ನೀವು ಬಳಸುತ್ತೇವೆ ಎಂದರೂ ನಿಮ್ಮ ಮೊಬೈಲ್‌ನಲ್ಲಿ ಈ ಫೀಚರ್‌ಗಳು ಮುಂದೆ ಇರಲ್ಲ..!


ತಂತ್ರಜ್ಞಾನ ಜಗತ್ತು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಅದರಂತೆ ಗ್ಯಾಡ್ಜೆಟ್‌ಗಳು ಸಹ ಅಪ್‌ಡೇಟ್‌ ಆಗುತ್ತಿವೆ. ಸ್ಮಾರ್ಟ್‌ಫೋನ್‌ಗಳು ಹೊಸ ಹೊಸ ಫೀಚರ್‌ಗಳೊಂದಿಗೆ ಮಾರುಕಟ್ಟೆಗೆ ಕಾಲಿಡುತ್ತಿವೆ. ಯಾಕೆಂದರೆ ಜನ ನವೀನ ಫೀಚರ್‌ಗಳಿಗೆ ಆಕರ್ಷಿತರಾಗುವುದನ್ನು ಕಂಡಿರುವ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿಗಳು ಸ್ಮಾರ್ಟ್‌ಫೋನ್‌ಗಳಿಗೆ ಹೊಸತನವನ್ನು ಅಳವಡಿಸಲು ಮುಂದಾಗಿವೆ.

Advertisement

ಆದರೆ, ನೀವು ಈಗ ಬಳಸುತ್ತಿರುವ ಅನೇಕ ಫೀಚರ್‌ಗಳು ಮುಂದೆ ಇರುವುದಿಲ್ಲ. ಹೊಸ ನೀರು ಬಂದ ಮೇಲೆ ಹಳೇ ನೀರು ಹೋಗುತ್ತೆ ಎಂಬ ಗಾದೆಯಂತೆ ಟೆಕ್‌ ಲೋಕದಲ್ಲೂ ಅನೇಕ ಉತ್ಪನ್ನಗಳು ಫೀಚರ್‌ಗಳು ಮರೆಯಾಗುತ್ತಿವೆ. ಅಂತಹ ಫೀಚರ್‌ಗಳಲ್ಲಿ ನಾವೀಗ ಬಳಸುತ್ತಿರುವ ಉತ್ತಮ ಫೀಚರ್‌ಗಳು ಸೇರಿವೆ ಎನ್ನುವುದು ಸತ್ಯ. ಅದಕ್ಕಾಗಿಯೇ ಮುಂದೆ ನಾವು ಬಳಸುತ್ತೇವೆ ಎಂದರೂ ಮೊಬೈಲ್‌ನಲ್ಲಿ ಸಿಗದ ಉತ್ತಮ ಫೀಚರ್‌ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

Advertisement

ಫಿಂಗರ್‌ಪ್ರಿಂಟ್ ಸ್ಕ್ಯಾನರ್‌

ಸ್ಮಾರ್ಟ್‌ಫೋನ್‌ನ ಭದ್ರತಾ ದೃಷ್ಟಿಯಿಂದ ಈ ಫೀಚರ್‌ನ್ನು ಸ್ಮಾರ್ಟ್‌ಫೋನ್‌ ಕಂಪನಿಗಳು ಪರಿಚಯಿಸಿದ್ದವು, ಇಂದು ಸಹ ಬಳಕೆಯಲ್ಲಿರುವ ಉತ್ತಮ ಫೀಚರ್ ಆಗಿದೆ. ಆದರೆ, ಈಗ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಫೀಚರ್ ಹಳೆಯದಾಗಿದೆ. ಹೀಗಾಗಲೇ ಆಪಲ್‌ ತನ್ನ ಫೋನ್‌ಗಳಲ್ಲಿ ಫೇಸ್‌ ಐಡಿ ಮಾತ್ರ ಅಳವಡಿಸಿದ್ದು, ಫಿಂಗರ್‌ಪ್ರಿಂಟ್‌ ಸ್ಕ್ಯಾನರ್‌ನ್ನು ಕೈ ಬಿಟ್ಟಿದೆ. ಇನ್ನೂ ವಿವೋ ಮತ್ತು ಒಪ್ಪೋ ಕಂಪನಿಗಳು ಫಿಂಗರ್‌ಪ್ರಿಂಟ್ ಸೆನ್ಸಾರ್ ಬದಲಿಗೆ ಇನ್‌ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ಸೆನ್ಸಾರ್ ಅಳವಡಿಸಿದ್ದು, ಇದನ್ನು ಒನ್‌ಪ್ಲಸ್‌, ಸ್ಯಾಮ್‌ಸಂಗ್‌ ಕಂಪನಿಗಳು ಮುಂದುವರೆಸುತ್ತಿದ್ದು, ಕಾಲ ಕ್ರಮೇಣ ಎಲ್ಲಾ ಕಂಪನಿಗಳು ಇನ್‌ಫಿಂಗರ್ ಪ್ರಿಂಟ್‌ ಡಿಸ್‌ಪ್ಲೇ ಫೀಚರ್‌ಗೆ ಬದಲಾಗುತ್ತವೆ.

ಹೆಡ್‌ಫೋನ್‌ ಜಾಕ್‌

ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲೀ 3.5mm ಹೆಡ್‌ಫೋನ್‌ ಜಾಕ್‌ ನೋಡಿರುವ ನಮಗೆಲ್ಲಾ ಮುಂದಿನ ಕೆಲ ವರ್ಷಗಳಲ್ಲಿ ಹೆಡ್‌ಫೋನ್‌ ಜಾಕ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಇರಲ್ಲ ಎನ್ನುವುದು ಗೊತ್ತಿಲ್ಲ. ಹೌದು, ಬ್ಲೂಟೂತ್‌ ಮತ್ತು Type C USB ಕಡೆ ಮುಖ ಮಾಡಿರುವ ಸ್ಮಾರ್ಟ್‌ಫೋನ್‌ಗಳು ಹೆಡ್‌ಫೋನ್‌ ಜಾಕ್‌ನ್ನು ದೂರ ತಳ್ಳುತ್ತಿವೆ. ಹೀಗಾಗಲೇ ಅನೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಡ್‌ಫೋನ್‌ ಜಾಕ್ ಇಲ್ಲ. ಮುಂದೆ ಬರುವ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನಲ್ಲೂ ಹೆಡ್‌ಫೋನ್‌ ಜಾಕ್‌ ಇಲ್ಲದಿರುವುದು ಖಚಿತವಾಗಿದೆ.

ಸಿಮ್‌ ಕಾರ್ಡ್‌ ಸ್ಲಾಟ್ಸ್‌

ಹೀಗಾಗಲೇ ಆಪಲ್‌ ಕಂಪನಿ ತನ್ನ ಇತ್ತೀಚಿನ 2018ರ ಐಫೋನ್‌ eSIM ಬೆಂಬಲದೊಂದಿಗೆ ಡ್ಯುಯಲ್‌ ಸಿಮ್‌ ಸೇವೆಯನ್ನು ನೀಡುತ್ತದೆ. ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬ್ರಾಂಡ್‌ಗಳು ಸಹ eSIM ಕಡೆ ಮುಖ ಮಾಡುತ್ತಿದ್ದು, ಭೌತಿಕ ಸಿಮ್‌ಗಳು ಸಂಪೂರ್ಣವಾಗಿ ಮರೆಯಾಗುತ್ತವೆ. ಹೀಗಾಗಲೆ ಭಾರತದಲ್ಲಿ ರಿಲಾಯನ್ಸ್‌ ಜಿಯೋ ಮತ್ತು ಭಾರ್ತಿ ಏರ್‌ಟೆಲ್‌ eSIM ಸೇವೆಗಳನ್ನು ನೀಡುತ್ತಿವೆ. ಮುಂದೆ ಬೇರೆ ಟೆಲಿಕಾಂ ಕಂಪನಿಗಳು eSIM ಸೇವೆ ಆರಂಭಿಸುವಲ್ಲಿ ಉತ್ಸಾಹ ತೋರುತ್ತಿವೆ. ಇದರಿಂದ ಸಿಮ್‌ ಸ್ಲಾಟ್‌ಗಳು ಇರುವುದು ಡೌಟೇ.

ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್ಸ್‌

ಹೀಗಾಗಲೇ ಅನೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ಗಳು ಮರೆಯಾಗಿವೆ. ಏಕೆಂದರೆ, ಸ್ಮಾರ್ಟ್‌ಫೋನ್‌ಗಳಲ್ಲಿ ಗರಿಷ್ಟ 512GBವರೆಗೂ ಸ್ಟೋರೆಜ್‌ ಆಯ್ಕೆಯನ್ನು ನೀಡುತ್ತಿರುವಾಗ ಮೈಕ್ರೋ ಎಸ್‌ಡಿ ಕಾರ್ಡ್‌ಗಳ ಅವಶ್ಯಕತೆ ಇಲ್ಲದಂತಾಗಿದೆ. ಆದ್ದರಿಂದ ಮುಂದೆ ನಿಮಗೆ ಸ್ಮಾರ್ಟ್‌ಫೋನ್‌ನಲ್ಲಿ ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ಗಳು ಕಾಣುವುದಾ ಎಂಬುದನ್ನು ಕಾಯಬೇಕು.

ಸಾಂಪ್ರದಾಯಿಕ ಚಾರ್ಜರ್‌

ನಿಧಾನವಾಗಿ ವೈರ್‌ಲೆಸ್‌ ಚಾರ್ಜರ್‌ಗಳು ತಮ್ಮ ಸಾಮರ್ಥ್ಯವನ್ನು ನಿರೂಪಿಸುತ್ತಿವೆ. ಆದ್ದರಿಂದ ಸ್ಮಾರ್ಟ್‌ಫೋನ್‌ ಕಂಪನಿಗಳು ಸಾಂಪ್ರದಾಯಿಕ ಯುಎಸ್‌ಬಿ ಚಾರ್ಜರ್‌ ಬಿಟ್ಟು ವೈರ್‌ಲೆಸ್‌ ಚಾರ್ಜರ್‌ ಕಡೆ ಆಕರ್ಷಿತಿರಾಗಿದ್ದಾರೆ. ಮುಂದೆ ನಿಮಗೆ ಅಡಾಪ್ಟ್ರ್‌, ಯುಎಸ್‌ಬಿ ಕೇಬಲ್‌ ಮೊಬೈಲ್‌ ಬಾಕ್ಸ್‌ನಲ್ಲಿ ಬರುವುದು ಡೌಟು.

ಸ್ಪೀಕರ್‌ ಇರುವುದು ಡೌಟು

ಹೀಗಾಗಲೇ ಡಿಸ್‌ಪ್ಲೇನಲ್ಲಿಯೇ ಸ್ಪೀಕರ್‌ ತಂತ್ರಜ್ಞಾನ ಬಂದಿದ್ದು, ಅದಕ್ಕಾಗಿ ಪ್ರತ್ಯೇಕ ಜಾಗವನ್ನು ಮೀಸಲಿಡಬೇಕಾ ಎಂದು ಸ್ಮಾರ್ಟ್‌ಫೋನ್‌ ಕಂಪನಿಗಳು ಯೋಚಿಸುತ್ತಿವೆ. ಇತ್ತೀಚೆಗೆ ತಾನೇ ಬಿಡುಗಡೆಯಾಗಿದ್ದ Vivo NEXನಲ್ಲಿ ಡಿಸ್‌ಪ್ಲೇನಲ್ಲಿಯೇ ಸ್ಪೀಕರ್‌ ಇರುವುದನ್ನು ನಾವೂ ನೋಡಬಹುದು. ಇದರಿಂದ ಸ್ಮಾರ್ಟ್‌ಫೋನ್‌ ಇನ್ನಷ್ಟು ತೆಳುವಾಗುವುದರಲ್ಲಿ ಅನುಮಾನವಿಲ್ಲ.

ವಾಲ್ಯೂಮ್‌ ಬಟನ್‌

ಸ್ಮಾರ್ಟ್‌ಫೋನ್‌ಗಳು ವಾಲ್ಯೂಮ್‌ ಬಟನ್‌ಗಳನ್ನು ನೀಡದಿರಲು ಯೋಚಿಸುತ್ತಿದ್ದು, ಕೇವಲ ಒಂದೇ ಪವರ್‌/ವೆಕ್‌ ಬಟನ್‌ನಲ್ಲಿ ವಾಲ್ಯೂಮ್‌ ನಿಯಂತ್ರಕ ಬಟನ್‌ಗಳನ್ನು ಅಳವಡಿಸಲು ಯೋಚಿಸುತ್ತಿವೆ. ಈ ಹಂತವನ್ನು ನೋಡಿದರೆ, ಮುಂದಿನ ದಿನಗಳಲ್ಲಿ ಪ್ರತ್ಯೇಕ ವಾಲ್ಯೂಮ್‌ ಬಟನ್‌ಗಳು ನಮಗೆ ಕಾಣುವುದಿಲ್ಲ ಎಂಬುದು ಖಚಿತವಾದಂತೆ.

ಬಾರ್‌ ವಿನ್ಯಾಸದ ಸ್ಮಾರ್ಟ್‌ಫೋನ್‌ಗಳು ಇರಲ್ಲ

ಹೀಗಾಗಲೇ ಸ್ಮಾರ್ಟ್‌ಫೋನ್‌ ಜಗತ್ತಿಗೆ ಮಡಚಬಹುದಾದ ಸ್ಮಾರ್ಟ್‌ಫೋನ್‌ಗಳು ಪ್ರವೇಶಿಸಲು ತಯಾರಿ ನಡೆಸುತ್ತಿವೆ. ಸ್ಯಾಮ್‌ಸಂಗ್‌ ಮತ್ತು ಎಲ್‌ಜಿ ಹಾಗೂ ಶಿಯೋಮಿ ಕಂಪನಿಗಳು ಮಡಚಬಹುದಾದ ಸ್ಮಾರ್ಟ್‌ಫೋನ್‌ ಉತ್ಪಾದಿಸುತ್ತಿವೆ. ಮಡಚಬಹುದಾದ ಸ್ಮಾರ್ಟ್‌ಫೋನ್‌ಗಳು ಬಂದೆ ಸಾಂಪ್ರದಾಯಿಕವಾದ ಆಯತಾಕಾರದ ಬಾರ್‌ ವಿನ್ಯಾಸದ ಸ್ಮಾರ್ಟ್‌ಫೋನ್‌ಗಳು ಅಳಿವಿನಂಚಿಗೆ ಸರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇಯರ್‌ಪೀಸ್‌ ಕೂಡ ಇರಲ್ಲ

ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ಡಿಸ್‌ಪ್ಲೇನಲ್ಲಿಯೇ ಸ್ಪೀಕರ್‌ ಬರುತ್ತಿರುವುದರಿಂದ ಇಯರ್‌ಪೀಸ್‌ ಕೂಡ ಇರಲ್ಲ. ಮೊಬೈಲ್‌ನಲ್ಲಿ ಮಾತನಾಡುವಾಗ ಬಳಸುವ ಈ ಸಾಧನದ ಕೆಲಸವನ್ನೂ ಇನ್‌ಡಿಸ್‌ಪ್ಲೇ ಸ್ಪೀಕರ್ ಮಾಡುವುದರಿಂದ ಇಯರ್‌ಪೀಸ್‌ ಮುಂದಿನ ದಿನಗಳಲ್ಲಿ ಕಾಣಲೂ ಸಾಧ್ಯವಿಲ್ಲದಂತಾಗಬಹುದು.

ಹಿಂಬದಿಯ ಸಿಂಗಲ್‌ ಲೆನ್ಸ್‌ ಕ್ಯಾಮೆರಾ

ಈಗಂತೂ ಸ್ಮಾರ್ಟ್‌ಫೋನ್‌ ಕಂಪನಿಗಳು ಡ್ಯುಯಲ್‌ ಲೆನ್ಸ್‌ ಕ್ಯಾಮೆರಾ ವ್ಯವಸ್ಥೆ ಬಳಸುತ್ತಿದ್ದು, ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲೂ ಸಿಂಗಲ್‌ ಲೆನ್ಸ್‌ ಕ್ಯಾಮೆರಾ ಮರೆಯಾಗುತ್ತಿದೆ. ಒಂದಿಷ್ಟು ಮೊಬೈಲ್‌ಗಳಂತೂ ತ್ರಿವಳಿ ಲೆನ್ಸ್‌ ಕ್ಯಾಮೆರಾ ಪರಿಚಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ಡ್ಯುಯಲ್‌ ಲೆನ್ಸ್‌ ಕ್ಯಾಮೆರಾಗಳು ಮರೆಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

Best Mobiles in India

English Summary

10 features that may soon disappear from your smartphones. To know more this visit kannada.gizbot.com