TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ನೆಕ್ಸ್ಟ್ ಟೈಮ್ ಪೊಲೀಸ್ ಹಿಡಿದರೆ ದುಡ್ಡು ಕೊಡಬೇಡಿ..! ಸ್ಮಾರ್ಟ್ಫೋನ್ ತೋರಿಸಿ ಸಾಕು..!
ಬೆಂಗಳೂರಿನ ಟ್ರಾಫಿಕ್ನಲ್ಲಿ ಗಾಡಿ ಓಡಿಸುವದೇ ಒಂದು ಸಾಹಸ, ಇದರ ಮಧ್ಯೆ ಟ್ರಾಫಿಕ್ ಪೊಲೀಸರ ಕಿರಿಕಿರಿಯೂ ಸೇರಿದರೆ ಇನ್ನು ತಲೆ ನೋವು. ಯಾವುದೇ ಕಾರಣಕ್ಕೆ ಡ್ರೈವಿಂಗ್ ಲೈಸೆನ್ಸ್ ಮತ್ತು ರಿಜಿಸ್ಟ್ರೆಷನ್ ಸರ್ಟಿಫೀಕೆಟ್ (DL-RC) ಇದ್ದು, ಮನೆಯಲ್ಲಿಯೂ ಬಿಟ್ಟು ಬಂದರೆ ಅಥಾವ ಕಳೆದು ಹೋಗಿದರೆ ಸುಮ್ಮನೆ ದಂಡವನ್ನು ಪಾವತಿಸಬೇಕು. ಇಲ್ಲವೇ ಫೊಲೀಸರ ಮುಂದೆ ಹಲ್ಲುಕಿರಿಯಬೇಕು ಜೊತೆಗೆ ಅವರಗೆ ನೂರೋ ಇನ್ನೂರೋ ನೀಡಿ ಕೈಬೆಚ್ಚಗೆ ಮಾಡಿ ಹೋಗಬೇಕು. ಇಷ್ಟು ಮಾಡುವಷ್ಟರಲ್ಲಿ ಟೈಮ್ ಆಗಿ ಹೋಗಿ ನಾವು ಹೊಗುತ್ತಿದ್ದ ಕೆಲಸಕ್ಕೆ ಟೈಮ್ ಆಗಿರುತ್ತದೆ.
ಓದಿರಿ: ಏನಿದು ಫ್ಲಿಪ್ಕಾರ್ಟ್ ಪ್ಲಸ್ ಉಚಿತ ಸೇವೆ..? ಪಡೆಯುವುದು ಹೇಗೆ..? ಪ್ರೈಮ್ಗಿಂತ ಬೆಸ್ಟಾ..?
ಈ ಹಿನ್ನಲೆಯಲ್ಲಿ ಜನ ಸಾಮಾನ್ಯರಿಗೆ ಸಹಾಯವಾಗುವ ನಿಟ್ಟಿನಲ್ಲಿ ಬಳಕೆದಾರರಿಗೆ ಸ್ಮಾರ್ಟ್ಫೋನಿನಲ್ಲಿಯೇ ಡಿಜಿಟಲ್ ಮಾದರಿಯಲ್ಲಿ ಡ್ರೈವಿಂಗ್ ಲೈಸೆನ್ಸ್ ಮತ್ತು ರಿಜಿಸ್ಟ್ರೆಷನ್ ಸರ್ಟಿಫೀಕೆಟ್ (DL-RC) ಮತ್ತು ಇನ್ಶ್ಯೂರೆನ್ಸ್ಗಳನ್ನು ಸೇವ್ ಮಾಡಿಕೊಳ್ಳುವ ಸಲುವಾಗಿ ಸರ್ಕಾರ ಡಿಜಿ ಲಾಕರ್ ಎನ್ನುವ ಹೊಸದೊಂದು ಸೇವೆಯನ್ನು ನೀಡುತ್ತಿದೆ. ಇರಲ್ಲಿ ನೀವು ಸೇವ್ ಮಾಡಿಕೊಳ್ಳೂವ ಡ್ರೈವಿಂಗ್ ಲೈಸೆನ್ಸ್ ಮತ್ತು ರಿಜಿಸ್ಟ್ರೆಷನ್ ಸರ್ಟಿಫೀಕೆಟ್ (DL-RC) ಅಧಿಕೃತವಾಗಿರಲಿದೆ. ಇದನ್ನು ಪೊಲೀಸರು ಒಪ್ಪಿಕೊಳ್ಳಲೇ ಬೇಕು. ಹೀಗಾಗಿ ನಿಮ್ಮ ಸ್ಮಾರ್ಟ್ಫೋನಿನಲ್ಲಿ ಮಾಹಿತಿಗಳನ್ನು ಹೇಗೆ ಸೇವ್ ಮಾಡಿಕೊಳ್ಳುವುದು ಎಂಬುದನ್ನು ತಿಳಿಸುವ ಪ್ರಯತ್ನವಾಗಿದೆ.
ಡಿಜಿಟಲ್ ಇಂಡಿಯಾ:
ಈಗಾಗಲೇ ಡಿಜಿಟಲ್ ಇಂಡಿಯಾದಲ್ಲಿ ಎಲ್ಲಾ ಮಾದರಿಯ ಸೇವೆಗಳು ಡಿಜಿಟಲ್ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಡಿಜಿಟಲ್ ಮಾದರಿಯಲ್ಲಿ ಡ್ರೈವಿಂಗ್ ಲೈಸೆನ್ಸ್ ಮತ್ತು ರಿಜಿಸ್ಟ್ರೆಷನ್ ಸರ್ಟಿಫೀಕೆಟ್ ಸೇವ್ ಮಾಡಿಕೊಳ್ಳೂವ ಅತ್ಯಂತ ಸುರಕ್ಷಿತ ವ್ಯವಸ್ಥೆ ಡಿಜಿ ಲಾಕರ್ ಆಗಿದೆ. ಇದು ಅಧಿಕೃತ ದಾಖಲೆಯ ಆಪ್ ಆಗಲಿದೆ ಎನ್ನಲಾಗಿದೆ.
ಪ್ಲೇ ಸ್ಟೋರಿನಲ್ಲಿ ಲಭ್ಯ:
ಈಗಾಗಲೇ ಗೂಗಲ್ ಪ್ಲೇ ಸ್ಟೋರ್ನಲ್ಲಿ ಸದ್ಯ ಡಿಜಿಟಲ್ ಮಾದರಿಯಲ್ಲಿ ಡ್ರೈವಿಂಗ್ ಲೈಸೆನ್ಸ್ ಮತ್ತು ರಿಜಿಸ್ಟ್ರೆಷನ್ ಸರ್ಟಿಫೀಕೆಟ್ ಸೇವ್ ಮಾಡಿಕೊಳ್ಳುವ ಡಿಜಿ ಲಾಕರ್ ಆಪ್ ಲಭ್ಯವಿದೆ. ಇದನ್ನು ಡೌನ್ಲೋಡ್ ಮಾಡಿಕೊಳ್ಳುವ ಅಲುವಾಗಿ ಪ್ಲೇ ಸ್ಟೋರಿನಲ್ಲಿ ಡಿಜಿ ಲಾಕರ್ ಎಂದು ಟೈಪ್ ಮಾಡಿ, ಇದಾದ ನಂತರದಲ್ಲಿ ನೀಲಿ ಬಣ್ಣದಲ್ಲಿ ಕಾಣಿಸಿಕೊಳ್ಳುವ ಆಪ್ ಕಾಣಿಸಿಕೊಳ್ಳಲಿದೆ. ಅದನ್ನು ಡೌನ್ಲೋಡ್ ಮಾಡಿ.
ಇನ್ಸ್ಟಾಲ್ ಮಾಡಿಕೊಳ್ಳಿ:
ಡಿಜಿ ಲಾಕರ್ ಆಪ್ ಅನ್ನು ಪ್ಲೇ ಸ್ಟೋರಿನಲ್ಲಿ ಡೌನ್ಲೋಡ್ ಮಾಡಿದ ನಂತರದಲ್ಲಿ ಅದನ್ನು ಸ್ಮಾರ್ಟ್ಫೋನಿನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಿ. ಇದಾದ ನಂತರದಲ್ಲಿ ಆಪ್ನಲ್ಲಿ ಕಾಣಿಸಿಕೊಳ್ಳಲುವ ಸೈನ್ ಅಪ್ ಆಯ್ಕೆ ಒತ್ತಿ, ಯೂಸರ್ ನೇಮ್ ಮತ್ತು ಪಾಸ್ವರ್ಡ್ ಹಾಕಿರಿ. ಇದಾದ ನಂತರದಲ್ಲಿ ಆಧಾರ್ ಸಂಖ್ಯೆ ನಮೂದಿಸಿ.
ರಾಜ್ಯವನ್ನು ಆಯ್ಕೆಯನ್ನು ಮಾಡಿ:
ಇದಾನದ ನಂತರ ಡಿಜಿ ಲಾಕರ್ ಆಪ್ ನಲ್ಲಿರುವ ಸರ್ಚ್ ಬಾರಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಸಾರಿಗೆ ಇಲಾಖೆಯನ್ನು ಆಯ್ಕೆ ಮಾಡಿಕೊಂಡು ಮುಂದುವರೆಯಿರಿ.
ಮಾಹಿತಿ ಭರ್ತಿ ಮಾಡಿ:
ಡಿಜಿ ಲಾಕರ್ ಆಪ್ನಲ್ಲಿ ನಂತರ ಕರ್ನಾಟಕ ರಾಜ್ಯ ಸರ್ಕಾರದ ಸಾರಿಗೆ ಇಲಾಖೆಯನ್ನು ಆಯ್ಕೆ ಮಾಡಿಕೊಂಡ ನಂತರದಲ್ಲಿ, ನಿಮ್ಮ ಡಿಜಿಟಲ್ ಡ್ರೈವಿಂಗ್ ಲೈಸೆನ್ಸ್ ಮತ್ತು ರಿಜಿಸ್ಟ್ರೆಷನ್ ಸರ್ಟಿಫೀಕೆಟ್ ಪಡೆಯುವ ಸಲುವಾಗಿ ಡಿಎಲ್ ಸಂಖ್ಯೆ ನಮೂದಿಸಿ, ಡಿಜಿಟಲ್ ಆರ್ಸಿ ಪಡೆಯಲು ನಿಮ್ಮ ವಾಹನದ ನೋಂದಣಿ ಸಂಖ್ಯೆ, ಚಾರ್ಸಿ ಸಂಖ್ಯೆ ನಮೂದಿಸಿ. ನಂತರ ಡಿಜಿಟಲ್ ದಾಖಲೆ ದೊರೆಯಲಿದೆ.
ವಾಯು ಮಾಲಿನ್ಯದ ಪ್ರಮಾಣ ಪತ್ರ:
ವಾಯು ಮಾಲಿನ್ಯ ಪ್ರಮಾಣಪತ್ರ ಪಡೆಯಲು ಕೇವಲ ಗಾಡಿ ಸಂಖ್ಯೆ ನಮೂದಿಸಿ ಸಾಕು, ಅದು ಸಹ ನಿಮ್ಮ ಡಿಜಿ ಲಾಕರ್ ಆಪ್ನಲ್ಲಿ ಸೇವ್ ಆಗಲಿದೆ. ಇದರಿಂದಾಗಿ ನೀವು ಯಾವುದಕ್ಕೂ ಬೇರೆ ಯೋಚನೆ ಮಾಡಬೇಕಾಗಿಲ್ಲ.
ಕೋಟಿ ಮಂದಿ ಬಳಕೆದಾರರು:
ಈಗಾಗಲೇ ಬಳಕೆಗೆ ಲಭ್ಯವಿರುವ ಡಿಜಿ ಲಾಕರ್ ಆಪ್ ಅನ್ನು ಮಾಹಿತಿ ತಂತ್ರಜ್ಞಾನ ಸಚಿವಾಲಯ ನಿರ್ಮಿಸಿದೆ. 2015ರಲ್ಲಿ ಬಿಡುಗಡೆಯಾದ ಡಿಜಿ ಲಾಕರ್ ಆಪ್ ಈಗಾಗಲೇ 1.3 ಕೋಟಿ ಬಳಕೆದಾರರನ್ನು ಹೊಂದಿದೆ ಎನ್ನಲಾಗಿದೆ. ನೀವು ಸಹ ಯಾವುದೇ ಭಯವಿಲ್ಲದೇ ಆಪ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.
PDF ಬಳಕೆ:
ಡಿಜಿ ಲಾಕರ್ನಲ್ಲಿ ಸೇವ್ ಮಾಡಿಟ್ಟ ಪ್ರತಿಗಳನ್ನು ಮೊಬೈಲ್ ಮೂಲಕವೂ ವೀಕ್ಷಿಸಬಹುದು. ಇನ್ನು ಪಿಡಿಎಫ್ ಮೂಲಕ ಸೇವ್ ಮಾಡಿಟ್ಟುಕೊಳ್ಳಬಹುದು. ಇದರಿಂದಾಗಿ ಬಳಕೆದಾರರಿಗೆ ಯಾವುದೇ ಮಾದರಿಯಲ್ಲಿಯೂ ತೊಂದರೆಯಾಗುವುದಿಲ್ಲ.