ಅಮೇಜಾನ್ ಗ್ರೇಟ್ ಇಂಡಿಯನ್ ಸೇಲ್ ನಲ್ಲಿ ಭರ್ಜರಿ ಎಕ್ಸ್ ಚೇಂಜ್ ಆಫರ್


ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಜನವರಿ 19 ರಿಂದ ಆರಂಭವಾಗಿದ್ದು ಜನವರಿ 22 ರ ವರೆಗೆ ನಡೆಯಲಿದೆ. ಈ ಸೇಲ್ ನಲ್ಲಿ ಹಲವು ಸ್ಮಾರ್ಟ್ ಫೋನ್ ಗಳಿಗೆ ಭರ್ಜರಿ ರಿಯಾಯಿತಿ ಇದೆ. ಜೊತೆಗೆ ಗ್ರೇಟ್ ಎಕ್ಸ್ ಚೇಂಜ್ ಆಫರ್ ಕೂಡ ಇದೆ. ನೀವೇನಾದರೂ ಫೋನ್ ಖರೀದಿಸುವುದಕ್ಕೆ ಪ್ಲಾನ್ ಮಾಡುತ್ತಿದ್ದರೆ ಒಮ್ಮೆ ಈ ಲಿಸ್ಟ್ ನ್ನು ಗಮನಿಸಿ.

ಗ್ರೇಟ್ ಎಕ್ಸ್ ಚೇಂಜ್ ಆಫರ್ ಗಳು, ನೋ ಕಾಸ್ಟ್ ಇಎಂಐ ಆಕೆ, ಹೆಚ್ಎಸ್ ಬಿಸಿ ಕ್ಯಾಷ್ ಬ್ಯಾಕ್ ಕಾರ್ಡ್ ನಲ್ಲಿ 5% ಇನ್ಸೆಂಟ್ ರಿಯಾಯತಿ, ಬ್ಯುಸಿನೆಸ್ ಪರ್ಚೇಸ್ ನಲ್ಲಿ 28% ದ ವರೆಗೆ ಜಿಎಸ್ ಟಿ ಇನ್ ವಾಯ್ಸ್ ಮೇಲೆ ಉಳಿತಾಯ ಮಾಡುವುದು ಸೇರಿದಂತೆ ಹಲವು ಆಫರ್ ಗಳು ಇದರಲ್ಲಿ ಲಭ್ಯವಿದೆ. .

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10

ಇಎಂಐ ಆಯ್ಕೆಯಲ್ಲಿ ಈ ಹ್ಯಾಂಡ್ ಸೆಟ್ ಲಭ್ಯವಿದ್ದು ರುಪಾಯಿ 3295 ರುಪಾಯಿಯನ್ನು ಪ್ರತಿ ತಿಂಗಳು ಪಾವತಿ ಮಾಡುವ ಮೂಲಕ ಖರೀದಿಸಬಹುದು.ಸ್ಟ್ಯಾಂಡರ್ಡ್ ಇಎಂಐ ಆಯ್ಕೆಯಲ್ಲಿಯೂ ಖರೀದಿ ಮಾಡಬಹುದು.11,900 ರುಪಾಯಿವರೆಗೆ ಎಕ್ಸ್ ಚೇಂಜ್ ಆಫರ್ ನಲ್ಲಿಯೂ ಕೂಡ ಖರೀದಿಸುವ ಅವಕಾಶವಿದೆ.

ಎಲ್ ಜಿ ಜಿ8ಎಕ್ಸ್

6GB RAM ಮತ್ತು 128GB ROM ಆಯ್ಕೆಯ ಸ್ಮಾರ್ಟ್ ಫೋನ್ ನ್ನು ನೀವು 20,010 ರುಪಾಯಿ ಪಾವತಿ ಮಾಡಿ ಖರೀದಿಸಬಹುದು. 2,353 ರುಪಾಯಿ ಪ್ರತಿ ತಿಂಗಳು ಪಾವತಿ ಮಾಡುವ ಮೂಲಕ ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸುವ ಅವಕಾಶವಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ಪ್ಲಸ್

ಈ ಡಿವೈಸ್ ಖರೀದಿಸುವಿಕೆಯಲ್ಲಿ 8,900 ರುಪಾಯಿ ವರೆಗೆ ಎಕ್ಸ್ ಚೇಂಜ್ ಅವಕಾಶವನ್ನು ಪಡೆಯಬಹುದು. 12GB RAM ಮತ್ತು 1TB ROM ಆಯ್ಕೆಯ ಫೋನಿನ ಬೆಲೆ 1,13,900 ರುಪಾಯಿಗಳು. ಅಂದರೆ 12% ರಿಯಾಯಿತಿಯನ್ನು ಪಡೆಯಬಹುದು. ಇಎಂಐ ಆಯ್ಕೆಯಲ್ಲಿ ನೀವು ಈ ಫೋನ್ ನ್ನು ಖರೀದಿಸುವ ಅವಕಾಶವಿದ್ದು ಪ್ರತಿ ತಿಂಗಳು 5,362 ರುಪಾಯಿ ಪಾವತಿ ಮಾಡಿ ಖರೀದಿಸಬಹುದು.

ರೆಡ್ಮಿ ನೋಟ್ 8 ಪ್ರೋ

ಪ್ರತಿ ತಿಂಗಳು 753 ರುಪಾಯಿ ಪಾವತಿ ಮಾಡುವ ಮೂಲಕ ಈ ಫೋನ್ ನ್ನು ಖರೀದಿಸಬಹುದು. ಸ್ಟ್ಯಾಂಡರ್ಡ್ ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸಬಹುದು.10,900 ರುಪಾಯಿ ವರೆಗೆ ಎಕ್ಸ್ ಚೇಂಜ್ ಆಫರ್ ನ್ನು ಈ ಫೋನಿಗೆ ಪಡೆದುಕೊಳ್ಳುವ ಅವಕಾಶವಿದೆ. ಅತೀ ದೊಡ್ಡ ಬ್ಯಾಟರಿ ಅಂದರೆ 4,500mAh ಸಾಮರ್ಥ್ಯವನ್ನು ಈ ಫೋನ್ ಹೊಂದಿರುತ್ತದೆ ಮತ್ತು 6.53-ಇಂಚಿನ ಡಿಸ್ಪ್ಲೇ ವ್ಯವಸ್ಥೆ ಇದೆ.

ಒನ್ ಪ್ಲಸ್ 7ಟಿ

3000 ರುಪಾಯಿವರೆಗೆ ರಿಯಾಯಿತಿಯನ್ನು ಈ ಫೋನ್ ಖರೀದಿಯಲ್ಲಿ ಪಡೆಯಬಹುದು. 34,999 ರುಪಾಯಿ ಬೆಲೆಗೆ ಖರೀದಿಸಬಹುದು. 10,400 ರುಪಾಯಿವರೆಗೆ ಎಕ್ಸ್ ಚೇಂಜ್ ಆಫರ್ ಲಭ್ಯವಿದೆ.

ಒನ್ ಪ್ಲಸ್ 7 ಪ್ರೋ

8GB RAM ಮತ್ತು 256GB ROM ಆಯ್ಕೆಯ ವೇರಿಯಂಟ್ ನ ಫೋನ್ ನ್ನು 42,999 ರುಪಾಯಿಗೆ ಖರೀದಿಸಬಹುದು. ಮಿರರ್ ಗ್ರೇ, ಅಲ್ಮಂಡ್ ಮತ್ತು ನೆಬುಲಾ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಈ ಫೋನ್ ಸಿಗುತ್ತದೆ. ಅತೀ ದೊಡ್ಡ ಎಕ್ಸ್ ಚೇಂಜ್ ಆಫರ್ ಕೂಡ ಸಿಗುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50ಎಸ್

3GB RAM ಮತ್ತು 32GB ROM ವೇರಿಯಂಟ್ ನ ಫೋನ್ ನ್ನು ಪ್ರತಿ ತಿಂಗಳು 377 ರುಪಾಯಿ ಪಾವತಿ ಮಾಡುವ ಮೂಲಕ ಇಎಂಐ ಆಯ್ಕೆಯಲ್ಲಿ ಖರೀದಿಸಬಹುದು. ಒಂದು ವರ್ಷದ ವಾರೆಂಟಿ ಈ ಹ್ಯಾಂಡ್ ಸೆಟ್ಟಿಗೆ ಸಿಗುತ್ತದೆ. 7,500 ರುಪಾಯಿವರೆಗೆ ಎಕ್ಸ್ ಚೇಂಜ್ ಆಫರ್ ನ್ನು ಕೂಡ ಪಡೆದುಕೊಳ್ಳಬಹುದು.

ಒಪ್ಪೋ ರೆನೋ2 Z

8GB RAM ಮತ್ತು 256GB ROM ವ್ಯವಸ್ಥೆಯ ಫೋನ್ ನ್ನು 25,990 ರುಪಾಯಿ ಬೆಲೆಗೆ ಖರೀದಿಸಬಹುದು. ಲ್ಯೂಮಿನಸ್ ಬ್ಲಾಕ್ ಮತ್ತು ಸ್ಕೈ ವೈಟ್ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. ಇದರಲ್ಲಿ 6.53-ಇಂಚಿನ ಡಿಸ್ಪ್ಲೇ, 4,000mAh ಬ್ಯಾಟರಿ ಮತ್ತು 48MP ಕ್ವಾಡ್ ಹಿಂಭಾಗದ ಕ್ಯಾಮರಾ ವ್ಯವಸ್ಥೆಯನ್ನು ಹೊಂದಿರುತ್ತದೆ.

ಒನ್ ಪ್ಲಸ್ 7ಟಿ ಪ್ರೋ

2,542 ರುಪಾಯಿಯನ್ನು ಪ್ರತಿ ತಿಂಗಳು ಪಾವತಿ ಮಾಡುವ ಮೂಲಕ ಈ ಹ್ಯಾಂಡ್ ಸೆಟ್ ನ್ನು ಖರೀದಿಸಬಹುದು. ಸ್ಟ್ಯಾಂಡರ್ಡ್ ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸಬಹುದು. 48ಎಂಪಿ ಹಿಂಭಾಗದ ಕ್ಯಾಮರಾ. 4,085 mAh ಬ್ಯಾಟರಿ ಮತ್ತು 6.67-ಇಂಚಿನ 90Hz ಫ್ಲೂಯಿಡ್ ಡಿಸ್ಪ್ಲೇ ವ್ಯವಸ್ಥೆಯನ್ನು ಇದು ಹೊಂದಿದೆ.

ಒಪ್ಪೋ ರೆನೋ2 ಎಫ್

27% ರಿಯಾಯಿತಿಯಲ್ಲಿ ಅಂದರೆ 23,990 ರುಪಾಯಿ ಬೆಲೆಗೆ ಈ ಹ್ಯಾಂಡ್ ಸೆಟ್ ನ್ನು ಖರೀದಿಸಬಹುದು.11,900 ರುಪಾಯಿ ವರೆಗೆ ಎಕ್ಸ್ ಚೇಂಜ್ ಆಫರ್ ಸಿಗುತ್ತದೆ. 5,000 ರುಪಾಯಿ ಕನಿಷ್ಟ ಖರೀದಿಗೆ ಎಸ್ ಬಿಐ ಕ್ರೆಡಿಟ್ ಕಾರ್ಡ್ಸ್ ಮತ್ತು ಕ್ರೆಡಿಟ್ ಕಾರ್ಡ್ ಇಎಂಐ ಗಳಲ್ಲಿ 10% ಇನ್ಸೆಂಟ್ ರಿಯಾಯಿತಿ ಸಿಗುತ್ತದೆ.

Most Read Articles
Best Mobiles in India
Read More About: amazon sale offers smartphones

Have a great day!
Read more...

English Summary

Amazon Great Indian Festival Sale 2020: Exchange Offers On Samsung, LG, Redmi, OnePlus, Oppo and More