ಅಶ್ಲೀಲ ವೀಡಿಯೊ ನೋಡುವ ಶೇ 90% ಜನರಿಗೆ ಗೊತ್ತಿಲ್ಲದ ಶಾಕಿಂಗ್ ವಿಷಯಗಳು!!


ಅಶ್ಲೀಲ ಚಿತ್ರಗಳಿಗೆ ದಾಸರಾಗುತ್ತಿರುವುದರಿಂದ ಮನುಷ್ಯನ ಜೀವನದಲ್ಲಿ ಎಷ್ಟು ಬದಲಾವಣೆಗಳಾಗುತ್ತಿವೆ, ನೂರಾರು ಅಶ್ಲೀಲ ಸೈಟ್ ಮತ್ತು ಆಪ್‌ಗಳು ಮನುಷ್ಯನ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತಿವೆ ಎಂಬ ರಿಪೋರ್ಟ್ ಒಂದನ್ನು ಲಂಡನಿನ ಒಂದು ರಿಸರ್ಚ್ ಸೆಂಟರ್ ಬಿಡುಗಡೆ ಮಾಡಿದೆ. ರಿಪೋರ್ಟ್‌ನಲ್ಲಿನ ಅಂಶಗಳು ಶಾಕ್ ಆಗುವಂತಿವೆ.!!

ಹೌದು, ನಾವಿಂದು ನಿಮಗೆ ಹೇಳಲಾಗುವುದಿಲ್ಲವಾದರೂ ಹೇಳುವಂತಹ ರಿಪೋರ್ಟ್ ಒಂದನ್ನು ನೀಡುತ್ತಿದ್ದೇವೆ. ಪ್ರತಿಯೊಬ್ಬರ ಬಳಿ ಸ್ಮಾರ್ಟ್‌ಫೋನ್ ಮತ್ತು ಡೇಟಾ ಇರುವುದರಿಂದ ಅಶ್ಲೀಲ ಚಿತ್ರಗಳನ್ನು ನೋಡುವವರ ಪ್ರಮಾಣ ಹೆಚ್ಚಾಗುತ್ತಿದೆ. ಅದರಲ್ಲಿಯೂ ಯುವಕರಂತೂ ಅಶ್ಲೀಲ ಚಿತ್ರಗಳಿಗೆ ದಾಸರಾಗಿಬಿಡುತ್ತಿದ್ದಾರೆ ಎಂದು ರಿಪೋರ್ಟ್ ತಿಳಿಸಿದೆ.!!

ಇಂಟರ್‌ನೆಟ್‌ನಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ದುರುಪಯೋಗ ಕೂಡ ಇದೆ ಎಂಬುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಷ್ಯಯವೇ ಆದರೂ ಸಹ, ಅಶ್ಲೀಲ ಚಿತ್ರಗಳಿಂದ ಮನುಷ್ಯನ ಮೇಲಾಗುತ್ತಿರುವ ಶಾಕಿಂಗ್ ಪರಿಣಾಮಗಳೇನು? ಮಾನವನ ಆರೋಗ್ಯದ ಮೇಲೆ ಏನೆಲ್ಲಾ ತೊಂದರೆ ಉಂಟಾಗುತ್ತಿದೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ಮನುಷ್ಯನ ಮೆಮೊರಿ ಹಾಳು!!

ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುವ ಜನರು ಮಾನಸಿಕವಾಗಿ ಹೆಚ್ಚು ದುರ್ಬಲರಾಗುತ್ತಾರೆ ಮತ್ತು ಈಗಾಗಲೇ ದುರ್ಬಲರಾಗಿದ್ದಾರೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಇಷ್ಟು ಮಾತ್ರವಲ್ಲದೇ ಮನುಷ್ಯನ ಮೆಮೊರಿಯನ್ನು ಕಡಿಮೆ ಮಾಡುವ ಸಮಸ್ಯೆಯನ್ನು ಅಶ್ಲೀಲ ವಿಡಿಯೋಗಳು ತರುತ್ತಿವೆಯಂತೆ.!!

ಜೀವನವೇ ದುರ್ಬರವಾಗಲಿದೆ!!

ಅಶ್ಲೀಲ ವಿಡಿಯೋಗಳು ನಿಮ್ಮ ಮನಸ್ಸಿನಲ್ಲಿ ಕಿರಿಕಿರಿ ಉಂಟುಮಾಡುತ್ತವಂತೆ. ಮನೆಯವರಾಗಿರಬವುದು ಅಥವಾ ಹೊರಗಿನವರಾಗಿರಬವುದು ನೀವು ಅವರ ಮೇಲೆ ಶೀಘ್ರ ಕೋಪ ಮಾಡಿಕೊಳ್ಳುತ್ತೀರಾ ಮತ್ತು ಮಾನಸಿಕ ಸ್ಥಿಮಿತತೆಯನ್ನು ಕಳೆದು ಜೀವನವೇ ದುರ್ಬರವಾಗುವಂತೆ ಮಾಡಲಿದೆ.!!

ಮನಸ್ಸಿನ ಬೆಳವಣಿಗೆಯಲ್ಲಿ ವಿಫಲತೆ.!!

ಮನಸ್ಸಿನ ಬೆಳವಣಿಗೆಯಲ್ಲಿ ವಿಫಲತೆ ಎಂಬುದು ಸಿಂಪಲ್ ಆಗಿ ಕೇಳಿಸಿದರೂ ಇದು ಅತ್ಯಂತ ಅಪಾಯಕಾರಿಯಾಗಿದೆ. ವರದಿಯ ಪ್ರಕಾರ ಈ ರೀತಿಯ ಹೆಚ್ಚಿನ ವೀಡಿಯೋಗಳನ್ನು ನೀವು ನೋಡುವುದರಿಂದ ನಿಮ್ಮ ಯೋಚನಾ ಲಹರಿ ಬದಲಾಗಲಿದೆಯಂತೆ. ಸೆಕ್ಸ್ ಅನ್ನು ಹೆಚ್ಚು ಜನರು ಫ್ಯಾಂಟಸಿ ಎಂದು ಕೊಳ್ಳುತ್ತಾರಂತೆ.!!

ನಾವೇ ಹಾಳುಮಾಡಿಕೊಳ್ಳುತ್ತಿದೇವೆ!!

ಇಂಟರ್‌ನೆಟ್‌ನಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ದುರುಪಯೋಗ ಕೂಡ ಇದೆ. ಆದರೆ, ಇಂಟರ್‌ನೆಟ್ ಮೂಲಕ ನಮ್ಮನ್ನು ಇತರರು ದುರುಪಯೋಗ ಪಡಿಸಿಕೊಳ್ಳುವವರಿಗಿಂತ, ನಮ್ಮನ್ನು ನಾವೇ ಹಾಳುಮಾಡಿಕೊಳ್ಳಲು ಈ ಅಶ್ಲೀಲ ಚಿತ್ರಗಳೇ ಕಾರಣಗಳಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.!!

ಡೇಟಾ ಹ್ಯಾಕ್ ಮಾಡಲಾಗುತ್ತದೆ.!!

ನೀವು ಯಾವುದೇ ಅಶ್ಲೀಲ ವೆಬ್‌ಸೈಟ್‌ ತೆರೆದಾಗ ಅನೇಕ ಹ್ಯಾಕರ್ಸ್ ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ ಒಳಗೆ ನುಸುಳುವಂತೆ ಸೈಟ್‌ಗಳು ಸಹಾಯಮಾಡುತ್ತವೆ. ನಿಮ್ಮ ಮೊಬೈಲ್ ಒಳಗೆ ವೈರಸ್‌ಗಳನ್ನು ಬಿಟ್ಟು ನಿಮ್ಮ ಡೇಟಾವನ್ನು ಹ್ಯಾಕ್ ಮಾಡುವ ಸಮಸ್ಯೆ ಹೆಚ್ಚಿದೆ.! ಮೊಬೈಲ್‌ನಲ್ಲಿಯೇ ಬ್ಯಾಂಕಿಂಗ್ ವ್ಯವಸ್ಥೆ ಬಳಸುವವರಿಗೆ ಇದು ಹೆಚ್ಚು ಸಮಸ್ಯೆ ತಂದಿಡಲಿದೆ.!!

ಇತಿಹಾಸದಲ್ಲಿಯೇ ಯಾರು ನೀಡದ 'ರಿಲಯನ್ಸ್ ಬಿಗ್' ಭರ್ಜರಿ ಆಫರ್!!..'ಕೇಬಲ್ ಟಿವಿ' ಮುಳುಗಡೆ!!

ರಿಲಯನ್ಸ್ ಜಿಯೋ ಡಿಟಿಹೆಚ್ ಮಾರುಕಟ್ಟೆಗೆ ಬರಲಿದೆ ಎನ್ನುವ ಸುದ್ದಿಯ ಬೆನ್ನಲ್ಲೆ ರಿಲಯನ್ಸ್ ಬಿಗ್ ಟಿವಿ ಇತಿಹಾಸದಲ್ಲಿಯೇ ಯಾರು ನೀಡದಂತಹ ಭರ್ಜರಿ ಕೊಡುಗೆಯನ್ನು ಪ್ರಕಟಿಸಿದೆ.!! ಹೆಚ್‌ಡಿ ಗುಣಮಟ್ಟದ ಮನರಂಜನಾ ವಾಹಿನಿಗಳನ್ನು ಸಂಪೂರ್ಣ ಉಚಿತವಾಗಿ ನೀಡುವುದಾಗಿ ರಿಲಯನ್ಸ್ ಬಿಗ್ ಟಿವಿ ಘೋಷಿಸಿದೆ.!!

ಹೌದು, ಮನೋರಂಜನೆ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ತನ್ನ HD HEVC ಸೆಟ್‌ ಟಾಪ್‌ ಬಾಕ್ಸನ್ನು ಸಂಪೂರ್ಣ ಉಚಿತವಾಗಿ ನೀಡುವ ಮೂಲಕ ಟಿವಿ ಜಗತ್ತಿನಲ್ಲಿ ಡಿಜಿಟಲ್ ಕ್ರಾಂತಿಯನ್ನು ಪರಿಣಾಮಕಾರಿಯಾಗಿ ಹೊರತರಲು ರಿಲಯನ್ಸ್ ಬಿಗ್ ಟಿವಿಯು ಎಲ್ಲಾ ರೀತಿಯಲ್ಲೂ ಸಜ್ಜಾಗಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದೆ.!!

500 ವಾಹಿನಿಗಳನ್ನು 5 ವರ್ಷಗಳವರೆಗೆ ಹಾಗೂ ಶುಲ್ಕ ಸಹಿತ ವಾಹಿನಿ ವಾಹಿನಿಗಳನ್ನು ಒಂದು ವರ್ಷಗಳ ಕಾಲದವರೆಗೂ ದೇಶಾದ್ಯಂತ ಗ್ರಾಹಕರಿಗೆ ಉಚಿತವಾಗಿ ನೀಡುವುದಾಗಿ ಬಿಗ್ ಟಿವಿ ಹೇಳಿಕೊಂಡಿದೆ.!! ಹಾಗಾದರೆ, ರಿಲಯನ್ಸ್ ಬಿಗ್ ಟಿವಿ ಪ್ರಕಟಿಸಿರುವ ಎಲ್ಲಾ ಆಫರ್‌ಗಳು ಯಾವುವು? ಗ್ರಾಹಕರಿಗೆ ಏನೆಲ್ಲಾ ಲಾಭಗಳಿವೆ ಎಂಬುದನ್ನು ಮುಂದೆ ತಿಳಿಯಿರಿ.!!

ಸೆಟ್‌ಟಾಪ್‌ ಬಾಕ್ಸ್ ಸಂಪೂರ್ಣ ಉಚಿತ!!

ಇತಹಾಸದಲ್ಲಿಯೇ ಮೊದಲ ಬಾರಿಗೆ ರಿಲಯನ್ಸ್ ಬಿಗ್ ಟಿವಿ ಮನೋರಂಜನೆ ಕ್ಷೇತ್ರದಲ್ಲಿ ತನ್ನ HD HEVC ಸೆಟ್‌ಟಾಪ್‌ ಬಾಕ್ಸನ್ನು ಸಂಪೂರ್ಣ ಉಚಿತವಾಗಿ ನೀಡಿದೆ. ಡಿಜಿಟಲ್ ಕ್ರಾಂತಿಯನ್ನು ಪರಿಣಾಮಕಾರಿಯಾಗಿ ಹೊರತರಲು ರಿಲಯನ್ಸ್ ಬಿಗ್ ಟಿವಿಯು ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ.!!

ಒಂದು ವರ್ಷ ಉಚಿತ ಸೇವೆ!!

ರಿಲಯನ್ಸ್ ಟಿವಿಯು ಶುಲ್ಕ ರಹಿತವಾದ 500 ವಾಹಿನಿಗಳನ್ನು 5 ವರ್ಷಗಳವರೆಗೆ ಹಾಗೂ ಶುಲ್ಕ ಸಹಿತ ವಾಹಿನಿಗಳನ್ನು ಒಂದು ವರ್ಷಗಳ ಕಾಲದವರೆಗೂ ದೇಶಾದ್ಯಂತ ಗ್ರಾಹಕರಿಗೆ ಉಚಿತವಾಗಿ ನೀಡುವುದಾಗಿ ಹೇಳಿದೆ. ಬಿಗ್ ಟಿವಿಯ ನಿರ್ದೇಶಕರಾದ ಮಿ. ವಿಜೇಯೆಂದ್ರ ಸಿಂಗ್‌ ತಮ್ಮ ನೂತನ ಯೋಜನೆಯನ್ನು ಪ್ರಕಟಿಸಿದ್ದಾರೆ.

ಮಾರ್ಚ್ 1ರಿಂದ ಜಾರಿಗೆ!!

ರಿಲಯನ್ಸ್ ಬಿಗ್ ಟಿವಿಯ ಉಚಿತ ಮನೋರಂಜನೆಯ ನೂತನ ಕೊಡುಗೆ ಮಾರ್ಚ್ 1ರಿಂದ ಜಾರಿಗೆ ಬರಲಿದೆ ಎಂದು ಬಿಗ್ ಟಿವಿಯ ನಿರ್ದೇಶಕರಾದ ಮಿ. ವಿಜೇಯೆಂದ್ರ ಸಿಂಗ್‌ ತಿಳಿಸಿದ್ದಾರೆ. ಮನರಂಜನೆ, ಕಾರ್ಟೂನ್, ಚಲನಚಿತ್ರಗಳು, ಕ್ರೀಡೆಗಳು, ಸುದ್ದಿ, ಮಾಹಿತಿ ಮನೋರಂಜನೆ, ಶಿಕ್ಷಣ ಹೀಗೆ ನಾನಾ ಚಾನಲ್‌ಗಳು ಉಚಿತವಾಗಿರುವುದಾಗಿ ತಿಳಿಸಿದ್ದಾರೆ.!!

ಮುಂಗಡ ಪಾವತಿ ಮಾಡಬೇಕು!!

ಇಂದಿನಿಂದ ಆರಂಭವಾಗುತ್ತಿರುವ ಬಿಗ್ ಟಿವಿಯ ಕೊಡುಗೆಯಲ್ಲಿ ಗ್ರಾಹಕರ 499 ರೂ.ಗಳನ್ನು ಪಾವತಿಸಿ ಸೆಟ್‌ ಟಾಪ್ ಬಾಕ್ಸ್‌ ಬುಕ್ ಮಾಡಬೇಕು. ನಂತರ ಸೆಟ್‌ಟಾಪ್ ಬಾಕ್ಸ್‌ ಮತ್ತು ಔಟ್‌ ಡೋರ್ ಯೂನಿಟ್‌ ಅನ್ನು ಸ್ವೀಕರಿಸಿದ ನಂತರ ಉಳಿದ 1500 ರೂ.ಗಳನ್ನು ಪಾವತಿಸಿ ಟಿವಿ ಕನೆಕ್ಷನ್ ಪಡೆದುಕೊಳ್ಳಬಹುದು.!!

ಸೆಟ್‌ಟಾಪ್‌ ಬಾಕ್ಸ್ ಬುಕ್ಕಿಂಗ್ ಹೇಗೆ?

ಬಿಗ್‌ಟಿವಿ ಅಫಿಷಿಯಲ್ ವೆಬ್‌ಸೈಟ್‌ www.reliancedigitaltv.com ಲಾಗಿ ಇನ್ಆಗಿ ಬಿಗ್‌ಟಿವಿ ಸೆಟ್‌ಟಾಪ್‌ ಬಾಕ್ಸ್ ಬುಕ್ಕಿಂಗ್ ಮಾಡಬಹುದಾಗಿದೆ. ಬುಕಿಂಗ್ ಮೊತ್ತವಾದ 499 ರೂ. ಸಲ್ಲಿಸಿ ಸೆಟ್‌ಟಾಪ್ ಬಾಕ್ಸ್‌ ಮತ್ತು ಔಟ್‌ ಡೋರ್ ಯೂನಿಟ್‌ ಬುಕಿಂಗ್ ಪಡೆದ ಡೆಲಿವರಿ ಪಡೆದ ನಂತರ ಉಳಿದ ಹಣವನ್ನು ಪಾವತಿಸಬೇಕಾಗುತ್ತದೆ.!!

ಹಣ ವಾಪಸ್ ಆಗುತ್ತದೆ.!!

ಒಟ್ಟು 1999 ರೂಪಾಯಿ ಹಣವನ್ನು ಪಾವತಿಸಿ ರಿಲಯನ್ಸ್ ಬಿಗ್‌ ಟಿವಿಯ ಚಂದಾದಾರಿಕೆಯನ್ನು ಪಡೆದರೆ ಆ ಹಣವನ್ನು ಎರಡು ವರ್ಷಗಳ ಕಾಲದಲ್ಲಿ ಲಾಯಲ್ಟಿ ರೂಪದಲ್ಲಿ ಮರುಪಾವತಿ ಮಾಡುವುದಾಗಿ ಬಿಗ್‌ಟಿವಿ ತಿಳಿಸಿದೆ. 1999 ರೂ. ಹಣವನ್ನು ರೀಚಾರ್ಜ್ ಆಫರ್‌ಗಳಾಗಿ ನೀಡುವುದಾಗಿ ಹೇಳಿಕೊಂಡಿದೆ.!

ಮಾಸಿಕ 300 ರೂ.!!

ಒಂದು ವರ್ಷದ ವರೆಗೂ ಉಚಿತ ಆಫರ್ ಅನ್ನು ಪ್ರಕಟಿಸಿರುವ ಬಿಗ್ ಟಿವಿ ಟೆಲಿಕಾಂ ಕಂಪೆನಿಗಳು ನೀಡುವಂತಹ ಭರ್ಜರಿ ಆಫರ್ ಅನ್ನು ಘೋಷಿಸಿದೆ. ಒಂದು ವರ್ಷದ ನಂತರ 300 ರೂಪಾಯಿಗಳನ್ನು ಪಾವತಿಸಿ ಶುಲ್ಕಸಹಿತ ಚಾನೆಲ್‌ಗಳನ್ನು ವೀಕ್ಷಿಸಬಹುದಾಗಿದೆ ಎಂದು ಕಂಪೆನಿ ತಿಳಿಸಿದೆ.!!

ಸೀಮಿತ ಅವಧಿಯವರೆಗೆ ಮಾತ್ರ!!

ಶುಲ್ಕಸಹಿತ ವಾಹಿನಿಗಳನ್ನು ಒಂದು ವರ್ಷದ ಕಾಲ ಸಂಪೂರ್ಣ ಉಚಿತವಾಗಿ ನೀಡಲಿರುವ ಹಾಗೂ ಉಚಿತ ವಾಹಿನಿಗಳನ್ನು ಐದು ವರ್ಷಗಳ ಕಾಲ ಶುಲ್ಕರಹಿತವಾಗಿ ನೀಡಲಿರುವ ಈ ಸೇವಯ ಆಫರ್ ಸೀಮಿತ ಅವಧಿಯವರೆಗೆ ಮಾತ್ರ ಇರುತ್ತದೆ ಎಂದು ಬಿಗ್ಟಿವಿ ತಿಳಿಸಿದೆ. ಈ ಕೊಡುಗೆ ಮಾರ್ಚ್ 1, 2018ರಂದು 10 ಗಂಟೆಯಿಂದ ಆರಂಭವಾಗಿದೆ.!!


Read More About: websites App online video
Have a great day!
Read more...

English Summary

people who dont know about xxx video websites. to know more visit to kannada.gizbot.com