ಬರ್ತಿದೆ ಸ್ಯಾಮ್‌ಸಂಗ್‌ ಫೋಲ್ಡ್‌ನ ತದ್ರೂಪಿ..! ಕೇವಲ 399 ಡಾಲರ್‌ ಬೆಲೆಯಲ್ಲಿ..!


ನೀವು ಸ್ಯಾಮ್‌ಸಂಗ್ ಗೆಲಾಕ್ಸಿ ಫೋಲ್ಡ್‌ ಸ್ಮಾರ್ಟ್‌ಫೋನ್‌ ಖರೀದಿಸಲು ಹೆಚ್ಚಿನ ಆಸೆ ಹೊಂದಿರ್ತಿರಾ. ಆದರೆ, ನಿಮ್ಮ ಬಳಿ ಅಷ್ಟೊಂದು ಹಣವಿರಲ್ಲ. ನಿಮಗಾಗಿಯೇ ಪ್ಯಾಬ್ಲೊ ಎಸ್ಕೋಬಾರ್‌ನ ಸಹೋದರ ರಾಬರ್ಟೊ ಡಿ ಜೀಸಸ್ ಎಸ್ಕೋಬಾರ್ ಗವಿರಿಯಾ ಒಡೆತನದ ಟೆಕ್ ಕಂಪನಿ ಎಸ್ಕೋಬಾರ್ ಇಂಕ್ ಅದ್ಭುತವನ್ನು ನೀಡುತ್ತಿದೆ. ಆ ಅದ್ಭುತವೇ ಎಸ್ಕೋಬಾರ್ ಫೋಲ್ಡ್‌ 2 ಎಂದರೆ ತಪ್ಪಿಲ್ಲ. ಇದು ನಿಜವಾಗಿಯೂ ಸ್ಯಾಮ್‌ಸಂಗ್ ಕಿಲ್ಲರ್ ಫೋನ್ ಎಂದೇ ಕಾಣಿಸಿಕೊಂಡಿದ್ದು, ಗೆಲಾಕ್ಸಿ ಫೋಲ್ಡ್‌ ತರಹದ ವಿನ್ಯಾಸವನ್ನು ಹೊಂದಿದೆ. ನಾವಿಲ್ಲಿ ನಿಮಗೆ ಮಡಚಬಹುದಾದ ಫೋನ್‌ನ ಕೆಲವು ಪ್ರಮುಖ ಫೀಚರ್‌ಗಳನ್ನು ನೀಡುತ್ತಿದ್ದು, ಅದರಲ್ಲಿ ಹೆಚ್ಚಿನವು ಗೆಲಾಕ್ಸಿ ಫೋಲ್ಡ್‌ನಲ್ಲಿ ನೋಡಿದವುಗಳಿವೆ ಆಗಿವೆ.

Advertisement

ಗೆಲಾಕ್ಸಿ ಫೋಲ್ಡ್‌ನ ಅನುಕರಣೆ

ಎಸ್ಕೋಬಾರ್ ಫೋಲ್ಡ್‌ 2ರ ಮಾರ್ಕೆಟಿಂಗ್ ನಿರೂಪಣೆಯನ್ನು ನೋಡಿದರೆ ಸ್ಯಾಮ್‌ಸಂಗ್ ಗೆಲಾಕ್ಸಿ ಫೋಲ್ಡ್‌ನ ವಿನ್ಯಾಸದ ಅನುಕರಣೆಯಾಗಿದೆ. ಇದು ಕಳೆದ ವರ್ಷ ಸ್ಯಾಮ್‌ಸಂಗ್ ಫೋನ್‌ನಲ್ಲಿ ಇದ್ದ ಟೂ ಫೋಲ್ಡ್‌ ವಿನ್ಯಾಸ ಮತ್ತು ಐದು ಕ್ಯಾಮೆರಾಗಳು ಈ ಮೊಬೈಲ್‌ನಲ್ಲಿಯೂ ಇವೆ. ಕೆಲವು ವ್ಯತ್ಯಾಸವನ್ನು ಪ್ರದರ್ಶಿಸಲು ಮತ್ತು ಐಷಾರಾಮಿಯಾಗಿ ಕಾಣಲು ಚಿನ್ನದ ವಿನೈಲ್ ಚರ್ಮದೊಂದಿಗೆ ಎಸ್ಕೋಬಾರ್ ಇಂಕ್‌ನ ಬ್ರ್ಯಾಂಡಿಂಗ್‌ ಕಾಣಿಸಿಕೊಳ್ಳುತ್ತಿದೆ.

Advertisement
ಚೀನಾದಿಂದ ವಿನ್ಯಾಸ

ಪತ್ರಿಕಾ ಹೇಳಿಕೆಯಲ್ಲಿ, ಗವಿರಿಯಾ ಹೊಸ ಗುರಿಯೊಂದಿಗೆ ತಮ್ಮ ಮುಂದಿನ ನಡೆಯನ್ನು ನಿರ್ದಿಷ್ಟಪಡಿಸಿದರು. ಮತ್ತು ಎಸ್ಕೋಬಾರ್ ಫೋಲ್ಡ್‌ 2 ರ ಕೆಲವು ಭಾಗಗಳನ್ನು ಚೀನಾದಿಂದ ಪಡೆಯಲಾಗಿದೆ ಎಂದಿದ್ದಾರೆ. "ಈ ವರ್ಷ ಎಲೆಕ್ಟ್ರಾನಿಕ್ ಸಾಧನಗಳ ಓವರ್‌ಸ್ಟಾಕ್ ಕಿಂಗ್‌ಪಿನ್ ಆಗುವುದು ನಮ್ಮ ಗುರಿಯಾಗಿದೆ" ಎಂದು ಪ್ಯಾಬ್ಲೊ ಎಸ್ಕೋಬಾರ್‌ನ ಸಹೋದರ ಮತ್ತು ಎಸ್ಕೋಬಾರ್ ಇಂಕ್‌ನ ಸಂಸ್ಥಾಪಕ ಗವೇರಿಯಾ ಹೇಳಿದ್ದಾರೆ. ಈ ಎಲ್ಲಾ ಕಾರ್ಖಾನೆಗಳು ಹೆಚ್ಚಿನ ತಂತ್ರಜ್ಞಾನವನ್ನು ಹೊಂದಿವೆ, ಚೀನಾದಲ್ಲಿ ದ್ವಿತೀಯ ಹಂತದ ಕಾರ್ಖಾನೆಗಳಿಂದ ಯಾರು ಏನನ್ನೂ ಖರೀದಿಸುತ್ತಿಲ್ಲ. ನಾವು ಬೆಲೆಗಳನ್ನು ಕಡಿತಗೊಳಿಸುತ್ತೇವೆ ಮತ್ತು ಗ್ರಾಹಕರಿಗೆ ಎಸ್ಕೋಬಾರ್ ಬ್ರಾಂಡ್‌ನಡಿಯಲ್ಲಿ ನೇರ ರಿಯಾಯಿತಿಯನ್ನು ನೀಡುತ್ತೇವೆ ಎಂದರು.

ಸ್ಯಾಮ್‌ಸಂಗ್‌ ಗುರಿ

ಎಸ್ಕೋಬಾರ್ ಇಂಕ್ ಸಾಮ್ರಾಜ್ಯ ಸ್ಯಾಮ್‌ಸಂಗ್‌ನ್ನು ಮಣಿಸಲು ಯೂಟ್ಯೂಬ್‌ಗಾಗಿ "ರೆಸ್ಟ್ ಇನ್ ಪೀಸ್ ಸ್ಯಾಮ್‌ಸಂಗ್" ಎಂಬ ಪ್ರಚಾರ ವಿಡಿಯೋವನ್ನು ರಚಿಸಿದ್ದು, ಮಸುಕಾದ ವಿಡಿಯೋದಲ್ಲಿ "ಸ್ಯಾಮ್‌ಸಂಗ್ ಬದುಕುಳಿಯುವುದಿಲ್ಲ... ಪ್ಯಾಬ್ಲೊ ಇನ್ನೂ ಅಸಮಾಧಾನಗೊಂಡಿದ್ದಾನೆ" ಎಂಬ ವಾಯ್ಸ್‌ ಒವರ್‌ ಇದ್ದು, ಸ್ಯಾಮ್‌ಸಂಗೇ ಎಸ್ಕೋಬಾರ್‌ನ ಗುರಿ ಎಂಬುದು ಸ್ಪಷ್ಟವಾಗುತ್ತದೆ.

ವಿಶೇಷ ವೆಬ್‌ಸೈಟ್‌

ಇದಲ್ಲದೆ, ripsamsung.com ಎಂಬ ವಿಶೇಷ ಡೊಮೇನ್ ರಚಿಸಲಾಗಿದೆ, ಅದು ಫೋಲ್ಡ್‌ 2 ಫೋನ್‌ನ ಪ್ರೀಆರ್ಡರ್‌ ಪುಟಕ್ಕೆ ಮರುನಿರ್ದೇಶಿಸುತ್ತದೆ. ಪ್ರೀಆರ್ಡರ್‌ಗಳಿಗಾಗಿ ಫೋನ್ 399 ಡಾಲರ್‌ (ಸುಮಾರು 28,400 ರೂ.) ದರ ಹೊಂದಿದೆ, ಇದು ಯುಎಸ್‌ನಲ್ಲಿ ಸ್ಯಾಮ್‌ಸಂಗ್‌ ಗೆಲಾಕ್ಸಿ ಹೊಂದಿದ 1,980 ಡಾಲರ್‌ ಬೆಲೆಗಿಂತ ಬಹಳಷ್ಟು ಕಡಿಮೆಯಾಗಿದೆ.

ನೈಜತೆ ಬಗ್ಗೆ ಸಂಶಯ

ವಿನ್ಯಾಸಕ್ಕಿಂತ ಹೆಚ್ಚಾಗಿ, ಇದು ಎಸ್ಕೋಬಾರ್ ಫೋಲ್ಡ್‌ 2ರ ನೈಜತೆಯ ಬಗ್ಗೆ ಸಂದೇಹ ತರುತ್ತದೆ. ಆಂಡ್ರಾಯ್ಡ್ ಪೋಲಿಸ್ ಊಹಿಸಿದಂತೆ, ಇದು ಕೇವಲ ಗೆಲಾಕ್ಸಿ ಫೋಲಡ್‌ನ ಚೀನೀ ತದ್ರೂಪಿ ಆಗಿರಬಹುದು. ಕೆಲವು ಇ-ಕಾಮರ್ಸ್‌ ಮಳಿಗೆಗಳ ಮೂಲಕ 435.85 ಡಾಲರ್‌ಗೆ ಅವುಗಳನ್ನು ಮಾರಾಟ ಮಾಡಲಾಗುತ್ತಿದೆ.

ಇದೇ ಮೊದಲಲ್ಲ

ಎಸ್ಕೋಬಾರ್ ಇಂಕ್ ಜನಪ್ರಿಯ ಫೋನ್‌ನ ಅನುಕರಣೆಯನ್ನು ತಂದಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ಕಂಪನಿಯು ಫೋಲ್ಡ್ 1 ಅನ್ನು ತನ್ನ ಮೊದಲ ಮಡಚಬಹುದಾದ ಸ್ಮಾರ್ಟ್‌ಫೋನ್‌ನಂತೆ ತಂದಿತು, ಅದು 2018 ರಲ್ಲಿ ಬಿಡುಗಡೆಯಾದ ರಾಯಲ್ ಫ್ಲೆಕ್ಸ್‌ಪೈನ ರಿಬ್ರಾಂಡೆಡ್ ಆವೃತ್ತಿಯಲ್ಲದೇ ಬೇರೇನು ಆಗಿದ್ದಿಲ್ಲ.

Best Mobiles in India

English Summary

Pablo Escobar's Brother Launches Foldable Phone Similar To Galaxy Fold