ಎಲ್ಲದರ ಮಧ್ಯೆ ಹೊಳೆಯುತ್ತಿದೆ ಡೆಲ್ ಎಕ್ಸ್‌ಪಿಎಸ್ 13(2018)!

By Prateeksha Hosapattankar
|

ಡೆಲ್ ಕಂಪನಿಯು ಎಕ್ಸ್‍ಪಿಎಸ್ 13(2018) ನ ಮೂಲಕ ಎಲ್ಲವನ್ನೂ ಸರಿ ಮಾಡಿದೆ. ಈ ನೋಟ್‍ಬುಕ್ ನಲ್ಲಿ ತಪ್ಪು ಕಂಡು ಹಿಡಿಯುವುದಾದರೆ ಯಾರೊ ಮಹಾನ್ ಬಳಕೆದಾರನೇ ಇರಬೇಕು. ಎಕ್ಸ್‍ಪಿಎಸ್ ನಲ್ಲಿ ಹೊಸ ಉತ್ಪನ್ನ ಸೇರ್ಪಡೆಯಾಗಿ ಸ್ಪರ್ಧೆಯಲ್ಲಿ ಈಗ ಮುಂಚೂಣಿಯಲ್ಲಿದೆ. ಇದರಲ್ಲಿ ಸಂತಸದ ವಿಷಯವೆಂದರೆ ಆಪಲ್ ನ ಮ್ಯಾಕ್‍ಬುಕ್ ಹಾಗೆ ಕಾಣಲು ಪ್ರಯತ್ನಿಸಿಲ್ಲಾ. ಮೊದಲಿಗಿಂತ ಇನ್ನೂ ಉತ್ತಮವಾದದ್ದನ್ನು ನೀಡಿದೆ ಎಂದೆನಿಸುತ್ತದೆ. ಏನೇ ಆದರೂ ದುಡ್ಡು ಖರ್ಚು ಮಾಡಿದಕ್ಕೂ ಸಾರ್ಥಕ ಎನಿಸುತ್ತದೆ.

ಎಲ್ಲದರ ಮಧ್ಯೆ ಹೊಳೆಯುತ್ತಿದೆ ಡೆಲ್ ಎಕ್ಸ್‌ಪಿಎಸ್ 13(2018)!

ಡಿಸೈನ್:

ಡೆಲ್ ಎಕ್ಸ್‍ಪಿಎಸ್ 13 ಅನ್ನು ಮರು ವಿನ್ಯಾಸ ಮಾಡಿದೆ. ಮೂಲ ಚೌಕಟ್ಟು ಅದೇ ಆದರೂ ಬಿಳಿ ಬಣ್ಣದ ವಿನ್ಯಾಸ ಹೊಸ ರೂಪ ಮತ್ತು ಅನುಭವ ನೀಡುತ್ತದೆ. ಕಂಪನಿ ತಿಳಿಸುವ ಹಾಗೆ ತುಂಬಾ ಜಾಗೃತೆಯಿಂದ ಭವಿಷ್ಯದಲ್ಲಿ ಹೇಗೆ ಕಾಣಬಹುದು ಎಂಬುದನ್ನು ಕೂಡ ಮನಸಲ್ಲಿ ಇಟ್ಟುಕೊಂಡು ಕ್ಷೇತ್ರದಲ್ಲೇ ಮೊದಲ ಬಾರಿಗೆ ವೊವನ್ ಗ್ಲಾಸ್ ಉಪಯೋಗಿಸಲಾಗಿದೆ, ಅದನ್ನು ನಾವು ಅನುಭವಿಸಬಹುದು ಕೂಡ. ಇದು ಕಲೆಗಳನ್ನು ಆಕರ್ಷಿಸುವುದು ತುಂಬಾನೇ ಅಪರೂಪ ಹಾಗೆನಾದರು ಆದಲ್ಲಿ ಹಸಿ ಬಟ್ಟೆಯಿಂದ ಒರೆಸಿದಲ್ಲಿ ಕಲೆ ಮಾಯ.

ಮೊದಲಿನ ಉತ್ಪನ್ನಗಳಿಗೆ ಹೋಲಿಸಿದರೆ ಡಿಸ್ಪ್ಲೆ ಹೊರಗಿನ ಭಾಗ ಶೇಕಡಾ23 ರಷ್ಟು ಚಿಕ್ಕದಾಗಿದೆ. ಬಂಗಾರದ ಗುಲಾಬಿ ಮತ್ತು ಬಿಳಿ ಬಣ್ಣದ ವಿನ್ಯಾಸ ಯುವಿ ಪದರನ್ನು ಕೂಡ ಹೊಂದಿದೆ, ಶಾಶ್ವತ ಮಾರ್ಕರ್ ನಿಂದ ತಪ್ಪಿ ಬರೆದರೂ ಕೂಡ ಬಳಕೆದಾರರು ಅದನ್ನು ಅಳಿಸಬಹುದು.

ಈ ಬಾರಿ ನೋಟ್‍ಬುಕ್ ಕೆಳಗಡೆ ಭಾಗದ ವಿನ್ಯಾಸ ಚೆನ್ನಾಗಿದೆ. ಕಂಪನಿ ತನ್ನೆಲ್ಲಾ ಕಾನೂನು ಬದ್ಧ ಮಾಹಿತಿ ಹಾಗೂ ಇತರ ಸ್ಟಿಕ್ಕರ್ ಗಳನ್ನು ತೆಗೆದು ಬಿಟ್ಟು ಈಗ ಅಚ್ಚುಕಟ್ಟಾಗಿ ಕಾಣುತ್ತಿದೆ. ಈಗ ಕೇವಲ ಫ್ಯಾನ್ ಗ್ರಿಲ್ ಮತ್ತು ಎಕ್ಸ್‍ಪಿಎಸ್ ಲೊಗೊ ಮಾತ್ರ ಹೊಂದಿದೆ.

ಎಲ್ಲದರ ಮಧ್ಯೆ ಹೊಳೆಯುತ್ತಿದೆ ಡೆಲ್ ಎಕ್ಸ್‌ಪಿಎಸ್ 13(2018)!

ಡಿಸ್ಪ್ಲೆ:

ಡೆಲ್ ಗಂಭೀರವಾಗಿ ಮಾಡಿರುವ ಬದಲಾವಣೆಗಳಲ್ಲಿ ಡಿಸ್ಪ್ಲೆ ಕೂಡ ಒಂದು. ಈಗ ಬಳಕೆದಾರರು ನಾನ್ ಟಚ್ 1920 * 1080 ಪಿ ಎಚ್‍ಡಿ ಡಿಸ್ಪ್ಲೆ ಅಥವಾ 4ಕೆ ಅಲ್ಟ್ರಾ ಎಚ್‍ಡಿ ಇನ್ಫಿನಿಟಿ ಎಡ್ಜ್ ಡಿಸ್ಪ್ಲೆ 3840 * 21 60 ಪಿಕ್ಸೆಲ್ ರೆಸೊಲ್ಯುಶನ್ ಯಾವುದಾದರೂ ಒಂದು ಆಯ್ಕೆ ಮಾಡುವ ಸ್ವಾತಂತ್ರ್ಯ ಹೊಂದಿದ್ದಾರೆ. ಸ್ಪರ್ಧೆಯಲ್ಲಿ ಇದು ಎಲ್ಲಕ್ಕಿಂತ ಉತ್ತಮ ಡಿಸ್ಪ್ಲೆ ಹೊಂದಿದೆ.

ಟಚ್‍ಸ್ಕ್ರೀನ್ ನಲ್ಲಿ ಆಂಟಿ-ರಿಫ್ಲೆಕ್ಟಿವ್ ಕೋಟಿಂಗ್ ಬಹಳಷ್ಟು ಮಟ್ಟಿಗೆ ಸ್ಕ್ರೀನ್ ಮಬ್ಬಾಗದಿರುವಂತೆ ನೋಡಿಕೊಳ್ಳುವಂತೆ ನೋಡಿಕೊಳ್ಳುತ್ತದೆ. ಇದಕ್ಕೂ ಹೆಚ್ಚಿಗೆ ಮೆಚ್ಚುವಂತಹುದು ಏನೆಂದರೆ ಡಿಸ್ಪ್ಲೆ ಬ್ರೈಟ್ನೆಸ್. ನಾವು ಶೇಕಡಾ 100 ಬ್ರೈಟ್ನೆಸ್ ಇಟ್ಟಿರುವುದೇ ಅಪರೂಪ, ಅರ್ಧವೇ ಸಾಲುತ್ತಿತ್ತು. 13 ಇಂಚಿನ ಹೈ ರೆಸ್ಯುಲ್ಯುಷನ್ ಪ್ಯಾನೆಲ್ ಹೊಂದಿದ್ದು ಬಣ್ಣಗಳೆಲ್ಲಾ ಸುಂದರವಾಗಿ ಎದ್ದು ಕಾಣುತ್ತವೆ.

ಎಲ್ಲದರ ಮಧ್ಯೆ ಹೊಳೆಯುತ್ತಿದೆ ಡೆಲ್ ಎಕ್ಸ್‌ಪಿಎಸ್ 13(2018)!

ಕೀಬೋರ್ಡ್ ಮತ್ತು ಟ್ರ್ಯಾಕ್‍ಪ್ಯಾಡ್:

ಡೆಲ್ ಎಂದಿಗೂ ಕೀ ಬೋರ್ಡ್ ವಿಷಯದಲ್ಲಿ ಉತ್ತಮವಾದದ್ದನ್ನು ನೀಡಿದೆ ಈ ಬಾರಿಯೂ ನೀಡಿದೆ. ತುಂಬಾ ಕಾಲದ ವರೆಗೆ ಟೈಪ್ ಮಾಡಲು ಅನುವು ಮಾಡಿ ಕೊಡುತ್ತದೆ ಜೊತೆಗೆ ಕೀಲಿ ಮಣೆಯಲ್ಲಿನ ಸ್ಪೇಸ್ ಸರಿಯಾಗಿದೆ ಅದರ ಬಗ್ಗೆ ಉತ್ತಮ ಅಭಿಪ್ರಾಯ ಬಂದಿದೆ. ಎರಡು ಮಟ್ಟದ ಬ್ಯಾಕ್‍ಲೈಟ್ ಸಿಗುತ್ತದೆ.

ಟಚ್‍ಪ್ಯಾಡ್ ವೊವನ್ ಗ್ಲಾಸ್ ಸಾವiಗ್ರಿಯ ಪದರು ಹೊಂದಿದ್ದು ಗೆರೆ ಮತ್ತು ಕಲೆಗಳಿಂದ ದೂರವಿಡುತ್ತದೆ. ಇದೇ ದರ್ಜೆಯದನ್ನು ಹೋಲಿಸಿದರೆ ಸುಲಲಿತ, ಪ್ರತಿಕ್ರಿಯೆ,ನಿಖರತೆ ಮತ್ತು ಕ್ಲಿಕ್ ನ ಅನುಭವ ಈ ನೋಟ್‍ಬುಕ್ ನಲ್ಲಿ ಉತ್ತಮವಾಗಿದೆ.

ಕನೆಕ್ಟಿವಿಟಿ:

ಬೇಸರದ ಸಂಗತಿಯೆಂದರೆ ಎಕ್ಸ್‍ಪಿಎಸ್ 13 ಅನ್ನು 0.46 ಇಂಚಿಗೆ ಕಡಿಮೆ ಮಾಡಲು ಹೋಗಿ ಕಂಪನಿ ಸ್ಟ್ಯಾಂಡರ್ಡ್ ಯುಎಸ್‍ಬಿ ಟೈಪ್ ಎ ಪೋರ್ಟ್ ಮತ್ತು ಫುಲ್ ಸೈಜ್ ಕಾರ್ಡ್ ರೀಡರ್ ಸ್ಲೊಟ್ ಗಳನ್ನು ತೆಗೆಯಬೇಕಾಯಿತು. ಎಡಗಡೆ ಭಾಗದ 2 ಥಂಡರ್‍ಬೋಲ್ಟ್ 3 ಪೋರ್ಟ್ಸ್ ಚಾರ್ಜ್ ಮಾಡಲು ಹಾಗೂ ಅತಿ ವೇಗದ ಪೆರಿಫಿರಲ್ ಗಳನ್ನು ಪ್ಲಗ್ ಮಾಡಲು ಉಪಯೋಗಿಸಬಹುದು. ಇದು 5 ಬಿಳಿ ಲೈಟ್ ಬ್ಯಾಟರಿ ಗೊಜ್ ಕೂಡ ಹೊಂದಬಲ್ಲದು ಬ್ಯಾಟರಿ ಮಟ್ಟವನ್ನು ತೋರಿಸಲು.

ಬಲಗಡೆಗೆ 3.5 ಎಮ್‍ಎಮ್ ಆಡಿಯೊ ಜ್ಯಾಕ್ ಮತ್ತು ಮೈಕ್ರೊಎಸ್‍ಡಿ ಕಾರ್ಡ್ ಸ್ಲೊಟ್ ಹಾಗೂ ಯುಎಸ್‍ಬಿ ಟೈಪ್-ಸಿ ಪೋರ್ಟ್ ಕಾಣಬಹುದು. ಥಂಡರ್ ಬೊಲ್ಟ್ 3 ಪೋರ್ಟ್ಸ್ 4 ಸಾಲಿನ ಪಿಎಸ್‍ಐ ಕನೆಕ್ಷನ್ ಕೂಡ ಸಪೋರ್ಟ್ ಮಾಡುತ್ತದೆ. ಇದು ಆಟವಾಡುವ ಉತ್ಸಾಹಿಗಳಿಗೆ ನೋಟ್‍ಬುಕ್ ನಲ್ಲಿ ಇಜಿಪಿಯು (ಎಕ್ಸ್‍ಟರ್ನಲ್ ಗ್ರಾಫಿಕ್ಸ್ ಕಾರ್ಡ್) ಉಪಯೋಗಿಸಲು ಅನುವು ಮಾಡುತ್ತದೆ.

ಎಲ್ಲದರ ಮಧ್ಯೆ ಹೊಳೆಯುತ್ತಿದೆ ಡೆಲ್ ಎಕ್ಸ್‌ಪಿಎಸ್ 13(2018)!

ಕಾರ್ಯನಿರ್ವಹಣೆ:

ನೂತನ ಇಂಟೆಲ್ ಪ್ರೊಸೆಸರ್ ಅನ್ನು ಹೊಂದಿರುವುದರಿಂದ ವೇಗವಾಗಿ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಬೇಕಾಗಿಲ್ಲಾ. ಇದರ ಶಕ್ತಿ ತುಂಬಲು 1.80 ಗಿಗಾ ಹಡ್ಜ್ ಇಂಟೆಲ್ ಕೋರ್ ಕೊನ್ಫಿಗರೇಷನ್, 8 ಜಿಬಿ ರಾಮ್ ಹೊಂದಿದೆ, ಇದು ವಿಪರೀತದ ಕೆಲಸ ನಿಭಾಯಿಸಲು ಸಾಕು. ನಾವು ಎಲ್ಲಾ ರೀತಿಯ ಕೆಲಸ ಮಾಡಿ ನೋಡಿದಾಗ ಯಾವುದೇ ರೀತಿಯ ನಕರಾತ್ಮಕ ಅಂಶ ಕಂಡು ಬಂದಿಲ್ಲಾ. ಡೆಲ್ ಹೇಳುವ ಹಾಗೆ ಅದರ ಹಿಂದಿನ ಉತ್ಪನ್ನಕ್ಕಿಂತ ಹೊಸ ಕೊನ್ಫಿಗರೇಷನ್ ಶೇಕಡಾ 40 ರಷ್ಟು ಹೆಚ್ಚು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಅದನ್ನು ಉಪಯೋಗಿಸಿದಾಗ ಅನುಭವಕ್ಕೆ ಬರುತ್ತದೆ.

ವಿಂಡೊಸ್ 10 ರಲ್ಲಿ ಟಚ್‍ಸ್ಕ್ರೀನ್ ಯಾವತ್ತೂ ಒಳ್ಳೆಯ ಕ್ಷೇತ್ರವಾಗಿಲ್ಲಾ ಆದರೆ ಬೇರೆದಕ್ಕೆ ಹೋಲಿಸಿದರೆ ಇದರಲ್ಲಿ ಅನುಭವ ಉತ್ತಮವಾಗಿದೆ. ಇದೆಲ್ಲಾ ಫೀಚರ್ ಗಳ ಮಧ್ಯೆ 4ಕೆ ಟಚ್‍ಸ್ಕ್ರೀನ್ ಬಿಟ್ಟು ಇರಲಾಗದು. ಟಚ್‍ಸ್ಕ್ರೀನ್ ಕೆಲಸದ ವೇಗದ ಕಡಿಮೆ ಮಾಡುವುದಾದಲ್ಲಿ ಮೌಸ್ ಉಪಯೋಗಿಸಬಹುದು.

ಬ್ಯಾಟರಿ ವಿಷಯಕ್ಕೆ ಬಂದರೆ ಎಕ್ಸ್‍ಪಿಎಸ್ 13 ಶಕ್ತಿಯ ಕೇಂದ್ರವಾಗಿದೆ. ಕಂಪನಿ ಲ್ಯಾಪ್‍ಟಾಪ್ ಕಡಿಮೆ ಉಪಯೋಗಿಸಿದ ನಂತರ 19 ಗಂಟೆ ಬರುವುದೆಂದು ಹೇಳಿದರೂ ಕೂಡ ನಾವು 8 ಗಂಟೆ 30 ನಿಮಿಷ ಉಪಯೋಗಿಸಿದೆವು. ಅದು ಕೂಡ ಉದ್ದದ ಟೈಪಿಂಗ್ ಕಾರ್ಯ, ಅಂತರ್ಜಾಲ ಹೆಚ್ಚಿಗೆ ಬಳಸಿ ಮತ್ತು ಕೆಲ ಆಟಗಳನ್ನು ಆಡಿ. ಬ್ಯಾಟರಿ ಬ್ಯಾಕಪ್ ಅದರ ಹಿಂದಿನ ಉತ್ಪನ್ನಗಳಿಗೆ ಹೋಲಿಸಿದರೆ ಮೆಚ್ಚುವಂತಹುದು. 4ಕೆ ಡಿಸ್ಪ್ಲೆಯಿಂದಾಗಿ ಬಹಳಷ್ಟು ಬ್ಯಾಟರಿ ಉಪಯೋಗಿಸಲಾಗುತ್ತದೆ. ಹೀಗಾಗಿ 1080ಪಿ ಲ್ಯಾಪ್‍ಟಾಪ್ ಉತ್ತಮ ಬ್ಯಾಟರಿ ಜೀವನ ನೀಡಬಹುದೆಂದು ನಮ್ಮ ನಿರೀಕ್ಷೆ.

ಇನ್ಫ್ರಾರೆಡ್ ಫೇಶಿಯಲ್ ರಿಕೊಗ್ನಿಷನ್ ಜಾದುವಂತೆ ಕೆಲಸಮಾಡುತ್ತದೆ. ಲಾಗಿನ್ ಮಾಡುವಾಗ ನಮಗೆ ಯಾವುದೇ ಸಮಸ್ಯೆ ಬರಲಿಲ್ಲಾ. ವೇಗವಾಗಿ ಹಾಗೂ ಹೆಚ್ಚಿನ ಮಟ್ಟಿಗೆ ಖಚಿತವಾಗಿದೆ. ಆದರೆ ಒಂದೆರಡು ಬಾರಿ ಮುಖವನ್ನು ಗುರುತಿಸುವಲ್ಲಿ ವಿಫಲವಾಯಿತು. ಕಂಪನಿ ಫಿಂಗರ್‍ಪ್ರಿಂಟ್ ಸೆನ್ಸರ್ ಅನ್ನು ಕೂಡ ಪವರ್ ಬಟನ್ ನಲ್ಲಿ ನೀಡಿದ್ದು ಅದು ಕೂಡ ಖಚಿತವಾಗಿ ಕಾರ್ಯ ನಿರ್ವಹಿಸುತ್ತದೆ.

ಉತ್ತಮ ಅಂಶಗಳು:

ಹೆಚ್ಚಿನ ರೆಸೊಲ್ಯುಶನ್ 4ಕೆ ಟಚ್‍ಸ್ಕ್ರೀನ್ ಡಿಸ್ಪ್ಲೆ | ಒಳ್ಳೆಯ ನೂಲಿನ ಸರಕನ್ನು ಹೊಂದಿದೆ ಕೈಯಲ್ಲಿ ಹಿಡಿಯಲು | ಸಪೂರದ ಡಿಸ್ಪ್ಲೆ ಹೊರಗಿನ ಭಾಗ | ಇನ್ಫ್ರಾರೆಡ್ ಫೇಶಿಯಲ್ ರಿಕೊಗ್ನಿಶನ್

ನಕಾರಾತ್ಮಕ ಅಂಶಗಳು:

ಬೆಲೆ | ವೆಬ್‍ಕ್ಯಾಮ್ ಇಟ್ಟಿರುವ ಜಾಗ | ಬ್ಯಾಟರಿ ಗಾತ್ರ ಕಡಿಮೆ ಮಾಡಿರುವುದು

ಅಂತಿಮ ಅನಿಸಿಕೆ:

ಎಲ್ಲಾ ರೀತಿಯಲ್ಲಿ ನೋಡಿದಾಗ ಎಕ್ಸ್‍ಪಿಎಸ್ ಉನ್ನತ ಮಟ್ಟದ ಲ್ಯಾಪ್‍ಟಾಪ್ ಗಳಲ್ಲಿ ಒಂದೆನ್ನಬಹುದು. ಇದು 13 ಇಂಚಿನ ಲ್ಯಾಪ್‍ಟಾಪ್ ಗಳಿಗೆ ಬಹುಶಃ ಒಂದು ಮಾದರಿಯಾಗಿದೆ. ಇಂಟೆಲ್ ನ ಹೊಸ ಚಿಪ್, ಫೇಷಿಯಲ್ ರೆಕೊಗ್ನಿಷನ್ ತಂತ್ರಜ್ಞಾನವೆಲ್ಲಾ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿ ಇರಲು ಕಾರಣವಾಗಿದೆ. ವೆಬ್‍ಕ್ಯಾಮ್ ಅನ್ನು ಮೇಲೆ ನಿರೀಕ್ಷಿಸಿದರೂ ಡಿಸ್ಪ್ಲೆ ಕೊನೆ ಚಿಕ್ಕ ಮಾಡುವ ಭರದಲ್ಲಿ ಸ್ಥಳಾಂತರಿಸಲಾಗಿದೆ ಇಲ್ಲವಾದರೆ ಇನ್ನೂ ಸುಂದರವಾಗಿ ಕಾಣುತ್ತಿತ್ತು.

ನೀವು ಕೊಂಪಾಕ್ಟ್, ಹೈ ಪರ್ಫೊರ್ಮಿಂಗ್ ವಿಂಡೋಸ್ ನೋಟ್‍ಬುಕ್ ಹುಡುಕುತಿದ್ದರೆ ಎಕ್ಸ್‍ಪಿಎಸ್13 ಅನ್ನು ಪರಿಗಣಿಸಬಹುದು. ಆದರೆ 'ಒಳ್ಳೆಯ ವಸ್ತುಗಳು ಎಂದೂ ಭಾರಿ ಬೆಲೆಯೊಂದಿಗೆ ಬರುತ್ತವೆ’. ಇದರ ಬೆಲೆ ನಿಮ್ಮ ಜೇಬನ್ನು ಸುಡಬಹುದು. ಇದರ ಬೆಲೆ ಆರಂಭವಾಗುವುದು ರೂ. 95,000 ದಿಂದ. ಇದರಲ್ಲಿ ಐ5 ಇಂಟೆಲ್ ಪ್ರೊಸೆಸರ್ ಮತ್ತು 256 ಜಿಬಿ ಸ್ಟೋರೆಜ್ ದೊರೆಯುತ್ತದೆ. ಮೇಲಿನ ಸ್ಥರದ 4ಕೆ ಟಚ್‍ಸ್ಕ್ರೀನ್ ಡಿಸ್ಪ್ಲೆ ಬೇಕೆಂದರೆ ಇಂಟೆಲ್ ಐ7 ಪ್ರೊಸೆಸರ್ ಮತ್ತು 512 ಜಿಬಿ ಸ್ಟೋರೆಜ್ ನೊಂದಿಗೆ ಬರುತ್ತದೆ ಬೆಲೆ ಕೇವಲ ರೂ. 1,60,000. ಬಣ್ಣಗಳನ್ನೂ ಕೂಡ ಮೆಚ್ಚುವಂತಹುದು.

ಹೀಗಾಗಿ ಎಕ್ಸ್‍ಪಿಎಸ್ 13 ಅನ್ನು ಮಾರುಕಟ್ಟೆಯಲ್ಲಿರುವ ಅತ್ಯುತ್ತಮ ಅಲ್ಟ್ರಾಬುಕ್ ಎಂದು ಹೇಳಬಹುದು. ಕಡಿಮೆ ಬೆಲೆಯ ಎಕ್ಸ್‍ಪಿಎಸ್ ಅನ್ನು ಸ್ಪೆಕ್ಟರ್ 13 ಬೆಲೆಗೆ ಹೋಲಿಸಿದರೆ ಕಡಿಮೆ ಎನಿಸುತ್ತದೆ. ಅದರ ಹಾರ್ಡ್‍ವೇರ್ ಕೊನ್ಫಿಗರೇಷನ್ ಮಟ್ಟ ತುಂಬಾನೇ ಕಡಿಮೆ. ಎರಡೂ ಬೇಸ್ ಮಾಡೆಲ್ ಹೋಲಿಸಿದರೆ ಎಚ್‍ಪಿ ಲ್ಯಾಪ್‍ಟಾಪ್ ಕಡಿಮೆ ಬೆಲೆಯದು ಜೊತೆಗೆ ವೇಗದ ರಾಮ್ ಹೊಂದಿದೆ. ಮೇಲಿನ ಸ್ಥರವನ್ನು ನೋಡಿದರೆ ಎಕ್ಸ್‍ಪಿಎಸ್ 13 ನ ಬೆಲೆ ತುಂಬಾನೇ ಜಾಸ್ತಿ. ನೀವೆನಾದರೂ ಕಡಿಮೆ ಬೆಲೆಯದನ್ನು ನೋಡುತ್ತಿದ್ದರೆ ಸ್ಪೆಕ್ಟರ್ 13 ಮತ್ತೊಂದು ಉತ್ತಮ ಆಯ್ಕೆಯಾಗಿ ಪರಿಗಣಿಸಬಹುದು.

Most Read Articles
Best Mobiles in India

English summary
Unveiled first at CES 2018, the Dell XPS 13 is touted to be the smallest 13-inch laptop in the world.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more