ಕಂಪ್ಯೂಟರ್‌ ಲೋಕಕ್ಕೂ ಕಾಲಿಟ್ಟ ಶಿಯೋಮಿ..! ಅಗ್ಗದ ದರದಲ್ಲಿ ಕೀಬೋರ್ಡ್‌, ಮೌಸ್‌..!


ಸ್ಮಾರ್ಟ್‌ಫೋನ್‌ ಮತ್ತು ಸ್ಮಾರ್ಟ್‌ ಟಿವಿಗಳಿಗೆ ಜನಪ್ರಿಯವಾಗಿರುವ ಶಿಯೋಮಿ, ಇವುಗಳ ಹೊರತಾಗಿ ಅನೇಕ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಿದೆ. ತನ್ನನ್ನು ಗ್ರಾಹಕ ಎಲೆಕ್ಟ್ರಾನಿಕ್ಸ್ ದೈತ್ಯವಾಗಿ ಶಿಯೋಮಿ ವಿಸ್ತರಿಸಿಕೊಂಡಿದೆ. ಶಿಯೋಮಿ ಬಿಡುಗಡೆ ಮಾಡಿರುವ ಅಂತಹದ್ದೆ ಒಂದು ಉತ್ಪನ್ನವೆಂದರೆ ವೈರ್‌ಲೆಸ್ ಕೀಬೋರ್ಡ್ ಮತ್ತು ಮೌಸ್‌ ಕಾಂಬೊ. ಚೀನಾದಲ್ಲಿ ತನ್ನ ಕ್ರೌಡ್‌ಫಂಡಿಂಗ್ ಪ್ಲಾಟ್‌ಫಾರ್ಮ್ ಯೂಪಿನ್ ಮೂಲಕ ಸಾಧನಗಳನ್ನು ಬಿಡುಗಡೆ ಮಾಡುತ್ತಿದೆ. ಶೀಘ್ರದಲ್ಲಿಯೇ ಈ ಉತ್ಪನ್ನವನ್ನು ಭಾರತದಲ್ಲಿಯೂ ಕಾಣಬಹುದಾಗಿದೆ.

Advertisement

ಕಡಿಮೆ ಬೆಲೆ

ಶಿಯೋಮಿ ಉತ್ಪನ್ನಗಳು ಜನಪ್ರಿಯವಾಗಿರುವುದೇ ಕಡಿಮೆ ಬೆಲೆಯಿಂದ ಎಂದರೆ ತಪ್ಪಾಗಲ್ಲ. ಅದರಂತೆ, ವೈರಲೆಸ್‌ ಕೀಬೋರ್ಡ್‌ ಮತ್ತು ಮೌಸ್‌ ಬೆಲೆಯು ಭಿನ್ನವಾಗಿಲ್ಲ. ಈ ಉತ್ಪನ್ನ ಸುಮಾರು 1,005 ರೂ.ಗೆ ಲಭ್ಯವಿದ್ದು, ಮಾರುಕಟ್ಟೆಯ ಇತರ ಬೆಲೆಗಳಿಗೆ ಹೋಲಿಸಿದರೆ ಅಗ್ಗದ ಬೆಲೆಯಲ್ಲಿಯೇ ಗ್ರಾಹಕರಿಗೆ ದೊರೆಯುತ್ತದೆ.

Advertisement
ಫಂಕ್ಷನ್‌ & ಶಾರ್ಟ್‌ಕಟ್‌ ಕೀಗಳು

ಕೀಬೋರ್ಡ್ ಸರಿಯಾಗಿ 104 ಕೀಲಿಮಣೆ ಹೊಂದಿದ್ದು, ಪ್ರತ್ಯೇಕವಾಗಿ ನಂಬರ್‌ ಕೀಪ್ಯಾಡ್ ಹೊಂದಿದೆ. 500 ಗ್ರಾಂ ತೂಕ ಹೊಂದಿರುವ ಕೀಬೋರ್ಡ್‌ ಮೀಸಲು ಫಂಕ್ಷನ್‌ ಕೀಲಿಗಳನ್ನು ಹೊಂದಿದೆ. ಫಂಕ್ಷನ್ ಕೀಲಿಗಳು ವಾಲ್ಯೂಮ್ ಕಂಟ್ರೋಲ್, ಮೀಡಿಯಾ, ಮೇಲ್ ಮತ್ತು ಇತರ ಉಪಯುಕ್ತ ಕಾರ್ಯಗಳಿಗೆ ಶಾರ್ಟ್‌ಕಟ್‌ಗಳಾಗಿಯೂ ಕಾರ್ಯನಿರ್ವಹಿಸುತ್ತವೆ.

ಮೈಕ್ರೊ ಆರ್ಕ್ ಫೇಸ್ ಕೀ ಕ್ಯಾಪ್‌

ಕೀಬೋರ್ಡ್ ಮೈಕ್ರೊ ಆರ್ಕ್ ಫೇಸ್ ಕೀ ಕ್ಯಾಪ್‌ನೊಂದಿಗೆ ಬರುತ್ತದೆ ಎನ್ನಲಾಗಿದ್ದು, ಎರಡೂ ಸಾಧನಗಳು 2.4GHz ಗಿಂತ ಹೆಚ್ಚಿನ ವೇಗದಲ್ಲಿ ಸಂಪರ್ಕ ಹೊಂದುತ್ತವೆ. ವೈರ್‌ಲೆಸ್ ಮೌಸ್ ಕೇವಲ 60 ಗ್ರಾಂ ತೂಕ ಹೊಂದಿದ್ದು, ಮೌಸ್‌ನ ನಿಯಂತ್ರಣಕ್ಕೆ ಟೆಕ್ಸ್ಚರ್ಡ್ ಫಿನಿಶ್ ಹೊಂದಿದೆ.

ಮಧ್ಯದಲ್ಲಿ ಸ್ಕ್ರಾಲ್ ವೀಲ್ ಮತ್ತು ಎರಡು ಕ್ಲಿಕ್ ಬಟನ್‌ಗಳಿವೆ. ಇದರ ವಿನ್ಯಾಸ ಮೈಕ್ರೋಸಾಫ್ಟ್ ಮತ್ತು ಆಪಲ್ ಕಂಪನಿಯ ವೈರ್‌ಲೆಸ್ ಮೌಸ್‌ಗೆ ಹೋಲುತ್ತದೆ.

1,000 ಡಿಪಿಐ ಸೆನ್ಸಾರ್‌

ಮೌಸ್ 1,000 ಡಿಪಿಐ ಸೆನ್ಸಾರ್‌ ಹೊಂದಿದ್ದು, ನಿಯಮಿತ ಬಳಕೆಗೆ ಸಾಕಷ್ಟು ಉತ್ತಮವಾಗಿದೆ. ಪ್ಲಗ್ ಮತ್ತು ಪ್ಲೇ ಅನುಭವಕ್ಕಾಗಿ ಗುಪ್ತ ಯುಎಸ್‌ಬಿಯು ಸಹ ಇದೆ. ಕೀಬೋರ್ಡ್ ಬ್ಯಾಟರಿಯ ಅವಧಿಯನ್ನು ಸಹ ಸೂಚಿಸುತ್ತದೆ ಮತ್ತು ಸ್ಕ್ರಾಲ್ ಲಾಕ್, ಕ್ಯಾಪ್ಸ್ ಮತ್ತು ನಂಬರ್ ಪ್ಯಾಡ್‌ಗಾಗಿ ಪ್ರತ್ಯೇಕ ಅಧಿಸೂಚನೆಯನ್ನು ಹೊಂದಿದೆ. ಕೀಬೋರ್ಡ್ ಸಹ 6-ಡಿಗ್ರಿ ಕೋನ ಹೊಂದಿದೆ. ಕೇಬಲ್‌ ರಹಿತ ಕಾರ್ಯನಿರ್ವಹಣೆಗೆ ಅಗ್ಗದ ದರದಲ್ಲಿ ಇವೆರಡು ಉತ್ತಮ ಸಾಧನಗಳಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Best Mobiles in India

English Summary

Xiaomi Wireless Mouse Keyboard Combo Now Available For Rs. 1,000