ಭಾರತೀಯ ಟೆಲಿಕಾಂ ವಲಯದಲ್ಲಿ ತೃತೀಯ ಟೆಲಿಕಾಂ ಆಗಿ ಕಾಣಿಸಿಕೊಂಡಿರುವ ವಿ ಟೆಲಿಕಾಂ ಕೆಲವು ಅತ್ಯುತ್ತಮ ಪ್ಲ್ಯಾನ್ ಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ವಿ ಟೆಲಿಕಾಂ ಪ್ರೀಪೇಯ್ಡ್ ಜೊತೆಗೆ ಪೋಸ್ಟ್ ಪೇಯ್ಡ್ ಪ್ಲ್ಯಾನ್ ಗಳಿಂದಲೂ ಸಹ ಗುರುತಿಸಿಕೊಂಡಿದೆ. ಆ ಪೈಕಿ ಕೆಲವು ಯೋಜನೆಗಳು ಅಧಿಕ ಡೇಟಾ ಜೊತೆಗೆ ಹೆಚ್ಚುವರಿಯಾಗಿ ಪ್ರಯೋಜನ ಸಹ ಪಡೆದಿದ್ದು, ಗ್ರಾಹಕರಿಗೆ ಖುಷಿ ನೀಡಿವೆ. ಅಲ್ಲದೇ ದೀರ್ಘಾವಧಿ ವ್ಯಾಲಿಡಿಟಿ ಸೌಲಭ್ಯದ ಯೋಜನೆಗಳು ಇವೆ. ಆದ್ರೆ, ಇದೀಗ ವಿ ಟೆಲಿಕಾಂ ಮಾಡಿರುವ ಈ ನಿರ್ಧಾರ ನಿಜಕ್ಕೂ ಶಾಕ್ ಎನಿಸಿದೆ. ಹೌದು, ವಿ ಟೆಲಿಕಾಂ ಸಂಸ್ಥೆಯು ತನ್ನ ಎರಡು ಜನಪ್ರಿಯ ಪ್ರೀಪೇಯ್ಡ್ ಯೋಜನೆಗಳ ವ್ಯಾಲಿಡಿಟಿಯಲ್ಲಿ (validity reduced) ಇದೀಗ ಇಳಿಕೆ ಮಾಡಿದೆ. ಹೀಗಾಗಿ ಇನ್ನೂ ಆ ಎರಡು ಜನಪ್ರಿಯ ರೀಚಾರ್ಜ್ ಯೋಜನೆಗಳು ಮೊದಲಿಗಿಂತ ಕಡಿಮೆ ವ್ಯಾಲಿಡಿಟಿ ಸೌಲಭ್ಯದಲ್ಲಿ ಲಭ್ಯ ಆಗಲಿವೆ. ಉಳಿದಂತೆ ಆ ಎರಡು ಪ್ಲ್ಯಾನ್ ಗಳಲ್ಲಿ ಡೇಟಾ, ಅನಿಯಮಿತ ವಾಯಿಸ್ ಕರೆ ಹಾಗೂ ಎಸ್ ಎಮ್ ಎಸ್ ಪ್ರಯೋಜನ ಮೊದಲಿನಂತೆ ಮುಂದುವರೆಯಲಿದೆ. ವ್ಯಾಲಿಡಿಟಿಯಲ್ಲಿ ಬದಲಾವಣೆ ಕಂಡಿರುವ ವಿ ಟೆಲಿಕಾಂ (Vi) ಪ್ರೀಪೇಯ್ಡ್ ಪ್ಲ್ಯಾನ್ ಗಳೆಂದರೆ, ಅವು ಕ್ರಮವಾಗಿ ವಿ 479 ರೂ ಮತ್ತು ವಿ 666ರೂ. ಪ್ರೀಪೇಯ್ಡ್ ಪ್ಲ್ಯಾನ್ ಆಗಿವೆ. ಹೀಗಾಗಿ ಈ ಎರಡೂ ಯೋಜನೆಗಳು ಸಂಸ್ಥೆಯ ಅಧಿಕೃತ ವೆಬ್ ಸೈಟ್ ಅಥವಾ ಮೊಬೈಲ್ ಆಪ್ ನಲ್ಲಿ ರೀಚಾರ್ಜ್ ಗೆ ಲಭ್ಯ ಇವೆ. ಹಾಗಾದರೆ ವಿ 479 ರೂ ಮತ್ತು ವಿ 666 ರೂ. ಪ್ರೀಪೇಯ್ಡ್ ಪ್ಲ್ಯಾನ್ ಗಳ ಬಗ್ಗೆ ಹಾಗೂ ಇತರೆ ಜನಪ್ರಿಯ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ. ವಿ ಟೆಲಿಕಾಂನ 479ರೂ. ಪ್ಲ್ಯಾನ್ ವಿ ಟೆಲಿಕಾಂನ 479ರೂ. ಪ್ರೀಪೇಯ್ಡ್ ಯೋಜನೆಯಲ್ಲಿ ಪ್ರತಿದಿನ 1 GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಲಭ್ಯ ಇರುತ್ತದೆ. ಅಲ್ಲದೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಗೆ ಬದಲಾಗಿ ಇನ್ನು 48 ದಿನಗಳಿಗೆ ಲಭ್ಯ ಇರಲಿದೆ. ಹೆಚ್ಚುವರಿಯಾಗಿ ವಿ ಆಪ್ಸ್ ಗಳ ಸೇವೆಗಳು ಲಭ್ಯ ಆಗಲಿವೆ. ವಿ ಟೆಲಿಕಾಂನ 666ರೂ. ಪ್ಲ್ಯಾನ್ ವಿ ಟೆಲಿಕಾಂನ 666ರೂ. ಪ್ರೀಪೇಯ್ಡ್ ಯೋಜನೆಯಲ್ಲಿ ಪ್ರತಿದಿನ 1.5 GB ಡೇಟಾ ಸೌಲಭ್ಯ ಲಭ್ಯ ಇದ್ದು, ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಸಹ ದೊರೆಯುತ್ತದೆ. ಅಲ್ಲದೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಪಡೆದುಕೊಂಡಿದೆ. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 77 ದಿನಗಳ ವ್ಯಾಲಿಡಿಟಿ ಅವಧಿಗೆ ಬದಲಾಗಿ ಇನ್ನು 64 ದಿನಗಳಿಗೆ ಲಭ್ಯ ಇರಲಿದೆ. ಜೊತೆಗೆ ಹೆಚ್ಚುವರಿಯಾಗಿ ವಿ ಆಪ್ಸ್ ಗಳ ಸೇವೆಗಳು ಲಭ್ಯ ಆಗಲಿವೆ. ಹಾಗೆಯೇ Vi ಟೆಲಿಕಾಂನ 979 ರೂ. ರೀಚಾರ್ಜ್ ಪ್ಲ್ಯಾನ್ ದೈನಂದಿನ 2 GB ಡೇಟಾಗೆ ಆಕರ್ಷಕ ಪ್ಲ್ಯಾನ್ ಆಗಿ ಕಾಣಿಸಿಕೊಂಡಿದೆ. ಈ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಹೊಂದಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 2 GB ಡೇಟಾ ಪ್ರಯೋಜನ ಸಿಗಲಿದ್ದು, ಇದರೊಂದಿಗೆ ಅನಿಯಮಿತ ವಾಯಿಸ್ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ದೊರೆಯುತ್ತದೆ. ಹಾಗೆಯೇ ಪ್ರತಿದಿನ 100 ಎಸ್ ಎಮ್ ಎಸ್ ಸೌಲಭ್ಯ ಕೂಡಾ ದೊರೆಯುತ್ತದೆ.