ವಾಯಿಸ್‌ ರೆಕಾರ್ಡಿಂಗ್ ಎಡಿಟ್ ಮಾಡಲು ಇಲ್ಲಿವೆ ಐದು ಅತ್ಯುತ್ತಮ ಆಪ್ಸ್‌!

|

ಪ್ರಸ್ತುತ ಬಹುತೇಕ ಅಗತ್ಯ ಕಾರ್ಯಗಳು ಸ್ಮಾರ್ಟ್‌ಫೋನ್ ಮೂಲಕವೇ ನಡೆಯುತ್ತವೆ. ಈಗಾಗಲೆ ಬಳಕೆದಾರರು ಫೋಟೊ ಎಡಿಟಿಂಗ್ ಮತ್ತು ವಿಡಿಯೊ ಎಡಿಟಿಂಗ್‌ ಕೆಲಸಗಳನ್ನು ಕೆಲವು ಅಪ್ಲಿಕೇಶನ್‌ಗಳಲ್ಲಿ ಮಾಡುತ್ತಾರೆ. ಹಾಗೆಯೇ ಎಂಪಿ4 ಫಾರ್ಮೇಟ್‌ನಲ್ಲಿರುವ ಮ್ಯೂಸಿಕ್ ಅನ್ನು ಎಂಪಿ3 ಫಾರ್ಮೇಟ್‌ಗೆ ಕನ್ವರ್ಟ್ ಮಾಡಲು ಸಹ ಆಪ್ ಬಳಕೆ ಮಾಡುತ್ತಾರೆ. ಅದೇ ರೀತಿ ವಾಯಿಸ್‌ ರೆಕಾರ್ಡಿಂಗ್‌ ಎಡಿಟ್ ಮಾಡಲು ಅತ್ಯುತ್ತಮ ಆಪ್ಸ್‌ಗಳು ಇವೆ.

ವಾಯಿಸ್‌ ಎಡಿಟ್ ಆಪ್‌

ಹೌದು, ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ವಾಯಿಸ್‌ ಎಡಿಟ್ ಆಪ್‌ಗಳು ಪ್ರಿ ಇನ್‌ಸ್ಟಾಲ್‌ ಆಗಿರುತ್ತವೆ. ಅದಲ್ಲವೇ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ವಾಯಿಸ್‌ ರೆಕಾರ್ಡಿಂಗ್‌ ಫೈಲ್‌ಗಳನ್ನು ಎಡಿಟ್ ಮಾಡಲು ಅನೇಕ ಆಪ್‌ಗಳು ಸಿಗುತ್ತವೆ. ಈ ಆಪ್‌ಗಳು ಸುಲಭವಾಗಿ ಎಡಿಟ್ ಮಾಡಬಹುದಾದ ಮತ್ತು ಹೆಚ್ಚುವರಿ ಆಡಿಯೊ ಕ್ಲಿಪ್‌ಗಳನ್ನು ಮಿಕ್ಸ್ ಮಾಡುವಂತಹ ಆಕರ್ಷಕ ಸೌಲಭ್ಯಗಳನ್ನು ಒದಗಿಸುತ್ತವೆ. ಅಂತಹ 5 ಅತ್ಯುತ್ತಮ ವಾಯಿಸ್ ಎಡಿಟಿಂಗ್ ಆಪ್‌ಗಳ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ವಾಯಿಸ್‌ ಪ್ರೊ

ವಾಯಿಸ್‌ ಪ್ರೊ

ವಾಯಿಸ್‌ ಪ್ರೊ ವಾಯಿಸ್ ಎಡಿಟಿಂಗ್ ಆಪ್ ಭಿನ್ನ ಫೀಚರ್ಸ್‌ಗಳಿಂದ ಗಮನ ಸೆಳೆದಿದ್ದು, ಒಟ್ಟು 100 ಭಿನ್ನ ಮಾದರಿ ಫಾರ್ಮೇಟ್‌ನಲ್ಲಿ ರೆಕಾರ್ಡಿಂಗ್ ಅವಕಾಶ ನೀಡುತ್ತದೆ. ವಾಯಿಸ್ ರೆಕಾರ್ಡಿಂಗ್ ಫೈಲ್‌ಗಳನ್ನು ಮೊನೊ ಅಥವಾ ಸ್ಟೀರಿಯೊ ಫಾರ್ಮೇಟ್‌ನಲ್ಲಿ ದಾಖಲಿಸಬಹುದು. ಇದರೊಂದಿಗೆ ನಿಮ್ಮ ರೆಕಾರ್ಡಿಂಗ್‌ಗೆ ಹಿನ್ನಲೆ ಮ್ಯೂಸಿಕ್ ಸಹ ಸೇರಿಸಬಹುದಾಗ ಸೌಲಭ್ಯ ಇದೆ. ಅದಕ್ಕಾಗಿ ಮಿಕ್ಸ್ ಮತ್ತು ಮರ್ಜ್ ಆಯ್ಕೆಗಳು ಇವೆ. ಕಾಲ್ ರೆಕಾರ್ಡಿಂಗ್ ಆಯ್ಕೆ ಸಹ ಇದೆ.

ಮ್ಯೂಸಿಕ್ ಎಡಿಟರ್

ಮ್ಯೂಸಿಕ್ ಎಡಿಟರ್

ಮ್ಯೂಸಿಕ್ ಎಡಿಟರ್ ಅಪ್ಲಿಕೇಶನ್ ಹಾಡುಗಳ ಎಡಿಟ್‌ಗೆ ಬೆಸ್ಟ್ ತಾಣವಾಗಿದೆ. ಈ ಆಪ್ ಮೂಲಕ ಹಾಡುಗಳನ್ನು ಕಟ್ ಮಾಡಬಹುದು, ರಿಂಗ್‌ಟ್ಯೂನ್ ಸಿದ್ಧಪಡಿಸಿಕೊಳ್ಳಬಹುದು, ಹಾಡುಗಳನ್ನು ಎಡಿಟ್ ಮಾಡಬಹುದು ಹಾಗೂ ಇನ್ನಿತರೆ ಎಡಿಟಿಂಗ್ ಸೌಲಭ್ಯಗಳು ಸಹ ಇವೆ. ಜೊತೆಗೆ ಈ ಆಪ್‌ನಲ್ಲಿ ಬಳಕೆದಾರರು ಆಡಿಯೊ ಕಂಪೋಸ್, ಟ್ರಿಮ್ ಆಡಿಯೊ, ಮರ್ಜ್ ಆಡಿಯೊ, ಫೈಲ್ ಸೇರಿಸುವುದು ಸೌಲಭ್ಯಗಳನ್ನು ಬಳಕೆ ಮಾಡಬಹುದಾಗಿದೆ.

ವೇವ್ ಎಡಿಟರ್

ವೇವ್ ಎಡಿಟರ್

ಈ ವೇವ್ ಎಡುಟರ್ ಆಪ್ ರೆಕಾರ್ಡಿಂಗ್ ಮತ್ತು ಎಡಿಟ್‌ಗೆ ಅತ್ಯುತ್ತಮ ಆಗಿದೆ. ಈ ಆಪ್‌ನಲ್ಲಿ ಮಲ್ಟಿ ಟ್ರಾಕ್ ಮಿಕ್ಸಿಂಗ್ ಮತ್ತು ಎಡಿಟಿಂಗ್ ಸೌಲಭ್ಯಗಳು ಇವೆ. ಎಂಪಿ3 ರೆಕಾರ್ಡಿಂಗ್ ಫಾರ್ಮೇಟ್‌ನಲ್ಲಿ ಸೇವ್ ಮಾಡಬಹುದಾಗಿದೆ. ಇದರೊಂದಿಗೆ ಇನ್ನಷ್ಟು ಆಕರ್ಷಕ ಫೀಚರ್‌ಗಳು ಸಹ ಇವೆ. ಒಟ್ಟಾರೆ ಬಳಕೆದಾರರಿಗೆ ಈ ಆಪ್ ಬಳಕೆ ಸುಲಭ ಅನಿಸಲಿದೆ.

ಆಡಿಯೊ ಎವಲ್ಯೂಷನ್ ಮೊಬೈಲ್ ಸ್ಟುಡಿಯೊ

ಆಡಿಯೊ ಎವಲ್ಯೂಷನ್ ಮೊಬೈಲ್ ಸ್ಟುಡಿಯೊ

ಆಡಿಯೊ ಎವಲ್ಯೂಷನ್ ಮೊಬೈಲ್ ಸ್ಟುಡಿಯೊ ಎಡಿಟಿಂಗ್ ಅಪ್ಲಿಕೇಶನ್‌ನಲ್ಲಿ ಅಡ್ವಾನ್ಸಡ್ ಫೀಚರ್ಸ್‌ಗಳು ಸೇರಿವೆ. ವಾಯಿಸ್‌ ಕಟ್, ಟ್ರಿಮ್, ಮ್ಯೂವ್, ಸ್ಲಿಟ್‌, ಮಲ್ಟಿಟ್ರಾಕ್ ರೆಕಾರ್ಡಿಂಗ್ ನಂತಹ ಆಕರ್ಷಕ ಸೌಲಭ್ಯಗಳು ಇವೆ. ಈ ಆಪ್ ಬಳಕೆಯು ಸಹ ಸರಳವಾಗಿದೆ.

FL ಮೊಬೈಲ್ ಸ್ಟುಡಿಯೊ

FL ಮೊಬೈಲ್ ಸ್ಟುಡಿಯೊ

ಆಡಿಯೊ ಕ್ರಿಯೆಷನ್ ಮಾಡಲು FL ಮೊಬೈಲ್ ಸ್ಟುಡಿಯೊ ಆಪ್‌ ಅತ್ಯುತ್ತಮ ಅನಿಸಲಿದೆ. ಮ್ಯೂಸಿಕ್ ಕ್ರಿಯೆಟ್ ಮಾಡುವ ಆಯ್ಕೆ, ರೆಕಾರ್ಡಿಂಗ್‌ನಲ್ಲಿ ಸ್ಪಷ್ಟತೆ ಇರಲಿದೆ. ಬೇಸಿಕ್ ಎಡಿಟಿಂಗ್ ಫೀಚರ್ಸ್‌ಗಳ ಜೊತೆಗೆ ಆಡಿಯೊ ಡಕ್ಕರ್, ಫಿಲ್ಟರ್, ರಿವರ್ಬ್, ಸೇರಿದಂತೆ ಇತರೆ ಎಕ್ಸ್‌ಟ್ರಾ ಎಫೆಕ್ಟ್ ಸೌಲಭ್ಯಗಳು ಲಭ್ಯ ಇವೆ. ಪ್ರೀವ್ಯೂವ್ ಕೇಳುವ ಆಯ್ಕೆ ಸಹ ಇದೆ.

Most Read Articles
Best Mobiles in India

English summary
best audio editing app for android will allow you to do all of your basic and advanced editing on the go.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X