2020 ಕ್ಕೆ ಭಾರತಕ್ಕೆ ಬರಲಿದೆ ನಾಲ್ಕು ಕ್ಯಾಮರಾವಿರುವ ಫೋನ್ ಗಳು


ಕಳೆದ ಒಂದು ದಶಕದಲ್ಲಿ ಸ್ಮಾರ್ಟ್ ಫೋನ್ ಜಗತ್ತು ಬಹಳಷ್ಟು ಬದಲಾವಣೆಯನ್ನು ಕಂಡಿದೆ. ಕಳೆದೊಂದು ವರ್ಷದಲ್ಲಿ ಸ್ಮಾರ್ಟ್ ಫೋನ್ ಗಳ ಬೆಲೆಯಲ್ಲೂ ಕೂಡ ಬಹಳ ವ್ಯತ್ಯಯವಾಗಿದ್ದು ಅತ್ಯಂತ ಕಡಿಮೆ ಬೆಲೆಗೆ ಡಿವೈಸ್ ಗಳು ಲಭ್ಯವಾಗುತ್ತಿದೆ.ಸ್ಮಾರ್ಟ್ ಫೋನ್ ಕಂಪೆನಿಗಳ ನಡುವಿನ ಸ್ಪರ್ಧೆಯಿಂದಾಗಿ ಸಾಕಷ್ಟು ಫೀಚರ್ ಗಳಿರುವ ಫೋನ್ ಗಳು ಕೂಡ ಕಡಿಮೆ ಬೆಲೆಗೆ ಸಿಗುತ್ತವೆ. ಅದರಲ್ಲೂ ಪ್ರಮುಖವಾಗಿ ಮಲ್ಟಿಪಲ್ ಕ್ಯಾಮರಾ ವ್ಯವಸ್ಥೆ ಇರುವ ಪೋನ್ ಗಲು ಇದೀಗ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲು ಪ್ರಾರಂಭವಾಗಿದೆ.

ಸದ್ಯ ಐದು ಕ್ಯಾಮರಾ ವ್ಯವಸ್ಥೆ ಇರುವ ಫೋನ್ ಗಳು ಕೂಡ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ. ಸದ್ಯ ನೀವೇನಾದರೂ ಫೋನ್ ಖರೀದಿಯ ಇರಾದೆಯಲ್ಲಿದ್ದರೆ ನಾಲ್ಕು ಕ್ಯಾಮರಾ ವ್ಯವಸ್ಥೆಯ ಪೋನ್ ಖರೀದಿಗೆ ಮುಂದಾಗುವುದು ಒಳ್ಳೆಯದು. ನಾವಿಲ್ಲಿ ಕ್ವಾಡ್ ಕ್ಯಾಮರಾ ವ್ಯವಸ್ಥೆ ಇರುವ ಟಾಪ್ ಫೋನ್ ಗಳ ಪಟ್ಟಿಯನ್ನು ನಿಮಗೆ ನೀಡುತ್ತಿದ್ದೇವೆ.

2020 ಕ್ಕೆ ಭಾರತದಲ್ಲಿ ಲಭ್ಯವಿರುವ ಬೆಸ್ಟ್ ಕ್ವಾಡ್ ಕ್ಯಾಮರಾ ಫೋನ್ ಗಳು

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10+

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಮೋಸ್ಟ್ ಪ್ರೀಮಿಯಂ ಸ್ಮಾರ್ಟ್ ಫೋನ್ ಗಳ ಪಟ್ಟಿಗೆ ಸೇರುತ್ತದೆ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10+ ಇದು ಪ್ರೀಮಿಯಂ ಡಿವೈಸ್ ಗಳಲ್ಲಿರುವ ಕ್ವಾಡ್ ಕ್ಯಾಮರಾ ವ್ಯವಸ್ಥೆ ಹೊಂದಿರುವ ಫೋನ್ ಆಗಿದೆ. ಎಲ್ಲಾ ನ್ಲ್ಕು ಸೆನ್ಸರ್ ಗಳು ಹಿಂಭಾಗದಲ್ಲಿದ್ದು ನೋಟ್ 10+ ಹಲವು ಕಾರಣಗಳಿಂದ ಬಳಕೆಗೆ ಯೋಗ್ಯವಾಗಿದೆ.

ಪ್ರಮುಖ ಸೆನ್ಸರ್ ಶೂಟರ್ 12-ಮೆಗಾಪಿಕ್ಸಲ್ ಸೆನ್ಸರ್ ಜೊತೆಗೆ ವೇರಿಯೇಬಲ್ ಅಪರ್ಚರ್ f/1.5ಮತ್ತು f/2.4 ಹೊಂದಿದೆ.ಇದು ಎರಡನೇ ಸೆನ್ಸರ್ 12-ಮೆಗಾಪಿಕ್ಸಲ್ ನೊಂದಿಗೆ ಪೇರ್ ಆಗಿದೆ ಮತ್ತು ಟೆಲಿಫೋಟೋ ಲೆನ್ಸ್ ಜೊತೆಗೆ 2ಎಕ್ಸ್ ಆಪ್ಟಿಕಲ್ ಝೂಮ್ ವ್ಯವಸ್ಥೆಯನ್ನು ಇದು ಹೊಂದಿದೆ. ಮೂರನೇ ಕ್ಯಾಮರಾವು 16 ಮೆಗಾಪಿಕ್ಸಲ್ ವ್ಯವಸ್ಥೆಯನ್ನು ಹೊಂದಿದ್ದು ಆಲ್ಟ್ರಾ ವೈಡ್ ಆಂಗಲ್ ಸೆನ್ಸರ್ ಜೊತೆಗೆ ಸೂಪರ್ ಸ್ಟೆಡಿ ವೀಡಿಯೋಗೆ ಬೆಂಬಲಿಸುತ್ತದೆ. 3D ToF ಕ್ಯಾಮರಾ ಕೂಡ ಇದ್ದು ಡೆಪ್ತ್ ಸೆನ್ಸಿಂಗ್ ಗೆ ನೆರವು ನೀಡುತ್ತದೆ. ಮುಂಭಾಗದಲ್ಲಿ 10 ಮೆಗಾಪಿಕ್ಸಲ್ ನ ಸೆಲ್ಫೀ ಕ್ಯಾಮರಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಅದರಲ್ಲಿ ಹೋಲ್ ಪಂಚ್ ಡಿಸ್ಪ್ಲೇ ಡಿಸೈನ್ ಇದೆ.

ವೈಶಿಷ್ಟ್ಯತೆಗಳು ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10+

ಬೆಲೆ 79999

 • ಚಿಪ್ ಸೆಟ್ ಸ್ಯಾಮ್ ಸಂಗ್ Exynos 9825 SoC
 • OS ಆಂಡ್ರಾಯ್ಡ್ 9 ಪೈ ಜೊತೆಗೆ ಒನ್ ಯುಐ
 • ಡಿಸ್ಪ್ಲೇ ಡೈನಾಮಿಕ್ AMOLED-6.8-ಇಂಚಿನ QHD+ -3040×1440 ಪಿಕ್ಸಲ್ಸ್
 • ಇಂಟರ್ನಲ್ ಮೆಮೊರಿ 12GB RAM + 256GB ಸ್ಟೋರೇಜ್
 • ಹಿಂಭಾಗದ ಕ್ಯಾಮರಾ ಕ್ವಾಡ್ - 12MP + 12MP + 16MP + VGA ToF
 • ಮುಂಭಾಗದ ಕ್ಯಾಮರಾ 10MP
 • ಬ್ಯಾಟರಿ 4,500mAh
ಹುವಯಿ ಪಿ30 ಪ್ರೋ

ಮಲ್ಟಿಪಲ್ ಕ್ಯಾಮರಾ ವ್ಯವಸ್ಥೆಯ ಫೋನ್ ಗಳ ಬಿಡುಗಡೆಯ ವಿಚಾರದಲ್ಲಿ ಮುಂಚೂಣಿಯಲ್ಲಿರುವುದು ಹುವಾಯಿ ಸಂಸ್ಥೆ. ಹುವಾಯಿ ಪಿ30 ಪ್ರೋ ಭಾರತದಲ್ಲಿ ಲಭ್ಯವಿರುವ ಫ್ಲ್ಯಾಗ್ ಶಿಪ್ ಡಿವೈಸ್ ಆಗಿದೆ. ಪ್ರಮುಖ ಕ್ಯಾಮರಾ 40-ಮೆಗಾಪಿಕ್ಸಲ್ ಸೆನ್ಸರ್ ಜೊತೆಗೆ f/1.6 ಅಪರ್ಚರ್ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಷನ್ ಹೊಂದಿದೆ. ಇದು 20-ಮೆಗಾಪಿಕ್ಸಲ್ ಅಲ್ಟ್ರಾ ವೈಡ್ ಆಂಗಲ್ ಕ್ಯಾಮರಾ ಮತ್ತು 3D ToF ಕ್ಯಾಮರಾ ಜೊತೆಗೆ ಪೇರ್ ಆಗಿದೆ. 8-ಮೆಗಾಪಿಕ್ಸಲ್ ಪೆರಿಸ್ಕೋಪ್ ಕ್ಯಾಮರಾವು 5x ಆಪ್ಟಿಕಲ್ ಝೂಮ್ ಗೆ ಬೆಂಬಲ ನೀಡುತ್ತದೆ ಜೊತೆಗೆ ಇಮೇಜ್ ಸ್ಟೆಬಿಲೈಸೇಷನ್ ಹೊಂದಿದೆ. ಇದು AI-ಆಧಾರಿತ ಡಿಜಿಟಲ್ ಝೂಮ್ ಗೂ ಕೂಡ ಬೆಂಬಲ ನೀಡುತ್ತದೆ.ಸೆಲ್ಫೀ ಗಾಗಿ ಹುವಾಯಿ ಪಿ30 ಪ್ರೋ ದಲ್ಲಿ 32-ಮೆಗಾಪಿಕ್ಸಲ್ ಸೆನ್ಸರ್ ಜೊತೆಗೆ f/2.0 ಅಪರ್ಚರ್ ಮತ್ತು 26mm ವೈಡ್ ಆಂಗಲ್ ಲೆನ್ಸ್ ಇರುತ್ತದೆ.

ವೈಶಿಷ್ಟ್ಯತೆಗಳು ಹುವಾಯಿ ಪಿ30 ಪ್ರೋ

ಬೆಲೆ 71990

 • ಚಿಪ್ ಸೆಟ್ ಹೈಸಿಲಿಕಾನ್ ಕಿರಿನ್ 980 ಆಕ್ಟಾ ಕೋರ್ ಸಾಕೆಟ್
 • OS ಆಂಡ್ರಾಯ್ಡ್ 9 ಪೈ
 • ಡಿಸ್ಪ್ಲೇ 6.4-ಇಂಚಿನ FHD+
 • ಇಂಟರ್ನಲ್ ಮೆಮೊರಿ 8GB RAM + 256GB ಸ್ಟೋರೇಜ್
 • ಹಿಂಭಾಗದ ಕ್ಯಾಮರಾ ಕ್ವಾಡ್ ಕ್ಯಾಮರಾಗಳು - 40MP + 20MP + 8MP + ToF
 • ಮುಂಭಾಗದ ಕ್ಯಾಮರಾ 32MP
 • ಬ್ಯಾಟರಿ 4,200mAh
ರಿಯಲ್ ಮಿ 5ಐ

ರಿಯಲ್ ಮಿ 5 ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಗೊಂಡಿರುವ ಕಡಿಮೆ ಬೆಲೆಯ ಫೋನ್ ಆಗಿದ್ದು ಜೊತೆಗೆ ಕ್ವಾಡ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ನ್ನು ಹೊಂದಿದೆ.ಇದರಲ್ಲಿ 12-ಮೆಗಾಪಿಕ್ಸಲ್ ನ ಪ್ರಮುಖ ಕ್ಯಾಮರಾ ಸೆಟ್ ಅಪ್ ಇದ್ದು f/1.8 ಅಪರ್ಚರ್ ನ್ನು ಹೊಂದಿದೆ.ಪ್ರಮುಖ ಕ್ಯಾಮರಾವು 8-ಮೆಗಾಪಿಕ್ಸಲ್ ನ ಅಲ್ಟ್ರಾ ವೈಡ್ ಆಂಗಲ್ ಕ್ಯಾಮರಾದೊಂದಿದೆ ಪೇರ್ ಆಗಿದೆ. ಜೊತೆಗೆ 2-ಮೆಗಾಪಿಕ್ಸಲ್ ನ ಮ್ಯಾಕ್ರೋ ಸೆನ್ಸರ್ ಮತ್ತು 2 ಮೆಗಾಪಿಕ್ಸಲ್ ನ ಡೆಪ್ತ್ ಸೆನ್ಸರ್ ಕೂಡ ಇದೆ. 8-ಮೆಗಾಪಿಕ್ಸಲ್ ನ ಸೆಲ್ಫೀ ಕ್ಯಾಮರಾ ವ್ಯವಸ್ಥೆ ಕೂಡ ಇದೆ. ರಿಯಲ್ ಮಿ 5ಎಸ್, ರಿಯಲ್ ಮಿ 5 ಮತ್ತು ರಿಯಲ್ ಮಿ 5 ಪ್ರೋ ವನ್ನು ಕೂಡ ನೀವು ಇದರ ಬದಲಾಗಿ ಖರೀದಿಸಲು ಅವಕಾಶವಿದೆ.

ವೈಶಿಷ್ಟ್ಯತೆಗಳು ರಿಯಲ್ ಮಿ 5ಐ

ಬೆಲೆ 8999

 • ಚಿಪ್ ಸೆಟ್ ಸ್ನ್ಯಾಪ್ ಡ್ರ್ಯಾಗನ್ 665
 • OS ಆಂಡ್ರಾಯ್ಡ್ 9 ಪೈ
 • ಡಿಸ್ಪ್ಲೇ IPS LCD-6.52-ಇಂಚಿನ HD+
 • ಇಂಟರ್ನಲ್ ಮೆಮೊರಿ 4GB RAM + 64GB ಸ್ಟೋರೇಜ್
 • ಹಿಂಭಾಗದ ಕ್ಯಾಮರಾ ಕ್ವಾಡ್ - 12MP + 8MP + 2MP + 2MP
 • ಮುಂಭಾಗದ ಕ್ಯಾಮರಾ 8MP
 • ಬ್ಯಾಟರಿ 5,000mAh
ಶಿಯೋಮಿ ರೆಡ್ಮಿ ನೋಟ್ 8

ಶಿಯೋಮಿ ರೆಡ್ಮಿ ನೋಟ್ 8 ಕೂಡ ಎಂಟ್ರಿ ಲೆವೆಲ್ ಬೆಲೆಯಲ್ಲೇ ಲಭ್ಯವಾಗುವ ಫೋನ್ ಆಗಿದೆ. ರಿಯಲ್ ಮಿ 5 ಗೆ ಸ್ಪರ್ಧೆಯೊಡ್ಡುವ ಫೋನ್ ಕೂಡ ಹೌದು. ಶಿಯೋಮಿ ಸಂಸ್ಥೆಯಿಂದ ಬಿಡುಗಡೆಗೊಂಡಿರುವ ಮೊದಲ ಕ್ವಾಡ್ ಕ್ಯಾಮರಾ ವ್ಯವಸ್ಥೆ ಹೊಂದಿರುವ ಫೋನ್ ಕೂಡ ಹೌದು. ಇದರಲ್ಲಿ 48-ಮೆಗಾಪಿಕ್ಸಲ್ ನ ಪ್ರಮುಖ ಕ್ಯಾಮರಾವಿದ್ದು f/1.8 ಅಪರ್ಚರ್ ಹೊಂದಿದೆ. 8-ಮೆಗಾಪಿಕ್ಸಲ್ ನ ಎರಡನೇ ಸೆನ್ಸರ್ ಆಲ್ಟ್ರಾ ವೈಡ್ ಆಂಗಲ್ ಕ್ಯಾಮರಾವಾಗಿದೆ. ರಿಯಲ್ ಮಿ 5ಐ. ರೆಡ್ಮಿ ನೋಟ್ 8 ನಂತೆ 2-ಮೆಗಾಪಿಕ್ಸಲ್ ನ ಡೆಪ್ತ್ ಸೆನ್ಸರ್ ಮತ್ತು ಮ್ಯಾಕ್ರೋ ಕ್ಯಾಮರಾವೂ ಇದೆ. ಸೆಲ್ಫೀಗಾಗಿ ಶಿಯೋಮಿಯಲ್ಲಿ 13-ಮೆಗಾಪಿಕ್ಸಲ್ ನ ಶೂಟರ್ ಇದೆ.

ವೈಶಿಷ್ಟ್ಯತೆಗಳು ರೆಡ್ಮಿ ನೋಟ್ 8

ಬೆಲೆ 9999

 • ಚಿಪ್ ಸೆಟ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 665 SoC
 • OS ಆಂಡ್ರಾಯ್ಡ್ 9 ಪೈ ಜೊತೆಗೆ MIUI
 • ಡಿಸ್ಪ್ಲೇ 6.3-ಇಂಚಿನ FHD+
 • ಇಂಟರ್ನಲ್ ಮೆಮೊರಿ 4GB RAM + 64GB ಸ್ಟೋರೇಜ್
 • ಹಿಂಭಾಗದ ಕ್ಯಾಮರಾ ಕ್ವಾಡ್ - 48MP + 8MP + 2MP + 2MP
 • ಮುಂಭಾಗದ ಕ್ಯಾಮರಾ 13MP
 • ಬ್ಯಾಟರಿ 4,000mAh
ರಿಯಲ್ ಮಿ ಎಕ್ಸ್2 ಪ್ರೋ

ರಿಯಲ್ ಮಿ ಎಕ್ಸ್2 ಪ್ರೋ ಅತ್ಯಂತ ಪವರ್ ಫುಲ್ ಸ್ಮಾರ್ಟ್ ಫೋನ್ ಗಳಲ್ಲಿ ಒಂದೆನಿಸಿದೆ. ಇದು ಸ್ನ್ಯಾಪ್ ಡ್ರ್ಯಾಗನ್ 855+ ಸಾಕೆಟ್ ನ್ನು ಹೊಂದಿದೆ. ಈ ಫ್ಲ್ಯಾಗ್ ಶಿಪ್ ಫೋನ್ ನಲ್ಲಿ ಕ್ವಾಡ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ಇದೆ.ಇದರಲ್ಲಿ 64-ಮೆಗಾಪಿಕ್ಸಲ್ ಪ್ರಮುಖ ಶೂಟರ್ ಇದ್ದು 13-ಮೆಗಾಪಿಕ್ಸಲ್ ಟೆಲಿಫೋಟೋ ಕ್ಯಾಮರಾದೊಂದಿಗೆ ಪೇರ್ ಆಗಿದೆ. 8-ಮೆಗಾಪಿಕ್ಸಲ್ ನ ಅಲ್ಟ್ರಾ ವೈಡ್ ಆಂಗಲ್ ಕ್ಯಾಮರಾ ಮತ್ತು 2-ಮೆಗಾಪಿಕ್ಸಲ್ ಡೆಪ್ತ್ ಸೆನ್ಸರ್ ಇದೆ. ಸೆಲ್ಫೀಗಾಗಿ 16-ಮೆಗಾಪಿಕ್ಸಲ್ ಸೆನ್ಸರ್ ಇದ್ದು ಜೊತೆಗೆ f/2.0 ಅಪರ್ಚರ್ ಮತ್ತು 25mm ವೈಡ್ ಆಂಗಲ್ ಲೆನ್ಸ್ ಹೊಂದಿದೆ.

ವೈಶಿಷ್ಟ್ಯತೆಗಳು ರಿಯಲ್ ಮಿ ಎಕ್ಸ್2 ಪ್ರೋ

ಬೆಲೆ 29999

 • ಚಿಪ್ ಸೆಟ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್855+
 • OS ಆಂಡ್ರಾಯ್ಡ್ 9 ಪೈ
 • ಡಿಸ್ಪ್ಲೇ ಸೂಪರ್ AMOLED-6.5-ಇಂಚಿನ ಫುಲ್ HD+-2400x1080ಪಿಕ್ಸಲ್ಸ್
 • ಇಂಟರ್ನಲ್ ಮೆಮೊರಿ 8GB RAM ಜೊತೆಗೆ 128GB ಸ್ಟೋರೇಜ್
 • ಹಿಂಭಾಗದ ಕ್ಯಾಮರಾ ಕ್ವಾಡ್ - 64MP + 13MP + 8MP + 2MP
 • ಮುಂಭಾಗದ ಕ್ಯಾಮರಾ 16MP
 • ಬ್ಯಾಟರಿ 4,000mAh
ಹಾನರ್ 20

ಹಾನರ್ 20 ಕ್ವಾಡ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ಹೊಂದಿರುವ ಮತ್ತೊಂದು ಫೋನ್ ಆಗಿದೆ. ಇದರಲ್ಲಿ 48-ಮೆಗಾಪಿಕ್ಸಲ್ ಪ್ರಮುಖ ಕ್ಯಾಮರಾವಿದ್ದು ಜೊತೆಗೆ f/1.8 ಅಪರ್ಚರ್ ಮತ್ತು 28mm ವೈಡ್ ಆಂಗಲ್ ಲೆನ್ಸ್ ಹೊಂದಿದೆ. 16-ಮೆಗಾಪಿಕ್ಸಲ್ ಅಲ್ಟ್ರಾ ವೈಡ್ ಆಂಗಲ್ ಸೆನ್ಸರ್ ನ್ನು ಇದು ಹೊಂದಿದೆ. 2-ಮೆಗಾಪಿಕ್ಸಲ್ ನ ನಿಗದಿತ ಮ್ಯಾಕ್ರೋ ಕ್ಯಾಮರಾವಿದೆ ಮತ್ತು 2-ಮೆಗಾಪಿಕ್ಸಲ್ ಡೆಪ್ತ್ ಸೆನ್ಸರ್ ಇದೆ. 32-ಮೆಗಾಪಿಕ್ಸಲ್ ಸೆಲ್ಫೀ ಕ್ಯಾಮರಾವಿದ್ದು ಜೊತೆಗೆ f/2.0 ಅಪರ್ಚರ್ ಮತ್ತು 26mm ವೈಡ್ ಆಂಗಲ್ ಲೆನ್ಸ್ ನ್ನು ಹೊಂದಿದೆ.

ವೈಶಿಷ್ಟ್ಯತೆಗಳು ಹಾನರ್ 20

ಬೆಲೆ 32999

 • ಚಿಪ್ ಸೆಟ್ Kirin 980 SoC
 • OS ಆಂಡ್ರಾಯ್ಡ್ 9 ಪೈ-ಆಧಾರಿತ ಮ್ಯಾಜಿಕ್ UI 2.1
 • ಡಿಸ್ಪ್ಲೇ IPS LCD ಡಿಸ್ಪ್ಲೇ-6.26-ಇಂಚಿನ
 • ಇಂಟರ್ನಲ್ ಮೆಮೊರಿ 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್
 • ಹಿಂಭಾಗದ ಕ್ಯಾಮರಾ 48MP + 16MP ಅಲ್ಟ್ರಾ ವೈಡ್ + 2MP ಮ್ಯಾಕ್ರೋ + 2MP ಡೆಪ್ತ್
 • ಮುಂಭಾಗದ ಕ್ಯಾಮರಾ 32MP
 • ಬ್ಯಾಟರಿ 3,750mAh
ವಿವೋ ವಿ17 ಪ್ರೋ

ವಿವೋ ವಿ 17 ಪ್ರೋ ದಲ್ಲಿ 48-ಮೆಗಾಪಿಕ್ಸಲ್ ಪ್ರಮುಖ ಸೆನ್ಸರ್ ನ್ನು ಹೊಂದಿದೆ ಜೊತೆಗೆ f/1.8 ಅಪರ್ಚರ್ ನ್ನು ಹೊಂದಿದೆ. 8-ಮೆಗಾಪಿಕ್ಸಲ್ ಅಲ್ಟ್ರಾ ವೈಡ್ ಆಂಗಲ್ ಕ್ಯಾಮರಾ ಮತ್ತು 13-ಮೆಗಾಪಿಕ್ಸಲ್ ಟೆಲಿಫೋಟೋ ಕ್ಯಾಮರಾವನ್ನು ಇದು ಹೊಂದಿದೆ. 2x ಅಪ್ಟಿಕಲ್ ಝೂಮ್ ವ್ಯವಸ್ಥೆ ಇದೆ. ನಾಲ್ಕನೇ ಕ್ಯಾಮರಾದಲ್ಲಿ 2-ಮೆಗಾಪಿಕ್ಸಲ್ ಶೂಟರ್ ಆಗಿದ್ದು ಡೆಪ್ತ್ ಸೆನ್ಸರ್ ನಂತೆ ಕಾರ್ಯ ನಿರ್ವಹಿಸುತ್ತದೆ. 32-ಮೆಗಾಪಿಕ್ಸಲ್ + 8-ಮೆಗಾಪಿಕ್ಸಲ್ ಡುಯಲ್ ಪಾಪ್ ಅಪ್ ಸೆಲ್ಫೀ ಕ್ಯಾಮರಾ ವ್ಯವಸ್ಥೆ ಇದರಲ್ಲಿದೆ.ಈ ಸ್ಮಾರ್ಟ್ ಫೋನ್ ಒಟ್ಟು 6 ಕ್ಯಾಮರಾವನ್ನು ಹೊಂದಿದೆ.

ವೈಶಿಷ್ಟ್ಯತೆಗಳು ವಿವೋ ವಿ17 ಪ್ರೋ

ಬೆಲೆ -

 • ಚಿಪ್ ಸೆಟ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್675 SoC
 • OS ಆಂಡ್ರಾಯ್ಡ್ 9 ಪೈ ಜೊತೆಗೆ ಫನ್ ಟಚ್ 9.1
 • ಡಿಸ್ಪ್ಲೇ 6.44-ಇಂಚಿನ FHD+
 • ಇಂಟರ್ನಲ್ ಮೆಮೊರಿ 128GB, 8GB RAM
 • ಹಿಂಭಾಗದ ಕ್ಯಾಮರಾ ಕ್ವಾಡ್ - 48MP + 13MP + 8MP + 2MP
 • ಮುಂಭಾಗದ ಕ್ಯಾಮರಾ 32MP + 8MP
 • ಬ್ಯಾಟರಿ 4100mAh
ಶಿಯೋಮಿ ರೆಡ್ಮಿ ನೋಟ್ 8 ಪ್ರೋ

ಶಿಯೋಮಿ ರೆಡ್ಮಿ ನೋಟ್ 8 ಪ್ರೋ ದಲ್ಲಿ 64-ಮೆಗಾಪಿಕ್ಸಲ್ ಪ್ರಮುಖ ಕ್ಯಾಮರಾವಿದೆ. ಪ್ರಮುಖ ಕ್ಯಾಮರಾದಲ್ಲಿ ಸ್ಯಾಮ್ ಸಂಗ್ ISOCELL GW1 ಸೆನ್ಸರ್ ನ್ನು ಬಳಸಲಾಗಿದೆ ಜೊತೆಗೆ f/1.9 ಅಪರ್ಚರ್ ಮತ್ತು ಫೇಸ್ ಡಿಟೆಕ್ಟ್ ಆಟೋಫೋಕಸ್ ವ್ಯವಸ್ಥೆ ಹೊಂದಿದೆ. ಉಳಿದ ಕ್ಯಾಮರಾಗಳು ರೆಡ್ಮಿ ನೋಟ್ 8 ನಲ್ಲಿ ಇರುವಂತೆಯೇ ಇದೆ. 8-ಮೆಗಾಪಿಕ್ಸಲ್ ನ ಅಲ್ಟ್ರಾ ವೈಡ್ ಆಂಗಲ್ ಕ್ಯಾಮರಾ, 2-ಮೆಗಾಪಿಕ್ಸಲ್ ನ ನಿಗದಿತ ಮ್ಯಾಕ್ರೋ ಕ್ಯಾಮರಾ ಮತ್ತು 2-ಮೆಗಾಪಿಕ್ಸಲ್ ಡೆಪ್ತ್ ಕ್ಯಾಮರಾವಿದೆ. 20-ಮೆಗಾಪಿಕ್ಸಲ್ ನ ಸೆಲ್ಫೀ ಕ್ಯಾಮರಾ f/2.0 ಅಪರ್ಚರ್ ನ್ನು ಹೊಂದಿದೆ.

ವೈಶಿಷ್ಟ್ಯತೆಗಳು ರೆಡ್ಮಿ ನೋಟ್ 8 ಪ್ರೋ

ಬೆಲೆ 14999

 • ಚಿಪ್ ಸೆಟ್ ಮೀಡಿಯಾ ಟೆಕ್ G90T SoC
 • OS ಆಂಡ್ರಾಯ್ಡ್ 9 ಪೈ
 • ಡಿಸ್ಪ್ಲೇ 6.53-ಇಂಚಿನ FHD+
 • ಇಂಟರ್ನಲ್ ಮೆಮೊರಿ 6GB RAM ಜೊತೆಗೆ 64GB ಸ್ಟೋರೇಜ್
 • ಹಿಂಭಾಗದ ಕ್ಯಾಮರಾ ಕ್ವಾಡ್ - 64MP + 8MP + 2MP + 2MP
 • ಮುಂಭಾಗದ ಕ್ಯಾಮರಾ 20MP
 • ಬ್ಯಾಟರಿ 4,500mAh
ಓಪ್ಪೋ ರೆನೋ 2 ಸಿರೀಸ್

ಒಪ್ಪೋ ರೆನೋ2 ಸಿರೀಸ್ ಫೋನ್ ಕೂಡ ಕ್ವಾಡ್ ಹಿಂಭಾಗದ ಕ್ಯಾಮರಾ ವ್ಯವಸ್ಥೆಯನ್ನು ಹೊಂದಿದೆ. ಮೂರು ಡಿವೈಸ್ ಗಳಿದ್ದು - ರೆನೋ 2, ರೆನೋ 2ಎಫ್ ಮತ್ತು ರೆನೋ 2ಝಡ್ ನಲ್ಲಿ ನಾಲ್ಕು ಹಿಂಭಾಗದ ಕ್ಯಾಮರಾ ಸೆಟ್ ಅಪ್ ಇದೆ.ಎಲ್ಲಾ ಮೂರು ಮಾಡೆಲ್ ಗಳಲ್ಲೂ ಕೂಡ 48-ಮೆಗಾಪಿಕ್ಸಲ್ ನ ಪ್ರಮುಖ ಕ್ಯಾಮರಾ ಜೊತೆಗೆ f1/.7 ಅಪರ್ಚರ್ ಮತ್ತು 26mm ಫೋಕಲ್ ಲೆಂತ್ ಹೊಂದಿದೆ. ರೆನೋ2 13-ಮೆಗಾಪಿಕ್ಸಲ್ ಟೆಲಿಫೋಟೋ ಕ್ಯಾಮರಾವಿದೆ ಮತ್ತು ಇತರೆ ಎರಡು ಮಾಡೆಲ್ ನಲ್ಲಿ ಟೆಲಿಫೋಟೋ ಸೆನ್ಸರ್ ಇಲ್ಲ. ಎಲ್ಲಾ ಫೋನ್ ನಲ್ಲೂ 8-ಮೆಗಾಪಿಕ್ಸಲ್ ಅಲ್ಟ್ರಾ ವೈಡ್ ಆಂಗಲ್ ಕ್ಯಾಮರಾ ಮತ್ತು 2-ಮೆಗಾಪಿಕ್ಸಲ್ ಮೋನೋಕ್ರೋಮ್ ಕ್ಯಾಮರಾವಿದೆ. ರೆನೋ 2ಎಫ್ ಮತ್ತು ರೆನೋ 2ಝಡ್ ನಲ್ಲಿ ಹೆಚ್ಚುವರಿಯಾಗಿ 2-ಮೆಗಾಪಿಕ್ಸಲ್ ಕ್ಯಾಮರಾ ಡೆಪ್ತ್ ಸೆನ್ಸಿಂಗ್ ಗಾಗಿ ಲಭ್ಯವಿದೆ.

ವೈಶಿಷ್ಟ್ಯತೆಗಳು ಒಪ್ಪೋ ರೆನೋ 2 ಒಪ್ಪೋ ರೆನೋ 2ಎಫ್ ಒಪ್ಪೋ ರೆನೋ2ಝಡ್

ಬೆಲೆ 36990 23990 25990

 • ಚಿಪ್ ಸೆಟ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್730G SoC ಮೀಡಿಯಾ ಟೆಕ್ ಹೆಲಿಯೋ ಪಿ70 ಮೀಡಿಯಾ ಟೆಕ್ ಹೆಲಿಯೋ ಪಿ90
 • OS ಆಂಡ್ರಾಯ್ಡ್ 9 ಪೈ ಆಂಡ್ರಾಯ್ಡ್ 9 ಪೈ ಆಂಡ್ರಾಯ್ಡ್ 9 ಪೈ
 • ಡಿಸ್ಪ್ಲೇ 6.55-ಇಂಚಿನ FHD+ 6.53-ಇಂಚಿನ FHD+ 6.53-ಇಂಚಿನ FHD+
 • ಇಂಟರ್ನಲ್ ಮೆಮೊರಿ 256GB, 8GB RAM 128GB, 8GB RAM 256GB, 8GB RAM
 • ಹಿಂಭಾಗದ ಕ್ಯಾಮರಾ ಕ್ವಾಡ್ - 48MP + 13MP + 8MP + 2MP ಕ್ವಾಡ್ - 48MP + 8MP + 2MP + 2MP ಕ್ವಾಡ್ - 48MP + 8MP + 2MP + 2MP
 • ಮುಂಭಾಗದ ಕ್ಯಾಮರಾ 16MP 16MP 16MP
 • ಬ್ಯಾಟರಿ 4000mAh 4000mAh 4000mAh
ವಿವೋ ಎಸ್1 ಪ್ರೋ

ವಿವೋ ಎಸ್1 ಪ್ರೋ ಭಾರತದಲ್ಲಿ ಬಿಡುಗಡೆಗೊಂಡಿರುವ ಹೊಸ ಡಿವೈಸ್ ಆಗಿದೆ. ವಿವೋ ಎಸ್ ಸರಣಿಯಲ್ಲಿ ಬಿಡುಗಡೆಗೊಂಡಿರುವ ಎರಡನೇ ಡಿವೈಸ್ ಇದಾಗಿದೆ. ಎಸ್1 ಪ್ರೋ ಕೂಡ ಸ್ಪೋರ್ಟ್ ಕ್ವಾಡ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ನ್ನು ಹೊಂದಿದೆ. ಡೈಮಂಡ್ ಶೇಪ್ ನ್ನು ಹೊಂದಿದೆ. ಪ್ರಮುಖ ಕ್ಯಾಮರಾವು 48-ಮೆಗಾಪಿಕ್ಸಲ್ ಶೂಟರ್ ಜೊತೆಗೆ f/1.8 ಅಪರ್ಚರ್ ಆಗಿದೆ. 8-ಮೆಗಾಪಿಕ್ಸಲ್ ಅಲ್ಟ್ರಾ ವೈಡ್ ಆಂಗಲ್ ಕ್ಯಾಮರಾ 2-ಮೆಗಾಪಿಕ್ಸಲ್ ನಿಗದಿತ ಮ್ಯಾಕ್ರೋ ಕ್ಯಾಮರಾ ಮತ್ತು 2-ಮೆಗಾಪಿಕ್ಸಲ್ ಡೆಪ್ತ್ ಸೆನ್ಸರ್ ನ್ನು ಇದು ಹೊಂದಿದೆ. 32-ಮೆಗಾಪಿಕ್ಸಲ್ ಸೆಲ್ಫೀ ಶೂಟರ್ ಕೂಡ ಇದರಲ್ಲಿದ್ದು ವಿ17 ಪ್ರೋ ನಂತೆ ಪಾಪ್ ಅಪ್ ನ್ನು ಇದು ಹೊಂದಿಲ್ಲ.

ವೈಶಿಷ್ಟ್ಯತೆಗಳು ವಿವೋ ಎಸ್1 ಪ್ರೋ

ಬೆಲೆ 19990

 • ಚಿಪ್ ಸೆಟ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್665 SoC
 • OS ಆಂಡ್ರಾಯ್ಡ್ 9 ಪೈ ಜೊತೆಗೆ FunTouch 9.1
 • ಡಿಸ್ಪ್ಲೇ ಸೂಪರ್ AMOLED-6.38-ಇಂಚಿನ-FHD+
 • ಇಂಟರ್ನಲ್ ಮೆಮೊರಿ 128GB ವರೆಗೆ, 8GB RAM ವರೆಗೆ
 • ಹಿಂಭಾಗದ ಕ್ಯಾಮರಾ ಟ್ರಿಪಲ್ - 48MP+8MP+5MP
 • ಮುಂಭಾಗದ ಕ್ಯಾಮರಾ 32MP
 • ಬ್ಯಾಟರಿ 3700mAh
ಅಂತಿಮ ತೀರ್ಮಾನ: ಬಜೆಟ್ ನಲ್ಲಿರುವ ಕ್ವಾಡ್ ಕ್ಯಾಮರಾ

ಸದ್ಯ ಕ್ವಾಡ್ ಕ್ಯಾಮರಾ ವ್ಯವಸ್ಥೆ ಸ್ಮಾರ್ಟ್ ಫೋನ್ ಗಳಲ್ಲಿ ಸಾಮಾನ್ಯವಾಗಿದೆ. ಬಜೆಟ್ ಸ್ಮಾರ್ಟ್ ಫೋನೇ ಆಗಲಿ ಅಥವಾ ಪ್ರೀಮಿಯಂ ಸ್ಮಾರ್ಟ್ ಫೋನೇ ಆಗಲಿ ಅದರಲ್ಲಿ ಕ್ವಾಡ್ ಕ್ಯಾಮರಾ ಸೆಟ್ ಅಪ್ ಲಭ್ಯವಿರುತ್ತದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10+ ಬೆಸ್ಟ್ ಪ್ಯಾಕ್ ಆಗಿದ್ದು ಹುವಾಯಿ ಪಿ30 ಪ್ರೋ ಉತ್ತಮ ಝೂಮ್ ಎಕ್ಸ್ ಪೀರಿಯನ್ಸ್ ನ್ನು ನೀಡುತ್ತದೆ. ರಿಯಲ್ ಮಿ 5ಐ ಮತ್ತು ರೆಡ್ಮಿ ನೋಟ್ 8 ಕಡಿಮೆ ಬೆಲೆಯ ಫೋನ್ ಆಗಿದ್ದು ವಿವೋ ವಿ17 ಮತ್ತು ಒಪ್ಪೋ ರೆನೋ2 ವಿಭಿನ್ನವಾಗಿರುವ ಕ್ಯಾಮರಾ ಅನುಭವವನ್ನು ನೀಡುವುದಕ್ಕೆ ಪ್ರಯತ್ನಿಸುತ್ತದೆ.

Most Read Articles
Best Mobiles in India
Read More About: smartphones news camera features

Have a great day!
Read more...

English Summary

Best Quad Camera Smartphones To Buy In India This Year