ಪೇಟಿಎಂ ಮಾಲ್‌ನಲ್ಲಿದೆ ಒಪ್ಪೊ ಎ5 ಮೇಲೆ ಭರ್ಜರಿ ಆಫರ್!!


ಕಳೆದ ತಿಂಗಳಷ್ಟೆ ಭಾರತದ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿದ್ದ ಒಪ್ಪೋ ಕಂಪೆನಿ ಬಜೆಟ್ ಸ್ಮಾರ್ಟ್‌ಫೋನ್ "ಒಪ್ಪೊ ಎ5" ಮೇಲೆ ಗ್ರಾಹಕರಿಗೆ ಭರ್ಜರಿ ಆಫರ್ ಸಿಗುತ್ತಿದೆ. ಮೊಬೈಲ್ ಖರೀದಿದಾರರಿಗೆ ಒಪ್ಪೊ ಮತ್ತು ಪೇಟಿಎಂ ಸಂಸ್ಥೆಗಳು ಸೇರಿ ಸಿಹಿ ಸಮಾಚಾರ ನೀಡಿದ್ದು, ಒಪ್ಪೋ ಎ5 ಸ್ಮಾರ್ಟ್‌ಪೋನ್ ಮೇಲೆ 3 ಸಾವಿರ ರೂ.ಗಳ ಭರ್ಜರಿ ರಿಯಾಯಿತಿ ನೀಡಿವೆ.

14,990 ರೂಪಾಯಿಗಳಿಗೆ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ ಒಪ್ಪೊ ಎ5 ಸ್ಮಾರ್ಟ್‌ಪೊನ್ ಅನ್ನು ಗ್ರಾಹಕರು ಈಗ 3 ಸಾವಿರ ರೂ. ರಿಯಾಯಿತಿಯಲ್ಲಿ ಪಡೆಯಬಹುದಾಗಿದ್ದು, MOB10 ಪ್ರೋಮೋ ಕೋಡ್‌ ಬಳಸಿ ಶೇ.10 ರಷ್ಟು ರಿಯಾಯಿತಿ ಹಾಗೂ ಐಸಿಐಸಿಐ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಮೂಲಕ ಮಾಡುವ ಸ್ಮಾರ್ಟ್‌ಪೋನ್ ಖರೀದಿಗೆ ಶೇ.10 ರಷ್ಟು ಕ್ಯಾಶ್‌ ಬ್ಯಾಕ್‌ ಸಹ ನೀಡಲಾಗಿದೆ.

ಈ ಆಫರ್ ಕೇವಲ ಪೇಟಿಎಂ ಮಾಲ್‌ನಲ್ಲಿ ಮಾತ್ರ ಲಭ್ಯವಿದ್ದು, 6.2 ಇಂಚಿನ ಎಚ್‌ಡಿ+ ಡಿಸ್ಪ್ಲೇ, 4ಜಿಬಿ ರ್ಯಾಮ್, 32ಜಿಬಿ ಆಂತರಿಕ ಸ್ಟೋರೇಜ್‌ ಮತ್ತು 4230ಎಂಎಎಚ್ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಸ್ಮಾರ್ಟ್‌ಫೋನ್ ಅನ್ನು ಈಗ ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಹಾಗಾದರೆ, ಒಪ್ಪೋ ಎ5 ಸ್ಮಾರ್ಟ್‌ಪೋನ್ ವಿಶೇಷತೆಗಳನ್ನು ಮುಂದೆ ತಿಳಿಯಿರಿ.

ಫುಲ್ ವ್ಯೂವ್ ಡಿಸ್ ಪ್ಲೇ

6.2 ಇಂಚಿನ ಡಿಸ್ ಪ್ಲೇಯನ್ನು ಒಪ್ಪೋ A5 ಸ್ಮಾರ್ಟ್ ಫೋನ್ ನಲ್ಲಿ ಕಾಣಬಹುದಾಗಿದ್ದು, ಇದು HD + ಗುಣಮಟ್ಟವನ್ನು ಹೊಂದಿದ್ದು, ಜೊತೆಗೆ ನಾಚ್ ಡಿಸ್ ಪ್ಲೇ ವಿನ್ಯಾಸ ಸಹ ಇದರಲ್ಲಿದೆ. ಇದಲ್ಲದೇ ಇದು 19:9 ಅನುಪಾತದ ಡಿಸ್ ಪ್ಲೇಯಾಗಿದ್ದು, ಫೂಲ್ ವ್ಯೂವ್ ಡಿಸ್ ಪ್ಲೇ ವಿನ್ಯಾಸವನ್ನು ಹೊಂದಿದ್ದು, ಗೇಮ್ ಆಡಲು ಮತ್ತು ವಿಡಿಯೋ ನೋಡುವ ವಿನ್ಯಾಸವು ಇದರಲ್ಲಿದೆ.

ವೇಗದ ಪ್ರೋಸೆಸರ್

ಒಪ್ಪೋ A5 ಸ್ಮಾರ್ಟ್ ಫೋನ್ ನಿನಲ್ಲಿ ವೇಗದ ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, ಇದರಲ್ಲಿ 4 GB RAM ನೊಂದಿಗೆ ಸ್ನಾಪ್ ಡ್ರಾಗನ್ 450 ಪ್ರೋಸೆಸರ್ ಅನ್ನು ನೀಡಲಾಗಿದ್ದು, ಇದರೊಂದಿಗೆ 64GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಇದಲ್ಲದೇ 256 GB ವೆರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಡ್ಯುಯಲ್ ಕ್ಯಾಮೆರಾ

ಒಪ್ಪೋ A5 ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು, 13 MP + 2 MP ಕ್ಯಾಮೆರಾವನ್ನು ಹಿಂಭಾಗದಲ್ಲಿ ನೀಡಲಾಗಿದ್ದು, ಉತ್ತಮವಾದ ಫೋಟೋಗಳನ್ನು ಸೆರೆಹಿಡಿಯಲು ಇದು ಸಹಾಯವನ್ನು ಮಾಡಲಿದೆ. ಇದರೊಂದಿಗೆ ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ನೀಡಲಾಗಿದೆ. ಇದು ಹೊಸ ಆಯ್ಕೆಗಳನ್ನು ಹೊಂದಿದೆ.

ಫೇಷಿಯಲ್ ರೆಕಗ್ನಿಷನ್

ಇದಲ್ಲದೇ ಒಪ್ಪೋ A5 ಸ್ಮಾರ್ಟ್ ಫೋನಿನಲ್ಲಿ ಫೇಷಿಯಲ್ ರೆಕಗ್ನೀಷನ್ ಆಯ್ಕೆಯನ್ನು ನೀಡಲಾಗಿದ್ದು, ಇದಕ್ಕಾಗಿಯೇ ಮುಂಭಾಗದಲ್ಲಿ ನೋಚ್ ಅನ್ನು ನೀಡಲಾಗಿದ್ದು, ಬಳಕೆದಾರರಿಗೆ ಹೊಸ ಮಾದರಿಯ ಅನುಭವನ್ನು ನೀಡಲಾಗಿದೆ. ಅಲ್ಲದೇ ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 8.1 ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಕಲರ್ OS ಅನ್ನು ಕಾಣಬಹುದಾಗಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್?

ನೀಲಿ ಹಾಗೂ ಕೆಂಪು ಬಣ್ಣದಲ್ಲಿ ಮಾರುಕಟ್ಟೆಯ ಪ್ರಮುಖ ಆಕರ್ಷಣೆಯ ಫೋನ್‌ ಎಂದೆನೆಸಿಕೊಂಡಿದರುವ ಒಪ್ಪೊ ಎ5 ಸ್ಮಾರ್ಟ್‌ಪೊನ್ 4230ಎಂಎಎಚ್ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಪೇಟಿಎಂನಲ್ಲಿ 3000 ರು.ಗಳ ಕ್ಯಾಶ್‌ಬ್ಯಾಕ್ ಪಡೆಯುವ ಮೂಲಕ ಇದೀಗ ಮತ್ತಷ್ಟು ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್ಸ್‌ಗಳಿರುವ ಸ್ಮಾರ್ಟ್‌ಫೋನ್‌ ಖರೀದಿಸಲು ಸಾಧ್ಯವಾಗಿದೆ.


Have a great day!
Read more...

English Summary

The budget mid-range smartphone Oppo A5 is now selling with some excellent offers at Paytm Mall. to know more visit to kannada.gizbot.com