ಒನ್‌ಪ್ಲಸ್‌ನಲ್ಲಿ ಬರ್ತಿದೆ ಆಪ್ಟಿಮೈಸ್ಡ್ ಚಾರ್ಜಿಂಗ್‌ ಫೀಚರ್‌..! ಬ್ಯಾಟರಿ ಆರೋಗ್ಯಕ್ಕೆ ಉತ್ತಮ..!


ನಿಮ್ಮ ಫೋನ್‌ನ ಬ್ಯಾಟರಿ ಆರೋಗ್ಯ ಕಾಪಾಡಲು “ಆಪ್ಟಿಮೈಸ್ಡ್ ಚಾರ್ಜಿಂಗ್” ಎಂಬ ಹೊಸ ಫೀಚರ್‌ನ್ನು ಒನ್‌ಪ್ಲಸ್ ಹೊರತಂದಿದೆ. ಕಳೆದ ವರ್ಷ ಬೀಟಾ ಆವೃತ್ತಿಯಲ್ಲಿ ಮೊದಲ ಬಾರಿಗೆ ಈ ವೈಶಿಷ್ಟ್ಯವು ಬೆಳಕಿಗೆ ಬಂದಿತ್ತು. ಈ ಫೀಚರ್‌ ಶೇ.80ಕ್ಕಿಂತ ಹೆಚ್ಚು ಚಾರ್ಜ್‌ ಇದ್ದರೆ, ಚಾರ್ಜಿಂಗ್‌ನ್ನು ಸ್ಥಗಿತಗೊಳಿಸುತ್ತದೆ ಮತ್ತು ಚಾರ್ಜರ್‌ ಅನ್‌ಪ್ಲಗ್‌ ಮಾಡುವ ನಿರೀಕ್ಷಿತ 100 ನಿಮಿಷಗಳ ಮುನ್ನ ಚಾರ್ಜಿಂಗ್‌ನ್ನು ಪುನಃ ಆರಂಭಿಸುತ್ತದೆ. ಈ ಫೀಚರ್‌ನಿಂದ ರಾತ್ರಿಯಿಡೀ ನಿಮ್ಮ ಒನ್‌ಪ್ಲಸ್ ಫೋನ್‌ನ ಒವರ್‌ ಚಾರ್ಜಿಂಗ್‌ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಬ್ಯಾಟರಿ ಚಾರ್ಜಿಂಗ್‌ನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಆಪ್ಟಿಮೈಸ್ಡ್ ಚಾರ್ಜಿಂಗ್ ಫೀಚರ್‌ ಒನ್‌ಪ್ಲಸ್‌ನ “ಬಳಕೆದಾರರ ನಿದ್ರಾ ಚಕ್ರ ಪತ್ತೆ” ಅಂಶವನ್ನು ಬಳಸಿಕೊಳ್ಳುತ್ತದೆ.

ಶೇ.80ರಷ್ಟು ಬ್ಯಾಟರಿ

ಬ್ಯಾಟರಿ ಸೆಟ್ಟಿಂಗ್ಸ್‌ ಮೆನುವಿನಲ್ಲಿ ಒದಗಿಸಲಾಗುವ ಆಪ್ಟ್-ಇನ್ ವೈಶಿಷ್ಟ್ಯವಾಗಿ ಬಳಕೆದಾರರು ಆಪ್ಟಿಮೈಸ್ಡ್ ಚಾರ್ಜಿಂಗ್‌ ಪಡೆಯುತ್ತಾರೆ. ರಾತ್ರಿ ಸಮಯದಲ್ಲಿ ಬ್ಯಾಟರಿ ಚಾರ್ಜಿಂಗ್ ಮಟ್ಟವನ್ನು ಈ ಫೀಚರ್‌ ಶೇ.80ರಷ್ಟು ಇರಿಸುತ್ತದೆ ಎಂದು ಒನ್‌ಪ್ಲಸ್ ಹೇಳುತ್ತದೆ. ನಿಮ್ಮ ದೈನಂದಿನ ಎಚ್ಚರಗೊಳ್ಳುವ ಸಮಯಕ್ಕೆ ಕೇವಲ 100 ನಿಮಿಷಗಳ ಮೊದಲು ಅಥವಾ ನಿಮ್ಮ ಮೊದಲ ಅಲಾರಂ ರಿಂಗಣಿಸಿದಾಗ, ಫೋನ್ ಚಾರ್ಜಿಂಗ್ ಪ್ರಕ್ರಿಯೆಯನ್ನು ಮುಗಿಸಿ, ಶೇ.100 ಚಾರ್ಜ್‌ ಬ್ಯಾಟರಿಯನ್ನು ನೀಡುತ್ತದೆ.

ಆಕ್ಸಿಜನ್‌ ಓಎಸ್‌ ಬೀಟಾ

ಆರಂಭದಲ್ಲಿ, ಈ ಫೀಚರ್‌ ಒನ್‌ಪ್ಲಸ್ 7 ಮತ್ತು ಒನ್‌ಪ್ಲಸ್ 7 ಪ್ರೊ ಬಳಕೆದಾರರಿಗಾಗಿ ಕಳೆದ ತಿಂಗಳು ಬಿಡುಗಡೆಯಾದ ಆಕ್ಸಿಜನ್ ಓಎಸ್ ಬೀಟಾ ನಿರ್ಮಾಣದ ಭಾಗವಾಗಿದೆ. ಆದರೆ, ಭವಿಷ್ಯದಲ್ಲಿ ಈ ಫೀಚರ್‌ ಇತರ ಒನ್‌ಪ್ಲಸ್ ಫೋನ್‌ಗಳನ್ನು ತಲುಪುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಒನ್‌ಪ್ಲಸ್ 7 ಸರಣಿ ಮಾದರಿಗಳಿಗಾಗಿ ಮುಂದಿನ ಸ್ಥಿರ ಆಕ್ಸಿಜನ್ ಓಎಸ್ ನವೀಕರಣದ ಮೂಲಕ ಹೊಸ ಕೊಡುಗೆ ನೀಡುತ್ತದೆಯೇ ಎಂಬುದನ್ನು ಕಂಪನಿ ಸ್ಪಷ್ಟಪಡಿಸಿಲ್ಲ.

ಬ್ಯಾಟರಿ ಐಕಾನ್‌ ಬದಲಾವಣೆ

ನಿಮ್ಮ ಒನ್‌ಪ್ಲಸ್ 7 ಅಥವಾ ಒನ್‌ಪ್ಲಸ್ 7 ಪ್ರೊನಲ್ಲಿ ನೀವು ಬೀಟಾ ಆವೃತ್ತಿಯನ್ನು ಬಳಸುತ್ತಿದ್ದರೆ, ಸೆಟ್ಟಿಂಗ್ಸ್‌> ಬ್ಯಾಟರಿ ಮೂಲಕ ಹೋಗಿ ಆಪ್ಟಿಮೈಸ್ಡ್ ಚಾರ್ಜಿಂಗ್ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಬಹುದು. ಫೀಚರ್‌ ಸಕ್ರಿಯವಾದ ನಂತರ, ಬ್ಯಾಟರಿ ಐಕಾನ್‌ನಲ್ಲಿ ಅದನ್ನು ಗಮನಿಸುತ್ತೀರಿ. ಡ್ರಾಪ್-ಡೌನ್ ಅಧಿಸೂಚನೆಯಲ್ಲಿ ಮ್ಯೂಟ್ ನೊಟಿಫಿಕೇಷನ್‌ ಕೂಡ ನಿಮ್ಮ ಅರಿವಿಗಾಗಿ ಪ್ರದರ್ಶಿಸಲಾಗುತ್ತದೆ ಎಂದು ಒನ್‌ಪ್ಲಸ್ ಹೇಳಿದೆ.

ನೇರವಾಗಿ ನಿಷ್ಕ್ರೀಯ

ನೊಟಿಫಿಕೇಷನ್‌ ಸ್ಕ್ರೀನ್‌ನಿಂದ ನೇರವಾಗಿ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸಲು ಸಹ ಆಯ್ಕೆಯಿದೆ. ಈ ಪ್ರಕ್ರಿಯೆಯು ಯಾವುದೇ ವಿಳಂಬವಿಲ್ಲದೆ - ನಿಮ್ಮ ಫೋನ್ ಅನ್ನು ತಕ್ಷಣವೇ ಶೇ.100ರಷ್ಟು ಚಾರ್ಜ್‌ ಮಾಡಲು ಸಹಾಯ ಮಾಡುತ್ತದೆ.

ಆಸುಸ್, ಆಪಲ್‌ನಲ್ಲಿದೆ ಫೀಚರ್‌

ಆಸುಸ್‌ನಂತಹ ಕಂಪನಿಗಳು ಇತ್ತೀಚಿನ ದಿನಗಳಲ್ಲಿ ತಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಇದೇ ರೀತಿಯ ಆಪ್ಟಿಮೈಸೇಷನ್‌ ನೀಡಿವೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಐಒಎಸ್ 13 ಬಿಡುಗಡೆಯಾದಾಗಿನಿಂದ ಆಪಲ್ ಐಫೋನ್ ಮಾದರಿಗಳಲ್ಲಿ ಇದೇ ರೀತಿಯ ಆಪ್ಟಿಮೈಸ್ಡ್ ಬ್ಯಾಟರಿ ಚಾರ್ಜಿಂಗ್ ಬಳಕೆದಾರರಿಗೆ ದೊರೆತಿದೆ.

ಬಳಕೆದಾರರ ಬೇಡಿಕೆಯ ಫೀಚರ್‌

ಚಾರ್ಜಿಂಗ್ ಮುಂದೂಡುವುದರಿಂದ ಸ್ಮಾರ್ಟ್‌ಫೋನ್ ಬಳಕೆದಾರರು ಬ್ಯಾಟರಿ ಕಾರ್ಯಕ್ಷಮತೆ ಮತ್ತು ಅದರ ದೀರ್ಘಾಯುಷ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಒನ್‌ಪ್ಲಸ್ ಸಮುದಾಯ ವೇದಿಕೆಯಲ್ಲಿನ ಕೆಲವು ಫೋರಂ ಪೋಸ್ಟ್‌ಗಳನ್ನು ಗಮನಿಸಿದಾಗ ಒನ್‌ಪ್ಲಸ್ ಬಳಕೆದಾರರಿಂದ ದೀರ್ಘಕಾಲ ಬೇಡಿಕೆಯಿರುವ ವೈಶಿಷ್ಟ್ಯಗಳಲ್ಲಿ ಆಪ್ಟಿಮೈಸ್ಡ್ ಚಾರ್ಜಿಂಗ್ ವೈಶಿಷ್ಟ್ಯ ಎಂಬುದು ಮನದಟ್ಟಾಗುತ್ತದೆ.

Most Read Articles
Best Mobiles in India
Read More About: oneplus news smartphones mobiles

Have a great day!
Read more...

English Summary

OnePlus Optimized Charging Will Protect Your OnePlus Phone From Over Charging