ಸ್ಮಾರ್ಟ್‌ಫೋನ್‌ ಬಳಕೆದಾರರೇ ಎಚ್ಚರ.. ಎಚ್ಚರ..! ನಕಲಿ ಗೂಗಲ್‌ ಕ್ರೋಮ್‌ ಆಪ್‌ ನಿಮ್ಮ ಮೊಬೈಲ್‌ನಲ್ಲಿದ್ದರೇ ಮುಗಿತು ಕಥೆ..!

By Gizbot Bureau
|

ಗೂಗಲ್ ಕ್ರೋಮ್ ಆಪ್‌ನಂತಿರುವ ಹೊಸ ಆಂಡ್ರಾಯ್ಡ್ ಮಾಲ್‌ವೇರ್ ಕಂಡುಬಂದಿದ್ದು, ಈಗಾಗಲೇ ಲಕ್ಷಾಂತರ ಸಾಧನಗಳಿಗೆ ವೈರಸ್‌ ತಗುಲಿದೆ ಎಂದು ಪ್ರಡಿಯೋದ ಸೈಬರ್‌ ಸೆಕ್ಯುರಿಟಿ ಸಂಸ್ಥೆಯ ಸಂಶೋಧಕರು ತಿಳಿಸಿದ್ದಾರೆ. ಇದನ್ನು ಸ್ಮಿಶಿಂಗ್ ಟ್ರೋಜನ್ ಸಂಶೋಧಕರು ಗುರುತಿಸಿದ್ದು, ಕ್ರೆಡಿಟ್‌ ಕಾರ್ಡ್‌ ವಿವರಗಳನ್ನು ಕದಿಯಲು ಫಿಶಿಂಗ್‌ ದಾಳಿಯ ಭಾಗವಾಗಿ ನಕಲಿ ಕ್ರೋಮ್‌ ಆಪ್‌ ಇದೆ ಎಂದು ಹೇಳಲಾಗಿದೆ.

ಸ್ಮಾರ್ಟ್‌ಫೋನ್‌ ಬಳಕೆದಾರರೇ ಎಚ್ಚರ..ಎಚ್ಚರ..! ನಕಲಿ ಗೂಗಲ್‌ ಕ್ರೋಮ್‌..!


ನಕಲಿ ಗೂಗಲ್ ಕ್ರೋಮ್‌ ಆಪ್‌ನಿಂದ ನಿಮ್ಮ ಸ್ಮಾರ್ಟ್‌ಫೋನ್‌ ಕೂಡ ದಾಳಿಯ ಭಾಗವಾಗುತ್ತದೆ. ಸಾವಿರಾರು ಫಿಶಿಂಗ್ ಎಸ್‌ಎಂಎಸ್‌ಗಳನ್ನು ಕಳುಹಿಸಲು ಮಾಲ್‌ವೇರ್ ನಿಮ್ಮ ಸಾಧನವನ್ನು ವೆಕ್ಟರ್‌ ಆಗಿ ಬಳಸುತ್ತದೆ. ಈ ಮಾಲ್‌ವೇರ್‌ ಹರಡುತ್ತಿರುವ ವೇಗ ನೋಡುತ್ತಿದ್ದರೇ ಲಕ್ಷಾಂತರ ಜನರನ್ನು ಗುರಿಯಾಗಿಸಿಕೊಂಡು ಈ ಮಾಲ್‌ವೇರ್‌ ದಾಳಿ ನಡೆಸಲಾಗಿದೆ ಎಂದು ಸಂಶೋಧಕರು ತಮ್ಮ ವೆಬ್‌ಸೈಟ್‌ನ 'ಸೆಕ್ಯುರಿಟಿ ಅಲರ್ಟ್’ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ನಿಮ್ಮ ಸ್ಮಾರ್ಟ್‌ಫೋನ್‌ಗೆ ನಕಲಿ ಕ್ರೋಮ್ ಆಪ್‌ ಹೇಗೆ ಬರುತ್ತದೆ..?

ಯಾವುದಾದರೂ ಪ್ಯಾಕೇಜ್‌ನ್ನು ಡೆಲಿವರಿ ಮಾಡುವಾಗ ಕಸ್ಟಮ್‌ ಶುಲ್ಕವನ್ನು ಪಾವತಿಸಲು ಸಂತ್ರಸ್ತ ಎಸ್‌ಎಂಎಸ್‌ ಪಡೆಯುತ್ತಾನೆ. ಅದರಲ್ಲಿನ ಲಿಂಕ್ ಕ್ಲಿಕ್‌ ಮಾಡಿದ ಬಳಿಕ, ಕ್ರೋಮ್ ಅಪ್ಲಿಕೇಶನ್ ಅನ್ನು ನವೀಕರಿಸಲು ಕೇಳಲಾಗುತ್ತದೆ. ಆಗ ನಕಲಿ ಆಪ್‌ ನಿಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಆಗುತ್ತದೆ ಎನ್ನಲಾಗಿದೆ. ನಂತರ ಅವರು ತಮ್ಮ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಸುಮಾರು ಒಂದು ಅಥವಾ ಎರಡು ಡಾಲರ್‌ಗಳನ್ನು ಅಲ್ಪ ಪ್ರಮಾಣದಲ್ಲಿ ಪಾವತಿಸಬೇಕಾಗುತ್ತದೆ. ಅವರು ಹಾಗೆ ಮಾಡಿದಾಗ, ಕ್ರೆಡಿಟ್ ಕಾರ್ಡ್ ವಿವರಗಳನ್ನು ಸೈಬರ್ ಅಪರಾಧಿಗಳು ಇನ್ನೊಂದು ತುದಿಯಲ್ಲಿ ಹ್ಯಾಕ್ ಮಾಡುತ್ತಾರೆ. ಅದನ್ನು ಅವರು ಬ್ಯಾಂಕಿಂಗ್ ವಂಚನೆಗಳಿಗೆ ಬಳಸಬಹುದು.

ನಿಮ್ಮ ಫೋನ್ ಹೇಗೆ ಮಾಲ್‌ವೇರ್ 'ಸೂಪರ್-ಸ್ಪ್ರೆಡರ್’ ಆಗುತ್ತದದೆ..?

ಇದು ಕೇವಲ ಬ್ಯಾಂಕಿಂಗ್‌ ವಂಚನೆ, ಕ್ರೆಡಿಟ್‌ ಕಾರ್ಡ್‌ ವಿವರಗಳನ್ನು ಕದಿಯುವುದರಲ್ಲಿ ನಿಲ್ಲುವುದಿಲ್ಲ. ನಕಲಿ ಕ್ರೋಮ್ ಅಪ್ಲಿಕೇಶನ್ ಸಂತ್ರಸ್ತನ ಫೋನ್‌ನಲ್ಲಿ ಸ್ಥಾಪನೆಯಾದ ಬಳಿಕ, ಅಲ್ಲಿಂದ ವಾರಕ್ಕೆ 2000ಕ್ಕಿಂತ ಹೆಚ್ಚು ಎಸ್‌ಎಂಎಸ್, ಪ್ರತಿದಿನ 2 ಅಥವಾ 3 ಗಂಟೆಗಳ ಅವಧಿಯಲ್ಲಿ, ಒಬ್ಬರನ್ನೊಬ್ಬರು ಅನುಸರಿಸುವಂತೆ ತೋರುವ ದೃಢೀಕೃತ ಫೋನ್ ಸಂಖ್ಯೆಗಳಿಗೆ ಕಳುಹಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ನಕಲಿ ಅಪ್ಲಿಕೇಶನ್ ಅಧಿಕೃತ ಕ್ರೋಮ್ ಅಪ್ಲಿಕೇಶನ್‌ನ ಐಕಾನ್ ಮತ್ತು ಹೆಸರನ್ನು ಹೊಂದಿದೆ ಎಂದು ಸಂಶೋಧಕರು ಹೇಳುತ್ತಾರೆ, ಆದರೆ, ಅದರ ಪ್ಯಾಕೇಜ್, ಸಹಿ ಮತ್ತು ಆವೃತ್ತಿಯು ಅಧಿಕೃತ ಅಪ್ಲಿಕೇಶನ್‌ನೊಂದಿಗೆ ಯಾವುದೇ ಸಾಮ್ಯತೆಯನ್ನು ಹೊಂದಿಲ್ಲ. ಆಂಟಿ ವೈರಸ್‌ ಅಪ್ಲಿಕೇಶನ್ ಅನ್ನು ಫ್ಲ್ಯಾಗ್ ಮಾಡಲು ಸಾಧ್ಯವಾದರೂ ನಕಲಿ ಕ್ರೋಮ್ ಅಪ್ಲಿಕೇಶನ್ ಅನ್ನು ಹೊಸ ಸಹಿಯೊಂದಿಗೆ ಮರುಪ್ಯಾಕ್ ಮಾಡಿ, ಮೊಬೈಲ್‌ನಲ್ಲಿಯೇ ಉಳಿಸಬಹುದು. ಇಂತಹ ಎರಡು ನಕಲಿ ಕ್ರೋಮ್‌ ಆಪ್‌ಗಳನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

ಪರಿಹಾರ ಏನು..?

ಅಪರಿಚಿತರು ಕೇಳಿದಾಗ ನಿಮ್ಮ ಕ್ರೆಡಿಟ್ ಕಾರ್ಡ್ ವಿವರಗಳನ್ನು ಎಂದಿಗೂ ಒದಗಿಸಬೇಡಿ ಎಂದು ಸಂಶೋಧಕರು ಮೊಬೈಲ್ ಬಳಕೆದಾರರಿಗೆ ಸಲಹೆ ನೀಡಿದ್ದಾರೆ. ಅಲ್ಲದೇ, ತಮ್ಮ ಎಲ್ಲ ಅಪ್ಲಿಕೇಶನ್‌ಗಳನ್ನು ಅಧಿಕೃತ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಿಂದ ಮಾತ್ರ ಡೌನ್‌ಲೋಡ್ ಮಾಡಲು ಮತ್ತು ನವೀಕರಿಸಲು ಫೋನ್ ಬಳಕೆದಾರರನ್ನು ಕೇಳಿಕೊಂಡಿದ್ದಾರೆ.

Most Read Articles
Best Mobiles in India

Read more about:
English summary
Fake Google Chrome Spreading On Mobiles; How To Protect Yourself From Fake Browsers

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X