ರಿಯಲ್ ಮಿ 6 ಪ್ರೊ ವಿಮರ್ಶೆ: ಮೀಡ್‌ರೇಂಜ್‌ ಬೆಲೆಗೆ ಆಲ್‌ರೌಂಡ್‌ ಫೋನ್‌!


ಇತ್ತೀಚಿಗೆ ಚೀನಾ ಮೂಲದ 'ರಿಯಲ್‌ ಮಿ' ಸಂಸ್ಥೆಯು ಬಿಡುಗಡೆ ಮಾಡಿರುವ 'ರಿಯಲ್ ಮಿ 6 ಪ್ರೊ' ಸ್ಮಾರ್ಟ್‌ಫೋನ್ ದೇಶಿಯ ಗ್ರಾಹಕರನ್ನು ಸೆಳೆದಿದೆ. ಸದ್ಯ ಟ್ರೆಂಡಿಂಗ್‌ನಲ್ಲಿರುವ ಕ್ವಾಡ್‌ ಕ್ಯಾಮೆರಾ, ಬಿಗ್ ಬ್ಯಾಟರಿ, ವೇಗದ ಪ್ರೊಸೆಸರ್ ಫೀಚರ್ಸ್‌ಗಳನ್ನು ಒಳಗೊಂಡಿರುವ ಈ ಫೋನ್ ಇದೇ ಮಾರ್ಚ್ 13ರಂದು ಫ್ಲಿಪ್‌ಕಾರ್ಟ್‌ನಲ್ಲಿ ಮೊದಲ ಸೇಲ್ ಕಂಡಿದೆ. ಗ್ರಾಹಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿವೆ.

Advertisement

ರಿಯಲ್ ಮಿ 6 ಪ್ರೊ ಸ್ಮಾರ್ಟ್‌ಫೋನ್ ಮುಖ್ಯ ಕ್ಯಾಮೆರಾ, 90Hz ಡಿಸ್‌ಪ್ಲೇ ರಿಫ್ರೇಶ್‌ ರೇಟ್, 30W ಫಾಸ್ಟ್ ಚಾರ್ಜಿಂಗ್, ಸ್ನ್ಯಾಪ್‌ಡ್ರಾಗನ್ 720 ಪ್ರೊಸೆಸರ್, ಆಂಡ್ರಾಯ್ಡ್ 10 ಓಎಸ್‌ ದೇಶಿಯ ನ್ಯಾವಿಕ್ ಜಿಪಿಎಸ್ ತಂತ್ರಜ್ಞಾನದ ಫೀಚರ್ಸ್‌ಗಳನ್ನು ಹೊಂದಿದ್ದು, ಪೊಕೊ ಎಕ್ಸ್‌2 ಸ್ಮಾರ್ಟ್‌ಫೋನಿಗೆ ನೇರವಾಗಿ ಫೈಟ್ ನೀಡುವ ಸೂಚನೆಯನ್ನು ಹೊರಹಾಕಿದೆ. ಬೆಲೆಯಲ್ಲಿಯೂ ಗ್ರಾಹಕ ಸ್ನೇಹಿಯಾಗಿ ಕಾಣಿಸಿಕೊಂಡಿರುವ ಈ ರಿಯಲ್‌ ಮಿ 6 ಪ್ರೊ ಸ್ಮಾರ್ಟ್‌ಫೋನಿನ ಫೀಚರ್ಸ್‌ಗಳ ಕಾರ್ಯವೈಖರಿ ಹೇಗಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

Advertisement
ಡಿಸ್‌ಪ್ಲೇ ಡಿಸೈನ್ ಹೇಗಿದೆ

ರಿಯಲ್‌ ಮಿ 6 ಪ್ರೊ ಸ್ಮಾರ್ಟ್‌ಫೋನ್ 1080x2400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.6 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಹೊಂದಿದೆ. ವಿಶಾಲ ಡಿಸ್‌ಪ್ಲೇ ಲುಕ್ ವಿಡಿಯೊ ವೀಕ್ಷಣೆಗೆ ಬೆಸ್ಟ್ ಆಗಿದೆ. ಇದರೊಂದಿಗೆ ಡಿಸ್‌ಪ್ಲೇಯು 90Hz ರಿಫ್ರೇಶ್‌ ರೇಟ್ ಸಾಮರ್ಥ್ಯವನ್ನು ಪಡೆದಿದ್ದು, ಸ್ಕ್ರೀನ್ ಆಪರೇಟಿಂಗ್‌ನಲ್ಲಿ ವೇಗ ಕಾಣಿಸುತ್ತದೆ. ಹಾಗೆಯೇ ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ನಡುವಿನ ಅಂತರ ಶೇ. 90.6% ಆಗಿದೆ. ಡಿಸ್‌ಪ್ಲೇಯಲ್ಲಿ ಪಂಚ್ ಹೋಲ್ ಕ್ಯಾಮೆರಾ ಮಾದರಿ ಇದ್ದು, ಸ್ಕ್ರೀನ್ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ 5 ಅನ್ನು ಹೊಂದಿದೆ.

ಪ್ರೊಸೆಸರ್ ಬಲವೇನು

ರಿಯಲ್‌ ಮಿ 6 ಪ್ರೊ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 720 ಪ್ರೊಸೆಸರ್ ಅನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 10 ಓಎಸ್‌ ಮತ್ತು ರಿಯಲ್ ಮಿ UI ಬೆಂಬಲ ಪಡೆದಿದೆ. ಇತ್ತೀಚಿನ ಆಂಡ್ರಾಯ್ಡ 10 ಓಎಸ್‌ ಇರುವುದರಿಂದ ಸೆಟ್ಟಿಂಗ್‌ನಲ್ಲಿ ಸಾಕಷ್ಟು ಹೊಸತನಗಳು ಕಾಣಿಸುತ್ತವೆ. ಇದರ ಜೊತೆಗೆ 6GB+64GB, 6GB + 128GB ಮತ್ತು 8RAM + 128GB, ಆಂತರಿಕ ಸ್ಟೋರೇಜ್ನ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ಒದಗಿಸಲಾಗಿದೆ.

ಕ್ವಾಡ್‌ ಕ್ಯಾಮೆರಾ ವಿಶೇಷ

ರಿಯಲ್‌ ಮಿ 6 ಪ್ರೊ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಕ್ವಾಡ್‌ ಕ್ಯಾಮೆರಾ ರಚನೆಯನ್ನು ಹೊಂದಿದೆ. ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, ಸೆಕೆಂಡರಿ ಕ್ಯಾಮೆರಾವು 12ಎಂಪಿ ಸೆನ್ಸಾರ್‌ನ ಅಲ್ಟ್ರಾ ವೈಲ್ಡ್‌ ಆಂಗಲ್ ಲೆನ್ಸ್‌ ಹೊಂದಿದೆ. ಪ್ರಸ್ತುತ 64ಎಂಪಿ ಸೆನ್ಸಾರ್ ಟ್ರೆಂಡಿಂಗ್‌ನಲ್ಲಿದೆ. ಇನ್ನು ತೃತೀಯ ಕ್ಯಾಮೆರಾ 8ಎಂಪಿ ಸೆನ್ಸಾರ್ ಹಾಗೂ ನಾಲ್ಕನೇ ಕ್ಯಾಮೆರಾವು 2ಎಂಪಿ ಸೆನ್ಸಾರ್ ಪಡೆದಿದೆ. ಸೆಲ್ಫಿ ಕ್ಯಾಮೆರಾವು ಡ್ಯುಯಲ್ ಪಂಚ್ ಹೋಲ್ ಕ್ಯಾಮೆರಾ ಹೊಂದಿದ್ದು, ಅವುಗಳು 16ಎಂಪಿ ಮತ್ತು 8ಎಂಪಿ ಸೆನ್ಸಾರ್‌ನಲ್ಲಿವೆ. ಸ್ಲೋ ಮೋಷನ್ ವಿಡಿಯೊ, ಟ್ರೈಪಾಡ್‌ ಮೋಡ್, ಅಲ್ಟ್ರಾ ನೈಟ್‌ ಸ್ಕೆಪ್ ಮೋಡ್, ಎಕ್ಸ್‌ಪರ್ಟ್ ಮೋಡ್ ಹಾಗೂ ಫ್ರೇಮ್ ಸ್ಥಿರತೆಯ ಫೀಚರ್ ಹೊಂದಿದೆ.

ಬ್ಯಾಟರಿ ಲೈಫ್ ಮತ್ತು ಇತರೆ

ರಿಯಲ್‌ ಮಿ 6 ಪ್ರೊ ಸ್ಮಾರ್ಟ್‌ಫೋನ್ 4300mAh ಸಾಮರ್ಥ್ಯವನ್ನು ಒದಗಿಸಲಾಗಿದೆ. ವೇಗದ ಚಾರ್ಜಿಂಗ್‌ಗಾಗಿ 30W ಸಾಮರ್ಥ್ಯದ ಫ್ಲ್ಯಾಶ್‌ ಫಾಸ್ಟ್‌ ಚಾರ್ಜಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ. ಹಾಗೆಯೇ ಅಲ್ಟ್ರಾ ಕಿನರ್ ಸೌಂಡ್ ಸ್ಪೀಕರ್, ಪ್ಲೇಪುಲ್ ಫೀಚರ್ಸ್‌, ವೈಫೈ, ಬ್ಲೂಟೂತ್, ಪರ್ಸನೆನಲ್ ಮಾಹಿತಿ ರಕ್ಷಣೆ, ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ ಇಡಲು DocValt ಆಯ್ಕೆ, ವಿಡಿಯೊ ಎಡಿಟಿಂಗ್ ಆಪ್ ನಂತಹ ಇತ್ತೀಚಿನ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ರಿಯಲ್‌ ಮಿ 6 ಪ್ರೊ ಸ್ಮಾರ್ಟ್‌ಫೋನ್ ಮೂರು ವೇರಿಯಂಟ್‌ಗಳಲ್ಲಿ ಬಿಡುಗಡೆ ಆಗಿದೆ. ಆರಂಭಿಕ 6GB+64GB ವೇರಿಯಂಟ್ ಬೆಲೆಯು 16,999 ಆಗಿದೆ. ಹಾಗೆಯೇ 6GB + 128GB ವೇರಿಯಂಟ್ ಬೆಲೆಯು 17,999ರೂ. ಆಗಿದ್ದು, 8RAM + 128GB ಸ್ಟೋರೇಜ್‌ನ ಹೈ ಎಂಡ್ ವೇರಿಯಂಟ್‌ ಬೆಲೆಯು 17,999ರೂ. ಆಗಿದೆ.

ಕೊನೆಯ ಮಾತು

ರಿಯಲ್‌ ಮಿ 6 ಪ್ರೊ ಸ್ಮಾರ್ಟ್‌ಫೋನ್ ಕ್ಯಾಮೆರಾ, ಪ್ರೊಸೆಸರ್, ಡಿಸೈನ್, ಡಿಸ್‌ಪ್ಲೇ ರೀಫ್ರೇಶ್‌ ರೇಟ್‌, ಬ್ಯಾಟರಿ ಫೀಚರ್ಸ್‌ಗಳಲ್ಲಿ ಹೊಸತನಗಳೆನು ಇಲ್ಲ. ಆದರೆ ಪ್ರಸ್ತುತ ಚಾಲ್ತಿಯಲ್ಲಿರುವ ಆಕರ್ಷಕ ಟ್ರೆಂಡಿಂಗ್‌ನಲ್ಲಿರುವ 64ಎಂಪಿ ಕ್ಯಾಮೆರಾ, ಪಂಚ್ ಹೋಲ್ ಡಿಸ್‌ಪ್ಲೇ ಗಳಂತಹ ಫೀಚರ್ಸ್‌ಗಳು ಈ ಪೋನಿನಲ್ಲಿವೆ ಎನ್ನುವುದು ಪ್ಲಸ್‌ ಪಾಯಿಂಟ್‌ ಆಗಿದೆ. ಮೀಡ್‌ರೇಂಜ್‌ ಬೆಲೆಯಲ್ಲಿ ಉತ್ತಮ ಸ್ಮಾರ್ಟ್‌ಫೋನ್ ಎಂದು ಹೇಳಬಹುದು.

Best Mobiles in India

English Summary

The is available with 6GB RAM + 64GB storage, 6GB RAM + 128GB storage and 8GB RAM + 128GB storage options.