ವಾಟ್ಸ್ಆಪ್ ಅನ್ನು ಕೆಲವೇ ದಿನಗಳಲ್ಲಿ ರಿಪ್ಲೇಸ್ ಮಾಡುತ್ತದೆ ಹೊಸ ಎಸ್ಎಂಎಸ್ ಸೇವೆ!

|

ಕೆಲವೇ ದಿನಗಳಲ್ಲಿ ಆಂಡ್ರಾಯ್ಡ್ ಫೋನ್‌ಗಳಲ್ಲಿ ವಾಟ್ಸ್ಆಪ್ ಅನ್ನು ಎಸ್ಎಂಎಸ್ ಸೇವೆ ರಿಪ್ಲೇಸ್ ಮಾಡಬಹುದು ಎಂಬ ಸುದ್ದಿ ಹರಿದಾಡಿದೆ. ಏಕೆಂದರೆ, ಬಹುನಿರೀಕ್ಷಿತ ಹಂಬಲ್ ಎಸ್ಎಂಎಸ್ ಪುನಃ ಬರುವ ಸಾಧ್ಯತೆ ಇದೆ. ನಾಲ್ಕು ಪ್ರಮುಖ ಯುಎಸ್ ವಾಹಕಗಳಾಗಿರುವ-ಎಟಿ&ಟಿ, ಸ್ಪ್ರಿಂಟ್,ಟಿ-ಮೊಬೈಲ್ ಮತ್ತು ವೆರಿಝಾನ್ ಸಹಭಾಗಿತ್ವದಲ್ಲಿ ಆರ್ ಸಿಎಸ್ ಇಕೋಸಿಸ್ಟಮ್ ಆಧಾರದಲ್ಲಿ ಮೆಸೇಜಿಂಗ್ ಅನ್ನು ಎನೇಬಲ್ ಮಾಡುವ ವಿಚಾರ ಸಂಪೂರ್ಣವಾಗಿ ಸ್ತಬ್ಧಗೊಂಡಿಲ್ಲ. ಇದು ಇನ್ನೂ ಕೂಡ ಚರ್ಚೆಯಲ್ಲಿದೆ ಎಂದು ಹೇಳಲಾಗಿದೆ.

ವಾಟ್ಸ್ಆಪ್ ಅನ್ನು ಕೆಲವೇ ದಿನಗಳಲ್ಲಿ ರಿಪ್ಲೇಸ್ ಮಾಡುತ್ತದೆ ಹೊಸ ಎಸ್ಎಂಎಸ್ ಸೇವೆ!

ಹೌದು, ಆರ್ ಟಿಎಸ್ ಆಧಾರಿತ ಟೆಕ್ಸ್ಟಿಂಗ್ ಅನ್ನು ಪರಿಚಯಿಸಬೇಕು ಎಂಬ ಬಗ್ಗೆ ಕಳೆದ ಕೆಲವು ಸಮಯದಿಂದ ಯುಸ್ ನಲ್ಲಿ ಚರ್ಚೆಯಾಗುತ್ತಿದ್ದು, ಹಂಬಲ್ ಎಸ್ಎಂಎಸ್ ಆಪ್ ವಾಟ್ಸ್ ಆಪ್‌ಗೆ ಪ್ರಬಲ ಸ್ಪರ್ಧಿಯಾಗುವ ಸಾಧ್ಯತೆ ಇದೆ. ಮೊಬೈಲ್ ಡಾಟ್ ಅಥವಾ ವೈಫೈಯನ್ನು ಎಸ್ಎಂಎಸ್ ಪಡೆಯುವುದಕ್ಕಾಗಿ ಬಳಸುವಂತಹ ಈ ಆಪ್ ಆರ್ ಸಿಎಸ್ ಎಂದರೆ ರಿಚ್ ಕಮ್ಯುನಿಕೇಷನ್ ಸರ್ವೀಸ್ (ಶ್ರೀಮಂತ ಸಂವಹನ ಸೇವೆಗಳು) ನೀಡುತ್ತಿದೆ ಎಂದು ಹೇಳಲಾಗಿದೆ.

ಇದೀಗ ಎಟಿ&ಟಿ,ಸ್ಪ್ರಿಂಟ್,ಟಿ-ಮೊಬೈಲ್ ಮತ್ತು ವೆರಿಝಾನ್ ನಾಲ್ಕೂ ಕೂಡ ಸಹಭಾಗಿತ್ವದಲ್ಲಿ ಮೊದಲ ಹೆಜ್ಜೆಯನ್ನು ಇರಿಸಿದ್ದು ಕ್ರಾಸ್ ಕರಿಯರ್ ಮೆಸೇಜಿಂಗ್ ಇನಿಶಿಯೇಟಿವ್ ಅನ್ನು ಪ್ರಾರಂಭಿಸಿದೆ ಅಂದರೆ ಮುಂದಿನ ಜನರೇಷನ್ನಿನ ಮೆಸೇಜ್ ಡೆಲಿವರಿ ವ್ಯವಸ್ಥೆ ಇದಾಗಿದೆ. ಆಂಡ್ರಾಯ್ಡ್ ಡಿವೈಸ್ ಗಳಿಗೆ ಸಿಸಿಎಂಐ ಆರ್ ಸಿಎಸ್ ಆಧಾರಿತ ಮೆಸೇಜಿಂಗ್ ನ್ನು ಮುಂದಿನ ವರ್ಷ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದೆ.ವಾಟ್ಸ್ ಆಪ್ ನ ಮಾತೃಸಂಸ್ಥೆ ಫೇಸ್ ಬುಕ್ ಗೆ ಬಳಕೆದಾರರ ಪ್ರೈವೆಸಿ ವಿಚಾರದಲ್ಲಿ ಅಂತಹ ಉತ್ತಮ ಹೆಸರಿಲ್ಲ ಮತ್ತು ಮೂಲ ಎಸ್ಎಂಎಸ್ ಆಧಾರಿತ ಆರ್ ಸಿಎಸ್ ವ್ಯವಸ್ಥೆಯಲ್ಲಿ ಹೊಸತನ್ನು ಪರಿಚಯಿಸಿ ವ್ಯವಸ್ಥಿತ ರೂಪದಲ್ಲಿ ಗ್ರಾಹಕರ ಮುಂದಿರಿಸಿದರೆ ಹಳೆಯದರಿಂದ ಹೊಸತಕ್ಕೆ ಬರುವುದಕ್ಕೆ ಗ್ರಾಹಕರಿಗೆ ಹೆಚ್ಚು ಸಮಯ ಹಿಡಿಯುವುದಿಲ್ಲ.

ವಾಟ್ಸ್ಆಪ್ ಅನ್ನು ಕೆಲವೇ ದಿನಗಳಲ್ಲಿ ರಿಪ್ಲೇಸ್ ಮಾಡುತ್ತದೆ ಹೊಸ ಎಸ್ಎಂಎಸ್ ಸೇವೆ!

ಹಂಬಲ್ ಎಸ್ಎಂಎಸ್ aನ್ನು ಆರ್ ಸಿಎಸ್ ಹೇಗೆ ಅಭಿವೃದ್ಧಿ ಪಡಿಸುತ್ತದೆ?

160 ಅಕ್ಷರಗಳ ಲಿಮಿಟ್ ಬದಲಾಗಿ ಆರ್ ಸಿಎಸ್ ಜನರಿಗೆ 8000 ಅಕ್ಷರಗಳ ಮೆಸೇಜ್ ಕಳುಹಿಸುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಓದುವುದು, ರಿಸೀವ್ ಮಾಡಿರುವುದು ಮತ್ತು ಇನ್ನೊಬ್ಬ ವ್ಯಕ್ತಿ ಟೈಪ್ ಮಾಡುತ್ತಿರುವುದನ್ನು ಕೂಡ ಗ್ರಾಹಕರು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. . ಆರ್ ಸಿಎಸ್ ಚಾಟ್ ಆಪ್ ಮೂಲಕ ಕೂಡ ಫೋಟೋಗಳು ಮತ್ತು ವೀಡಿಯೋಗಳನ್ನು ಎಕ್ಸ್ ಚೇಂಜ್ ಮಾಡಿಕೊಳ್ಳುವುದಕ್ಕೆ ಅವಕಾಶವಿರುತ್ತದೆ. . 100 ಜನರವರೆಗಿನ ಗ್ರೂಪ್ ಚಾಟ್ ನ್ನು ನಿರ್ಮಿಸುವುದಕ್ಕೂ ಕೂಡ ಗ್ರಾಹಕರಿಗೆ ಅವಕಾಶ ನೀಡಲಾಗುತ್ತದೆ. . ಆರ್ ಸಿಎಸ್ ಟೆಕ್ಸ್ಟ್ ಸೇವೆಯು ವೈಫೈ ಅಥವಾ ಮೊಬೈಲ್ ಡಾಟ್ ಮೂಲಕ ಕಾರ್ಯ ನಿರ್ವಹಿಸುತ್ತದೆ.

ಗೂಗಲ್ ಖಾತೆ ಮರೆತರೂ ಅಲ್ಲಿ ನಿಮ್ಮ ಡೇಟಾ ಉಳಿಯದಂತೆ ಮಾಡುವುದು ಹೇಗೆ?!

ಭಾರತದಲ್ಲಿ ಸಾಧ್ಯವೇ ಎಂಬುದು ಪ್ರಶ್ನಾರ್ತಕ?

ಆದರೆ ಈ ಆರ್ ಸಿಎಸ್ ಚಾಟ್ ಆಪ್ ಬರುವುದಕ್ಕಾಗಿ ಎಲ್ಲಾ ವಾಹಕಗಳು ಒಟ್ಟುಗೂಡುವ ಅಗತ್ಯವಿದೆ.ಯುಎಸ್ ನಲ್ಲಿ ಇದು ಸಾಧ್ಯವಾಗುತ್ತಿದೆ ಆದರೆ ಭಾರತದಲ್ಲಿ ಈ ಬಗ್ಗೆ ಇದುವರೆಗೂ ಯಾವುದೇ ಪ್ರಸ್ತಾಪವಿಲ್ಲ. ಇನ್ನು ಎಂಡ್-ಟು-ಎಂಡ್ ಎನ್ಕ್ರಿಪ್ಶನ್ (ಇ2ಇ) ನ್ನು ಇದು ನೀಡುತ್ತದೆಯೇ ಎಂಬ ಬಗ್ಗೆಯೂ ಕೂಡ ಯಾವುದೇ ಪ್ರಸ್ತಾವನೆ ಇಲ್ಲ ಅಥವಾ ವಾಟ್ಸ್ ಆಪ್ ರೀತಿಯಲ್ಲ ಎಂಬುದಕ್ಕೂ ಕೂಡ ಯಾವುದೇ ವಿಚಾರ ಬಂದಿಲ್ಲ. ಆರ್ ಸಿಎಸ್ ಎಲ್ಲಕ್ಕಿಂತಲೂ ಅತ್ಯಂತ ಹೆಚ್ಚಿನ ಸುರಕ್ಷತೆಯನ್ನು ನೀಡುತ್ತದೆ ಎಂಬ ಬಗ್ಗೆ ಟೆಲಿಕಾಂ ಆಪರೇಟರ್ ಗಳು ಗ್ರಾಹಕರಿಗೆ ಹೇಗೆ ಭರವಸೆ ನೀಡುತ್ತವೆ ಎಂಬ ಬಗ್ಗೆಯೂ ಇನ್ನೂ ತಿಳಿದುಬಂದಿಲ್ಲ. ಒಟ್ಟಾರೆ ಹಲವು ಪ್ರಶ್ನೆಗಳು ಅದಾಗಲೇ ಎದ್ದಿರುವುದಂತೂ ನಿಜ. ಹಾಗಾಗಿ ಭಾರತದ ಮಟ್ಟಿಗೆ ಇದೆಷ್ಟು ಉತ್ತಮ ರೀತಿಯಲ್ಲಿ ಕಾರ್ಯರೂಪಕ್ಕೆ ಬರುತ್ತದೆ ಎಂಬ ಬಗ್ಗೆ ಹಲವು ಅನುಮಾನಗಳಿವೆ.

Most Read Articles
Best Mobiles in India

English summary
The partnership will enable messaging based on Rich Communication Service (RCS) ecosystem that uses mobile data of Wi-Fi to receive SMS. With this, the humble SMS may become a rival to the likes of WhatsApp.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more