ಎವರ್ ಗ್ರೀನ್ ಮೊಬೈಲ್ ಬ್ರ್ಯಾಂಡ್ ನೋಕಿಯಾ ಕಂಪನಿಯು ಇತ್ತೀಚಿಗಷ್ಟೆ ಹೊಸದಾಗಿ ನೋಕಿಯಾ C12 ಪರಿಚಯಿಸಿದೆ. ಇದೀಗ ಭಾರತೀಯ ಮಾರುಕಟ್ಟೆಗೆ ನೋಕಿಯಾ C12 ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಿದ್ದು, ಈ ಫೋನ್ ಎಂಟ್ರಿ ಲೆವೆಲ್ ಮಾದರಿಯ ಸ್ಮಾರ್ಟ್ ಫೋನ್ ಆಗಿದೆ. ಇದು 3000mAh ಬ್ಯಾಟರಿ ಬ್ಯಾಕ್ ಅಪ್ ಪಡೆದಿದೆ. ಹೌದು, ನೋಕಿಯಾ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ನೋಕಿಯಾ C12 ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್ ಫೋನ್ ಇನ್ನು ಆಂಡ್ರಾಯ್ಡ್ 12 ಗೋ ಎಡಿಷನ್ ಓಎಸ್ ಸಪೋರ್ಟ್ ಪಡೆದಿದ್ದು, ಆಕ್ಟಾ ಕೋರ್ UniSoC SC9863A ಪ್ರೊಸೆಸರ್ ಹೊಂದಿದೆ. ಇದರೊಂದಿಗೆ ಸಿಂಗಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ. ಹಾಗೆಯೇ ಈ ಸ್ಮಾರ್ಟ್ ಫೋನ್ 2GB + 64GB ಸ್ಟೋರೇಜ್ ಆಯ್ಕೆಯನ್ನು ಪಡೆದಿದ್ದು, ಇದರೊಂದಿಗೆ ಎಸ್ ಡಿ ಕಾರ್ಡ್ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು 256GB ವರೆಗೆ ವಿಸ್ತರಿಸಲು ಅವಕಾಶ ನೀಡಲಾಗಿದೆ. ಹಾಗಾದರೆ ನೋಕಿಯಾ C12 ಸ್ಮಾರ್ಟ್ ಫೋನ್ ಬೆಲೆ ಎಷ್ಟು, ಇತರ ಫೀಚರ್ಸ್ ಏನು ಮುಂದೆ ತಿಳಿಯೋಣ ಬನ್ನಿರಿ. ನೋಕಿಯಾ C12: ಡಿಸ್ ಪ್ಲೇ ಮತ್ತು ಪ್ರೊಸೆಸರ್ ನೋಕಿಯಾ C12 ಸ್ಮಾರ್ಟ್ ಫೋನ್ 6.3 ಇಂಚಿನ HD+ ಡಿಸ್ ಪ್ಲೇ ಅನ್ನು ಹೊಂದಿದ್ದು, 20:9 ರ ಆಕಾರ ಅನುಪಾತವನ್ನು ಇದು ಪಡೆದಿದೆ. ಹಾಗೆಯೇ ಈ ಫೋನ್ 720 times; 1600 ಪಿಕ್ಸೆಲ್ ಗಳ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ ಈ ಡಿಸ್ ಪ್ಲೇಯು 20:9 ಅನುಪಾತವನ್ನು ಪಡೆದಿದೆ. ಇದು ಈ ಸ್ಮಾರ್ಟ್ ಫೋನ್ ಆಕ್ಟಾ ಕೋರ್ ಆಕ್ಟಾ ಕೋರ್ UniSoC SC9863A ಪ್ರೊಸೆಸರ್ ನಿಂದ ಚಾಲಿತವಾಗಿದೆ. ನೋಕಿಯಾ C12: ಸ್ಟೋರೇಜ್ ಮತ್ತು ಮೆಮೊರಿ ನೋಕಿಯಾ C12 ಸ್ಮಾರ್ಟ್ ಫೋನ್ ಸಿಂಗಲ್ ವೇರಿಯಂಟ್ ಆಯ್ಕೆ ಪಡೆದಿದ್ದು, 2GB + 64GB ಸಾಮರ್ಥ್ಯದಲ್ಲಿದೆ. ಇನ್ನು ಬಳಕೆದಾರರು ಎಸ್ ಡಿ ಕಾರ್ಡ್ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು 256GB ವರೆಗೆ ವಿಸ್ತರಿಸಲು ಅವಕಾಶ ನೀಡಲಾಗಿದೆ. ಇನ್ನು ಈ ಫೋನ್ ಗೂಗಲ್ ನ ಆಂಡ್ರಾಯ್ಡ್ 12 ಗೋ ಎಡಿಷನ್ (Android 11 Go) ಆವೃತ್ತಿ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ನ ಸಪೋರ್ಟ್ ಪಡೆದಿದೆ. ನೋಕಿಯಾ C12: ಕ್ಯಾಮೆರಾ ಮತ್ತು ಬ್ಯಾಟರಿ ಪವರ್ ನೋಕಿಯಾ C12 ಸ್ಮಾರ್ಟ್ ಫೋನ್ ಸಿಂಗಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಪ್ರಾಥಮಿಕ ಕ್ಯಾಮೆರಾವು 8 ಮೆಗಾ ಪಿಕ್ಸಲ್ ಸೆನ್ಸಾರ್ ನಲ್ಲಿದೆ. ಹಾಗೆಯೇ ಮುಂಭಾಗದಲ್ಲಿ 5 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ. LED ಫ್ಲ್ಯಾಶ್ ಸೌಲಭ್ಯ ವನ್ನು ಪಡೆದುಕೊಂಡಿದೆ. ಇನ್ನು ಈ ಫೋನ್ 3000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ ಅಪ್ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 5W ಚಾರ್ಜಿಂಗ್ ಸೌಲಭ್ಯ ಹೊಂದಿದೆ. ನೋಕಿಯಾ C12: ಇತರೆ ಸೌಲಭ್ಯಗಳು ನೋಕಿಯಾ C12 ಸ್ಮಾರ್ಟ್ ಫೋನ್ IP52 ರೇಟಿಂಗ್ ಸ್ಲ್ಯಾಶ್ ರೆಸಿಸ್ಟೆನ್ಸ್ ಸೌಲಭ್ಯ ಪಡೆದಿದ್ದು, 160.6 times; 74.3 times; 8.75 ಎಂಎಂ ಸುತ್ತಳತೆ ಹೊಂದಿದೆ. ಜೊತೆಗೆ ಡ್ಯುಯಲ್ ಸಿಮ್, 4G, ವೈಫೈ 802.11 b/g/n, ಬ್ಲೂಟೂತ್ 5.2, ಜಿಪಿಎಸ್ ಸೌಲಭ್ಯ ಒಳಗೊಂಡಿದೆ. ಹಾಗೆಯೇ ಈ ಫೋನ್ ಫೇಸ್ ಅನ್ ಲಾಕ್ ಆಯ್ಕೆ ಒಳಗೊಂಡಿದೆ. nbsp; ಭಾರತದಲ್ಲಿ ನೋಕಿಯಾ C12 ಸ್ಮಾರ್ಟ್ ಫೋನ್ 2GB + 64GB ಸ್ಟೋರೇಜ್ ಸಿಂಗಲ್ ವೇರಿಯಂಟ್ ಆಯ್ಕೆ ಪಡೆದಿದ್ದು, ಇದರ ಬೆಲೆಯು 5,999ರೂ. ಆಗಿದೆ. ಇನ್ನು ಈ ಫೋನ್ ಡಾರ್ಕ್ ಸಯಾನ್, ಲೈಟ್ ಮಿಂಟ್ ಮತ್ತು ಚಾರ್ಕೋಲ್ ಕಲರ್ ಆಯ್ಕೆ ಪಡೆದಿದೆ.