ಹವಾಮಾನ ವರದಿಯ ಆಪ್ ಗಳು ಜಾಹೀರಾತುದಾರರಿಗೆ ನಿಮ್ಮ ಡಾಟಾವನ್ನು ಮಾರುತ್ತಿವೆ ಹುಷಾರು!

|

ಸ್ಮಾರ್ಟ್ ಫೋನ್ ಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಬಳಕೆ ಮಾಡುವ ಆಪ್ ಎಂದರೆ ಅದು ಹವಾಮಾನ ವರದಿಯನ್ನು ನೀಡುವಂತಹ ವೆದರ್ ಆಪ್ ಗಳು. ಆಂಡ್ರಾಯ್ಡ್ ಡಿವೈಸೇ ಆಗಿರಲಿ ಅಥವಾ ಐಫೋನೇ ಆಗಿರಲಿ ಈ ಆಪ್ ಗಳು ನೀವು ಮನೆಯಿಂದ ಹೊರಗೆ ಕಾಲಿಡುವಾಗ ಕೈಯಲ್ಲಿ ಕೊಡೆ ಹಿಡಿದು ಹೋಗಬೇಕೇ ಅಥವಾ ಬೇಡವೇ ಎಂಬುದನ್ನು ತಿಳಿಸಿ ಬಿಡುತ್ತದೆ. ಅಂದರೆ ಮಳೆ ಬರುತ್ತಾ ಅಥವಾ ಇವತ್ತು ಬಿಸಿಲು ಹೇಗಿರುತ್ತದೆ ಎಂಬುದನ್ನು ಇವು ನಿಮಗೆ ಮಾಹಿತಿ ನೀಡುತ್ತೆ.

ಮಾಹಿತಿ ರವಾನೆ:

ಮಾಹಿತಿ ರವಾನೆ:

ಈ ವೆದರ್ ಆಪ್ ಗಳು ನಿಮ್ಮ ಲೊಕೇಷನ್ ಮಾಹಿತಿಯನ್ನು ಪ್ರತಿ ಕ್ಷಣವೂ ಟ್ರ್ಯಾಕ್ ಮಾಡುತ್ತಲೇ ಇರುತ್ತವೆ ಮತ್ತು ಆ ಮೂಲಕ ನಿಮಗೆ ಹವಾಮಾನದ ನಿಖರ ಮಾಹಿತಿಯನ್ನು ನೀಡುತ್ತವೆ. ಆದರೆ ಇದನ್ನು ಆನ್ ಮಾಡಿದಾಗ ಇವುಗಳು ಗುಪ್ತವಾಗಿ ನಿಮ್ಮ ಡಾಟಾವನ್ನು ಜಾಹೀರಾತುದಾರರಿಗೆ ಮಾರುತ್ತಿವೆ.

ಡಾಟಾ ಮಾರಾಟ:

ಡಾಟಾ ಮಾರಾಟ:

ಲಾಸ್ ಏಂಜಲೀಸ್ ನಗರದ ಪ್ರಾಸಿಕ್ಯೂಟರ್ ಒಬ್ಬರು ಪ್ರಸಿದ್ಧ ವೆದರ್ ಆಪ್ -ವೆದರ್ ಚಾನಲ್ ಆಪ್ ಬಗ್ಗೆ ಮೊಕದ್ದಮೆಯನ್ನು ಹೂಡಿದ್ದು, ಈ ಆಪ್ ಜಾಹೀರಾತುದಾರರಿಗೆ ಬಳಕೆದಾರರ ವಯಕ್ತಿಕ ಡಾಟಾವನ್ನು ಮಾರುತ್ತಿದೆ ಎಂದು ಹೇಳಿದ್ದಾರೆ.

ಮೊಕದ್ದಮೆ:

ಮೊಕದ್ದಮೆ:

ಈ ಮೊಕದ್ದಮೆಯಲ್ಲಿ ಲಾಸ್ ಏಂಜಲೀಸ್ ಸಿಟಿಯ ಪ್ರಾಸಿಕ್ಯೂಟರ್ ತಿಳಿಸಿರುವಂತೆ ಈ ಆಪ್ ನಲ್ಲಿ ಸುಮಾರು 45 ಮಿಲಿಯನ್ ಮಾಸಿಕ ಆಕ್ಟೀವ್ ಬಳಕೆದಾರರಿದ್ದು, ಅವರ ಲೊಕೇಷನ್ ಮಾಹಿತಿ ಸೇರಿದಂತೆ ಇತರೆ ಮಾಹಿತಿಗಳನ್ನು ಇದು ಜಾಹೀರಾತು ಕಂಪೆನಿಗಳಿಗೆ ಜಾಹೀರಾತಿನ ಉದ್ದೇಶದಿಂದ ಬಳಕೆದಾರರಿಗೆ ಮಾಹಿತಿ ನೀಡದೇ ತಿಳಿಸಲಾಗುತ್ತಿದೆ. ಇದು ಜಾಹೀರಾತು ಕಂಪೆನಿಗಳ ಹಣ ಸಂಗ್ರಹಣೆಯ ಟ್ರಿಕ್ಸ್ ಕೂಡ ಆಗಿದೆ.

ಡಾಟಾ ಬ್ರೀಚ್:

ಡಾಟಾ ಬ್ರೀಚ್:

ಈ ಆಪ್ ನ ಮಾಲೀಕತ್ವದವನ್ನು ಐಟಿಎಂ ಸಂಸ್ಥೆ ಹೊಂದಿದ್ದು ಮುಗ್ಧ ಬಳಕೆದಾರರ ಲೊಕೇಷನ್ ನ್ನು ಟ್ರ್ಯಾಕ್ ಮಾಡಿ ಅದನ್ನು ಕಾನೂನುಬಾಹಿರವಾಗಿ ಇತರರಿಗೆ ನೀಡಲಾಗುತ್ತಿದೆ. ಯಾವಾಗ ಬಳಕೆದಾರರು ಹವಾಮಾನ ವರದಿಯನ್ನು ಪಡೆಯಲು ಮುಂದಾಗುತ್ತಾರೋ ಆಗ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ. ಆ ಮೂಲಕ ಬಳಕೆದಾರರ ವಯಕ್ತಿಕ ಮಾಹಿತಿಗಳು ಅನಾಮಿಕರಿಗೆ ಹಂಚಿಕೆಯಾಗುತ್ತಿದೆ.

ಪರಿಣಾಮಕ್ಕೆ ಸಿದ್ಧರಾಗಿ:

ಪರಿಣಾಮಕ್ಕೆ ಸಿದ್ಧರಾಗಿ:

ಅಸೋಸಿಯೇಟ್ ಪ್ರೆಸ್ ನ ವರದಿಯ ಪ್ರಕಾರ ಮೈಕೆಲ್ ಫೀಯರ್ ಅವರು ಹೇಳುವಂತೆ " ಒಂದು ವೇಳೆ ನೀವು ಇಂತಹ ಕಂಪೆನಿಗಳಿಗೆ ನಿಮ್ಮ ಮಾಹಿತಿಗಳನ್ನು ನೀಡಲು ಸಿದ್ಧರಿದ್ದಲ್ಲಿ ಅದರಿಂದ ಮುಂದಾಗುವ ಪರಿಣಾಮವನ್ನು ಎದುರಿಸುವುದಕ್ಕೂ ಸಿದ್ಧರಿರಬೇಕಾಗುತ್ತದೆ."

ಐಬಿಎಂ ಸ್ಪಷ್ಟನೆ:

ಐಬಿಎಂ ಸ್ಪಷ್ಟನೆ:

ಇನ್ನೊಂದೆಡೆ ಐಬಿಎಂ ಕಂಪೆನಿಯು ತನ್ನ ಡಾಟಾ ಪ್ರಾಕ್ಟೀಸ್ ನ್ನು ಸಮರ್ಥಿಸಿಕೊಂಡಿದೆ ಅದರ ಬಹಿರಂಗಪಡಿಸುವಿಕೆಯಲ್ಲಿ ರಕ್ಷಣೆ ಇದೆ ಎಂದು ಹೇಳುತ್ತಿದೆ.

ಕೋಟಿ ಡಾಲರ್ ಮೌಲ್ಯ:

ಲಾಸ್ ಏಂಜಲೀಸ್ ನಲ್ಲಿ ಇದೀಗ ಪ್ರತಿ ಉಲ್ಲಂಘನೆಗೆ $2,500 (ಅಂದಾಜು Rs 1,74,000) ಸಿವಿಲ್ ಪೆನಲ್ಟಿಯನ್ನು ಪ್ರಯತ್ನಿಸುತ್ತಿದೆ. ಒಂದು ವೇಳೆ ಫಿರ್ಯಾದುದಾರರು ಈ ಪ್ರಕರಣವನ್ನು ಗೆದ್ದರೆ ಕ್ಯಾಲಿಫೋರ್ನಿಯಾದ ಅಪ್ಲಿಕೇಷನ್ ಬಳಕೆದಾರರ ಸಂಖ್ಯೆಯನ್ನು ಆಧರಿಸಿ ಲಕ್ಷಾಂತರ ಡಾಲರ್ ನಲ್ಲಿ ಇದು ರನ್ ಆಗುವ ಸಾಧ್ಯತೆ ಇದೆ.

ಡಾಟಾ ಪ್ರೈವೆಸಿ ಚಿಂತೆ:

ಆದರೆ ಗಮನಿಸಬೇಕಾಗಿರುವ ಅಂಶವೇನೆಂದರೆ ಡಾಟಾ ಪ್ರೈವೆಸಿ ವಿಚಾರವು ಇತ್ತೀಚೆಗೆ ಕಾನೂನು ಹೋರಾಟ ನಡೆಸುವವರ ಪ್ರಮುಖ ಅಂಶವಾಗಿದ್ದು ಅದರಲ್ಲಿ ಗೂಗಲ್, ಫೇಸ್ ಬುಕ್ ಸೇರಿದಂತೆ ಹಲವು ಪ್ರಮುಖ ಕಂಪೆನಿಗಳು ಕೂಡ ಸೇರಿವೆ. ವಿಶ್ವದಾದ್ಯಂತದ ಹಲವು ಸರ್ಕಾರವು ಕೂಡ ಈ ವಿಚಾರದ ಬಗ್ಗೆ ತಲೆಕೆಡಿಸಿಕೊಂಡಿವೆ.

Best Mobiles in India

English summary
Beware! Weather apps on your phone could be secretly selling your data to advertisers

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X