

ಲೈಂಗಿಕ ಸ್ವಾಸ್ಥ್ಯ ಕಂಪನಿ ಕಮ್ ಪ್ಲೇ ಹೆಸರಿನ ಸಾಧನ ಪರಿಚಯಿಸಿದ್ದು, ಈ ಡಿವೈಸ್ ಸಂಭೋಗದ ಸಮಯದಲ್ಲಿ ಕ್ಲೈಟೋರಲ್ ಪ್ರಚೋದನೆಗಾಗಿ ವಿನ್ಯಾಸಗೊಳಿಸಲಾಗಿದೆ. ಮತ್ತು ವಿವಿಧ ಸ್ಥಾನಗಳಲ್ಲಿ ಸುರಕ್ಷಿತವಾಗಿರಲು ಉದ್ದೇಶಿಸಿದೆ.

ಹೈಡ್ರಾಲೂಪ್ ವಾಟರ್ ಸಾಧನ-Hydraloop Water Recycler

ಹೈಡ್ರಾಲೂಪ್ ವಾಟರ್ ಸಾಧನ ನೀರಿನ ಸಂರಕ್ಷಣೆಗಾಗಿ ರಚನೆಯಾಗಿದೆ. ಬಳಕೆ ಮಾಡಿ ಪೋಲಾಗುವ ನೀರನ್ನು ನೀರಿನ ಮರು ಬಳಕೆಯ ಆವಿಷ್ಕಾರ ಆಗಿದೆ. ಇನ್ನು ಈ ಡಿವೈಸ್ ನೀರನ್ನು ಶೋಧಿಸುವ ಮತ್ತು ಶುದ್ಧೀಕರಿಸುವ ದೊಡ್ಡ ಉಪಕರಣವು ಆರು ನಿರ್ವಹಣೆ-ಮುಕ್ತ ಶೋಧನೆ ತಂತ್ರಗಳ ಸರಣಿಯನ್ನು ಬಳಸಿಕೊಳ್ಳುತ್ತದೆ. ಶೌಚಾಲಯಗಳಲ್ಲಿ ಮರು ಬಳಕೆಗಾಗಿ ಮನೆಯಲ್ಲಿ ಬಳಸುವ 85% ನೀರನ್ನು ಮರುಬಳಕೆ ಮಾಡಬಹುದು ಎನ್ನಲಾಗಿದೆ.

ಜೌ ಸಂಗೀತ ಸಾಧನ-Joué Music Instrument

ಜೌಸ್ ಮ್ಯೂಸಿಕ್ ಇನ್ಸ್ಟ್ರುಮೆಂಟ್ ಎನ್ನುವುದು ಬೆನ್ನುಹೊರೆಯ ಸ್ನೇಹಿ ಮರದ ಮತ್ತು ಅಲ್ಯೂಮಿನಿಯಂ ಬೋರ್ಡ್ ಬಳಕೆಯಿಂದ ರಚಿತವಾಗಿದೆ. ಅದು ನಿಮ್ಮ ಆಯ್ಕೆಯ ಸಾಧನಕ್ಕೆ ಅನುಗುಣವಾಗಿ ಬದಲಾಯಿಸಬಹುದಾದ ಪ್ಯಾಡ್‌ಗಳನ್ನು ಬೆಂಬಲಿಸುತ್ತದೆ. ಬೀಟ್‌ಪ್ಯಾಡ್‌ಗಳಿಂದ ಪಿಯಾನೋ ಕೀಗಳವರೆಗೆ ಗಿಟಾರ್ ನೆಕ್‌ವರೆಗಿನ ಆಯ್ಕೆಗಳು ಮತ್ತು ಟ್ಯಾಬ್ಲೆಟ್‌ಗಳಂತಹ ಮೊಬೈಲ್ ಸಾಧನಗಳಿಗೆ ಬೆಂಬಲದೊಂದಿಗೆ, ದೈತ್ಯ ವಾದ್ಯ ಪ್ರಕರಣವನ್ನು ಗುರುತಿಸದೆ ವಿಭಿನ್ನ ಶಬ್ದಗಳನ್ನು ಪ್ರಯೋಗಿಸಲು ಬಯಸುವ ಯಾರಿಗಾದರೂ ಸಂಗೀತ ತಯಾರಿಸುವ ಸಾಧನವಾಗಿ ಜೌ ಹೊಂದಿದೆ.

ಲೆನೊವೊ ಸ್ಲಿಮ್ ಲ್ಯಾಪ್‌ಟಾಪ್-Lenovo ThinkBook Plus

ಲೆನೊವೊ ಹೊಸ ವಿನ್ಯಾಸದೊಂದಿಗೆ ಲ್ಯಾಪ್‌ಟಾಪ್ ಒಂದನ್ನು ಪರಿಚಯಿಸಿದೆ. ಅದುವೇ ಥಿಂಕ್‌ಬುಕ್ ಪ್ಲಸ್‌ ಲ್ಯಾಪ್‌ಟಾಪ್ ಆಗಿದೆ. ಇದು 13 ಇಂಚಿನ ಡಿಸ್ಪ್ಲೇ ಮತ್ತು ಸ್ಟ್ಯಾಂಡರ್ಡ್ ಪೋರ್ಟ್‌ಗಳನ್ನು ಹೊಂದಿದ್ದು, ಲ್ಯಾಪ್‌ಟಾಪ್ ಅನ್ನು ಮುಚ್ಚಿದಾಗ ವಿಷಯಗಳು ಆಸಕ್ತಿದಾಯಕವಾಗುತ್ತವೆ, ಅದರ ಮುಚ್ಚಳದಲ್ಲಿ 10.8-ಇಂಚಿನ ಇ-ಇಂಕ್ ಪ್ರದರ್ಶನವನ್ನು ಹೊಂದಿರುತ್ತದೆ. ಇದು ವಿವಿಧ ವೈಶಿಷ್ಟ್ಯಗಳನ್ನು ನಿಯಂತ್ರಿಸಬಹುದು, ಕ್ಯಾಲೆಂಡರ್ ನೇಮಕಾತಿಗಳಂತಹ ಮಾಹಿತಿಯನ್ನು ಪ್ರದರ್ಶಿಸಬಹುದು ಮತ್ತು ವಿಂಡೋಸ್‌ಗಾಗಿ ಕಿಂಡಲ್ ಅಪ್ಲಿಕೇಶನ್ ಅನ್ನು ಸಹ ಬೆಂಬಲಿಸುತ್ತದೆ.

ಎಲ್‌ಜಿ ಟಿವಿ-LG OLED ZX Real 8K TV

ಜನಪ್ರಿಯ ಎಲ್‌ಜಿ ಸಂಸ್ಥೆಯು ಹೊಸ ಒಎಲ್ಇಡಿ X ಡ್ಎಕ್ಸ್ ರಿಯಲ್ 8 ಕೆ ಟಿವಿ ಯನ್ನು ಪ್ರದರ್ಶಿಸಿದ್ದು, ಈ ಟಿವಿಯು 77- ಮತ್ತು 88-ಇಂಚಿನ ಡಿಸ್ಪ್ಲೇಗಳು 8 ಕೆ ಅಲ್ಟ್ರಾ ಹೆಚ್‌ಡಿ ರಚನೆ ಪಡೆದಿವೆ. ಈ ಟಿವಿಯು α9 ಜನ್ 3 ಎಐ ಪ್ರೊಸೆಸರ್ 8 ಕೆಗೆ ಪಡೆದಿವೆ. ಧ್ವನಿ ಸಹಾಯಕ ಬೆಂಬಲವು ಚಾನಲ್ ಸರ್ಫಿಂಗ್ ಅಥವಾ ಅಪ್ಲಿಕೇಶನ್‌ಗಳ ಮೂಲಕ ಫ್ಲಿಪ್ ಮಾಡದೆ ನೀವು ವೀಕ್ಷಿಸಲು ಬಯಸುವದನ್ನು ಸುಲಭವಾಗಿ ಹುಡುಕುತ್ತದೆ.

ಮೂನ್ ಅಲ್ಟ್ರಾ-Moon Ultra

ಸ್ಮಾರ್ಟ್‌ಫೋನ್‌ಗಳಲ್ಲಿ ಅತ್ಯುತ್ತಮ ಕ್ಯಾಮೆರಾ ಇದ್ದರು ಫೋಟೊ ಸೆರೆಹಿಡಿಯುವಾಗ ಅನೇಕ ಬಾರಿ ಅಗತ್ಯ ಬ್ರೈಟ್ನೆಸ್ ಲಭಿಸುವುದಿಲ್ಲ. ಆದರೆ ಈ ಹೊಸ ಮೂನ್ ಅಲ್ಟ್ರಾ ಡಿವೈಸ್‌ ಅತ್ಯುತ್ತಮ ಫೋಟೊ ಮೂಡಿಬರಲು ನೆರವು ಮಾಡುತ್ತವೆ. ಈ ಡಿವೈಸ್ ಟಚ್ ಸೆನ್ಸೆಟಿವ್ ಆಗಿದ್ದು, ಲೈಟಿಂಗ್ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಗತ್ಯ ಲೈಟಿಂಗ್ ಒದಗಿಸುತ್ತದೆ. ಮಂದ ಬೆಳಕಿನಲ್ಲಿ ಫೋಟೊ ಸೆರೆಹಿಡಿಯುವಾಗ ಇದು ನೆರವಾಗಲಿದೆ.

ಪ್ಯಾಕ್ಸ್ ಎರಾ-Pax Era Pro Vaporizer

ಪ್ಯಾಕ್ಸ್ ಎರಾ ಡಿವೈಸ್ ಒಂದು ಹಲವು ಪರೀಕ್ಷೆಗಳ ಮಾಹಿತ ತಾಣವಾಗಿದೆ. ಬಳಕೆದಾರರ ಪಾಕೆಟ್ ಸ್ನೇಹಿ ಆಗಿರುವ ಈ ಡಿವೈಸ್ ಕೆಲವು ಅಗತ್ಯ ಆಯಿಲ್ ವಿಷಯ, ಪರೀಕ್ಷೆಗಳ ಡೇಟಾ ಶೇರ್ ಮಾಡಿಕೊಳ್ಳಲು ಅಗತ್ಯವಾಗಿದೆ. ಇವು ಎನ್ಎಫ್‌ಸಿ ಬೆಂಬಲಿತವಾಗಿವೆ. ಸ್ಮಾರ್ಟ್‌ಫೋನ್ ಮಾಹಿತಿಯನ್ನು ಸಹ ಹಂಚಿಕೊಳ್ಳಬಹುದಾಗಿದೆ.

ರೋಷನ್ ಒನ್-Rocean One

ರೋಷನ್ ಒನ್ ಒಂದು ಸ್ಟೈಲಿಶ್ ವಾಟರ್ ಫಿಲ್ಟರ್ ಆಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಅನೇಕ ವಾಟರ್ ಫಿಲ್ಟರ್ ಇವೆ. ಅವುಗಳಲ್ಲಿ ಇದು ಒಂದು ಎಂದು ಸುಮ್ಮನಾಗಬೇಡಿ. ಏಕೆಂದರೇ ಪ್ಲಾಸ್ಟಿಕ್ ಬಾಟಲ್‌ಗಳ ಬಳಕೆ ಕಡಿಮೆ ಮಾಡುವ ಉದ್ದೇಸದಿಂದ ಈ ಡಿವೈಸ್ ರೂಪಿಸಲಾಗಿದೆ ಎಂದು ಹೇಳಾಗಿದೆ. ಈ ವಾಟರ್ ಫಿಲ್ಟರ್ ಬಳಕೆದಾರರಿಗೆ ಶುದ್ಧ ಕುಡಿಯುವ ನೀರಿನ ಒದಗಿಸುವ ಕೆಲಸ ಮಾಡಲಿದೆ.

ರೋಲ್ಯಾಂಡ್ ಗೋ-Roland Go:Livecast

ರೋಲ್ಯಾಂಡ್ ಗೋ ಸಾಧನವು ಲೈವ್ ಸ್ಟ್ರೀಮಿಂಗ್ ಮಾಡಲು ಅಗತ್ಯ ಸಹಾಯ ನೀಡಲಿದೆ. ಸ್ಮಾರ್ಟ್‌ಫೋನ್ ಸ್ಟುಡಿಯೊ ತರಹ ಇದಾಗಿದ್ದು, ಸೊಲೊ ಕಾರ್ಯಕ್ರಮಗಳಿಗೆ ಈ ಡಿವೈಸ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಡಿಸ್‌ಪ್ಲೇ, ಆಡಿಯೊ ಮಿಕ್ಸ್, ಸೌಂಡ್ ಎಫೆಕ್ಟ್‌, ಸೇರಿದಂತೆ ಇನ್ನು ಹಲವು ಅಗತ್ಯ ಫೀಚರ್ಸ್‌ಗಳನ್ನು ಈ ಸಾಧನ ಪಡೆದುಕೊಂಡಿದೆ. ಇನ್‌ಪುಟ್, ಔಟ್‌ಪುಟ್ ಆಯ್ಕೆಗಳು ಸೇರಿವೆ.

ಲೋರಾ ಡಿಕಾರ್ಲೋ- Lora DiCarlo Osé

ಲೋರಾ ಡಿಕಾರ್ಲೋ ಲೈಂಗಿಕ ಸ್ವಾಸ್ಥ್ಯ ಉಪಕರಣಗಳ ತಯಾರಿಕಾ ಕಂಪನಿ ಆಗಿದೆ. ಲೋರಾ ಡಿಕಾರ್ಲೊ ಈಗ ಹೊಸ ಡಿವೈಸ್ ಒಂದನ್ನು ಪ್ರದರ್ಶಿಸಿದ್ದು, ಇದು ಜಿ-ಸ್ಪಾಟ್ ಮಸಾಜರ್ ಮತ್ತು ಕ್ಲೈಟೋರಲ್ ಪ್ರಚೋದಕಗಳಂತೆ ದ್ವಿಗುಣಗೊಳ್ಳುತ್ತದೆ. ವೈವಿಧ್ಯಮಯ ದೇಹದ ಆಕಾರಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿರುವ ಓಸ್, ಹೊಂದಿಕೊಳ್ಳುವ ಮತ್ತು ಹ್ಯಾಂಡ್ಸ್-ಫ್ರೀ ಬಳಕೆಗೆ ಸೂಕ್ತವಾಗಿದೆ.

ಸ್ಯಾಮ್‌ಸಂಗ್ ಸೆರೊ ಟಿವಿ-Samsung Sero TV

ಜನಪ್ರಿಯ ಸ್ಯಾಮ್‌ಸಂಗ್ ಹೊಸ ಬಗೆಯ ಸ್ಮಾರ್ಟ್‌ ಟಿವಿ ಪರಿಚಯಿಸಿದ್ದು, ಅದುವೇ ಸೆರೊ ಟಿವಿ. ಏನಿದರ ವಿಶೇಷ ಅಂತೀರಾ. ಈ ಟಿವಿ ಭಿನ್ನ ಆಕಾರದ ರಚನೆಯನ್ನು ಹೊಂದಿದೆ. ಪೋರ್ಟೆಬಲ್ ಮಾದರಿಯಲ್ಲಿದ್ದು, ಸ್ಮಾರ್ಟ್‌ಫೋನ್‌ಗೆ ಕನೆಕ್ಟ್‌ ಮಾಡಬಹುದಾಗಿದೆ. ಫೋನ್ ತಿರುಗಿಸುವ ಆಕಾರದಲ್ಲಿ ಟಿವಿ ಸ್ಕ್ರೀನ್ ಡಿಸ್‌ಪ್ಲೇ ಕಾಣಿಸುತ್ತದೆ. ಇನ್ನು ಈ ಟಿವಿ 43 ಇಂಚಿನ ಗಾತ್ರವನ್ನು ಪಡೆದಿದೆ. 4K ಗುಣಮಟ್ಟದ ವಿಡಿಯೊ ಸಪೋರ್ಟ್ ಮಾಡುತ್ತದೆ.

ಸೋನಿ ವಿಷನ್ ಕಾರ-Sony Vision-S

ಸೋನಿ ಎಂದಾಕ್ಷಣ ಟಿವಿ ಇಲ್ಲವೇ, ಫೋನ್ ಸಂಸ್ಥೆ ಎಂದು ಎಲ್ಲರಿಗೂ ಗೊತ್ತು. ಆದರೆ ಸೋನಿ ಈಗ ಕಾರು ವಲಯಕ್ಕೆ ಲಗ್ಗೆ ಇಡಲಿದೆ. ಹೌದು, ಸೋನಿ ಕಂಪನಿಯು ಸೋನಿ ವಿಷನ್ ಹೆಸರಿನ ಎಲೆಕ್ಟ್ರಾನಿಕ್ ಕಾರನ್ನು ಪ್ರದರ್ಶಿಸಿದೆ. ಈ ಕಾರು 5G ಕನೆಕ್ಟಿವಿಟಿ ಸೌಲಭ್ಯವನ್ನು ಪಡೆದಿದ್ದು, ಡ್ರೈವರ್ ಹಾಗೂ ಪಾಸೆಂಜರ್ ಕಾಣಿವಂತಹ ಡಿಸ್‌ಪ್ಲೇ ಹೊಂದಿದೆ. ಆಂತರಿಕ ಮತ್ತು ಬಾಹ್ಯ ಸೌಂದರ್ಯಕ್ಕೂ ಹೆಚ್ಚಿನ ಒತ್ತು ನೀಡಲಾಗಿದೆ. ಆದರೆ ಈ ಕಾರು ರಸ್ತೆಗೆ ಯಾವಾಗ ಇಳಿಯುತ್ತದೆ ಗೊತ್ತಿಲ್ಲ.

ಸೋನಿ 8K ಟಿವಿ-Sony Z8H 8K LED TV

ಸ್ಮಾರ್ಟ್‌ ಟಿವಿ ವಲಯದಲ್ಲಿ ಹೆಸರುವಾಸಿ ಆಗಿರುವ ಸೋನಿ ಇದೀಗ ಮತ್ತಷ್ಟು ಹೊಸತನಕ್ಕೆ ಹೆಜ್ಜೆ ಇಟ್ಟಿದೆ. ಅಂದರೇ ಇದೀಗ ಸಂಪೂರ್ಣ ಹೈ ಎಂಡ್ ಫೀಚರ್ಸ್‌ಗಳೊಂದಿಗೆ Z8H 8K LED ಟಿವಿಯನ್ನು ಅನಾವರಣ ಮಾಡಿದೆ. ಈ ಟಿವಿಯು ಗೂಗಲ್ ಅಸಿಸ್ಟಂಟ್, ಅಲೆಕ್ಸಾ, ಆಪಲ್ ಹೋಮ್ ಕಿಟ್, ಸೌಲಭ್ಯಗಳನ್ನು ಪಡೆದಿದೆ. ಇನ್ನು ಈ ಟಿವಿಯು 75 ಅಥವಾ 85 ಇಂಚಿನ ಗಾತ್ರದಲ್ಲಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳಿವೆ.

ವಿಕಿಯೊ ಸೌಂಡ್ ಬಾರ್-Vizio Elevate Soundbar

ವಿಕಿಯೊ ಸೌಂಡ್ ಬಾರ್ ಸ್ವಲ್ಪ ಭಿನ್ನವಾಗಿ ಸೌಂಡ್ ಬಾರ್ ಆಗಿ ಕಾಣಿಸುತ್ತದೆ. ಈ ಸೌಂಡ್ ಬಾರ್ 10-ಚಾನೆಲ್, 5.1.4 ಧ್ವನಿ ವ್ಯವಸ್ಥೆ ಹೊಂದಿದ್ದು, ಸೌಂಡ್ ವಿಶೇಷ ಅನಿಸಲಿದೆ. ಹೀಗಾಗಿ ಎಲಿವೇಟ್ ಸೌಂಡ್‌ಬಾರ್ ಅಕ್ಷರಶಃ ವಿಭಿನ್ನ ಆಡಿಯೊವನ್ನು ಅನಿಸಲಿದೆ. ಇನ್ನು ಈ ಸೌಂಡ್ ಬಾರ್ ಡಿಟಿಎಸ್: ಎಕ್ಸ್ ಅಥವಾ ಡಾಲ್ಬಿ ಅಟ್ಮೋಸ್ ಆಡಿಯೊ ಸ್ಟ್ಯಾಂಡರ್ಡ್ ಅನ್ನು ಬೆಂಬಲಿಸುವ ವಿಷಯವನ್ನು ಪ್ಲೇ ಮಾಡುವಾಗ, ಎಲಿವೇಟ್‌ನ ಹೊರಗಿನ ಸ್ಪೀಕರ್‌ಗಳು ಮೇಲಕ್ಕೆ ತಿರುಗುತ್ತವೆ ಮತ್ತು ಕೊಠಡಿ ತುಂಬುವ ಧ್ವನಿಯನ್ನು ಒದಗಿಸುತ್ತದೆ . ಇದು ಎರಡು ಎಚ್‌ಡಿಎಂಐ ಇನ್‌ಪುಟ್‌ಗಳನ್ನು ಸಹ ಹೊಂದಿದೆ ಮತ್ತು ಬ್ಲೂಟೂತ್ 5.0 ಮತ್ತು ಗೂಗಲ್ ಕ್ರೋಮ್‌ಕಾಸ್ಟ್ ಎರಡನ್ನೂ ಬೆಂಬಲಿಸುತ್ತದೆ.

ಟಾಯ್ಲೆಟ್ ಪೇಪರ್ ರೋಬೋಟ್-Toilet paper robot

ಇದರ ಹೆಸರನ್ನ ನೋಡಿ ಏನಿದು ಅಂತಾ ಕನ್‌ಪ್ಯೂಸ್ಗ್ ಆಗೋದು ಗ್ಯಾರಂಟಿ. ಆದ್ರೆ ಇದ್ರಿಂದ ಆಗೋ ಉಪಯೋಗ ಕೆಲವೊಮ್ಮೆ ನಿಮಗಾಗುವ ಮುಜುಗರವನ್ನ ತಪ್ಪಿಸುತ್ತೆ. ಹೌದು ಇದೊಂದು ಸ್ವಯಂ ಚಾಲಿತ ರೋಬೋಟ್‌ ಆಗಿದ್ದು ಇದನ್ನ ಟಾಯ್ಲೆಟ್‌ ರೂಮ್‌ಗಳಲ್ಲಿ ಬಳಸಬಹುದಾಗಿದೆ. ತುರ್ತು ಸಂದರ್ಭದಲ್ಲಿ ಟಾಯ್ಲೆಟ್‌ನಲ್ಲಿ ನೀವು ಹೋಗಿ ಕುಳಿತ ನಂತರ ಟಾಯ್ಲೆಟ್‌ ಫೇಪರ್‌ ಇಲ್ಲದೆ ಹೋದರೆ ಇದು ಸಹಾಯ ಮಾಡುತ್ತದೆ. ಅಂದರೆ ನಿಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ಇದರ ಸಂಪರ್ಕ ಸಾಧಿಸಿದರೆ ಟಾಯ್ಲೆಟ್‌ ರೋಲ್‌ ಅನ್ನ ಟಾಯ್ಲೆಟ್‌ ರೂಮ್‌ಗೆ ನೇರವಾಗಿ ತಂದು ಕೊಡುತ್ತೆ.

DNA ನಡ್ಜ್‌

ಈ ವರ್ಷ ನಡೆಯುತ್ತಿರುವ ಸಿಇಎಸ್‌ ಸಮ್ಮೇಳನದಲ್ಲಿ ಪರಿಚಯವಾದ ಇಂಟರೆಸ್ಟಿಂಗ್‌ ಸ್ಮಾರ್ಟ್‌ಬ್ಯಾಂಡ್‌ ಇದಾಗಿದೆ. DnaNudge ಎನ್ನಲಾಗುವ ಈ ಸ್ಮಾರ್ಟ್‌ಬ್ಯಾಂಡ್‌ ನಿಮ್ಮ ಸ್ವಂತ ಡಿಎನ್‌ಎ ಆಧರಿಸಿ ನೀವು ಯಾವ ಮಾದರಿಯ ಆಹಾರವನ್ನ ಸೇವಿಸಬೇಕು ಎಂಬ ಸಲಹೆ ನೀಡುವ ಕಾರ್ಯ ಮಾಡಲಿದೆ. ಈ ಬ್ಯಾಂಡ್‌ನಲ್ಲಿ ನೀವು ಆಯ್ಕೆ ಮಾಡುವ ಉತ್ತನ್ನಗಳ ಮೇಲಿನ ಸಿಪಿಜಿಯನ್ನು ಸ್ಕ್ಯಾನ್ ಮಾಡುವ ಒಂದು ಅಪ್ಲಿಕೇಶನ್ ಇದೆ, ಇದು ಬಳಕೆದಾರರಿಗೆ ತಮ್ಮ ಡಿಎನ್‌ಎ ಆಧಾರದ ಮೇಲೆ ಈ ಆಹಾರ ತಿನ್ನಲು ಯೋಗ್ಯವೇ ಇಲ್ಲವೇ ಎಂಬುದನ್ನು ವಿವರಿಸುತ್ತದೆ.

ಸಾಸ್ ಸ್ಲೈಡರ್

ಇದು ಕೂಡ ಬಹಳ ವಿಶೇಷ ಎನಿಸುವ ಸ್ಮಾರ್ಟ್‌ ಪ್ರಾಡಕ್ಟ್‌ ಆಗಿದೆ. ಇದು ಸಾಸ್‌ ಅನ್ನ ಸರ್ವ ಮಾಡುವ ಕೆಚಪ್‌ ಆಗಿದ್ದು, ನೀವು ಹೋಟೆಲ್‌ನಲ್ಲಿ ನಿಮಗಿಷ್ಟದ ತಿಂಡಿಗೆ ಸಾಸ್‌ ಹಾಕಿಕೊಳ್ಳಲು ಕಷ್ಟ ಪಡಬೇಕಿಲ್ಲ, ಎಲ್ಲರ ತಟ್ಟೆಗೆ ನೀವು ಹಾಕುತ್ತ ಕೂರುವ ಬದಲು ಸಾಸ್‌ಸ್ಲೈಡರ್‌ಗೆ ಹೇಳಿದ್ರೆ ಸಾಕು ಕ್ಷಣಾರ್ಧದಲ್ಲಿ ಟೆಬಲ್‌ ಅಥವಾ ಪ್ಲೇಟ್‌ ಯಾವುದಕ್ಕೂ ದಕ್ಕೆ ಮಾಡದೆ ತನ್ನ ಕಾರ್ಯವನ್ನ ಮಾಡಿ ಮುಗಿಸುತ್ತದೆ.

ಪೆಟಿಟ್ ಕೂಬೊ

ಪೆಟಿಟ್‌ ಕೊಬೊ ಅನ್ನೊ ಹೆಸರೇ ವಿಚಿತ್ರವಾಗಿದೆ. ಹೆಸರಿನಂತೆಯೇ ಇದು ಕೂಡ ವಿಚಿತ್ರವಾಗಿದ್ದು ಪೆಟಿಟ್ ಕೂಬೊ ಸಣ್ಣ ಕಿಟನ್ ಆಕಾರದ ತಲೆ ಇಲ್ಲದ ರೋಬೋಟ್ ಆಗಿದೆ. ಈ ರೋಬೋಟ್‌ ಅನ್ನು ನರ್ಸಿಂಗ್ ಹೋಂಗಳಲ್ಲಿನ ಹಿರಿಯರಿಗಾಗಿ ಅಥವಾ ಸಾಕುಪ್ರಾಣಿಗಳನ್ನು ಇಷ್ಟ ಪಡುವ ಜನರಿಗಾಗಿ ವಿನ್ಯಾಸಗೊಳಿಸಲಾಗಿದೆ. ಬಳಕೆದಾರರ ಸ್ಪರ್ಶಕ್ಕೆ ಈ ರೋಬೋಟ್ ಮೃದುವಾಗಿ ಕಂಪಿಸುತ್ತದೆ ಮತ್ತು ಪ್ರತಿಕ್ರಿಯೆಯ ಮೇಲೆ ಬಾಲವನ್ನು ಸುತ್ತುವ ಮತ್ತು ತಿರುಗಿಸುವುದನ್ನು ಮಾಡುತ್ತದೆ.

ಲುಮಿ ಬೈ ಪ್ಯಾಂಪರ್ಸ್‌

ಲುಮಿ ಕಂಪೆನಿಯ ಈ ಸ್ಮಾರ್ಟ್‌ ಪ್ಯಾಂಪರ್ಸ್‌ ವಿಶ್ವದ ಮೊದಲ ಆಲ್‌ ಇನ್‌ ಕನೆಕ್ಟೆಡ್‌ ಬೇಬಿ ಕೇರ್‌ ಸಿಸ್ಟಮ್‌ ಇರುವ ಪ್ಯಾಂಪರ್ಸ್‌ ಆಗಿದೆ. ಈ ಸ್ಮಾರ್ಟ್‌ ಪ್ಯಾಂಪರ್ಸ್‌ನಲ್ಲಿ ಇದರಲ್ಲಿ ಸ್ಮಾರ್ಟ್‌ ಕ್ಯಾಮೆರಾವನ್ನು ಸಹ ಅಳವಡಿಸಲಾಗಿದ್ದು, ಇದು ಹೆಚ್‌ ಡಿ ವೀಡಿಯೋ ಮಾನಿಟರ್‌ ಸೆನ್ಸಾರ್‌ ಹೊಂದಿದೆ. ಇದರಿಂದ ಮಗುವಿನ ನಿದ್ರೆ, ಆಹಾರ, ಡೈಪಾರಿಂಗ್‌ ಮಾಡಬೇಕಾದ ವಿಷಯಗಳ ಬಗ್ಗೆ ಮಗುವಿನ ಫೋಷಕರ ಸ್ಮಾರ್ಟ್‌ಫೋನ್‌ಗೆ ಮಾಹಿತಿಯನ್ನ ರವಾನಿಸುತ್ತದೆ.

ವೈ ಬ್ರಷ್

ಇಂತಹ ಸ್ಮಾರ್ಟ್‌ ಪ್ರಾಡಕ್ಟ್‌ ಕೂಡ ಬರುತ್ತೆ ಅಂತಾ ಯಾರು ಕೂಡ ಉಹೆ ಮಾಡಿರೋದಿಲ್ಲ. ಬಹಳ ವಿಚಿತ್ರವಾಗಿ ಕಾಣುವ ಈ ಸ್ಮಾರ್ಟ್ ಪ್ರಾಡಕ್ಟ್‌ ಟೂತ್ ಬ್ರಷ್ ಆಗಿದ್ದು. ಇದರಿಂದ ಕೇವಲ 10 ಸೆಕೆಂಡುಗಳಲ್ಲಿ ನಿಮ್ಮ ಬಾಯಿಯನ್ನು ಸಂಪೂರ್ಣವಾಗಿ ಸ್ವಚ್ಚ ಗೊಳಿಸಬಹುದಾಗಿದೆ. ಈ ಟೂತ್ ಬ್ರಷ್ 'Y' ಅಕ್ಷರದ ಆಕಾರದಲ್ಲಿದ್ದು, ಮೌತ್‌ಗಾರ್ಡ್ ಅನ್ನು ಒಳಗೊಂಡಿರುತ್ತದೆ. ಈ ಮೌತ್‌ಗಾರ್ಡ್ ಅನ್ನು ನಿಮ್ಮ ಬಾಯಿಯಲ್ಲಿ ಇರಿಸಿ ಮೋಟರ್ ಅನ್ನು ಆನ್ ಮಾಡಿದರೆ ಕೇವಲ 10 ಸೆಕೆಂಡುಗಳಲ್ಲಿ ಬಾಯಿಯನ್ನು ಸ್ವಚ್ಚ ಮಾಡುತ್ತದೆ.

ಪ್ರಿಂಕರ್

ಪ್ರಿಂಕರ್‌ ಇದೊಂದು ಟೆಂಪೋರರಿ(ಟೆಂಪ್ರರಿ) ಟ್ಯಾಟೂ ಪ್ರಿಂಟರ್‌ ಆಗಿದ್ದು, ಈ ಸ್ಮಾರ್ಟ್‌ ಪ್ರಾಡಕ್ಟ್‌ನಿಂದ ಕಾಸ್ಮೆಟಿಕ್ ಗ್ರೇಡ್ ಶಾಯಿ ಬಳಸಿ ನಿಮ್ಮ ಚರ್ಮದ ಮೇಲೆ ತಾತ್ಕಾಲಿಕ ಟ್ಯಾಟೂ ಹಾಕಿಕೊಳ್ಳಬಹುದಾಗಿದೆ. ಅಲ್ಲದೆ ಬಳಕೆದಾರರು ತಮ್ಮ ಟ್ಯಾಟೂ ಕಪ್ಪು ಅಥವಾ ಇತರೆ ಬಣ್ಣದ್ದಾಗಿರಬೇಕೆ ಎಂದು ಇದರಲ್ಲಿ ಆಯ್ಕೆ ಮಾಡಬಹುದು. ಅಷ್ಟೇ ಯಾಕೆ ಸ್ಮಾರ್ಟ್‌ಫೋನ್‌ನಲ್ಲಿ ಅಪ್ಲಿಕೇಶನ್ ಬಳಸಿ ಬಳಕೆದಾರರು ಟ್ಯಾಟೂ ಹಾಕಲು ಬಯಸುವ ಚಿತ್ರವನ್ನು ಸಹ ಆಯ್ಕೆ ಮಾಡಬಹುದು.

ಲೊವೊಟ್ (ಲವ್ ರೋಬೋಟ್)

ಹೆಸರೇ ಸೂಚಿಸುವಂತೆ ಇದೊಂದು ಲವ್ ರೋಬೋಟ್ ಆಗಿದ್ದು, ಹಾಸ್ಯ ಪ್ರಜ್ಞೆಯುಳ್ಳ ರೋಬೋಟ್‌ ಇದಾಗಿದೆ. ಬಳಕೆದಾರರಲ್ಲಿ ನಗು ತರಿಸುವ ಹಾಗೂ ಅವರ ಒತ್ತಡವನ್ ಮರೆಸುವ ಕಾರ್ಯವನ್ನ ಈ ರೋಬೋಟ್‌ ಮಾಡಲಿದ್ದು ತಮಾಷೆ ಮಾಡುವುದಕ್ಕಾಗಿಯೇ ರೋಬೋಟ್‌ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ರೋಬೋಟ್‌ ಎರಡು ಮುದ್ದಾದ ದೊಡ್ಡ ಕಣ್ಣುಗಳು ಮತ್ತು ಬಟನ್ ಮೂಗು ಹೊಂದಿದೆ. ಅಲ್ಲದೆ ಎರಡು ಫ್ಲಿಪ್ಪರ್ ತೋಳುಗಳನ್ನು ಸಹ ಹೊಂದಿದೆ, ಬಳಕೆದಾರರೊಂದಿಗೆ ಸಂವಹನ ನಡೆಸಲು ಬಯಸಿದಾಗಲೆಲ್ಲಾ ಈ ರೋಬೋಟ್‌ ಅಲೆದಾಡುತ್ತದೆ. ಅಷ್ಟೇ ಅಲ್ಲ ಬಳಕೆದಾರ ಬಯಸಿದರೆ ನೃತ್ಯವನ್ನು ಸಹ ಮಾಡುತ್ತದೆ.

ಆಪ್ಟೆ ಇಂಕ್‌ಜೆಟ್‌

ಆಪ್ಟೆ ಇಂಕ್‌ಜೆಟ್‌ ಒಂದು ಹ್ಯಾಂಡ್‌ಹೆಲ್ಡ್‌ ಪ್ರಿಂಟರ್‌ ಆಗಿದ್ದು, ಮುಖದ ಮೇಲಿನ ಕಪ್ಪುಕಲೆಗಳನ್ನ ಹೋಗಲಾಡಿಸುತ್ತದೆ. ಕಪ್ಪುಕಲೆಗಳನ್ನ ಹುಡುಕಿ ಮುಖದ ಮೇಲೆ ವರ್ಣದ್ರವ್ಯದೊಂದಿಗೆ ಆ ಕಲೆಗಳನ್ನ ಮುಚ್ಚಿಹಾಕುತ್ತದೆ. ಇನ್ನು ಈ ಪ್ರಾಡಕ್ಟ್‌ ಸಣ್ಣ ಕ್ಯಾಮೆರಾವನ್ನು ಒಳಗೊಂಡಿದ್ದು, ಇದು ಮುಖವನ್ನು ಸ್ಕ್ಯಾನ್ ಮಾಡುತ್ತದೆ. ನಂತರ ಚಿಕಿತ್ಸೆ ನೀಡಲು ಕಪ್ಪು ಕಲೆಗಳನ್ನು ಹುಡುಕುತ್ತದೆ.

ಚಾರ್ಮಿನ್ ಸ್ಮೆಲ್‌ಸೆನ್ಸ್

ಇದು ಕೂಡ ಲೂ ಸಂಸ್ಥೆಯ ಸ್ಮಾರ್ಟ್‌ ಪ್ರಾಡಕ್ಟ್‌ ಆಗಿದ್ದು ಸ್ಮೆಲ್‌ಸೆನ್ಸ್ ಎಂಧು ಹೆಸರಿಸಲಾಗಿದೆ. ಇದು ಬಳಕೆದಾರರ ಸ್ನಾನದ ಮನೆಯಲ್ಲಿನ ಸ್ಮೆಲ್‌ ಸೆನ್ಸ್‌ ಮಾಡಲಿದ್ದು, ಸ್ನಾನದ ಮನೆ ಪ್ರವೇಶಿಸುವುದು ಸುರಕ್ಷಿತವೇ ಇಲ್ಲವೇ ಅನ್ನೊದನ್ನ ತಿಳಿಸುತ್ತದೆ. ಅಷ್ಟೇ ಅಲ್ಲ ಸ್ಮೆಲ್‌ಸೆನ್ಸ್ ಗಾಳಿಯಲ್ಲಿ ಎಷ್ಟು ಇಂಗಾಲದ ಡೈಆಕ್ಸೈಡ್ ಅಥವಾ ಹೈಡ್ರೋಜನ್ ಸಲ್ಫೈಡ್ ಇದೆ ಎಂಬುದನ್ನು ಸಹ ತಿಳಿಸಿಕೊಡುತ್ತದೆ.

ಅರ್ಗೋನೈಟ್

ರ್ಗೋನೈಟ್ ಒಂದು ಹೆಡ್‌ಬ್ಯಾಂಡ್ ಆಗಿದ್ದು ಅದು ರಾತ್ರಿಯಲ್ಲಿ ಮಲಗಲು ಸಹಾಯ ಮಾಡುತ್ತದೆ. ನಿಮಗೆ ನಿದ್ರಾಹೀನತೆಯ ಸಮಸ್ಯೆಯಿದ್ದರೆ ಬಹಳ ಉಪಯುಕ್ತವಾಗಿದೆ. ಇದು ನಿಮ್ಮ eeg ಅಪ್ಲಿಕೇಶನ್ ಬಳಸಿ ಅಳೆಯುತ್ತದೆ ಮತ್ತು ನಂತರ ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುವ ಮೆದುಳಿನ ಅಲೆಗಳನ್ನು ಹೇಗೆ ನಿಯಂತ್ರಿಸಬೇಕೆಂದು ಮಾರ್ಗದರ್ಶನ ನೀಡುತ್ತದೆ. ಅಲ್ಲದೆ ಈ ಪ್ರಾಡಕ್ಟ್‌ ನ್ಯೂರೋಫೀಡ್‌ಬ್ಯಾಕ್ ಚಿಕಿತ್ಸೆಯನ್ನು ನೀಡಲು ಸಹಾಯ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಗೊರಕೆ ತಡೆಯುವ ದಿಂಬು-A pillow to stop snoring

ನಿದ್ದೆ ವೇಳೆ ಗೊರೆಕೆ ಶಬ್ದ ಮಾಡುವವರಿಗಾಗಿ ಮಾರುಕಟ್ಟೆಗೆ ಹೊಸ ದಿಂಬು ಪರಿಯಿತವಾಗಿದೆ. ಇದರ ವಿಶೇಷವೆಂದರೇ ಈ ದಿಂಬು ನಿದ್ರೆ ಮಾಡುವಾಗ ಗೊರಕೆ ಬರದಂತೆ ಮಾಡುವ ಸೌಲಭ್ಯವನ್ನು ಪಡೆದಿದೆ.

Best Mobiles in India

English Summary

CES, the annual tech confab in the heart of Las Vegas, showcases the latest and greatest in technology and consumer gadgets. to know more visit to kannada.gizbot.com