ಸಾಟಿಯಿಲ್ಲದ ಭವಿಷ್ಯದ ಸ್ಮಾರ್ಟ್‌ಫೋನ್ ಅನುಭವಗಳಿಗೆ ಒನ್‌ಪ್ಲಸ್‌ 6T ಜತೆ ಸಿದ್ಧರಾಗಿ..!


ಕೈಗೆಟಕುವ ದರದಲ್ಲಿ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ಗಳನ್ನು ಗ್ರಾಹಕರಿಗೆ ನೀಡಿ ಮೊಬೈಲ್‌ ಉದ್ಯಮದಲ್ಲಿ ಕ್ರಾಂತಿ ಸೃಷ್ಟಿಸುತ್ತಿರುವ ಒನ್‌ಪ್ಲಸ್‌ ಮತ್ತೊಂದು ಬಾರಿ ಹೊಸತನವನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ. ಉತ್ಕೃಷ್ಟ ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್‌ ಯಶಸ್ಸನ್ನು ಮುಂದುವರೆಸಲು ಮತ್ತೊಂದು ಸ್ಮಾರ್ಟ್‌ಫೋನ್‌ ಒನ್‌ಪ್ಲಸ್‌ 6Tಯನ್ನು ಮುಂದಿನ ತಿಂಗಳಿನಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಒನ್‌ಪ್ಲಸ್‌ ಬಿಡುಗಡೆ ಮಾಡಲು ಯೋಚಿಸುತ್ತಿರುವ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ನಿಸ್ಸಂದೇಹವಾಗಿ ಸಂಪೂರ್ಣ ಶಕ್ತಿಶಾಲಿಯಾಗಿರುತ್ತದೆ.

Advertisement

ಅದರಂತೆ, ಜಗತ್ತಿನಾದ್ಯಂತ ಇರುವ ತಂತ್ರಜ್ಞಾನದ ಉತ್ಸಾಹಿಗಳಿಗೆ ಕೆಲವು ಔಟ್-ಆಫ್‌ ಬಾಕ್ಸ್‌ ಅನುಭವಗಳನ್ನು ಸಹ ಒನ್‌ಪ್ಲಸ್‌ 6T ಖಾತರಿ ಪಡಿಸುತ್ತದೆ. ಅದಕ್ಕಾಗಿಯೇ, ಮುಂಬರುವ ಹೊಸ ಒನ್‌ಪ್ಲಸ್‌ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ಸುತ್ತ ಇಂಟರ್‌ನೆಟ್‌ ಪ್ರಪಂಚದಲ್ಲಿ ಗಿರಕಿ ಹೊಡೆಯುತ್ತಿರುವ ವದಂತಿಗಳ ಕಡೆ ಒಂದು ಸುತ್ತು ಹಾಕಿಕೊಂಡು ಬರೋಣ. ಅದರ ಜತೆ ಬಳಕೆದಾರರಿಗೆ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಮತ್ತೇನಿದೆ ಎಂಬುದನ್ನು ವಿವರವಾಗಿ ನೋಡೋಣ ಬನ್ನಿ.

Advertisement

ಅದ್ಭುತ ಇನ್‌ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ಸ್ಕ್ಯಾನಿಂಗ್

ಒನ್‌ಪ್ಲಸ್‌ನ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಭದ್ರತಾ ಅಂಶಗಳನ್ನು ಕ್ರಾಂತಿಕಾರಿಯಾಗಿ ಅನುಷ್ಟಾನಗೊಳಿಸಲಾಗಿದೆ. ಒನ್‌ಪ್ಲಸ್ ಮನೆಯಿಂದ ಮುಂದೆ ಬಿಡುಗಡೆಯಾಗುವ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್ ಇನ್‌ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ಸ್ಕ್ಯಾನರ್‌ ಹೊಂದಿರುವುದು ಖಚಿತವಾಗಿದೆ. ಈ ಫೀಚರ್‌ನ್ನು ಸ್ಕ್ರೀನ್ ಅನ್‌ಲಾಕ್ ಎಂದು ಕರೆಯಲಾಗಿದೆ. ಆದರೆ, ಈ ಫೀಚರ್‌ನ್ನು ಹೇಗೆ ಒನ್‌ಪ್ಲಸ್‌ ಸಂಯೋಜನೆಗೊಳಿಸುತ್ತದೆ ಎಂಬುದನ್ನು ಇನ್ನೂ ದೃಢಪಡಿಸಿಲ್ಲ. ಆಗಿದ್ದರೂ ಸಹ, ಕಂಪನಿಯ ಟ್ರ್ಯಾಕ್ ರೆಕಾರ್ಡ್ ನೋಡಿದರೆ ಹೆಚ್ಚು ಜನಪ್ರಿಯವಾಗಿರುವ ಈ ಫೀಚರ್‌ ಗ್ರಾಹಕರಿಗೆ ಅದ್ಭುತ ಅನುಭವವನ್ನು ನೀಡುತ್ತದೆ. ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಿರುವ ಬೇರೆ ಸ್ಮಾರ್ಟ್‌ಫೋನ್‌ಗಳಿಗಿಂತ ಈ ಸ್ಮಾರ್ಟ್‌ಫೋನ್‌ ಉತ್ತಮವಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕನಿಷ್ಟ ನೋಚ್‌ ಜತೆ ಉತ್ತಮ ಡಿಸ್‌ಪ್ಲೇ ಅನುಭವ

ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್‌ ಸಂಪೂರ್ಣ HD + ಸ್ಕ್ರೀನ್‌ ಜತೆ ತುದಿಯಿಂದ ತುದಿಯವರೆಗೆ ವಿಸ್ತರಿತವಾಗಿದ್ದು, ಮಿತಿಯಿಲ್ಲದ ಮಲ್ಟಿಮೀಡಿಯಾ ವೀಕ್ಷಣೆ ಅನುಭವವನ್ನು ನೀಡುತ್ತಿದೆ. ಹೊಸ ಒನ್‌ಪ್ಲಸ್‌ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ಬೆಲೆಯ ಆಧಾರದಲ್ಲಿಯೂ ಕೂಡ ಅತ್ಯುತ್ತಮ ಡಿಸ್‌ಪ್ಲೇ ಅನುಭವವನ್ನು ನೀಡುತ್ತದೆ. ಇಲ್ಲಿಯವರೆಗೆ ತಿಳಿದಂತೆ ಒನ್‌ಪ್ಲಸ್‌ 6T ಕನಿಷ್ಟ ನೋಚ್‌ ಹೊಂದಿದ್ದು, ಬಹಳಷ್ಟು ಸುಧಾರಿಸಿದ ಫ್ರಾಂಟ್‌ ಕ್ಯಾಮೆರಾ ಹೊಂದಿರುತ್ತದೆ. ವಾಟರ್‌ಡ್ರಾಪ್‌ ಎಂದು ಕರೆಯುವ ಹೊಸತನದ ನೋಚ್‌ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಈ ಫೀಚರ್ ಗೇಮ್‌ ಆಡುವಾಗ, ವೆಬ್ ಬ್ರೌಸಿಂಗ್ ಮತ್ತು ಹೈ ಡೆಫಿನಿಷನ್‌ ವಿಡಿಯೋಗಳನ್ನು ಸ್ಟ್ರೀಮ್‌ ಮಾಡುವಾಗ ಉತ್ತಮವಾದ ಫುಲ್‌ ಸ್ಕ್ರೀನ್‌ ವೀಕ್ಷಣೆಯ ಅನುಭವವನ್ನು ನೀಡುತ್ತದೆ.

ತ್ರಿವಳಿ ಕ್ಯಾಮೆರಾ ವ್ಯವಸ್ಥೆ

ಸೋರಿಕೆಯಾಗಿರುವ ಫೀಚರ್‌ಗಳಲ್ಲಿ ಈಗ ನಾವೇಳುತ್ತಿರುವ ಫೀಚರ್ ನಿಜವಾಗುವ ಸಂಭವ ಕಾಣುತ್ತಿದೆ. ಹೊಸ ಒನ್‌ಪ್ಲಸ್‌ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ಸರಿಸಾಟಿಯಿಲ್ಲದ ಕ್ಯಾಮೆರಾ ಕಾರ್ಯನಿರ್ವಹಣೆಯನ್ನು ಹೊಂದಿದೆ. ಏಕೆಂದರೆ ಒನ್‌ಪ್ಲಸ್‌ 6T ತ್ರಿವಳಿ ಲೆನ್ಸ್‌ ಕ್ಯಾಮೆರಾ ವ್ಯವಸ್ಥೆಯನ್ನು ಹಿಂಬದಿಯಲ್ಲಿ ಹೊಂದಿರುವ ಸಾಧ್ಯತೆ ಬಹಳಷ್ಟಿದೆ. ಆದರೆ, ಮೂರನೇ ಲೆನ್ಸ್‌ ಯಾವ ಉದ್ದೇಶದೊಂದಿಗೆ ಬರುತ್ತಿದೆ ಎಂದು ಇನ್ನೂ ತಿಳಿದಿಲ್ಲ. ಆದರೆ, ಈ ತ್ರಿವಳಿ ಕ್ಯಾಮೆರಾ ವ್ಯವಸ್ಥೆ ದೈನಂದಿನ ಜೀವನದಲ್ಲಿ ಕ್ಯಾಮೆರಾ ಕಾರ್ಯನಿರ್ವಹಣೆಯು ಸಂಪೂರ್ಣವಾಗಿ ಸರಿದೂಗಿಸುವ ನಿರೀಕ್ಷೆ ಇದೆ. ಹೊಸ ಕ್ಯಾಮೆರಾ ವ್ಯವಸ್ಥೆ ಬೆಳಕಿಗೆ ಉತ್ತಮವಾದ ಪ್ರತಿಕ್ರಿಯೆ ನೀಡುವ ಹಾಗೂ ಅತ್ಯುತ್ತಮ ಚಿತ್ರವನ್ನು ಸೆರೆಹಿಡಿಯುವ ಸಾಮರ್ಥ್ಯವನ್ನು ನಿರೀಕ್ಷಿಸಬಹುದು.

ಆಂಡ್ರಾಯ್ಡ್‌ 9.0 ಔಟ್‌-ಆಫ್‌-ದಿ-ಬಾಕ್ಸ್‌ ಒಎಸ್‌

ಸಾಫ್ಟ್‌ವೇರ್ ವಿಭಾಗದಲ್ಲಿ ಒನ್‌ಪ್ಲಸ್‌ ಅತ್ಯುತ್ತಮವಾಗಿದೆ. ಆದ್ದರಿಂದ ಒನ್‌ಪ್ಲಸ್‌ ಬ್ರಾಂಡ್ ತನ್ನ ಪ್ರತಿ ಸ್ಮಾರ್ಟ್‌ಫೋನ್ ಅತ್ಯುತ್ತಮ ಸಾಫ್ಟ್‌ವೇರ್ ಕಾರ್ಯಕ್ಷಮತೆಯನ್ನು ಗ್ರಾಹಕರಿಗೆ ಖಾತ್ರಿಗೊಳಿಸುತ್ತದೆ. ಹೊಸ ಒನ್‌ಪ್ಲಸ್‌ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ಹೊಸ ಆಂಡ್ರಾಯ್ಡ್‌ ಸಾಫ್ಟ್‌ವೇರ್‌ Android 9.0 out-of-the-box ಜತೆ ಬಿಡುಗಡೆಯಾಗಲಿದೆ ಎಂಬ ವದಂತಿ ಗಿರಕಿ ಹೊಡೆಯುತ್ತಿದೆ. ಅದಲ್ಲದೇ ದೈನಂದಿನ ಬಳಕೆಯಲ್ಲಿ ಗ್ರಾಹಕರಿಗೆ ಮಿತಿಯಿಲ್ಲದ ಸಾಫ್ಟ್‌ವೇರ್‌ ಅನುಭವ ನೀಡಲು ಇತ್ತೀಚಿನ OxygenOS ಸಾಫ್ಟ್‌ವೇರ್‌ನ್ನೂ ಸಹ ನೀಡುವ ಖಚಿತತೆ ವ್ಯಕ್ತವಾಗಿದೆ.

ವೇಗದ ಡ್ಯಾಶ್ ಚಾರ್ಜ್

ಹೆಚ್ಚು ಜನಪ್ರಿಯವಾದ ಹಾಗೂ ಗ್ರಾಹಕರ ಮೆಚ್ಚಿನ ಉದ್ಯಮದ ಅತ್ಯುತ್ತಮ ವೇಗದ ಚಾರ್ಜಿಂಗ್ ತಂತ್ರಜ್ಞಾನ ಡ್ಯಾಶ್ ಚಾರ್ಜ್ ಫೀಚರ್‌ನ್ನು ಒನ್‌ಪ್ಲಸ್‌ ಒದಗಿಸುತ್ತದೆ. ಇದರೊಂದಿಗೆ ಮುಂಬರುವ ಒನ್‌ಪ್ಲಸ್‌ ಫ್ಲಾಗ್‌ಶಿಪ್‌ ಹ್ಯಾಂಡ್‌ಸೆಟ್‌ನಲ್ಲಿ ಉತ್ತಮ ಮತ್ತು ಸುಧಾರಿತ ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ನಾವು ನೋಡಬಹುದು. ಹೊಸ ಚಾರ್ಜಿಂಗ್ ತಂತ್ರಜ್ಞಾನ ಬ್ಯಾಟರಿ ಕಾರ್ಯಕ್ಷಮತೆಯನ್ನು ಹೇಗೆ ಸುಧಾರಿಸುತ್ತದೆ ಎಂಬುದು ಇನ್ನೂ ತಿಳಿದಿಲ್ಲ. ಆದರೂ, ಈ ಫೀಚರ್ ಮೇಲೆ ಒಂದು ಕಣ್ಣಿಡೋಣ.

ಸ್ನಾಪ್‌ಡ್ರಾಗನ್‌ 855 CPU

ಒನ್‌ಪ್ಲಸ್‌ನ ಸಾಧನಗಳು ಉತ್ತಮ ಹಾರ್ಡ್‌ವೇರ್‌ಗಳಿಗೆ ಹೆಸರುವಾಸಿಯಾಗಿದೆ. ಪ್ರತಿ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಸಾಟಿಯಿಲ್ಲದ ಗೇಮಿಂಗ್‌ಗಾಗಿ, ಮಲ್ಟಿಟಾಸ್ಕಿಂಗ್‌ ಮತ್ತು ಕಂಪ್ಯೂಟಿಂಗ್‌ ಕಾರ್ಯಕ್ಷಮತೆಗಾಗಿ ಟಾಪ್‌ ಎಂಡ್‌ ಪ್ರೊಸೆಸರ್ ಹಾಗೂ ಪ್ರಮುಖ RAM ಕನ್ಫಿಗರೆಷನ್‌ನೊಂದಿಗೆ ರಾಮ್ ಕಾನ್ಫಿಗರೇಶನ್ನೊಂದಿಗೆ ಸಾಟಿಯಿಲ್ಲದ ಗೇಮಿಂಗ್, ಬಹುಕಾರ್ಯಕ್ಕೆ ಮತ್ತು ಕಂಪ್ಯೂಟಿಂಗ್ ಕಾರ್ಯಕ್ಷಮತೆಯೊಂದಿಗೆ ಗ್ರಾಹಕರ ಕೈಗೆ ತಲುಪುತ್ತಿವೆ. ಮುಂಬರುವ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನಲ್ಲೂ ಇದನ್ನು ನಿರೀಕ್ಷಿಸಬಹುದು.

ಕೆಲವು ವದಂತಿಗಳ ಪ್ರಕಾರ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 845 ಚಿಪ್‌ಸೆಟ್‌ ಹೊಂದಿರಲಿದೆಯಂತೆ. ಆದರೆ, ಒನ್‌ಪ್ಲಸ್‌ 6Tನಲ್ಲಿ ಸ್ನಾಪ್‌ಡ್ರಾಗನ್ 855 CPU ಇರುವ ಸಾಧ್ಯತೆಯಿದೆ. ಉತ್ತಮ ಕಾರ್ಯನಿರ್ವಹಣೆಗಾಗಿ ಈ ಪ್ರೊಸೆಸರ್ Neural Processing Unit (NPU) ಹೊಂದಿರಲಿದೆ. ಈ ಚಿಪ್‌ಸೆಟ್‌ ಉತ್ತಮ ಗೇಮಿಂಗ್, ಕ್ಯಾಮೆರಾ, ಬ್ಯಾಟರಿ ಮತ್ತು ಸಂವಹನ-ಸಂಬಂಧಿತ ಕಾರ್ಯಗಳಿಗಾಗಿ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನಲ್ಲಿ ಸಾಟಿಯಿಲ್ಲದ ಕೃತಕ ಬುದ್ಧಿಮತ್ತೆ ಸಾಮರ್ಥ್ಯಗಳನ್ನು ನೀಡುತ್ತದೆ.

ವೈರ್‌ಲೆಸ್‌ ಚಾರ್ಜಿಂಗ್‌

ಕೊನೆಯ ಫೀಚರ್ ಆದರೆ, ಇದು ಯಾವುದಕ್ಕೂ ಕಡಿಮೆಯಿಲ್ಲ. ಆ ಫೀಚರ್ ಏನೆಂದರೆ ವೈರ್‌ಲೆಸ್ ಚಾರ್ಜಿಂಗ್ ಆಗಿದೆ. ಮುಂಬರುವ ಒನ್‌ಪ್ಲಸ್‌ನ ಸ್ಮಾರ್ಟ್‌ಫೋನ್‌ಗಳಲ್ಲಿ ವೈರ್‌ಲೆಸ್ ಚಾರ್ಜಿಂಗ್ ಅನುಭವವನ್ನು ಅನುಭವಿಸಬಹುದು. ಹ್ಯಾಂಡ್‌ಸೆಟ್‌ ಹಿಂಭಾಗದಲ್ಲಿ ಗಾಜಿನ ಪ್ಯಾನಲ್ ಹೊಂದಿದ್ದು, ಆ ಪ್ಯಾನೆಲ್ ವೈರ್‌ಲೆಸ್‌ ಚಾರ್ಜಿಂಗ್‌ ತಂತ್ರಜ್ಞಾನ ಅನುಭವಕ್ಕೆ ಅವಕಾಶ ನೀಡುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್ ಒನ್‌ಪ್ಲಸ್‌ 6 ಆವೃತ್ತಿಯ ಗಮನಾರ್ಹ ಅಪ್‌ಗ್ರೇಡ್‌ ಎಂಬಂತೆ ತೋರುತ್ತದೆ. ಈ ಸ್ಮಾರ್ಟ್‌ಫೋನ್ ಭವಿಷ್ಯದ ವೈಶಿಷ್ಟ್ಯಗಳನ್ನು ಮತ್ತು ಕಾರ್ಯನಿರ್ವಹಣೆಯನ್ನು ಗ್ರಾಹಕರಿಗೆ ತಲುಪಿಸುತ್ತದೆ. ಒನ್‌ಪ್ಲಸ್‌ ಫ್ಲಾಗ್‌ಶಿಪ್‌ ಹ್ಯಾಂಡ್‌ಸೆಟ್‌ ಸುತ್ತ ಗಿರಕಿ ಹೊಡೆಯುತ್ತಿರುವ ವದಂತಿಗಳು ಹಾಗೂ ಸೋರಿಕೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸೋಣ.

Best Mobiles in India

English Summary

OnePlus, the globally acknowledged brand for producing flagship smartphones at reasonable prices is once again ready to create ripples in the mobile industry. After the highly acclaimed OnePlus 6, the company is now working to deliver its successor, which will probably be named OnePlus 6T, in the coming month.