ರಿಯಲ್‌ ಮಿ 6 ಪ್ರೊ VS ರೆಡ್ಮಿ ನೋಟ್ 8 ಪ್ರೊ: ಯಾವುದು ಬೆಸ್ಟ್?


ರಿಯಲ್ ಮಿ ಸಂಸ್ಥೆಯು ಹೊಸದಾಗಿ ರಿಯಲ್ ಮಿ 6 ಸ್ಮಾರ್ಟ್‌ಫೋನ್‌ ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯು ರಿಯಲ್ ಮಿ 6 ಮತ್ತು ರಿಯಲ್ ಮಿ 6 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ. ಸದ್ಯ ಪ್ರೊ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಡಿಮ್ಯಾಂಡ್ ಹೆಚ್ಚಿದ್ದು, ಈ ನಿಟ್ಟಿನಲ್ಲಿ ಹೊಸ ರಿಯಲ್ ಮಿ 6 ಪ್ರೊ ಫೋನ್ ನೇರವಾಗಿ ಶಿಯೋಮಿಯ ರೆಡ್ಮಿ ನೋಟ್ 8 ಪ್ರೊ ಫೋನಿಗೆ ಫೈಟ್‌ ನೀಡುವ ಲಕ್ಷಣಗಳನ್ನು ಹೊಂದಿದೆ.

Advertisement

ರಿಯಲ್‌ ಮಿ 6 ಪ್ರೊ ಮತ್ತು ರೆಡ್ಮಿ ನೋಟ್ 8 ಪ್ರೊ ಎರಡು ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳು ಬಹುತೇಕ ಸಾಮತ್ಯೆ ಪಡೆದಿದೆ. ಆದರೂ ಫ್ಲ್ಯಾಗ್‌ಶಿಪ್ ಮಾದರಿಯ ಈ ಎರಡು ಭಿನ್ನತೆಗಳನ್ನು ಹೊಂದಿವೆ. 64ಎಂಪಿ ಕ್ಯಾಮೆರಾ, ಆಂಡ್ರಾಯ್ಡ್ 10 ಓಎಸ್‌ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿರುವ ಈ ಎರಡು ಸ್ಮಾರ್ಟ್‌ಫೋನ್‌ಗಳು ಪ್ರೊಸೆಸರ್, ಬ್ಯಾಟರಿ, ಚಾರ್ಜಿಂಗ್ ಸೌಲಭ್ಯ ಸೇರಿದಂತೆ ಬೆಲೆಯಲ್ಲಿಯೂ ಭಿನ್ನತೆಗಳಿವೆ. ಇನ್ನುಳಿದಂತೆ ರಿಯಲ್ ಮಿ 6 ಪ್ರೊ ಮತ್ತು ರೆಡ್ಮಿ ನೋಟ್ 8 ಪ್ರೊ ಫೋನ್‌ಗಳ ಫೀಚರ್ಸ್‌ಗಳು ಹೇಗಿವೆ? ಪ್ರಮುಖ ಭಿನ್ನತೆಗಳೆನು? ಎನ್ನುವ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

Advertisement
ಡಿಸ್‌ಪ್ಲೇ ಹೇಗಿದೆ

ರಿಯಲ್‌ ಮಿ 6 ಪ್ರೊ ಸ್ಮಾರ್ಟ್‌ಫೋನ್ 1080×2400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.6 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಹೊಂದಿದೆ. ಇದರೊಂದಿಗೆ ಡಿಸ್‌ಪ್ಲೇಯು 90Hz ರಿಫ್ರೇಶ್‌ ರೇಟ್ ಸಾಮರ್ಥ್ಯವನ್ನು ಪಡೆದಿದ್ದು, ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ನಡುವಿನ ಅಂತರ ಶೇ. 90.6% ಆಗಿದೆ. ಪಂಚ್ ಹೋಲ್ ಡಿಸ್‌ಪ್ಲೇ ಮಾದರಿಯ ಇದ್ದು, ಸ್ಕ್ರೀನ್ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ 5 ಅನ್ನು ಹೊಂದಿದೆ.

ರೆಡ್ಮಿ ನೋಟ್ 8 ಪ್ರೊ ಸ್ಮಾರ್ಟ್‌ಫೋನ್ 6.53 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಇದರ ಡಿಸ್‌ಪ್ಲೇಯು 1080×2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಡಿಸ್‌ಪ್ಲೇಯ ಪ್ರಖರತೆ ಅತ್ಯುತ್ತಮವಾಗಿದ್ದು, ಬಿಸಿಲಿನಲ್ಲಿಯೂ ಡಿಸ್‌ಪ್ಲೇ ಉತ್ತಮವಾಗಿ ಕಾಣಿಸುತ್ತದೆ. ಹಾಗೆಯೇ ಡಿಸ್‌ಪ್ಲೇಯು HDR ಬೆಂಬಲವನ್ನು ಒಳಗೊಂಡಿದೆ. ಗೇಮಿಂಗ್‌ಗೆ ಉತ್ತಮ ಪ್ಲಾಟ್‌ಫಾರ್ಮ್‌ ಹೊಂದಿದೆ ಹಾಗೂ ಗೊರಿಲ್ಲಾ ಗ್ಲಾಸ್ ರಕ್ಷಣೆ ಪಡೆದಿದೆ.

ಪ್ರೊಸೆಸರ್ ಕಾರ್ಯ

ರಿಯಲ್‌ ಮಿ 6 ಪ್ರೊ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 720 ಪ್ರೊಸೆಸರ್ ಅನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 10 ಓಎಸ್‌ ಮತ್ತು ರಿಯಲ್ ಮಿ UI ಬೆಂಬಲ ಪಡೆದಿದೆ. 6GB+64GB, 6GB + 128GB ಮತ್ತು 8RAM + 128GB, ಆಂತರಿಕ ಸ್ಟೋರೇಜ್ನ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ಒದಗಿಸಲಾಗಿದೆ.

'ರೆಡ್ಮಿ ನೋಟ್ 8 ಪ್ರೊ' ಸ್ಮಾರ್ಟ್‌ಫೋನ್ 'ಮೀಡಿಯಾ ಟೆಕ್ ಹಿಲಿಯೊ G90T' ಪ್ರೊಸೆಸರ್‌ ಸಾಮರ್ಥ್ಯವನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ MIUI 10 ಆಧಾರಿತ ಆಂಡ್ರಾಯ್ಡ್‌ 9 ಪೈ ಓಎಸ್‌ ಪಡೆದುಕೊಂಡಿದೆ. ಹೆಚ್ಚು ಡೇಟಾ ಬೇಡುವ ಗೇಮ್ಸ್‌ಗಳಿಗೆ ಅತ್ಯುತ್ತಮ ಪ್ಲಾಟ್‌ಫಾರ್ಮ್‌ ಒದಗಿಸಲಿದ್ದು, ಮಲ್ಟಿಟಾಸ್ಕ್‌ ಕೆಲಸಗಳು ಸಹ ಕ್ವಿಕ್ ಆಗಿ ನಡೆಯುತ್ತವೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 6GB / 8GB RAM ಮತ್ತು 64GB / 128GB ಸ್ಟೋರೇಜ್ ವೇರಿಯಂಟ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಕ್ಯಾಮೆರಾ ವಿಶೇಷ

ರಿಯಲ್‌ ಮಿ 6 ಪ್ರೊ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಕ್ವಾಡ್‌ ಕ್ಯಾಮೆರಾ ರಚನೆಯನ್ನು ಹೊಂದಿದೆ. ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, ಸೆಕೆಂಡರಿ ಕ್ಯಾಮೆರಾವು 12ಎಂಪಿ ಸೆನ್ಸಾರ್‌ನ ಅಲ್ಟ್ರಾ ವೈಲ್ಡ್‌ ಆಂಗಲ್ ಲೆನ್ಸ್‌ ಹೊಂದಿದೆ. ಇನ್ನು ತೃತೀಯ ಕ್ಯಾಮೆರಾ 8ಎಂಪಿ ಸೆನ್ಸಾರ್ ಹಾಗೂ ನಾಲ್ಕನೇ ಕ್ಯಾಮೆರಾವು 2ಎಂಪಿ ಸೆನ್ಸಾರ್ ಪಡೆದಿದೆ. ಸೆಲ್ಫಿ ಕ್ಯಾಮೆರಾವು ಡ್ಯುಯಲ್ ಪಂಚ್ ಹೋಲ್ ಕ್ಯಾಮೆರಾ ಹೊಂದಿದ್ದು, ಅವುಗಳು 16ಎಂಪಿ ಮತ್ತು 8ಎಂಪಿ ಸೆನ್ಸಾರ್‌ನಲ್ಲಿವೆ. ಸ್ಲೋ ಮೋಷನ್ ವಿಡಿಯೊ, ಟ್ರೈಪಾಡ್‌ ಮೋಡ್, ಅಲ್ಟ್ರಾ ನೈಟ್‌ ಸ್ಕೆಪ್ ಮೋಡ್, ಎಕ್ಸ್‌ಪರ್ಟ್ ಮೋಡ್ ಹಾಗೂ ಫ್ರೇಮ್ ಸ್ಥಿರತೆಯ ಫೀಚರ್ ಹೊಂದಿದೆ.

'ರೆಡ್ಮಿ ನೋಟ್ 8 ಪ್ರೊ' ಸ್ಮಾರ್ಟ್‌ಫೋನಿನ ಪ್ರಾಥಮಿಕ ಕ್ಯಾಮೆರಾವು 64ಎಂಪಿ ಸೆನ್ಸಾರ್‌ನಲ್ಲಿದ್ದು, ಫೋಟೊಗಳ ಗುಣಮಟ್ಟಕ್ಕೆ ಪೂರಕವಾಗಿದೆ. ಸೆಕೆಂಡರಿ ಕ್ಯಾಮೆರಾವು 16ಎಂಪಿ ಸೆನ್ಸಾರ್‌ನಲ್ಲಿದ್ದು, ಈ ಅಲ್ಟ್ರಾ ವೈಲ್ಡ್‌ ಆಂಗಲ್‌ ಕ್ಯಾಮೆರಾ ಉತ್ತಮ ರೆಸಲ್ಯೂಶನ್‌ ಫೋಟೊಗಳನ್ನು ಸೆರೆಹಿಡಿಯುವಲ್ಲಿ ಪ್ರಯೋಜನಕಾರಿಯಾಗಿದೆ. ಹಾಗೆಯೇ ತೃತೀಯ ಮತ್ತು ನಾಲ್ಕನೇ ಕ್ಯಾಮೆರಾಗಳು 2ಎಂಪಿ ಸೆನ್ಸಾರ್ನಲ್ಲಿದ್ದು, ಡೆಪ್ತ್‌ ಮೋಡ್ ಆಕ್ಟಿವ್ ಮಾಡಿ ಫೋಟೊ ಸೆರೆಹಿಡಿದಾಗ ಫೋಟೊಗಳು ಇನ್ನು ಚೆನ್ನಾಗಿ ಮೂಡಿಬರುತ್ತವೆ. ಇದರೊಂದಿಗೆ ಈ ಕ್ಯಾಮೆರಾಗಳು 30fps ಸಾಮರ್ಥ್ಯದಲ್ಲಿ 1080p ವಿಡಿಯೊ ಸೆರೆಹಿಡಿಯಲು ಬೆಂಬಲ ನೀಡುತ್ತವೆ. ಸೆಲ್ಫಿ ಕ್ಯಾಮೆರಾವು 20ಎಂಪಿ ಸೆನ್ಸಾರ್‌ನಲ್ಲಿದೆ.

ಬ್ಯಾಟರಿ

ರಿಯಲ್‌ ಮಿ 6 ಪ್ರೊ ಸ್ಮಾರ್ಟ್‌ಫೋನ್ 4300mAh ಸಾಮರ್ಥ್ಯವನ್ನು ಹೊಂದಿದ್ದು, 30W ಸಾಮರ್ಥ್ಯದ ಫ್ಲ್ಯಾಶ್‌ ಫಾಸ್ಟ್‌ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿದೆ. ಅಲ್ಟ್ರಾ ಕಿನರ್ ಸೌಂಡ್ ಸ್ಪೀಕರ್, ಪ್ಲೇಪುಲ್ ಫೀಚರ್ಸ್‌, ವೈಫೈ, ಬ್ಲೂಟೂತ್, ಪರ್ಸನಲ್ ಮಾಹಿತಿ ರಕ್ಷಣೆ, ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ ಇಡಲು DocValt ಆಯ್ಕೆ, ವಿಡಿಯೊ ಎಡಿಟಿಂಗ್ ಆಪ್ ನಂತಹ ಇತ್ತೀಚಿನ ಫೀಚರ್ಸ್‌ಗಳನ್ನು ಒಳಗೊಂಡಿದೆ.

'ರೆಡ್ಮಿ ನೋಟ್ 8 ಪ್ರೊ' ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಸಾಮರ್ಥ್ಯವನ್ನು ತುಂಬಿಕೊಂಡಿದ್ದು, ಇದರೊಂದಿಗೆ 18W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಸುಮಾರು 30 ನಿಮಿಷಗಳಲ್ಲಿ ಶೇ.40% ಪರ್ಸೆಂಟ್‌ನಷ್ಟು ಚಾರ್ಜ್ ಒದಗಿಸುವ ಸಾಮರ್ಥ್ಯ ಪಡೆದಿದ್ದು, ಸುಮಾರು 90 ನಿಮಿಷಗಳು ಚಾರ್ಜ್ ಮಾಡಿದರೇ ಸ್ಮಾರ್ಟ್‌ಫೋನ್ ಬ್ಯಾಟರಿ ಪೂರ್ಣಗೊಳ್ಳುತ್ತದೆ. ಸೋಶಿಯಲ್ ಆಪ್ಸ್, ಗೇಮಿಂಗ್, ನೆಟ್‌ಫ್ಲಿಕ್ಸ್, ಯೂಟ್ಯೂಬ್, ಇತರೆ ಅಗತ್ಯ ಆಪ್ಸ್‌ಗಳ ಬಳಕೆ ನಂತರವು ಬ್ಯಾಟರಿ ಲೈಫ್‌ ಉತ್ತಮ ಅನಿಸಲಿದೆ.

ಬೆಲೆ ಮತ್ತು ಲಭ್ಯತೆ

ರಿಯಲ್‌ ಮಿ 6 ಪ್ರೊ ಸ್ಮಾರ್ಟ್‌ಫೋನ್ ಮೂರು ವೇರಿಯಂಟ್‌ಗಳಲ್ಲಿ ಬಿಡುಗಡೆ ಆಗಿದೆ. ಆರಂಭಿಕ 6GB+64GB ವೇರಿಯಂಟ್ ಬೆಲೆಯು 16,999 ಆಗಿದೆ. ಹಾಗೆಯೇ 6GB + 128GB ವೇರಿಯಂಟ್ ಬೆಲೆಯು 17,999ರೂ. ಆಗಿದ್ದು, 8RAM + 128GB ಸ್ಟೋರೇಜ್‌ನ ಹೈ ಎಂಡ್ ವೇರಿಯಂಟ್‌ ಬೆಲೆಯು 17,999ರೂ. ಆಗಿದೆ. ಇದೇ ಮಾರ್ಚ್ 13ರಂದು ಸೇಲ್ ಶುರುವಾಗಲಿದೆ.

'ರೆಡ್ಮಿ ನೋಟ್ 8 ಪ್ರೊ' ಸ್ಮಾರ್ಟ್‌ಫೋನ್ ಬಜೆಟ್‌ ದರದಲ್ಲಿ ಗುರುತಿಸಿಕೊಂಡಿದ್ದು, ಈ ಸ್ಮಾರ್ಟ್‌ಫೋನಿನ ಆರಂಭಿಕ 6GB RAM ಮತ್ತು 64GB ವೇರಿಯಂಟ್ ಬೆಲೆಯು 14,999ರೂ.ಗಳು ಆಗಿದೆ. ಇನ್ನು 8GB RAM ಮತ್ತು 128GB ಸ್ಟೋರೇಜ್‌ನ ಟಾಪ್‌ಎಂಡ್ ವೇರಿಯಂಟ್‌ 17,999ರೂ.ಗಳಿಗೆ ಸಿಗಲಿದೆ. ಗ್ರೀನ್, ಹಾಲೊ ವೈಟ್‌ ಮತ್ತು ಶಾಡೋ ಬ್ಲ್ಯಾಕ್ ಕಲರ್‌ ಬಣ್ಣಗಳ ಆಯ್ಕೆಗಳಲ್ಲಿ ದೊರೆಯಲಿದೆ.

Best Mobiles in India

English Summary

Realme 6 Pro vs Redmi Note 8 Pro comparison based on specs and price.