ಆಂಡ್ರಾಯ್ಡ್ ಗೇಮ್‌ಗಳ ಮನಿಯನ್ನು ಹ್ಯಾಕ್ ಮಾಡುವ ಆಪ್ ಇದು!

Posted By: Sushma Charhra

    ಗೇಮ್ ಕಿಲ್ಲರ್ ಲೇಟೆಸ್ಟ್ 2018 ವರ್ಷನ್ ಒಂದು ಅಧ್ಬುತವಾದ ಆಂಡ್ರಾಯ್ಡ್ ಆಪ್ ಆಗಿದ್ದು ಬಳಕೆದಾರರಿಗೆ ಸುಲಭದಲ್ಲಿ ಆಂಡ್ರಾಯ್ಡ್ ಗೇಮ್ ನ ಯಾವುದೇ ಹಂತವನ್ನು ಹ್ಯಾಕ್ ಮಾಡಲು ನೆರವು ನೀಡುತ್ತದೆ. ಗೇಮ್ ಕಿಲ್ಲರ್ ಎಪಿಕೆಯ ಒಂದು ದೊಡ್ಡ ಲಾಭವೆಂದರೆ ಇದು ನಿಮ್ಮ ಸ್ಮಾರ್ಟ್ ಫೋನ್ ನ್ನು ನಿಧಾನಗತಿಯಲ್ಲಿ ಕೆಲಸ ಮಾಡುವಂತೆ ಮಾಡುವುದಿಲ್ಲ. ಇದು ಕಡಿಮೆ ತೂಕದಾಗಿದ್ದು, ಬ್ಯಾಕ್ ಗ್ರೌಂಡ್ ನಲ್ಲಿ ಯಾವಾಗ ಅಗತ್ಯವಿದೆಯೋ ಆಗ ರನ್ ಆಗುತ್ತದೆ.

    ಆಂಡ್ರಾಯ್ಡ್ ಗೇಮ್‌ಗಳ ಮನಿಯನ್ನು ಹ್ಯಾಕ್ ಮಾಡುವ ಆಪ್ ಇದು!

    ಆಂಡ್ರಾಯ್ಡ್ ಗೇಮ್ ನ್ನು ಹ್ಯಾಕ್ ಮಾಡುವ ಮೂಲಕ ನೀವು ಎಲ್ಲಾ ಲೆವೆಲ್ ನ್ನು ಅನ್ ಲಾಕ್ ಮಾಡಬಹುದು. ನಿಮ್ಮ ಇಚ್ಛೆಗೆ ಅನುಸಾರವಾಗಿ ಆಟ ಮುಗಿಸಬೇಕು ಅಂದರೆ ನೀವು ಹಲವು ರೀತಿಯಲ್ಲಿ ಅಧ್ಯಯನ ಕೈಗೊಳ್ಳಬೇಕಾಗುತ್ತದೆ. ಹೆಚ್ಚಿನವು ರೂಟೆಡ್ ಆಂಡ್ರಾಯ್ಡ್ ನಲ್ಲಿ ಮಾತ್ರ ಕೆಲಸ ನಿರ್ವಹಿಸುತ್ತದೆ. ಕೆಲವು ಆಪ್ ಗಳು ಪರಿಪೂರ್ಣವಾಗಿ ಕೆಲಸ ನಿರ್ವಹಿಸುವುದೇ ಇಲ್ಲ. ಆಗ ನಿಜಕ್ಕೂ ಅದು ಬಳಕೆದಾರನಿಗೆ ಕಿರಿಕಿರಿ ಅನ್ನಿಸುತ್ತದೆ.

    ಗೂಗಲ್ ಪ್ಲೇ ನಲ್ಲಿ ಲಭ್ಯವಿರುವ ಎಲ್ಲಾ ಆಪ್ ಗಳು ಉಚಿತವಾಗಿ ಇರುವುದಿಲ್ಲ ಮತ್ತು ಪರಿಪೂರ್ಣವಾಗಿ ಕೆಲಸ ಮಾಡುವುದಿಲ್ಲ. ಗೇಮಿನ ಅಭಿವೃದ್ಧಿಕಾರರು ತಮ್ಮ ಆಪ್ ನಲ್ಲಿ ಕೆಲವು ರಿಸ್ಟ್ರಿಕ್ಷನ್ ಗಳನ್ನು ಮಾಡಿರುತ್ತಾರೆ. ಅದರ ಅರ್ಥ ಇಷ್ಟೇ, ಎಲ್ಲಾ ವೈಶಿಷ್ಟ್ಯತೆಗಳನ್ನು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದರ್ಥ. ಆದರೆ, ಈ ಸಮಸ್ಯೆಯನ್ನು ಫಿಕ್ಸ್ ಮಾಡಲು ಒಂದು ಅದ್ಬುತ ಉಪಾಯ ಇಲ್ಲಿದೆ.

    ನಿಮ್ಮ ಡಿವೈಸ್ ನ್ನು ರೂಟ್ ಮಾಡಿದ ನಂತರ ಯಾವುದೇ ಆಂಡ್ರಾಯ್ಡ್ ಗೇಮ್ ನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಇದು ನೆರವು ನೀಡುತ್ತದೆ. ನಾವು ಇಲ್ಲಿ ಹಂಚಿಕೊಳ್ಳಲು ಬಳಸುತ್ತಿರುವ ಆಂಡ್ರಾಯ್ಡ್ ಆಪ್ ಗೇಮ್ ಕಿಲ್ಲರ್ ಎಪಿಕೆ.ಈ ಕುತೂಹಲಕಾರಿ ಆಂಡ್ರಾಯ್ಡ್ ಆಪ್ ಮುಖಾಂತರ ನೀವು ಸುಲಭವಾಗಿ ನಿಮ್ಮ ಆಂಡ್ರಾಯ್ಡ್ ನ ಲೆವೆಲ್ ನ್ನು ಹೆಚ್ಚಿಸಿಕೊಳ್ಳಬಹುದು.

    ಗೇಮ್ ಕಿಲ್ಲರ್ ಎಪಿಕೆ ಅಂದರೆ ಏನು?

    ಈಗಾಗಲೇ ನಾವು ಮೇಲೆ ತಿಳಿಸಿರುವಂತೆ, ಆಂಡ್ರಾಯ್ಡ್ ಗೇಮ್ ನ್ನುಹ್ಯಾಕ್ ಮಾಡಲು ಆಂಡ್ರಾಯ್ಡ್ ನ್ನು ರೂಟ್ ಮಾಡಿದ ನಂತರ ಇಂಟರ್ನೆಟ್ ನಲ್ಲಿ ಹಲವಾರು ವಿಧಾನಗಳು ಲಭ್ಯವಿದೆ. ಆದರೆ ಹೆಚ್ಚಿನ ಆಪ್ ಗಳು ಕೆಲಸ ನಿರ್ವಹಿಸುವುದಿಲ್ಲ. ಯಾಕೆಂದರೆ ಡೆವಲಪರ್ ಗಳು ಅಪ್ ಡೇಟ್ ಮಾಡುತ್ತಲೇ ಇರುತ್ತಾರೆ. ಹ್ಯಾಕಿಂಗ್ ಕೆಲಸ ನಿರ್ವಹಿಸದಂತೆ ಮಾಡುತ್ತಾರೆ. ಹಾಗಾಗಿ, ಗೇಮೇ ಕಿಲ್ಲರ್ ಎಪಿಕೆ ಒಂದು ಅಧ್ಬುತವಾದ ಆಂಡ್ರಾಯ್ಡ್ ಆಪ್ ಆಗಿದ್ದು ಸುಲಭದಲ್ಲಿ ಆಂಡ್ರಾಯ್ಡ್ ಗೇಮ್ ನ ಲೆವೆಲ್ ನ್ನು ಹ್ಯಾಕ್ ಮಾಡಲು ಅನುವು ಮಾಡಿಕೊಡುತ್ತಿದೆ.

    ಗೇಮ್ ಕಿಲ್ಲರ್ ಆಪ್ ನ ಒಂದು ಪ್ರಮುಖ ಲಾಭವೆಂದರೆ ಇದು ನಿಮ್ಮ ಆಂಡ್ರಾಯ್ಡ್ ಸ್ಲೋ ಆಗುವಂತೆ ಮಾಡುವುದಿಲ್ಲ. ಹಾಗಾಗಿ ಆಂಡ್ರಾಯ್ಡ್ ನಲ್ಲಿ ಗೇಮ್ ಬಳಸುವವರಿಗೆ ಇದು ಹೇಳಿ ಮಾಡಿಸಿದಂತಿದೆ ಮತ್ತು ಸುಲಭದಲ್ಲಿ ಗೇಮ್ ಹ್ಯಾಕ್ ಮಾಡಲು ನೆರವು ನೀಡುತ್ತದೆ.

    .ಗೇಮ್ ಕಿಲ್ಲರ್ ವಿ3.11 ಎಪಿಕೆಯ ವೈಶಿಷ್ಟ್ಯತೆಗಳು :

    ಈಗ ನಿಮಗೆ ಗೇಮ್ ಕಿಲ್ಲರ್ ಎಪಿಕೆಯ ಬಗ್ಗೆ ಸಂಪೂರ್ಣ ತಿಳಿದಿದೆ. ಈಗ ಅದರ ಕೆಲವು ಪ್ರಮುಖ ವೈಶಿಷ್ಟ್ಯತೆಗಳನ್ನು ತಿಳಿದುಕೊಳ್ಳುವ ಸಂದರ್ಬವಾಗಿದೆ. ಈ ಆಪ್ ನಲ್ಲಿ ಹಲವು ವೈಶಿಷ್ಟ್ಯತೆಗಳಿದ್ದು ಅವುಗಳಲ್ಲಿ ಪ್ರಮುಖವಾದದ್ದನ್ನು ಈ ಕೆಳಗೆ ವಿವರಿಸಲಾಗಿದೆ. ಇತ್ತೀಚೆಗಿನ ಗೇಮ್ ಕಿಲ್ಲರ್ ಎಪಿಕೆ 2018 ರ ವೈಶಿಷ್ಟ್ಯತೆಗಳ ವಿವರ ಇಂತಿದೆ:

    • ನಿಖರವಾದ ಸಂಖ್ಯೆಯೊಂದಿಗೆ ಮೌಲ್ಯವರ್ಧಿತ ಆಟದ ಹುಡುಕಾಟ

    • ಅಸ್ಪಷ್ಟ ನಿರ್ದೇಶನಗಳೊಂದಿಗೆ ಆಟದ ಮೌಲ್ಯದ ಹುಡುಕಾಟ ಉದಾಹರಣಗೆ ದೊಡ್ಡದೂ ಆಗಿರಬಹುದು ಅಥವಾ ಚಿಕ್ಕದೂ ಕೂಡ ಆಗಿರಬಹುದು.

    • ರಿಪೇರಿ ಸಂಖ್ಯೆ ವೀಡಿಯೋ ಗೇಮ್ ನ ವ್ಯಾಲ್ಯೂವನ್ನು ಲಾಕ್ ಮಾಡುವುದು

    • ಪಟ್ಟಿಯನ್ನು ಕೇರ್ ತೆಗೆದುಕೊಂಡು ಅದನ್ನು ಸೇವ್/ಲೋಡ್ ಮಾಡುವುದು

    • ಗೇಮಿಂಗ್ ನ ಹೆಚ್ ಇಎಕ್ಸ್ ಎಡಿಟ್ ಸಂದರ್ಬದಲ್ಲಿ ಗೇಮ್ ಕಿಲ್ಲರ್ ಸ್ಪಿರಿಟ್ ಟಚ್ ಮಾಡುವುದರಿಂದಾಗಿ ಡಿವೈಸ್ ನ್ನು ಉತ್ಕೃಷ್ಟತೆಗೆ ಏರಿಸುವುದು

    • ಅನ್ ಲೋಡ್ ಕೋಡ್

    ಗೇಮ್ ಕಿಲ್ಲರ್ ಆಪ್ ನ ಇತ್ತೀಚೆಗಿನ ವರ್ಷನ್ 2018 ನ್ನು ಡೌನ್ ಲೋಡ್ ಮಾಡಿ.

    ಪ್ರತಿಯೊಬ್ಬ ಆಂಡ್ರಾಯ್ಡ್ ಬಳಕೆದಾರರಿಗೂ ಗೇಮ್ ಕಿಲ್ಲರ್ ಆಂಡ್ರಾಯ್ಡ್ ಆಪ್ ಕುತೂಹಲಕಾರಿ ವೈಶಿಷ್ಟ್ಯತೆಗಳನ್ನು ನೀಡುತ್ತದೆ. ಗೇಮ್ ಕಿಲ್ಲರ್ ಆಪ್ ಸಹಾಯದಿಂದಾಗಿ ನೀವು ನಿಜಕ್ಕೂ ನಿಮ್ಮ ಆಂಡ್ರಾಯ್ಡ್ ಡಿವೈಸ್ ನ ಗೇಮ್ ಗಳ ಮೇಲೆ ಒಂದು ಪ್ರಭುತ್ವವನ್ನು ಸಾಧಿಸಲು ನೆರವಾಗುತ್ತದೆ.ಆಂಡ್ರಾಯ್ಡ್ ನ ಗೇಮ್ ಹ್ಯಾಕಿಂಗ್ ಗಾಗಿ ಬಳಸಲಾಗುವ ಇತ್ತೀಚೆಗಿನ ವರ್ಷನ್ ನ ಗೇಮ್ ಕಿಲ್ಲರ್ ಎಪಿಕೆ 2018 ಆಪ್ ನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

    ಈ ವಿಧಾನವು ನೇರವಾಗಿದೆ ಮತ್ತು ಸರಳವಾಗಿದೆ.ಇದು ನಿಮ್ಮ ಡಿವೈಸ್ ನ್ನು ರೂಟ್ ಮಾಡಿದ ನಂತರ ಬಹಳ ಪರಿಪೂರ್ಣವಾಗಿ ಇದು ಕೆಲಸ ಮಾಡುತ್ತದೆ ಮತ್ತು ನೀವು ಸುಲಭದಲ್ಲಿ ಯಾವುದೇ ನಿಮ್ಮ ಆಂಡ್ರಾಯ್ಡ್ ಗೇಮ್ ನ್ನು ಹ್ಯಾಕ್ ಮಾಡಲು ಸಹಕಾರಿಯಾಗಿದೆ ಮತ್ತು ಕೆಲವು ಸುಲಭ ಟ್ರಿಕ್ಸ್ ಗಳನ್ನು ಬಳಸಿ ಮುಂದಿನ ಹಂತಕ್ಕೆ ಕೊಂಡೊಯ್ಯಲು ನೆರವು ನೀಡುತ್ತದೆ. ಈ ಕೆಳಗಿನ ಕೆಲವು ಸರಳ ಹಂತಗಳನ್ನು ಅದಕ್ಕಾಗಿ ನೀವು ಅನುಸರಿಸಬೇಕು,

    ಹಂತ 1. ಮೊದಲಿಗೆ, ರೂಟೆಡ್ ಆಂಡ್ರಾಯ್ಡ್ ನಲ್ಲಿ ಮಾತ್ರ ಈ ಆಂಡ್ರಾಯ್ಡ್ ಆಪ್ ನ್ನು ಇನ್ಸ್ಟಾಲ್ ಮಾಡಲು ಸಾಧ್ಯವಾಗುತ್ತದೆ. ಹಾಗಾಗಿ ಮೊದಲು ನಿಮ್ಮ ಆಂಡ್ರಾಯ್ಡ್ ನ್ನು ರೂಟ್ ಮಾಡಿ.

    ಹಂತ 2. ಈಗ ನೀವು ಗೇಮ್ ಕಿಲ್ಲರ್ ಎಪಿಕೆ ಆಪ್ ನ್ನು ನಿಮ್ಮ ಆಂಡ್ರಾಯ್ಡ್ ಡಿವೈಸ್ ಗೆ ಡೌನ್ ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ.

    ಹಂತ 3. ಡೌನ್ ಲೋಡ್ ಮಾಡಿದ ನಂತರ ಸೆಟ್ಟಿಂಗ್ಸ್ ನಲ್ಲಿರುವ ಅನ್ ನೋನ್ ಸೋರ್ಸ್ ನ್ನು ಟಿಕ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ.

    ಹಂತ 4. ಆಪ್ ನ್ನು ತೆರೆಯಿರಿ ಮತ್ತು ಇದು ನಿಮಗೆ ಸೂಪರ್ ಯ್ಯೂಸರ್ ಆಕ್ಸಿಸ್ ನ್ನು ಕೇಳುತ್ತದೆ. ಸರಳವಾಗಿ ಅದನ್ನು ನೀಡಿ. ಹಂತ 5.ಈ ಮಿನಿಮೈಸ್ ಮಾಡಿ ಮತ್ತು ನೀವು ಟ್ವೀಕ್ ಮಾಡಬೇಕು ಅಥವಾ ಪ್ಯಾಚ್ ಮಾಡಬೇಕು ಎಂದಿರುವ ಗೇಮನ್ನು ತೆರೆಯಿರಿ ಮತ್ತು ನೀವು ಅನೇಕ ಆಯ್ಕೆಗಳನ್ನು ಗಮನಿಸುತ್ತೀರಿ. ನೀವು ಅದನ್ನು ಅರ್ಥೈಸಿಕೊಳ್ಳಬೇಕು ಮತ್ತು ಗೇಮಿನ ವ್ಯಾಲ್ಯೂವನ್ನ ಎಡಿಟ್ ಮಾಡಬೇಕು ಉದಾಹರಣೆಗೆ ಕಾಯಿನ್ಸ್, ಲೈಫ್ ಮತ್ತು ಕೀ ಇತ್ಯಾದಿಗಳನ್ನು ನಿಮ್ಮ ಇಚ್ಛೆಗೆ ಅನುಸಾರವಾಗಿ ಎಡಿಟ್ ಮಾಡಬೇಕು.

    ಆಪ್ ಬಳಸುವ ಉದಾಹರಣೆ:

    ಕಿಂಗ್ ಡಮ್ ರಷ್ ಫ್ರಂಟೈಯರ್ಸ್ ಗೇಮನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಈ ಗೇಮ್ ನಲ್ಲಿ ಬಳಕೆದಾರರು ಗೋಲ್ಡ್ ಮತ್ತು ಲೈಫ್ ನ್ನು ಬಳಕೆ ಮಾಡುತ್ತಾರೆ. ಒಂದು ವೇಳೆ ನೀವು ಪ್ರೀಮಿಯಂ ವಸ್ತುಗಳನ್ನು ಬಳಸಲು ಇಚ್ಛಸಿದರೆ, ನಿಮಗೆ ಚಿನ್ನದ ಅವಶ್ಯಕತೆ ಇರುತ್ತದೆ ಮತ್ತು ಆಟ ಮುಂದುವರಿಸಲು ಲೈಫ್ಸ್ ನ ಅಗತ್ಯತೆ ಇರುತ್ತದೆ. ಅದಕ್ಕಾಗಿ ನೀವು ಗೋಲ್ಡ್ ಕಾಯಿನ್ ನ್ನು ಎಡಿಟ್ ಮಾಡಬೇಕಾಗುತ್ತದೆ. ಆಗ ನೀವು ಅದರ ವ್ಯಾಲ್ಯೂವನ್ನು ಗೇಮ್ ಕಿಲ್ಲರ್ ಆಪ್ ನ ಇಂಟರ್ ಫೇಸ್ ನಲ್ಲಿ ಬದಲಾಯಿಸಬೇಕು.. ಆ ಮೂಲಕ ಹೆಚ್ಚಿನ ಲೈಫ್ಸ್ ಪಡೆಯಬೇಕು. ಅದನ್ನು ನೀವು ಸುಲಭದಲ್ಲಿ ಸಾಧಿಸಬಹುದು.99999 ನ ಹೆಚ್ಚಿನ ವ್ಯಾಲ್ಯೂಗೆ ಬದಲಾಯಿಸಬೇಕು.ಆ ಮೂಲಕ ಗೇಮ್ ಫೈಲ್ ಎಡಿಟ್ ಆಗುತ್ತದೆ ಮತ್ತು ನೀವು ಆಟ ಆರಂಭಿಸಬಹುದು.

    ಇಷ್ಟೇ.. ನೀವು ಕೆಲಸ ಮಾಡಿ ಮುಗಿಸಿದಂತೆ. ಈಗ ನೀವು ಆಪ್ ನಲ್ಲಿ ವ್ಯಾಲ್ಯೂ ಬದಲಾಗಿದ್ದನ್ನು ಗಮನಿಸಬಹುದು ಮತ್ತು ಗೇಮ್ ನ್ನು ಆಕ್ಸಿಸ್ ಮಾಡಬಹುದು. ಸುಲಭದಲ್ಲಿ ಗಮೇ ನ ಲೆವೆಲ್ ನ್ನು ಹ್ಯಾಕ್ ಮಾಡಬಹುದು.

    ಸೂಚನೆ: ಇದನ್ನು ನಿಮ್ಮ ರಿಸ್ಕ್ ನೊಂದಿಗೆ ನೀವು ಮಾಡಬೇಕು. ಯಾಕೆಂದರೆ ಆಪ್ ನ್ನು ಕೋಡ್ ಮಾಡಿರುವುದು ನಾವಲ್ಲ. ನಾವು ಕೇವಲ ಈ ವಿಧಾನವನ್ನು ಹಂಚಿಕೊಳ್ಳುತ್ತಿದ್ದೇವೆ. ಜಸ್ಟ್ ಇದು ನಮಗೆ ವರ್ಕ್ ಆಗಿದೆ ಅಂತ ಅಷ್ಟೇ.!ಈ ರೀತಿಯ ಹ್ಯಾಕಿಂಗ್ ಮೂಲಕ ಲೈವ್ಸ್, ಕಾಯಿನ್ಸ್, ಮನಿ, ವೆಪನ್ ಇತ್ಯಾದಿ ಹಲವನ್ನು ಹ್ಯಾಕ್ ಮಾಡಬಹುದಾಗಿದೆ ಮತ್ತು ಗೇಮ್ ನ್ನು ಎಂಜಾಯ್ ಮಾಡಬಹುದಾಗಿದೆ.

    English summary
    GameKiller Apk Latest version 2018 is one of that awesome Android app which let the user easily hack any Android game to level it up after rooting their Android device.to know more visit to kannada.gizbot.com
    Opinion Poll

    ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more