Glance Lockscreen: ಗ್ಲ್ಯಾನ್ಸ್‌ ಅತ್ಯುತ್ತಮ ಕಂಟೆಂಟ್‌ ಮತ್ತು ಶಾಪಿಂಗ್‌ ತಾಣ!


ಇದು ಸ್ಮಾರ್ಟ್‌ಫೋನ್‌ ಜಮಾನ, ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಮಲ್ಟಿ ಮೀಡಿಯಾ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಎಲ್ಲಾ ರಂಗಗಳ ಮಾಹಿತಿಯೂ ಅಂಗೈನಲ್ಲಿಯೇ ಸಿಗುವಷ್ಟರ ಮಟ್ಟಿಗೆ ಇಂದಿನ ಸ್ಮಾರ್ಟ್‌ಫೋನ್‌ ಜಗತ್ತು ತನ್ನ ಬೆಳವಣಿಗೆಯನ್ನ ಸಾಧಿಸಿದೆ. ಎಂಟರ್‌ಟೈನ್‌ಮೆಂಟ್‌, ದೈನಂದಿನ ಮಾಹಿತಿ, ಜಾಗತಿಕ ಟ್ರೆಂಡಿಂಗ್‌ ಸ್ಟೋರಿಗಳು, ಎಲ್ಲವೂ ಕೂಡ ಸ್ಮಾರ್ಟ್‌ಫೋನ್‌ನ ಆಪ್‌ಗಳಲ್ಲಿ ಲಭ್ಯವಾಗಲಿದೆ. ಆದರೆ ಇದೆಲ್ಲವೂ ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ ಸಿಗೋದಾದ್ರೆ ಹೇಗಿರುತ್ತೆ, ಅಲ್ವಾ.? ಇದನ್ನ ಸಾಧ್ಯ ಮಾಡಿದೆ ಗ್ಲ್ಯಾನ್ಸ್‌ ಲಾಕ್‌ಸ್ಕ್ರೀನ್‌ ಪ್ಲಾಟ್‌ಫಾರ್ಮ್‌.

ಹೌದು ಸ್ಮಾರ್ಟ್‌ಫೋನ್‌ ಇಂದು ಕೇವಲ ಸಂಪರ್ಕ ಸಾಧನವಾಗಿ ಮಾತ್ರ ಉಪಯೋಗವಾಗ್ತಿಲ್ಲ. ಸ್ಮಾರ್ಟ್‌ಫೋನ್‌ ಪ್ರಸ್ತುತದಲ್ಲಿ ಮಲ್ಟಿ ಮೀಡಿಯಾದಂತೆ ಕಾರ್ಯನಿರ್ವಹಿಸುತ್ತಿದೆ. ಅಂಗೈ ಅಗಲದ ಸ್ಮಾರ್ಟ್‌ಫೋನ್‌ ಇಡೀ ಜಗತ್ತಿನ ವಿದ್ಯಮಾನಗಳನ್ನ ತಿಳಿಸಕೊಡಬಲ್ಲದು. ಅಷ್ಟೇ ಯಾಕೆ ಕುಳಿತಲ್ಲಿಯೇ ನಿಮಗಿಷ್ಟವಾದ ವಸ್ತುಗಳನ್ನ ಆನ್‌ಲೈನ್‌ನಲ್ಲಿ ಶಾಪಿಂಗ್‌ ಮಾಡಬಹುದು, ಇಷ್ಟವಾದ ತಿಂಡಿಯನ್ನ ಆನ್‌ಲೈನ್‌ ಆರ್ಡರ್‌ ಮಾಡಬಹುದು, ಸಿನಿಮಾ ಟಿಕೆಟ್‌ ಬುಕ್‌ ಮಾಡಬಹುದು, ಆದರೆ ಇದೆಲ್ಲದಕ್ಕೂ ಒಂದೊಂದು ಆಪ್‌ ಇದೆ. ಪ್ರತಿಯೊಂದಕ್ಕೂ ಆಪ್‌ಗಳನ್ನ ಸರ್ಚ್‌ ಮಾಡುತ್ತ ಸಮಯ ಕಳೆಯುವ ಬದಲು ಗ್ಲ್ಯಾನ್ಸ್‌ಲಾಕ್‌ಸ್ಕ್ರೀನ್‌ ಆಪ್‌ನಲ್ಲಿ ಎಲ್ಲಾ ರೀತಿಯ ಕಾರ್ಯಗಳನ್ನ ಒಂದೇ ವೇದಿಕೆಯಲ್ಲಿ ಮಾಡಬಹುದಾಗಿದೆ.

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಹಲವು ವೈವಿದ್ಯಬಗೆಯ ಆಪ್‌ಗಳಿರಬಹುದು, ಪ್ರತಿಯೊಂದು ಮಾದರಿಯ ಶಾಪಿಂಗ್‌ ಆಪ್‌ ಇರಬಹುದು, ನಿಮ್ಮ ಆಸಕ್ತಿಗೆ ತಕ್ಕಂತ ಆಪ್‌ಗಳನ್ನ ಇನ್‌ಸ್ಟಾಲ್‌ ಮಾಡಿರಬಹುದು. ಆದರೆ ನೀವು ಎಲ್ಲಾ ಆಸಕ್ತಿಗಳನ್ನು ಒಳಗೊಂಡಿರುವ ಆಪ್‌ ಹೊಂದಿದ್ದರೆ ಅದು ಸುಲಭ ಸಾಧ್ಯವಾಗಲಿದೆ. ಆ ಕಾರ್ಯವನ್ನ ಗ್ಲ್ಯಾನ್ಸ್‌ ಲಾಕ್‌ಸ್ಕ್ರೀನ್‌ ಆಪ್‌ ಮಾಡಲಿದ್ದು, ನಿಮಗೆ ಇತರೆ ಆಪ್‌ಗಳನ್ನ ಸ್ಮಾರ್ಟ್‌ಫೋನ್‌ನಲ್ಲಿ ಸರ್ಚ್‌ ಮಾಡುತ್ತ ಸಮಯ ವ್ಯರ್ಥ ಮಾಡುವುದನ್ನ ಉಳಿಸುತ್ತದೆ. ನಿಮ್ಮ ಫೋನ್‌ನ ಸ್ಕ್ರೀನ್‌ ಟಚ್‌ ಮಾಡಿದರೆ ಸಾಕು ಗ್ಲ್ಯಾನ್ಸ್‌ ಆಪ್ಲಿಕೇಶನ್‌ ತೆರೆದುಕೊಳ್ಳಲಿದೆ.

ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇ ಮೇಲೆ ಕಾಣಸಿಗುವ ಈ ಆಪ್ಲಿಕೇಶನ್‌ ಒಂದು ರೀತಿಯಲ್ಲಿ ಮಲ್ಟಿ ಟಾಸ್ಕಿಂಗ್‌ ಕಾರ್ಯವನ್ನ ನಿರ್ವಹಿಸುತ್ತದೆ. ಈ ಆಪ್‌ನಲ್ಲಿ ಬಳಕೆದಾರರಿಗೆ ಬೇಕಾಗುವ ಪ್ರಮುಖ ವಿಷಯಗಳು ವಿವಿದ ಬಗೆಯಲ್ಲಿ ಡಿಸ್‌ಪ್ಲೇ ಆಗುತ್ತೆ. ಅಷ್ಟೇ ಅಲ್ಲ ಡಿಸ್‌ಪ್ಲೇ ಆಗುವ ಮಾಹಿತಿಯು ಬಳಕೆದಾರರಿಗೆ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ ನೀಡಲಾಗಿರುತ್ತೆ. ಇದನ್ನ ಆದರಿಸಿ ಬಳಕೆದಾರ ತನಗಿಷ್ಟವಾದ ಮಾಹಿತಿಯ ಮೇಲೆ ಕ್ಲಿಕ್‌ ಮಾಡಿದರೆ ಸಾಕು ಗ್ರಾಹಕನಿಗೆ ಬೇಕಾದ ವಿಶ್ವಾಸಾರ್ಹವಾದ ಪ್ಲಾಟ್‌ಫಾರ್ಮ್‌ ತೆರೆದುಕೊಳ್ಳುವಂತೆ ಮಾಡುತ್ತೆ.

ಉದಾಹರಣೆಗೆ, ಗ್ಲ್ಯಾನ್ಸ್‌ ಲಾಕ್‌ಸ್ಕ್ರೀನ್‌ ಡಿಸ್‌ಪ್ಲೇ ಮೇಲೆ ಆಕರ್ಷಕವಾದ ಉಡುಪನ್ನ ಧರಿಸಿದ ಸೆಲೆಬ್ರಿಟಿ ಫೋಟೊ ಕಂಡೊಡನೆ, ನಿಮಗೆ ಅದೇ ಮಾದರಿಯ ಉಡುಪು ಕೊಳ್ಳಲು ಮನಸ್ಸಾಗಬಹುದು. ಆಗ ಆ ಚಿತ್ರದ ಮೇಲೆ ಕ್ಲಿಕ್‌ ಮಾಡಿದರೆ ಸಾಕು ನಿಮಗಿಷ್ಟವಾದ ಉಡುಪಿನ ಮಾಹಿತಿಯ ಜೊತೆಗೆ ಅಮೆಜಾನ್‌ನಂತಹ ವಿಶ್ವಾಸಾರ್ಹ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ ಇಲ್ಲಿ ತೆರೆದುಕೊಳ್ಳುತ್ತದೆ. ಈ ಮೂಲಕ ನೀವು ಪ್ರತ್ಯೇಕವಾಗಿ ಅಮೆಜಾನ್‌ ಆಪ್‌ ಆಪ್ಲಿಕೇಶನ್‌ ತೆರೆಯುವ ಅವಶ್ಯಕತೆ ಇರೋದಿಲ್ಲ. ಹಾಗಂತ ಈ ಆಪ್ಲಿಕೇಶನ್‌ ಕೇವಲ ಫ್ಯಾಷನ್‌ ಮತ್ತು ಉಡುಪುಗಳಿಗೆ ಮಾತ್ರ ಸೀಮಿತವಾಗಿಲ್ಲ, ಈ ಪ್ಲಾಟ್‌ಫಾರ್ಮ್‌ ಮೂಲಕ ಎಲ್ಲಾ ಮಾದರಿಯ ಮಾಹಿತಿಯನ್ನು ಸಹ ಪಡೆಯಬಹುದು ಅಲ್ಲದೆ ಬೇರೆ ಪ್ಲಾಟ್‌ಫಾರ್ಮ್‌ಗಳಿಗೂ ಬೇಟಿ ನೀಡಬಹುದು.

ಅಷ್ಟೇ ಯಾಕೆ ಈ ಆಪ್ಲಿಕೇಶನ್‌ ಮೂಲಕ ಅಡುಗೆಗೆ ಸಂಬಂದಿಸಿದ ಮಾಹಿತಿಯನ್ನ ಸಹ ಕಲಿಯಬಹುದು. ನಿಮಗೆ ಯಾವ ರೀತಿಯ ಪದಾರ್ಥದ ಅಡುಗೆ ರೆಸಿಪಿಗಳನ್ನು ಸಹ ಇಲ್ಲಿ ಕಲಿಯಬಹುದು. ಇನ್ನು ಇ-ಕಾಮರ್ಸ್‌ಗಳಲ್ಲಿ ಯಾವ ಪದಾರ್ಥಗಳು ಉತ್ತಮವಾಗಿವೇ, ಯಾವ ಇ-ಕಾಮರ್ಸ್‌ ತಾಣದಲ್ಲಿ ಖರೀದಿಸಿದರೆ ಉತ್ತಮ ಅನ್ನೊದನ್ನ ಸಹ ಇಲ್ಲಿ ಕಾಣಬಹುದಾಗಿದೆ. ಯಾಕಂದರೆ ಗ್ಲ್ಯಾನ್ಸ್‌ನಲ್ಲಿ ಕಾಣ ಸಿಗುವ ಮಾಹಿತಿ ಸಾಧ್ಯವಾದಷ್ಟು ಉತ್ಕೃಷ್ಟ ಮಟ್ಟದ ಮಾಹಿತಿಯಾಗಿದ್ದು, ಕೇವಲ ರೇಟಿಂಗ್‌ ಆದಾರದ ಮೇಲೆ ನೀವು ಶಾಪಿಂಗ್‌ ಮಾಡುವುದಕ್ಕಿಂತ ಗ್ಲ್ಯಾನ್ಸ್‌ನಲ್ಲಿನ ಮಾಹಿತಿ ನೋಡಿ ಶಾಪಿಂಗ್‌ ಮಾಡುವುದು ಉತ್ತಮವಾಗಿದೆ.

ಇದಲ್ಲದೆ ಎರಡೂ ವಿಭಿನ್ನ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಉತ್ಪನ್ನಗಳನ್ನು ಹುಡುಕಲು ಹೆಚ್ಚಿನ ಸಮಯವನ್ನು ವ್ಯರ್ಥ ಮಾಡುವ ಬದಲು, ನಿಮಗೆ ಇಷ್ಟವಾದ ಉತ್ಪನ್ನಗಳನ್ನು ಖರೀದಿಸಲು ಸೂಕ್ತವಾದ ಪ್ಲಾಟ್‌ಫಾರ್ಮ್‌ ಯಾವುದು ಅನ್ನೊದನ್ನ ಗ್ಲ್ಯಾನ್ಸ್‌ ತಿಳಿಸಿಕೊಡುತ್ತದೆ. ಅಷ್ಟೇ ಅಲ್ಲ ಈ ಮಾಹಿತಿ ಎಲ್ಲವೂ ಬಳಕೆದಾರ ಆಯ್ಕೆ ಮಾಡಿದ ಮೂಲ ಭಾಷೆಯಲ್ಲಿಯೇ ಇರೊದ್ರಿಂದ ಸರಳೀಕೃತ ಮಾಹಿತಿ ಅರ್ಥಗರ್ಭಿತವಾಗಿರಲಿದೆ. ಅಷ್ಟೇ ಅಲ್ಲ ಈ ಮಾಹಿತಿಯನ್ನ ಬಳಕೆದಾರರು ತಮ್ಮ ಹಿತದೃಷ್ಟಿಯಿಂದ ಇಂಗ್ಲಿಷ್, ಹಿಂದಿ, ತಮಿಳು ಮತ್ತು ಕನ್ನಡ ತೆಲುಗು ಭಾಷೆಗಳಲ್ಲಿ ಸುದ್ದಿಗಳನ್ನು ತೋರಿಸಲು ಸಹ ಈ ಸೇವೆಯನ್ನು ಕಸ್ಟಮೈಸ್ ಮಾಡಬಹುದು.

ಅಷ್ಟೇ ಅಲ್ಲ ನಿಮಗೆ ಬೇಕಾದ ಮಾಹಿತಿಯ ಸೇವೆಯನ್ನ ನೀಡುವಾಗ ನಿಮ್ಮ ಫೋನ್‌ನ ಲಾಕ್‌ಸ್ಕ್ರೀನ್‌ಗೆ ಹೆಚ್ಚಿನ ಪ್ರಮಾಣದ ಡೇಟಾವನ್ನು ವ್ಯಯಿಸುವುದಿಲ್ಲ, ಕಡಿಮೆ ಡೇಟಾದಲ್ಲೂ ಉತ್ತಮ ಮಾಹಿತಿಯನ್ನ ಪಡೆದ ಅನುಭವ ನಿಮ್ಮದಾಗಬೇಕಾದರೆ ಗ್ಲ್ಯಾನ್ಸ್‌ ಆಪ್ಲಿಕೇಶನ್‌ ಆಯ್ಕೆ ಉತ್ತಮವಾಗಿದೆ. ಸದ್ಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ನೀವು ಗ್ಲಾನ್ಸ್ ಪ್ಲಾಟ್‌ಫಾರ್ಮ್‌ನ ಲಾಭವನ್ನು ಪಡೆಯಬಹುದಾಗಿದ್ದು, ಶಿಯೋಮಿಯ ರೆಡ್‌ಮಿ ನೋಟ್, ಪೊಕೊ ಮತ್ತು ಕೆ 20 ಪ್ರೊ ಸರಣಿ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ, ಜೆ ಮತ್ತು ಎಂ ಸರಣಿ ಮತ್ತು ವಿವೊ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಬಹುದಾಗಿದೆ.

Most Read Articles
Best Mobiles in India
Read More About: news smartphone multimedia screen

Have a great day!
Read more...

English Summary

Glance is a service that can fulfill your multimedia and news-centric needs.to know more visit to kannada.gizbot.com