ಸ್ನ್ಯಾಪ್ ಡ್ರ್ಯಾಗನ್ 855 ಪ್ಲಸ್ ಸಾಕೆಟ್ ಇರುವ ಬೆಸ್ಟ್ ಸ್ಮಾರ್ಟ್ ಫೋನ್ ಗಳು


ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಸ್ಮಾರ್ಟ್ ಫೋನ್ ಗಳಲ್ಲಿ ನಾವೆಲ್ಲರೂ ಕೆಲವು ಸಾಮಾನ್ಯ ಫೀಚರ್ ಗಳನ್ನು ಗಮನಿಸುವುದಕ್ಕೆ ಸಾಧ್ಯವಿದೆ. ಅವುಗಳಲ್ಲಿ ಪ್ರಮುಖವಾಗಿರುವುದೆಂದರೆ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 ಪ್ಲಸ್ ಸಾಕೆಟ್.ಅಂತಹ ಡಿವೈಸ್ ಗಳಲ್ಲಿ ಕೆಲವು ಬೆಸ್ಟ್ ಡಿವೈಸ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

Advertisement

ಈ ಚಿಪ್ ಸೆಟ್ ಪ್ರಮುಖವಾಗಿ ಗೇಮಿಂಗ್ ಗಾಗಿ ಡಿಸೈನ್ ಮಾಡಲಾಗಿದ್ದು ಹೈ-ಎಂಡ್ ಪ್ರದರ್ಶನವನ್ನು ಇದು ನೀಡುತ್ತದೆ ಜೊತೆಗೆ ಅತ್ಯುತ್ತಮ ಗ್ರಾಫಿಕ್ಸ್ ನ್ನು ಹೊಂದಿದೆ.ಈ ಚಿಪ್ ಸೆಟ್ ನಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಸಿಪಿಯು ಪ್ರದರ್ಶನ ಮತ್ತು 5ಜಿ,4ಜಿ ಅನೇಬಲ್ ಆಗಿರುವ ಡಿವೈಸ್ ಆಗಿರುತ್ತದೆ.

Advertisement
ಒನ್ ಪ್ಲಸ್ 7

ಸ್ನ್ಯಾಪ್ ಡ್ರ್ಯಾಗನ್ 855 ಪ್ಲಸ್ ಪ್ರೊಸೆಸರ್ ಜೊತೆಗೆ 8GB RAM ಮತ್ತು 256GB UFS 3.0 ಸ್ಟೋರೇಜ್ ಆಯ್ಕೆ ಇದರಲ್ಲಿದೆ. ಇದರ ಡಿಸ್ಪ್ಲೇಯಲ್ಲಿ ನೂತನ HDR10+ ತಂತ್ರಜ್ಞಾನವಿದ್ದು , 90Hz ರಿಫ್ರೆಶ್ ರೇಟ್ ನ್ನು ಹೊಂದಿದೆ ಜೊತೆಗೆ ಹಲವು ಆಕರ್ಷಕ ಫೀಚರ್ ಗಳನ್ನು ಹೊಂದಿದ್ದು ಉತ್ತಮ ನೋಟವನ್ನು ನೀಡುತ್ತದೆ.

ರಿಯಲ್ ಮಿ ಎಕ್ಸ್2 ಪ್ರೋ

ಈ ಮೊಬೈಲ್ ಫೋನಿನಲ್ಲಿ ಫುಲ್ HD+ ಡಿಸ್ಪ್ಲೇ, 64MP ಕ್ವಾಡ್ ಹಿಂಭಾಗದ ಕ್ಯಾಮರಾಗಳು, 90Hz ಆಲ್ಟ್ರಾ ಸ್ಮೂತ್ ಡಿಸ್ಪ್ಲೇ, ಮತ್ತು 50W ಸೂಪರ್ VOOC ಫ್ಲ್ಯಾಶ್ ಚಾರ್ಜ್ ತಂತ್ರಜ್ಞಾನವಿದೆ.ಫ್ಲಿಪ್ ಕಾರ್ಟಿನ ಸೇಲ್ ನಲ್ಲಿ 27,999 ರುಪಾಯಿ ಜೊತೆಗೆ 6% ರಿಯಾಯಿತಿಯಲ್ಲಿ ಈ ಫೋನ್ ಖರೀದಿಸುವ ಅವಕಾಶವಿದೆ. ಅಷ್ಟೇ ಅಲ್ಲದೇ ನೀವು 5% ಅನಿಯಮಿತ ಕ್ಯಾಷ್ ಬ್ಯಾಕ್ ನ್ನು ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಲ್ಲಿ ಪಡೆದುಕೊಳ್ಳುವ ಅವಕಾಶವಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ Z ಫ್ಲಿಪ್

ಇದು ಸ್ಯಾಮ್ ಸಂಗಿನ ಎರಡನೇ ಕಾಮ್ಶೆಲ್ ಸ್ಮಾರ್ಟ್ ಫೋನ್ ಆಗಿದೆ. ಇದು ಸ್ನ್ಯಾಪ್ ಡ್ರ್ಯಾಗನ್ 855 ಪ್ಲಸ್ ಪ್ರೊಸೆಸರ್ ನ್ನು ಹೊಂದಿದೆ ಮತ್ತು ಆಂಡ್ರಾಯ್ಡ್ 10 ನಲ್ಲಿ ರನ್ ಆಗುತ್ತದೆ.ಈ ಸ್ಮಾರ್ಟ್ ಫೋನ್ ವಯರ್ ಲೆಸ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ.

ಒನ್ ಪ್ಲಸ್ 7ಟಿ ಪ್ರೋ

ಈ ಫೋನ್ 90Hz ರಿಫ್ರೆಶ್ ರೇಟ್ ಹೊಂದಿದೆ ಮತ್ತು QHD+ ರೆಸಲ್ಯೂಷನ್ ಹೊಂದಿದ್ದು ಆಕರ್ಷಕ ನೋಟ ಜೊತೆಗೆ ಉತ್ತಮ ಕ್ಲಾರಿಟಿಯನ್ನು ಒದಗಿಸುತ್ತದೆ. ಇದು ವ್ರ್ಯಾಪ್ ಚಾರ್ಜ್ 30T ಯನ್ನು ಆಫರ್ ಮಾಡುತ್ತದೆ ಅಂದರೆ 30 ನಿಮಿಷದಲ್ಲಿ 68% ಚಾರ್ಜ್ ಆಗುತ್ತದೆ. ಈ ಸ್ಮಾರ್ಟ್ ಫೋನ್ 6.65-ಇಂಚಿನ ಫುಲ್ HD+ AMOLED ಡಿಸ್ಪ್ಲ್ ಜೊತೆಗೆ 2340 × 1080 ಪಿಕ್ಸಲ್ಸ್ ರೆಸಲ್ಯೂಷನ್ ನ್ನು ಹೊಂದಿದೆ. 19.5:9 ಆಸ್ಪೆಕ್ಟ್ ಅನುಪಾತವನ್ನು ಹೊಂದಿದೆ ಮತ್ತು 90Hz ರಿಫ್ರೆಶ್ ರೇಟ್ ಜೊತೆಗೆ 430 nits ಬ್ರೈಟ್ ನೆಸ್ ಒದಗಿಸುತ್ತದೆ. ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 ಪ್ಲಸ್ ಸಾಕೆಟ್ ಜೊತೆಗೆ 675MHz Adreno 640 GPU ಇರುತ್ತದೆ.

Best Mobiles in India

English Summary

Best Smartphones With Snapdragon 855 Plus Processor Available In India Right Now