ಈ 5 ಕಾರಣಗಳಿಂದ ಮೊಟೋ ಜಿ6 ಪ್ಲಸ್ ಉತ್ತಮ ಸ್ಮಾರ್ಟ್‌ಫೋನ್ ಆಗಲ್ಲ..!


ಭಾರತೀಯ ಮಾರುಕಟ್ಟೆಯಲ್ಲಿ ಲೆನೊವಾ ಸಂಸ್ಥೆ ಅಷ್ಟು ಹೆಸರು ಸಂಪಾದಿಸದೇ ಇದ್ದರೂ ಕೂಡ ಮೋಟೋರೊಲಾ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಜೂನ್ ನಲ್ಲಿ ಕಂಪೆನಿಯು ಮೊಟೋ ಜಿ6 ಸ್ಮಾರ್ಟ್ ಫೋನ್ ನ್ನು ಬಿಡುಗಡೆಗೊಳಿಸಿದೆ. ಮೂರು ತಿಂಗಳ ನಂತರ ಕಂಪೆನಿಯು ಮೋಟೋ ಜಿ6 ಪ್ಲಸ್ ನ್ನು ಕೆಲವು ಸಣ್ಣಪುಟ್ಟ ವೈಶಿಷ್ಟ್ಯತೆಗಳನ್ನು ಸೇರಿಸಿ ಹೆಚ್ಚಿನ ಬೆಲೆಗೆ ಬಿಡುಗಡೆಗೊಳಿಸಿದೆ. ಮೋಟೋ ಜಿ6 ಪ್ಲಸ್ ಸದ್ಯ ಮಿಡ್ ರೇಂಜಿನ ಸ್ಮಾರ್ಟ್ ಫೋನ್ ಗಳಲ್ಲಿ ನೂತನ ಫೋನ್ ಆಗಿದ್ದು ಹೆಚ್ಚು ಚರ್ಚೆಗೆ ಕಾರಣವಾಗಿದೆ.

ಇದೇ ರೇಂಜಿನಲ್ಲಿ ಕಳೆದ ಕೆಲವು ತಿಂಗಳಲ್ಲಿ ಶಿಯೋಮಿ, ಹುವಾಯಿ ಸಬ್ ಬ್ರ್ಯಾಂಡ್ ಹಾನರ್, ನೋಕಿಯಾ, ಓಪ್ಪೋ ಮತ್ತು ವಿವೋ ಗಳು ಕೂಡ ಪೋನ್ ಗಳನ್ನು ಬಿಡುಗಡೆಗೊಳಿಸಿದೆ. ಈ ಸ್ಪರ್ಧೆಯಲ್ಲಿ ಮೋಟೋ ಜಿ6 ಪ್ಲಸ್ ಕೂಡ ಇದಿಯಾ? ಈ ಸ್ಪರ್ಧೆಯಲ್ಲಿರಲು ಅರ್ಹತೆಯನ್ನು ಮೊಟೋ ಜಿ6 ಪ್ಲಸ್ ಹೊಂದಿದೆಯಾ ಎಂಬ ಪ್ರಶ್ನೆಗೆ ಉತ್ತರ ಈ ಲೇಖನದಲ್ಲಿದೆ. ಮೋಟೋ ಜಿ6 ಪ್ಲಸ್ 22,999 ರುಪಾಯಿಗೆ ಅಷ್ಟು ಆಕರ್ಷಣೀಯವಲ್ಲದ ಪೋನ್ ಎಂದು ಪರಿಗಣಿಸಲು ಕೆಲವು ಕಾರಣಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ.

ಡಿಸೈನ್ ನಲ್ಲಿ ಬದಲಾವಣೆ ಇಲ್ಲ: ಮೋಟೋ ಜಿ6 ನಂತೆಯೇ ಕಾಣುತ್ತದೆ 

ಪ್ರಮುಖವಾಗಿ ಮೋಟೋ ಜಿ 6 ಪ್ಲಸ್ ಮೋಟೋ ಜಿ6 ನಂತೆಯೇ ಕಾಣುತ್ತದೆ. ಡಿಸೈನ್ ವಿಚಾರದಲ್ಲಿ ಯಾವುದೇ ದೊಡ್ಡ ಬದಲಾವಣೆಯನ್ನು ಕೂಡ ನಾವು ಮೋಟೋ ಜಿ6 ಪ್ಲಸ್ ನಲ್ಲಿ ಗಮನಿಸಲು ಸಾಧ್ಯವಿಲ್ಲ.ಪ್ರಮುಖ ವ್ಯತ್ಯಾಸವೆಂದರೆ ಸೈಜ್. ಮೋಟೋ ಜಿ6 ಪ್ಲಸ್ ಮೋಟೋ ಜಿ6ಗಿಂತ ಸ್ವಲ್ಪವೇ ದೊಡ್ಡದಾಗಿದೆ.

ಮೋಟೋ ಜಿ6 ನಂತೆಯೇ ಇದೆ ಡಿಸ್ಪ್ಲೇ ರೆಸಲ್ಯೂಷನ್ 

ಹಣದ ವಿಚಾರವನ್ನು ಹೊರತು ಪಡಿಸಿ ಮಾತನಾಡುವುದಾದರೆ ಮೋಟೋ ಜಿ6 ಪ್ಲಸ್ ಮತ್ತು ಮೋಟೋ ಜಿ 6 ಎರಡರಲ್ಲೂ ಕೂಡ ಒಂದೇ ಡಿಸ್ಪ್ಲೇ ಇದೆ.ಮೋಟೋ ಜಿ6 5.7- ಇಂಚಿನ ಡಿಸ್ಪ್ಲೇ ಹೊಂದಿದೆ ಮತ್ತು ಮೋಟೋ ಜಿ 6 ಪ್ಲಸ್ 5.9-ಇಂಚಿನ ಸ್ಕ್ರೀನ್ ಡಿಸ್ಪ್ಲೇಯನ್ನು ಹೊಂದಿದೆ. ಎರಡೂ ಡಿಸ್ಪ್ಲೇಗಳು ಪುಲ್ ಹೆಚ್ ಡಿ ರೆಸಲ್ಯೂಷನ್ ನ್ನು ಹೊಂದಿದೆ.

ಕಡಿಮೆ ಬ್ಯಾಟರಿ ಕೆಪಾಸಿಟಿ

ಇದೇ ಬೆಲೆಯ ಇತರೆ ಫೋನ್ ಗಳೊಂದಿಗೆ ಹೋಲಿಸಿದರೆ ಕಡಿಮೆ ಬ್ಯಾಟರಿ ಕೆಪಾಸಿಟಿಯನ್ನು ಹೊಂದಿದೆ. ಉದಾಹರಣೆಗೆ ಹಾನರ್ ಪ್ಲೇ ಮತ್ತು ಪೋಕೋ ಎಫ್ 1.ಹೊಸ ಮೊಟೋ ಜಿ6 ಪ್ಲೇ 3,200mAh ಬ್ಯಾಟರಿ ಕೆಪಾಸಿಟಿಯನ್ನು ಹೊಂದಿದೆ. ಇದು ಶಿಯೋಮಿ ಮತ್ತು ಪೋಕೋ ಎಫ್ 1 ಮತ್ತು ಇದಕ್ಕಿಂತ ಕಡಿಮೆ ಬೆಲೆಯ ಮೊಬೈಲ್ ಹಾನರ್ ಪ್ಲೇಯ 4,000mAh ಬ್ಯಾಟರಿಗಿಂತ ಬಹಳ ಕಡಿಮೆಯದ್ದಾಗಿದೆ.

ಔಟ್ ಡೇಟೆಡ್ ಆಗಿರುವ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ ಪ್ರೊಸೆಸರ್ ನಲ್ಲಿ ರನ್ ಆಗುತ್ತದೆ. 

ಸ್ಪರ್ಧಾತ್ಮಕ ಬೆಲೆಯಲ್ಲಿ ಮೋಟೋರೊಲಾ ಉತ್ತಮ ಹಾರ್ಡ್ ವೇರ್ ವ್ಯವಸ್ಥೆ ನೀಡುವುದಕ್ಕೆ ಪ್ರಯತ್ನಿಸುತ್ತದೆ. ಹಳೆಯ ಮೋಟೋ ಜಿ 6 ಸ್ನ್ಯಾಪ್ ಡ್ರ್ಯಾಗನ್ 450 ರಲ್ಲಿ ರನ್ ಆಗುತ್ತದೆ. ಹೊಸ ಮೊಟೋ ಜಿ6 ಪ್ಲಸ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 630 ಪ್ರೊಸೆಸರ್ ನಲ್ಲಿ ರನ್ ಆಗುತ್ತದೆ. ಇದು ಔಟ್ ಡೇಟೆಡ್ ಆಗಿದ್ದು ಶಿಯೋಮಿ, ಪೋಕೋ ಎಫ್1 ಗೆ ನಲ್ಲಿ ನೂತನ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ ಇದೆ ಮತ್ತು ಮೋಟೋಗಿಂತ ಕಡಿಮೆ ಬೆಲೆಯದ್ದೂ ಕೂಡ ಆಗಿದೆ. ಇದಕ್ಕಿಂತಲೂ ಕಡಿಮೆ ಬೆಲೆಯ ಹಾನರ್ ಹೆಚ್ಚು ವೇಗವಾಗಿ ಕಾರ್ಯನಿರ್ವಹಿಸುವ ಪ್ರೊಸೆಸರ್ ನ್ನು ಹೊಂದಿದೆ.

ಬೆಲೆ

ಮೋಟೋ ಜಿ6 ಪ್ಲಸ್ ನ ಬೆಲೆ 22,499 ರುಪಾಯಿ. ನೋಕಿಯಾ, ಆಸೂಸ್, ಹಾನರ್ ಮತ್ತು ಶಿಯೋಮಿಗೆ ಹೋಲಿಸಿದರೆ ಹಣಕ್ಕೆ ತಕ್ಕ ಬೆಲೆಯನ್ನು ಹೊಂದಿರುವ ಫೋನ್ ಮೋಟೋ ಜಿ6 ಪ್ಲಸ್ ಎಂದು ಅನ್ನಿಸುವುದಿಲ್ಲ.


Motorola Moto G6 Plus

Read More About: moto smartphone news tech news
Have a great day!
Read more...

English Summary

5 reasons why the new Moto G6 Plus may not be an impressive buy. To know more this visit kannada.gizbot.com