ಮೂರನೇ ಸೆಲ್‌ನಲ್ಲಿ ಪೊಕೊ F1: ಬೇಡಿಕೆ ಕಮ್ಮಿ ಆಗಿಲ್ಲ, ಫಸ್ಟ್‌ ಬಂದವರಿಗೆ ಮಾತ್ರ..!


ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಹುಟ್ಟಿಸುವ ಮೂಲಕ, ಟಾಫ್ ಎಂಡ್ ಸ್ಮಾರ್ಟ್‌ಫೋನ್‌ಗಳಿಗೆ ಬಿಸಿ ಮಟ್ಟಿಸಿದ್ದ ಶಿಯೋಮಿ ಸಬ್ ಬ್ರಾಂಡ್ ಪೊಕೊ ಲಾಂಚ್ ಮಾಡಿರುವ ಪೊಕೊ F1 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯನ್ನು ಸೃಷ್ಠಿಸಿಕೊಂಡಿದೆ. ಅಲ್ಲದೇ ಮೊದಲ ಎರಡು ಸೇಲ್‌ಗಳಲ್ಲಿ ಕ್ಷಣ ಮಾತ್ರದಲ್ಲಿಯೇ ಈ ಸ್ಮಾರ್ಟ್ಫೋನ್ ಸೋಲ್ಡ್ ಔಟ್ ಆಗಿದೆ.

ಈ ಹಿನ್ನಲೆಯಲ್ಲಿ ಇಂದು ಮಧ್ಯಾಹ್ನ12 ಕ್ಕೆ ಫ್ಲಿಪ್‌ಕಾರ್ಟ್‌ ಮತ್ತು ಮಿ. ಕಾಮ್‌ನಲ್ಲಿ ಸೇಲ್‌ನಲ್ಲಿ ಪೊಕೊ F1 ಸ್ಮಾರ್ಟ್‌ಫೋನ್ ಮಾರಾಟವಾಗಲಿದ್ದು, ಇದು ಸಹ ಹೆಚ್ಚಿನ ಪ್ರಮಾಣದ ಬೇಡಿಕೆಯನ್ನು ಉಳಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಮೊದಲು ಬಂದವರಿಗೆ ಮಾತ್ರವೇ ಸ್ಮಾರ್ಟ್‌ಫೋನ್ ದೊರೆಯಲಿದೆ ಎನ್ನಲಾಗಿದೆ.

ನೋಚ್ ಡಿಸ್‌ಪ್ಲೇ:

6.18 ಇಂಚಿನ FHD+ ಗುಣಮಟ್ಟದ ಡಿಸ್‌ಪ್ಲೇಯನ್ನು ನೀಡಲಾಗಿದೆ ಇದರೊಂದಿಗೆ ನೋಚ್ ನೀಡಲಾಗಿದೆ. ನಿಮಗೆ ನೋಚ್ ಇಷ್ಟವಾಗದೆ ಇದ್ದರೆ ಅನ್ನು ತೆಗೆದು ಹಾಕುವ ಅವಕಾಶವು ಇದೆ. ಜೊತೆಗೆ ಇನ್‌ಫಾರೆಡ್ ಫೇಸ್‌ ಆನ್‌ಲಾಕ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಇದು ಕತ್ತಲೆಯಲ್ಲಿಯೂ ನಿಮ್ಮ ಫೇಸ್‌ ಅನ್ನು ಗುರುತಿಸಿ ಫೇಸ್‌ಆನ್‌ಲಾಕ್ ಮಾಡಲಿದೆ ಎನ್ನಲಾಗಿದೆ.

ವೇಗದ ಪ್ರೋಸೆಸರ್:

ಪೊಕೊ FI ಸ್ಮಾರ್ಟ್‌ಫೋನ್ ಗೇಮರ್‌ಗಳಿಗೆ ವಿನ್ಯಾಸ ಮಾಡಲಾಗಿದ್ದು, ಇದಕ್ಕಾಗಿಯೇ ಸ್ನಾಪ್‌ಡ್ರಾಗನ್ 845 ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ಜೊತೆಗೆ ಆಡ್ರಿನೋ 630 GPUವನ್ನು ನೀಡಲಾಗಿದ್ದು, 2.8GHz ವೇಗದ CPUವ್ನು ನೀಡಲಾಗಿದೆ.

ಬಿಗ್ ಬ್ಯಾಟರಿ:

ಪೊಕೊ FI ಸ್ಮಾರ್ಟ್‌ಫೋನಿನಲ್ಲಿ ದೊಡ್ಡ ಬ್ಯಾಟರಿ ನೀಡಲಾಗಿದೆ. 4000mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇದು ಹೆಚ್ಚಿನ ಪ್ರಮಾಣದ ಬಾಳಿಕೆಯನ್ನು ನೀಡಲಿದೆ. ವೇಗವಾಗಿ ಚಾರ್ಜ್ ಆಗುವ ಸಲುವಾಗಿ ಕ್ವಿಕ್ ಚಾರ್ಜ್ 3.0ವನ್ನು ಅಳವಡಿಸಲಾಗಿದೆ.

ಬೆಸ್ಟ್ ಸೆಲ್ಪಿ ಕ್ಯಾಮೆರಾ:

ಪೊಕೊ FI ಸ್ಮಾರ್ಟ್‌ಫೋನಿನಲ್ಲಿ 20 MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇದರಿಂದಾಗಿ ಬೆಸ್ಟ್ ಸೆಲ್ಪಿಗಳನ್ನು ತೆಗೆಯಬಹುದಾಗಿದೆ. ಇದಕ್ಕದಾಗಿ AI ಬ್ಯೂಟಿಫೈ ಅನ್ನು ಅಳವಡಿಸಲಾಗಿದ್ದು, ಬಳಕೆದಾರರು ಉತ್ತಮ ಸೆಲ್ಫಿಗಳನ್ನು ಕ್ಲಿಕಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

ಪೊಕೊ F1 ಸ್ಮಾರ್ಟ್‌ಫೋನ್ ಬೆಲೆ:

ಒಟ್ಟು ನಾಲ್ಕು ಆವೃತ್ತಿಯಲ್ಲಿ ಪೊಕೊ FI ಸ್ಮಾರ್ಟ್‌ಫೋನ್‌ ಮಾರಾಟವಾಗಲಿದೆ.

  • 6GB RAM + 64GB ಕೇವಲ ರೂ.20,999ಕ್ಕೆ
  • 6GB RAM + 128GB ಆವೃತ್ತಿಯೂ 23,999ಕ್ಕೆ
  • 8GB RAM + 256GB ರೂ.28,999ಕ್ಕೆ ಮಾರಾಟವಾಗಲಿದೆ.
  • 8GB RAM + 256GB ಆವೃತ್ತಿಯೂ ರೂ.29999ಕ್ಕೆ ಲಭ್ಯವಿರಲಿದೆ.


Read More About: poco f1 poco mi Flipkart
Have a great day!
Read more...

English Summary

Poco F1 Third Flash Sale at 12pm Today on Mi.com, Flipkart. to know more visit kannada.gizbot.com