ಸ್ಮಾರ್ಟ್ ಗ್ಯಾಜೆಟ್ ಗಳ ವಿಭಾಗದಲ್ಲಿ ಸ್ಮಾರ್ಟ್ ವಾಚ್ ಇತ್ತೀಚೆಗಂತೂ ಬಹುಪಾಲು ಎಲ್ಲರೂ ಇಷ್ಟಪಡುವ ಡಿವೈಸ್ ಆಗಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಇದಕ್ಕೆ ಕಾರಣ ಈ ವಾಚ್ ಗಳು ನೀಡುವ ಆರೋಗ್ಯ ಸಂಬಂಧಿತ ಮೇಲ್ವಿಚಾರಣೆ ಮಾಹಿತಿ. ಇದರ ಬೆನ್ನಲ್ಲೇ ಈಗ ದೆಹಲಿ ಮೂಲಕ ಎಲೆಕ್ಟ್ರಾನಿಕ್ಸ್ ಲೈಫ್ ಸ್ಟೈಲ್ ಕಂಪೆನಿಯೊಂದು ಎರಡು ಪ್ರಮುಖ ಸ್ಮಾರ್ಟ್ ವಾಚ್ ಗಳನ್ನು ಅನಾವರಣಗೊಳಿಸಿದೆ. ಈ ವಾಚ್ ಗಳು ಗೈರೋ ಸೆನ್ಸರ್ ಗಳನ್ನ ಒಳಗೊಂಡಿವೆ. ಹೌದು, ಭಾರತದ ಅದರಲ್ಲೂ ದೆಹಲಿ ಮೂಲದ ಮಸ್ಟರ್ಡ್ ಕಂಪೆನಿ ಮಸ್ಟರ್ಡ್ ರಾಕ್ ಹಾಗೂ ಮಸ್ಟರ್ಡ್ ಟೆಂಪೋ ಎಂಬ ಎರಡು ಹೊಸ ಸ್ಮಾರ್ಟ್ ವಾಚ್ ಗಳನ್ನು ಅನಾವರಣಗೊಳಿಸಿದೆ. ಈ ಸ್ಮಾರ್ಟ್ ವಾಚ್ ಗಳು ಪ್ರೀಮಿಯಂ ವಿನ್ಯಾಸದೊಂದಿಗೆ 100 ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್ ಗಳನ್ನು ಹೊಂದಿವೆ. ಹಾಗೆಯೇ ಒಮ್ಮೆ ಚಾರ್ಜ್ ಮಾಡಿದರೆ ಒಂದು ವಾರಗಳ ಕಾಲ ಬಳಕೆ ಮಾಡಬಹುದು. ಹಾಗಿದ್ರೆ ಇವುಗಳ ಮತ್ತಷ್ಟು ಫೀಚರ್ಸ್ ಹಾಗೂ ಭಾರತದಲ್ಲಿನ ಬೆಲೆ ಎ‍ಷ್ಟು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಈ ಮಸ್ಟರ್ಡ್ ರಾಕ್ ವಾಚ್ 1.81 ಇಂಚಿನ ಡಿಸ್ ಪ್ಲೇ ಹೊಂದಿದ್ದರೆ, ಮಸ್ಟರ್ಡ್ ಟೆಂಪೋ 1.69 ಇಂಚಿನ ಹೆಚ್ ಡಿ ಡಿಸ್ ಪ್ಲೇ ಹೊಂದಿದೆ. ಈ ವಾಚ್ ಗಳನ್ನು ಕ್ರೌನ್ ಬಟನ್ ಮೂಲಕ ನಿಯಂತ್ರಣ ಮಾಡಬಹುದಾಗಿದೆ. ಇನ್ನು ರಾಕ್ ವಾಚ್ 204 ppi ಜೊತೆಗೆ 240 x 286 ಪಿಕ್ಸೆಲ್ ರೆಸಲ್ಯೂಶನ್ ಡಿಸ್ ಪ್ಲೇ ಹೊಂದಿದ್ದು, ಇದು 500Nits ಬ್ರೈಟ್ ನೆಸ್ ನೀಡಲಿದೆ. ಮಸ್ಟರ್ಡ್ ರಾಕ್ ಹಾಗೂ ಮಸ್ಟರ್ಡ್ ಟೆಂಪೋ ಸ್ಮಾರ್ಟ್ವಾಚ್ ಗಳು 100 ಕ್ಕೂ ಹೆಚ್ಚು ಕ್ಲೌಡ್-ಆಧಾರಿತ ವೈಯುಕ್ತೀಕರಿಸಬಹುದಾದ ವಾಚ್ ಫೇಸ್ ಗಳನ್ನು ಹೊಂದಿದ್ದು, ಪ್ರೀಮಿಯಂ ವಿನ್ಯಾಸದ ಜೊತೆಗೆ ಬಹು ಬಣ್ಣದ ಆಯ್ಕೆಗಳನ್ನು ಪಡೆದಿವೆ. ಇವು ನಿದ್ರೆ ಮಾನಿಟರ್, ಡ್ರಿಂಕಿಂಗ್ ಮಾನಿಟರ್, ವಿಶ್ರಾಂತಿ ಜ್ಞಾಪನೆ, ಮೇನ್ಸ್ಟ್ರುಯೇಷನ್ ಟ್ರ್ಯಾಕರ್, SpO2 ಟ್ರ್ಯಾಕರ್ ಮತ್ತು ಹೃದಯ ಬಡಿತ ಮಾನಿಟರ್ ಸೇರಿದಂತೆ ಇನ್ನಿತರೆ ಪ್ರಮುಖ ಫೀಚರ್ಸ್ ಗಳನ್ನು ಪಡೆದುಕೊಂಡಿವೆ. ಹಾಗೆಯೇ, ಈ ಸ್ಮಾರ್ಟ್ ವಾಚ್ ಗಳು ಗೈರೋ ಸೆನ್ಸರ್ ಗಳನ್ನು ಒಳಗೊಂಡಿದ್ದು, ಬಳಕೆದಾರ ನಡಿಗೆಯ ದೂರ ಮತ್ತು ಕ್ಯಾಲೊರಿ ಮೇಲೆ ಹೆಚ್ಚಿನ ನಿಗಾ ಇಡಲಿವೆ. ಇನ್ನುಳಿದಂತೆ ರಾಕ್ ಸ್ಮಾರ್ಟ್ ವಾಚ್ 120+ ಹಾಗೂ ಟೆಂಪೋ ಸ್ಮಾರ್ಟ್ ವಾಚ್ 100+ ಸ್ಪೋರ್ಟ್ಸ್ ಮೋಡ್ ಗಳನ್ನು ಬೆಂಬಲಿಸಲಿದ್ದು, ಆಂಡ್ರಾಯ್ಡ್ ಹಾಗೂ ಐಓಎಸ್ ಫೋನ್ ಗಳಿಗೆ ಸಪೋರ್ಟ್ ಮಾಡಲಿವೆ. ಮಸ್ಟರ್ಡ್ ರಾಕ್ ಸ್ಮಾರ್ಟ್ ವಾಚ್ ಬ್ಲೂಟೂತ್ ಕರೆ ಹಾಗೂ AI ವಾಯ್ಸ್ ಅಸಿಸ್ಟೆಂಟ್ ಜೊತೆಗೆ ಕೆಲವು ಇನ್ ಬಿಲ್ಟ್ ಫೀಚರ್ಸ್ ಗಳನ್ನು ಪಡೆದುಕೊಂಡಿದೆ. ಹಾಗೆಯೇ ಈ ವಾಚ್ ಗಳ ಮೂಲಕ ನಿಮ್ಮ ಸ್ಮಾರ್ಟ್ ಫೋನ್ ಗಳ ಕ್ಯಾಮೆರಾವನ್ನು ನಿಯಂತ್ರಣ ಮಾಡಬಹುದಾಗಿದೆ. ಸ್ಮಾರ್ಟ್ ವಾಚ್ ಗಳನ್ನು ಶೇಕ್ ಮಾಡುವುದರಿಂದ ಕನೆಕ್ಟ್ ಆದ ಸ್ಮಾರ್ಟ್ ಫೋನ್ ನ ಕ್ಯಾಮೆರಾ ತೆರೆದುಕೊಳ್ಳುತ್ತದೆ. ಹಾಗೆಯೇ ಈ ವಾಚ್ ಗಳಲ್ಲಿ ಸ್ಮಾರ್ಟ್ ಫೋನ್ ಗೆ ಬಂದ ನೋಟಿಫಿಕೇಶನ್ ಗಳನ್ನೂ ಓದಬಹುದಾಗಿದೆ. ಇವು ವಿವಿಧ ಭಾಷೆಗಳನ್ನು ಬೆಂಬಲಿಸಲಿವೆ. ಮಸ್ಟರ್ಡ್ ರಾಕ್ ಹಾಗೂ ಮಸ್ಟರ್ಡ್ ಟೆಂಪೋ ಸ್ಮಾರ್ಟ್ವಾಚ್ ಗಳು ಯುಎಸ್ ಬಿ ಮ್ಯಾಗ್ನೆಟಿಕ್ ಚಾರ್ಜಿಂಗ್ ಬೆಂಬಲಿತ 280mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, ಒಂದು ಪೂರ್ಣ ಚಾರ್ಜ್ ನಲ್ಲಿ 7 ದಿನಗಳವರೆಗೆ ಬಳಕೆ ಮಾಡಬಹುದಾಗಿದೆ. ಹಾಗೆಯೇ ಸ್ಮಾರ್ಟ್ ವಾಚ್ IP68 ರೇಟಿಂಗ್ ಅನ್ನು ಹೊಂದಿದ್ದು, ನೀರು, ಬೆವರು ಹಾಗೂ ಧೂಳು ನಿರೋಧಕವಾಗಿದೆ. ಮಸ್ಟರ್ಡ್ ರಾಕ್ ಮತ್ತು ಮಸ್ಟರ್ಡ್ ಟೆಂಪೋ ಒಂದು ವರ್ಷದ ವಾರಂಟಿಯೊಂದಿಗೆ ಮಾರಾಟವಾಗುತ್ತಿದ್ದು, ಮಸ್ಟರ್ಡ್ ರಾಕ್ ಸ್ಮಾರ್ಟ್ ವಾಚ್ ಗೆ ಆರಂಭಿಕ ಕೊಡುಗೆಯಾಗಿ 2,199ರೂ. ಬೆಲೆ ಪಡೆದಿದೆ ಹಾಗೆಯೇ ಮಸ್ಟರ್ಡ್ ಟೆಂಪೋ ಸ್ಮಾರ್ಟ್ ವಾಚ್ 1,399ರೂ. ಗಳ ಬೆಲೆ ಹೊಂದಿದೆ. ಇವು ಸಿಲ್ವರ್, ಬ್ಲ್ಯಾಕ್ ಹಾಗೂ ಗ್ರೀನ್, ಬ್ಲಾಕ್ , ರೆಡ್ ವೇರಿಯಂಟ್ ನಲ್ಲಿ ಲಭ್ಯವಿದ್ದು, ಬೆಲೆಯಲ್ಲಿ ಸ್ವಲ್ಪ ಬದಲಾವಣೆ ಆಗಲಿದೆ. ಇನ್ನು ಕಂಪನಿಯ ಅಧಿಕೃತ ವೆಬ್ ಸೈಟ್ mustardbrand.com, ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್ ನಲ್ಲಿ ಖರೀದಿ ಮಾಡಬಹುದಾಗಿದೆ ಹಾಗೆಯೇ ಇವು ರಿಟೇಲ್ ಸ್ಟೋರ್ ಗಳಲ್ಲಿಯೂ ಲಭ್ಯ ಇವೆ.