ಪೊಕೊ X2 ಫಸ್ಟ್‌ ಲುಕ್: ಕಣ್ಮನ ಸೆಳೆಯುವ ಡಿಸೈನ್, 64ಎಂಪಿ ಕ್ಯಾಮೆರಾ!


ಪೊಕೊ ಪ್ರತ್ಯೇಕ ಮೊಬೈಲ್ ಬ್ರ್ಯಾಂಡ್‌ ಆಗಿ ಪರಿಚಿತವಾಗದ ಮೇಲೆ ನಂತರ ಬಿಡುಗಡೆ ಮಾಡಿರುವ ಮೊದಲ ಸ್ಮಾರ್ಟ್‌ಫೋನ್ ಪೊಕೊ ಎಕ್ಸ್‌2 ಇದೀಗ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಕಾರಣ ಈ ಹಿಂದಿನ ಪೊಕೊ ಎಫ್‌1 ಜನಪ್ರಿಯತೆ, ಪೊಕೊ ಎಫ್‌1 ಫೋನಿನ ರೀತಿ ಫೊಕೊ ಎಕ್ಸ್2 ಫೋನ್ ಸಹ ಅತ್ಯುತ್ತಮ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿದ್ದು, ಪೊಕೊ ಬ್ರ್ಯಾಂಡ್‌ಗೆ ಗ್ರ್ಯಾಂಡ್‌ ಓಪೆನಿಂಗ್ ಸಿಕ್ಕಂತಾಗಿದೆ.

Advertisement

ಇನ್ನು ಪೊಕೊ ಎಕ್ಸ್‌2 ಸ್ಮಾರ್ಟ್‌ಫೋನ್, ರಿಯಲ್‌ ಮಿ ಎಕ್ಸ್‌2 ಫೋನಿಗೆ ನೇರ ಪೈಪೋಟಿ ನೀಡುವ ಲಕ್ಷಣಗಳನ್ನು ಹೊಂದಿದೆ. ಈ ಫೋನ್ ಹಿಂಬದಿ ನಾಲ್ಕು ಕ್ಯಾಮೆರಾ ಸೆಟ್‌ಅಪ್‌ ಪಡೆದಿದ್ದು, ಹಾಗೆಯೆ ಡ್ಯುಯಲ್ ಸೆಲ್ಫಿ ಕ್ಯಾಮೆರಾ ಸೌಲಭ್ಯವನ್ನು ಪಡೆದಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 730 ಪ್ರೊಸೆಸರ್‌ ಇದ್ದು, ಅಥ್ಲೇಟಿಕ್ ಬ್ಲೂ, ಮ್ಯಾಟ್ರಿಕ್ಸ್ ಪರ್ಪಲ್ ಮತ್ತು ಫಿನಿಕ್ಸ್‌ ರೆಡ್ ಬಣ್ಣಗಳ ಆಯ್ಕೆಗಳನ್ನು ಹೊಂದಿದೆ. ಉಳಿದಂತೆ ಪೊಕೊ ಎಕ್ಸ್‌2 ಸ್ಮಾರ್ಟ್‌ಫೋನ್ ಫೀಚರ್ಸ್‌ಗಳ ಹೇಗಿವೆ. ಡಿಸೈನ್ ಹೇಗಿದೆ ಎನ್ನುವ ಬಗ್ಗೆ ಫಸ್ಟ್‌ ಲುಕ್ ರಿಪೋರ್ಟ್‌ ಇಲ್ಲಿದೆ. ಮುಂದೆ ಓದಿರಿ.

Advertisement
ಡಿಸ್‌ಪ್ಲೇ ರಚನೆ ಮತ್ತು ಡಿಸೈನ್

ಪೊಕೊ X2 ಸ್ಮಾರ್ಟ್‌ಫೋನ್ ಈ ಹಿಂದಿನ ಪೊಕೊ ಎಫ್‌1 ಫೋನಿಗಿಂತ ಆಕರ್ಷಕ ಡಿಸೈನ್ ಪಡೆದಿದೆ. ಈ ಫೋನ್ 1080 x 2400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದ್ದು, 6.67 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯ ಅನುಪಾತವು 20:9 ಆಗಿದ್ದು, ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ನಡುವಿನ ಅಂತರವು ಶೇ.84.8% ಆಗಿದೆ. ಇನ್ನು ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 395ppi ಆಗಿದ್ದು, ಡಿಸ್‌ಪ್ಲೇಯು 120Hz ರೀಫ್ರೇಶಿಂಗ್ ರೇಟ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಹಾಗೆಯೇ ಗೊರಿಲ್ಲಾ ಗ್ಲಾಸ್ 5 ಸಹ ಪಡೆದಿದೆ. ವಿಡಿಯೊ ವೀಕ್ಷಣೆ ಹಾಗೂ ಗೇಮಿಂಗ್‌ಗೆ ಅತ್ಯುತ್ತಮ ಪ್ಲಾಟ್‌ಫಾರ್ಮ್ ಇದಾಗಿದೆ ಎನ್ನಬಹುದು.

ಪ್ರೊಸೆಸರ್ ಸಾಮರ್ಥ್ಯ ಹೇಗಿದೆ

ಪೊಕೊ X2 ಸ್ಮಾರ್ಟ್‌ಫೋನ್ ವೇಗದ ಸ್ನ್ಯಾಪ್‌ಡ್ರಾಗನ್ 730G ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದೆ. ಪ್ರೊಸೆಸರ್‌ಗೆ ಪೂರಕವಾಗಿ ಆಂಡ್ರಾಯ್ಡ್‌ 10 ಓಎಸ್‌ ಸಪೋರ್ಟ್ ಹೊಂದಿದೆ. ಇದರೊಂದಿಗೆ ಅಡ್ರೆನೊ 618 ಗ್ರಾಫಿಕ್ಸ್‌ ಇದ್ದು, ಒಟ್ಟು ಮೂರು ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದೆ. ಅಉವಗಳು ಕ್ರಮವಾಗಿ 6GB RAM + 64GB, 6GB RAM + 128GB ಮತ್ತು 8GB RAM + 256GB ಸಾಮರ್ಥ್ಯದಲ್ಲಿವೆ. ಇನ್ನು ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ಸಹ ಇದೆ. ಮೂರು ವೇರಿಯಂಟ್ ಆಯ್ಕೆ ನೀಡಿರುವುದು ಗ್ರಾಹಕರಿಗೆ ಹೆಚ್ಚಿನ ಆಯ್ಕೆ ನೀಡುತ್ತದೆ.

64ಎಂಪಿ ಕ್ಯಾಮೆರಾ

ಪೊಕೊ X2 ಸ್ಮಾರ್ಟ್‌ಫೋನ್ ಸದ್ಯ ಟ್ರೆಂಡಿಂಗ್‌ನಲ್ಲಿರುವ ಕ್ವಾಡ್‌ ಕ್ಯಾಮೆರಾ ರಚನೆ ಪಡೆದಿದೆ. ಮುಖ್ಯ ಕ್ಯಾಮೆರಾವು ಸೋನಿಯ IMX686 ಸೆನ್ಸಾರ್ ಒಳಗೊಂಡ 64ಎಂಪಿ ಕ್ಯಾಮೆರಾ ಆಗಿದೆ. ಹಾಗೆಯೆ ಸೆಕೆಂಡರಿ ಕ್ಯಾಮೆರಾವು ಅಲ್ಟ್ರಾ ವೈಲ್ಡ್‌ ಆಂಗಲ್‌ನ 8ಎಂಪಿ ಸೆನ್ಸಾರ್ ಸಾಮರ್ಥ್ಯ ಪಡೆದಿದೆ. ಹಾಗೆಯೇ ತೃತೀಯ ಮತ್ತು ನಾಲ್ಕನೇ ಕ್ಯಾಮೆರಾಗಳು 2ಎಂಪಿ ಸೆನ್ಸಾರ್ ಸಾಮರ್ಥ್ಯ ಪಡೆದಿವೆ. ಇನ್ನು ಮುಂಬದಿಯಲ್ಲಿ ಡ್ಯುಯಲ್ ಸೆಲ್ಫಿ ಕ್ಯಾಮೆರಾ ಸೌಲಭ್ಯ ಹೊಂದಿದೆ. ಮತ್ತು ಅವುಗಳು 20ಎಂಪಿ ಮತ್ತು 2ಎಂಪಿ ಸೆನ್ಸಾರ್ ಹೊಂದಿವೆ. 64ಎಂಪಿ ಕ್ಯಾಮೆರಾವೇ ಮುಖ್ಯ ಅಟ್ರ್ಯಾಕ್ಷನ್ ಆಗಿ ಕಾಣುತ್ತದೆ.

ಬ್ಯಾಟರಿ ಬ್ಯಾಕ್‌ಅಪ್‌ ಪವರ್

ಪೊಕೊ X2 ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿದ್ದು, ಇದರೊಂದಿಗೆ 27W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಪಡೆದುಕೊಂಡಿದೆ. ಇದರಿಂದ ಫೋನ್ ವೇಗದ ಚಾರ್ಜಿಂಗ್ ಆಯ್ಕೆಯನ್ನು ಬೆಂಬಲಿಸಲಿದೆ. ಬ್ಯಾಟರಿ ಬಾಳಿಕೆ ಇನ್ನಷ್ಟು ಹೆಚ್ಚಿಸಬೇಕಿತ್ತು ಎಂದು ಅನಿಸುತ್ತದೆ. ಇನ್ನು ಈ ಫೋನಿನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್, ವೈಫೈ 802.11ac, ಎನ್‌ಎಫ್‌ಸಿ, ಜಿಪಿಎಸ್‌, ಯುಎಸ್‌ಬಿ, ಬ್ಲೂಟೂತ್, ಆಯ್ಕೆಗಳು ಇವೆ.

ಬೆಲೆ ಮತ್ತು ಲಭ್ಯತೆ

ದೇಶಿಯ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಪೊಕೊ ಎಕ್ಸ್‌2 ಸ್ಮಾರ್ಟ್‌ಫೋನ್ ಒಟ್ಟು ಮೂರು ವೇರಿಯಂಟ್‌ ಮಾದರಿಗಳಲ್ಲಿ ಲಾಂಚ್ ಆಗಿದೆ. ಇನ್ನು ಈ ಫೋನಿನ 6GB RAM + 64GB ಬೇಸಿಕ್ ವೇರಿಯಂಟ್ ಬೆಲೆಯು 15,999ರೂ ಆಗಿದೆ. ಇನ್ನು 6GB RAM + 128GB ಸ್ಟೋರೇಜ್ ವೇರಿಯಂಟ್ ಬೆಲೆಯು 16,999ರೂ ಆಗಿದ್ದು, 8GB RAM + 256GB ಸಾಮರ್ಥ್ಯದ ಹೈಎಂಡ್ ವೇರಿಯಂಟ್ ಬೆಲೆಯು 19,999ರೂ.ಗಳಾಗಿದೆ. ಇನ್ನು ಪೊಕೊ ಎಕ್ಸ್‌2 ಫೋನ್ ಸೇಲ್ ಇದೇ ಫೆಬ್ರುವರಿ 11ರಿಂದ ಶುರುವಾಗಲಿದೆ.

ಕೊನೆಯ ಮಾತು

ಪೊಕೊ ಎಕ್ಸ್‌2 ಸ್ಮಾರ್ಟ್‌ಫೋನ್ ಹೈ ಎಂಡ್‌ ಫೀಚರ್ಸ್‌ಗಳನ್ನು ಹೊಂದಿದೆ. ಹಾಗೆಯೇ ಮೂರು ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. ಕ್ಯಾಮೆರಾ, ಪ್ರೊಸೆಸರ್, ಡಿಸೈನ್ ಆಕರ್ಷಕವಾಗಿವೆ. ಆದರೆ ಬ್ಯಾಟರಿ ಪವರ್ ಇನ್ನಷ್ಟು ಹೆಚ್ಚಿಸಬಹುದಿತ್ತು ಅನಿಸುತ್ತದೆ. ಏಕೆಂದರೇ ದೈತ್ಯ ಫೀಚರ್ಸ್‌ಗಳಿರುವ ಫೋನ್ ಇದಾಗಿದೆ. ಉಳಿದಂತೆ ಮೀಡ್‌ರೆಂಜ್ ಬೆಲೆಯಲ್ಲಿ ಇದು ಬೆಸ್ಟ್ ಫೋನ್ ಆ ಗಿದೆ.

Best Mobiles in India

English Summary

Poco X2 is not the successor to Poco F1 and it shows when you use the device.