ವಿಶ್ವಾಧ್ಯಂತ 2 ಗಂಟೆಗಳ ಕಾಲ ಯೂಟ್ಯೂಬ್​​​ ಡೌನ್​​ ಆಗಿದ್ದೇಕೆ?


ವಿಶ್ವದ ಪ್ರಖ್ಯಾತ ಮತ್ತು ಬಹು ದೊಡ್ಡ ವಿಡಿಯೋ ಜಾಲ ಯ್ಯೂಟ್ಯೂಬ್​ ಇದೇ ಮೊದಲ ಬಾರಿಗೆ ಅತಿದೊಡ್ಡ ತಾಂತ್ರಿಕದೋಷವನ್ನು ಎದುರಿಸಿದೆ. ಜಗತ್ತಿನಾದ್ಯಂತ ಮಂಗಳವಾರ ರಾತ್ರಿಯಿಂದ ಯೂಟ್ಯೂಬ್ ಆಪ್ ಅನ್ನು ತೆರೆಯಲು ಸಾಧ್ಯವಾಗದಂತಹ ಸಮಸ್ಯೆ ಬಳಕೆದಾರರಿಗೆ ಎದುರಾಗಿದೆ. ಆದರೆ, ಇಂದು ಬೆಳಗ್ಗೆ ವಿಶ್ವದಾದ್ಯಂತ ಡೌನ್​ ಆಗಿದ್ದ ಯೂಟ್ಯೂಬ್ ಯಥಾಸ್ಥಿತಿಗೆ ಮರಳಿದೆ.

Advertisement

ಹೌದು, ಭಾರತೀಯ ಕಾಲಮಾನ 6.30ರಿಂದ ಯೂಟ್ಯೂಬ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಯೂಟ್ಯೂಬ್​ ಸ್ಟ್ರೀಮಿಂಗ್​ ಹಾಗೂ ಅಪ್​ಲೋಡಿಂಗ್​ನಲ್ಲಿ ಸಮಸ್ಯೆ ಎದುರಾಗಿತ್ತು. ಸಾಕಷ್ಟು ಜನ ಸಾಮಾಜಿಕ ಜಾಲತಾಣದಲ್ಲಿ ಯೂಟ್ಯೂಬ್ ತೆರೆಯದ ಬಗ್ಗೆ ದೂರಿದ್ದರು. ಯೂಟ್ಯೂಬ್​ ಟಿವಿ ಹಾಗೂ ಯೂಟ್ಯೂಬ್​ ಮ್ಯೂಸಿಕ್​ ಕೂಡ ಬಳಸಲು ಆಗುತ್ತಿಲ್ಲ ಎಂದು ಬಳಕೆದಾರರು ಹೇಳಿದ್ದರು. ​​​​

Advertisement

ಇಂದು ಬೆಳಗ್ಗೆ ಯೂಟ್ಯೂಬ್ ತೆರೆದು ನೋಡುವವರಿಗೆ ಶಾಕ್ ಆಗಿದ್ದು, ಯೂಟ್ಯೂಬ್ ತೆರೆದಾಗ ಕೆಲವರಿಗೆ ಎರರ್ ​​503 ಎಂದು ತೋರಿಸುತ್ತಿದ್ದರೆ ಇನ್ನೂ ಕೆಲವರಿಗೆ ಯೂಟ್ಯೂಬ್​​ ಲೋಡ್​ ಆಗುತ್ತಿರಲಿಲ್ಲ. ಇದೀಗ ಸಮಸ್ಯೆಯನ್ನು ಸರಿಪಡಿಸಲಾಗಿದ್ದು, ಎಂದಿನಂತೆ ಯೂಟ್ಯೂಬ್​ ಕಾರ್ಯನಿರ್ವಹಿಸುತ್ತಿದೆ. ಸಮಸ್ಯೆ ಎದುರಾಗಿರುವ ಬಗ್ಗೆ ಯೂಟ್ಯೂಬ್ ತನ್ನ ಕ್ಷಮೆಯನ್ನು ಸಹ ಕೇಳಿದೆ.

ಈ ಬಗ್ಗೆ ಯೂಟ್ಯೂಬ್ ಸಂಸ್ಥೆ ಅಧಿಕೃತವಾಗಿ​​ ಟ್ವೀಟ್​ ಮಾಡಿದ್ದು, ನಿಮ್ಮ ಸಹನೆಗಾಗಿ ಧನ್ಯವಾದ. ಇನ್ನೂ ಸಮಸ್ಯೆ ಮುಂದುವರಿದರೆ ದಯವಿಟ್ಟು ನಮಗೆ ವರದಿ ಮಾಡಿ ಎಂದು ಹೇಳಿದೆ. ಇಂದು ಬೆಳಗ್ಗೆಯಿಂದ ಸುಮಾರು 1 ರಿಂದ 2 ಗಂಟೆಗಳ ಕಾಲ ಯೂಟ್ಯೂಬ್​​​ ಡೌನ್​​ ಆಗಿತ್ತು. ಆದ್ರೆ ವಿಶ್ವದಾದ್ಯಂತ ಯೂಟ್ಯೂಬ್​​ನಲ್ಲಿ ಈ ಸಮಸ್ಯೆ ಉಂಟಾಗಿದ್ದಕ್ಕೆ ಕಾರಣವೇನೆಂದು ಸಂಸ್ಥೆ ಸ್ಪಷ್ಟಪಡಿಸಿಲ್ಲ.

Advertisement

ಆದರೆ, ವಿಡಿಯೋ ಪ್ಲೇ ಮಾಡಲು ಮತ್ತು ಅಪ್ಲೋಡ್​ ಮಾಡಲು ಬಳಕೆದಾರರಿಗೆ ತೊಡಕು ಉಂಟಾಗಿದ್ದೇಕೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಮೂಲಗಳ ಪ್ರಕಾರ ಯೂಟ್ಯೂಬ್ ಸರ್ವರ್ ಡೌನ್‌ ಆಗಲು ಆಪ್‌ ಮೇಲಿನ ಒತ್ತಡ ಅಥವಾ ಯ್ಯೂಟ್ಯೂಬ್ ಸರ್ವರ್‌ನಲ್ಲಿ ಕಂಡುಬಂದ ಸಾಮಾನ್ಯ ತಂತ್ರಿಕ ದೋಷ ಎಂದು ತಿಳಿಸಿವೆ. ಆದರೆ, ನಿಜವೇ ಎಂಬುದನ್ನು ಯೂಟ್ಯೂಬ್ ಸಂಸ್ಥೆ ಹೇಳಬೇಕಿದೆ.

ಓದಿರಿ: ಅಶ್ಲೀಲ ವೀಡಿಯೊ ನೋಡುವ ಶೇ 90% ಜನರಿಗೆ ಗೊತ್ತಿಲ್ಲದ ಶಾಕಿಂಗ್ ವಿಷಯಗಳು!!

Best Mobiles in India

Advertisement

English Summary

YOUTUBE SUFFERED A GLOBAL OUTAGE FOR AN HOUR, SERVERS UP AND RUNNING NOW. to know more visit to kannada.gizbot.com