ಭಾರತದಲ್ಲಿ ಹೆಚ್ಚು ಡೌನ್‌ಲೋಡ್ ಆಗುತ್ತಿರುವ ಜನಪ್ರಿಯ 10 ಆಪ್‌ಗಳು ಯಾವುವು ಗೊತ್ತಾ?!

|

ಇಂದಿನ ಸ್ಮಾರ್ಟ್‌ಫೋನ್ ಯುಗದಲ್ಲಿ ಎಲ್ಲದಕ್ಕೂ ಒಂದೊಂದು ಅಪ್ಲಿಕೇಶನ್ ಇದೆ. ಸೋಶಿಯಲ್ ಮೀಡಿಯಾ, ಮನರಂಜನೆ, ಕ್ಯಾಬ್, ಆಹಾರ, ಟಿಕೆಟ್, ಬ್ಯಾಂಕಿಂಗ್ ಹೀಗೆ ನಮ್ಮ ಜೀವನವನ್ನು ಅನುಕೂಲಕರಗೊಳಿಸಲು ನಾವು ಎಲ್ಲಾ ಅಪ್ಲಿಕೇಶನ್‌ಗಳನ್ನು ಪಡೆಯುತ್ತಿದ್ದೇವೆ. ಹಾಗಾಗಿ, ಭಾರತವು ಎಲ್ಲಾ ಅಪ್ಲಿಕೇಶನ್ ಚಟುವಟಿಕೆಗಳಿಗೆ ಹಾಟ್‌ಪ್ಲೇಸ್ ಎಂದರೆ ಅಚ್ಚರಿಯೇನಲ್ಲ.

ಆಪ್ ಅನ್ನಿಯವರ ಹೊಸ ವರದಿಯ ಪ್ರಕಾರ, ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಮೊಬೈಲ್ ಅಪ್ಲಿಕೇಶನ್‌ಗಳಿಗಾಗಿ ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆ ಎಂಬ ಹೆಗ್ಗಳಿಕೆಯನ್ನು ಭಾರತ ಪಡೆದುಕೊಂಡಿದೆ. 2018 ರ ಮೊದಲ ತ್ರೈಮಾಸಿಕದಲ್ಲಿ ಆದಾಯದ ತೀವ್ರ ಹೆಚ್ಚಳವಿದೆ ಎಂದು ಆಪ್ ಅನ್ನಿ ಬಿಡುಗಡೆ ಮಾಡಿರುವ ವರದಿಯು ತಿಳಿಸಿದೆ.

ಭಾರತದಲ್ಲಿ ಹೆಚ್ಚು ಡೌನ್‌ಲೋಡ್ ಆಗುತ್ತಿರುವ ಜನಪ್ರಿಯ 10 ಆಪ್‌ಗಳು ಯಾವುವು ಗೊತ್ತಾ

ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಒಟ್ಟಾರೆ ಡೌನ್ಲೋಡ್ ಮಾಡಿಕೊಳ್ಳುವ ದೃಷ್ಟಿಯಿಂದ ಭಾರತವು ಅಗ್ರಸ್ಥಾನದಲ್ಲಿದೆ ಎಂದು ವರದಿ ಹೇಳಿದೆ. ಭಾರತದಲ್ಲಿ ಹೆಚ್ಚು ಡೌನ್‌ಲೋಡ್ ಮಾಡಲಾಗಿರುವ ಅಪ್ಲಿಕೇಶನಗಳು ಯಾವುವು ಎಂಬ ಆಶ್ಚರ್ಯಕರ ಮಾಹಿತಿಯನ್ನು ಸಹ ನೀಡಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಭಾರತೀಯರು ಡೌನ್ಲೋಡ್ ಮಾಡುತ್ತಿರುವ 10 ಜನಪ್ರಿಯ ಅಪ್ಲಿಕೇಶನ್‌ಗಳು ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಟಾಪ್ 10 ಜನಪ್ರಿಯ ಆಪ್!

ಟಾಪ್ 10 ಜನಪ್ರಿಯ ಆಪ್!

ವೀಡಿಯೊ ಸಮುದಾಯ ಅಪ್ಲಿಕೇಶನ್ ಆಗಿರುವ ಹೈಪ್‌ಸ್ಟಾರ್(hypstar) ಭಾರತದಲ್ಲಿ ಹೆಚ್ಚು ಡೌನ್‌ಲೋಡ್ ಆಗುತ್ತಿರುವ ಆಪ್‌ಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದೆ. ಎಲ್ಲಾ ವೈರಲ್ ವೀಡಿಯೊಗಳನ್ನು ವೀಕ್ಷಿಸಬಹುದಾದ ಈ ಆಪ್ ಕಳೆದ ವರ್ಷದವರೆಗೆ ಪಟ್ಟಿಯಲ್ಲಿಯೇ ಇರಲಿಲ್ಲ ಎಂಬುದು ಸಹ ಮುಖ್ಯ ವಿಷಯವೇ.

ಟಾಪ್ 9 ಜನಪ್ರಿಯ ಆಪ್!

ಟಾಪ್ 9 ಜನಪ್ರಿಯ ಆಪ್!

ಭಾರತದಲ್ಲಿ ಗಟ್ಟಿಯಾಗಿ ಬೇರೂರಿರುವ ಕರೆ ಮಾಹಿತಿ ತಿಳಿಸುವ ಟ್ರೂ ಕಾಲರ್ ಭಾರತದಲ್ಲಿ ಹೆಚ್ಚು ಡೌನ್‌ಲೋಡ್ ಆಗುತ್ತಿರುವ ಆಪ್‌ಗಳ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಯಾವ ನಂಬರ್‌ನಿಂದ ಕರೆ ಬಂದರೂ ಆ ನಂಬರ್ ಮಾಹಿತಿಯನ್ನು ನೀಡುವ ಆಪ್ ಇದಾಗಿದೆ.

ಟಾಪ್ 8 ಜನಪ್ರಿಯ ಆಪ್!

ಟಾಪ್ 8 ಜನಪ್ರಿಯ ಆಪ್!

ಐಪಿಎಲ್ ಕೃಪೆಯ ಜೊತೆಗೆ ಹೊಚ್ಚ ಹೊಸ ಸಿನಿಮಾಗಳನ್ನು ವೀಕ್ಷಿಸಲು ಅನುಮತಿಸುವ ಜನಪ್ರಿಯ ಹಾಟ್‌ಸ್ಟಾರ್ ಆಪ್ ಭಾರತದಲ್ಲಿ ಹೆಚ್ಚು ಡೌನ್‌ಲೋಡ್ ಆಗುತ್ತಿರುವ ಆಪ್‌ಗಳ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಈ ವರ್ಷದಲ್ಲಿ ಈ ಆಪ್ ಟಾಪ್ 10 ರೊಳಗೆ ಕಾಲಿಡಲು ನೇರವಾಗಿ ಐಪಿಎಲ್ ಕ್ರಿಕೆಟ್ ಕಾರಣವಾಗಿದೆ.

ಟಾಪ್ 7 ಜನಪ್ರಿಯ ಆಪ್!

ಟಾಪ್ 7 ಜನಪ್ರಿಯ ಆಪ್!

ಭಾರತದ ಪ್ರಮುಖ ಟೆಲಿಕಾಂ ಕಂಪೆನಿ ಒಡೆತನದ ಏರ್‌ಟೆಲ್ ಟಿವಿ ಆಪ್ ಭಾರತದಲ್ಲಿ ಹೆಚ್ಚು ಡೌನ್‌ಲೋಡ್ ಆಗುತ್ತಿರುವ ಆಪ್‌ಗಳ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ತನ್ನ ಬಳಕೆದಾರರಿಗೆ ಉಚಿತವಾಗಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳನ್ನು ವೀಕ್ಷಿಸಲು ಏರ್‌ಟೆಲ್ ಟೆಲಿಕಾಂ ಸಹ ಅವಕಾಶ ಮಾಡಿಕೊಟ್ಟಿದ್ದನ್ನು ನಾವಿಲ್ಲಿ ನೋಡಬಹುದು.

ಟಾಪ್ 6 ಜನಪ್ರಿಯ ಆಪ್!

ಟಾಪ್ 6 ಜನಪ್ರಿಯ ಆಪ್!

ಭಾರತೀಯ ಟೆಲಿಕಾಂ ಅನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವ ಜಿಯೋವಿನ ಜಿಯೋ ಟಿವಿ ಅಪ್ಲಿಕೇಶನ್ ಜನಪ್ರಿಯತೆಯು ಆಶ್ಚರ್ಯಕರವಾಗಿ ಬದಲಾಗಿದೆ. ಭಾರತದಲ್ಲಿ ಹೆಚ್ಚು ಡೌನ್‌ಲೋಡ್ ಆಗುತ್ತಿರುವ ಆಪ್‌ಗಳ ಪಟ್ಟಿಯಲ್ಲಿ ಜಿಯೋ ಟಿವಿ ಆಪ್ ಆರನೇ ಸ್ಥಾನದಲ್ಲಿದೆ. ಲೈವ್ ಟಿವಿ, ಧಾರಾವಾಹಿಗಳು, ಪಂದ್ಯಗಳು, ಇತ್ಯಾದಿಗಳನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ.

ಟಾಪ್ 5 ಜನಪ್ರಿಯ ಆಪ್!

ಟಾಪ್ 5 ಜನಪ್ರಿಯ ಆಪ್!

ಒಂದು ಮೊಬೈಲ್‌ನಲ್ಲಿನ ಫೈಲ್‌ಗಳು, ಚಿತ್ರಗಳು ಮತ್ತು ವಿಡಿಯೋಗಳನ್ನು ಮತ್ತೊಂದು ಮೊಬೈಲ್‌ಗೆ ಸುಲಭವಾಗಿ ರವಾನಿಸಬಹುದಾದ ಶೇರ್‌ಇಟ್ ಆಪ್ ಭಾರತದಲ್ಲಿ ಹೆಚ್ಚು ಡೌನ್‌ಲೋಡ್ ಆಗುತ್ತಿರುವ ಆಪ್‌ಗಳ ಪಟ್ಟಿಯಲ್ಲಿ ಟಾಪ್ 5 ನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಶೇರ್‌ಇಟ್ ಈಗ ಸ್ವಲ್ಪ ಜನಪ್ರಿಯತೆಯನ್ನು ಕಳೆದುಕೊಂಡಿದೆ.

ಟಾಪ್ 4 ಜನಪ್ರಿಯ ಆಪ್!

ಟಾಪ್ 4 ಜನಪ್ರಿಯ ಆಪ್!

ಜನಪ್ರಿಯ ಇನ್‌ಸ್ಟಂಟ್ ಮೆಸೇಂಜರ್ ಆಪ್‌ಗಳಲ್ಲಿ ಒಂದಾದ ಫೇಸ್‌ಬುಕ್ ಮೆಸೇಂಜರ್ ಆಪ್ ಭಾರತದಲ್ಲಿ ಹೆಚ್ಚು ಡೌನ್‌ಲೋಡ್ ಆಗುತ್ತಿರುವ ಆಪ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಭಾರತದಲ್ಲಿ ಹೆಚ್ಚು ಡೌನ್‌ಲೋಡ್ ಆಗಿರುವ ಫೇಸ್‌ಬುಕ್ ಬಳಕೆ ಹೆಚ್ಚಿರುವುದರಿಂದಲೇ ಈ ಆಪ್‌ ಬಳಕೆ ಹೆಚ್ಚಾಗಿದೆ ಎನ್ನಬಹುದು.

ಟಾಪ್ 3 ಜನಪ್ರಿಯ ಆಪ್!

ಟಾಪ್ 3 ಜನಪ್ರಿಯ ಆಪ್!

ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಜನರು ಬಳಕೆ ಮಾಡುತ್ತಿರುವ ಜನಪ್ರಿಯ ಮೆಸೇಂಜಿಗ್ ಆಪ್ ವಾಟ್ಸ್‌ಆಪ್ ಭಾರತದಲ್ಲಿ ಹೆಚ್ಚು ಡೌನ್‌ಲೋಡ್ ಆಗುತ್ತಿರುವ ಆಪ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆದರೂ, ಕಳೆದ ವರ್ಷ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದ ವಾಟ್ಸ್‌ಆಪ್ ಈ ಬಾರಿ ಒಂದು ಸ್ಥಾನ ಇಳಿಕೆ ಕಂಡಿದೆ.

ಟಾಪ್ 2 ಜನಪ್ರಿಯ ಆಪ್!

ಟಾಪ್ 2 ಜನಪ್ರಿಯ ಆಪ್!

ಬಳಕೆದಾರರ ಡೇಟಾ ಸುರಕ್ಷತೆಯಲ್ಲಿ ಯುಸಿ ಬ್ರೌಸರ್ ಸರಿಯಾದ ಕ್ರಮ ಕೈಗೊಂಡಿಲ್ಲ ಎಂಬ ಆರೋಪದ ನಡುವೆಯೂ ಭಾರತದಲ್ಲಿ ಯುಸಿ ಬ್ರೌಸರ್ ಆಪ್ ಡೌನ್‌ಲೋಡ್ ಹೆಚ್ಚಾಗಿದೆ. ಭಾರತದಲ್ಲಿ ಹೆಚ್ಚು ಡೌನ್‌ಲೋಡ್ ಆಗುತ್ತಿರುವ ಆಪ್‌ಗಳ ಪಟ್ಟಿಯಲ್ಲಿ ಯುಸಿ ಬ್ರೌಸರ್ ಎರಡನೇ ಸ್ಥಾನ ಪಡೆದು ದಿಗ್ಗಜನೆನಿಸಿದೆ.

Riversong Jelly Kids GPS tracker hands-on - GIZBOT KANNADA
ಟಾಪ್ 1 ಜನಪ್ರಿಯ ಆಪ್!

ಟಾಪ್ 1 ಜನಪ್ರಿಯ ಆಪ್!

ಇಂಟರ್‌ನೆಟ್ ಸಂಪರ್ಕ್ ಹೊಂದಿರುವ ಪ್ರತಿ ಸ್ಮಾರ್ಟ್‌ಫೋನ್‌ನಲ್ಲಿಯೂ ಡೌನ್‌ಲೋಡ್ ಆಗಿರುವ ಆಪ್ ಎಂಬ ಹೆಸರು ಪಡೆದಿರುವ ಫೇಸ್‌ಬುಕ್ ಈ ವರ್ಷವೂ ಭಾರತದಲ್ಲಿ ಹೆಚ್ಚು ಡೌನ್‌ಲೋಡ್ ಆಗುತ್ತಿರುವ ಆಪ್‌ಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಕಳೆದ ಹಲವು ವರ್ಷಗಳಲ್ಲಿ ಫೇಸ್‌ಬುಕ್ ಮೊದಲ ಸ್ಥಾನದಿಂದ ಇಳಿದದ್ದು ಕಡಿಮೆಯೇ.!!

Most Read Articles
Best Mobiles in India

English summary
There’s an app for almost everything these days. Cabs, food, online tickets, banking -- we all turn to apps to make our lives convenient. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more