ಕರ್ನಾಟಕ ರಾಜ್ಯ ಪೋಲೀಸ್ ಅಪ್ ಬಿಡುಗಡೆ..ಡೌನ್‌ಲೋಡ್ ಮಾಡಲೇಬೇಕು ಎನ್ನಲು 5 ಕಾರಣಗಳು!!

|

ಸರ್ಕಾರಿ ಸೇವೆ ಮತ್ತು ಲಾಭಗಳನ್ನು ಪಡೆಯಲು ಇರುವ ಹತ್ತಾರು ಆಪ್‌ಗಳ ಪಟ್ಟಿಗೆ ಮತ್ತೊಂದು ಆಪ್ ಅನ್ನು ರಾಜ್ಯ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದೆ. ನಾಗರಿಕರಿಗೆ ತಮ್ಮ ಅಂಗೈಯಲ್ಲೇ ಪೊಲೀಸ್ ಸೇವೆ ಸಿಗಬೇಕು ಮತ್ತು ಪೊಲೀಸ್ ವ್ಯವಸ್ಥೆ ಜನಸ್ನೇಹಿಯಾಗಿರಬೇಕು ಎಂಬ ಉದ್ದೇಶದಿಂದ 'ಕರ್ನಾಟಕ ರಾಜ್ಯ ಪೊಲೀಸ್' ಆಪ್‌ ಅನ್ನು ಇಲಾಖೆ ರೂಪಿಸಿದೆ.

ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಈ ನೂತನ ಆಪ್‌ ಅನ್ನು ಬಿಡುಗಡೆ ಮಾಡಿದ್ದು, ಈ ಆಪ್‌ ಮೂಲಕ ಜನಸಾಮಾನ್ಯರಿಗೆ ಪೊಲೀಸರು ಮತ್ತಷ್ಟು ಹತ್ತಿರವಾಗಲಿದ್ದಾರೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದ್ದಾರೆ.

ಕರ್ನಾಟಕ ರಾಜ್ಯ ಪೋಲೀಸ್ ಅಪ್ ಬಿಡುಗಡೆ..ಡೌನ್‌ಲೋಡ್ ಮಾಡಲೇಬೇಕು ಎನ್ನಲು 5 ಕಾರಣಗಳು

ರಾಜ್ಯ ಪೊಲೀಸ್‌ ಇಲಾಖೆಯು ಈ ಮದಲೇ ಪ್ರಕಟಿಸಿದಿದಂತೆ 'ಕರ್ನಾಟಕ ರಾಜ್ಯ ಪೊಲೀಸ್' ಆಪ್‌ ಹಲವು ವಿಶೇಷತೆಗಳನ್ನು ಹೊಂದಿದೆ. ತುರ್ತು ಸಂದೇಶಗಳನ್ನುಕಳುಹಿಸುವ ವ್ಯವಸ್ಥೆಯಿಂದ ಹಿಡಿದು ಹಲವು ಸೇವೆಗಳು ಈ ಆಪ್‌ನಲ್ಲಿ ಅಡಕವಾಗಿವೆ. ಹಾಗಾದರೆ, 'ಕರ್ನಾಟಕ ರಾಜ್ಯ ಪೊಲೀಸ್' ಆಪ್‌ ಹೊಂದಿರುವ ಇನ್ನಿತರ ವಿಶೇಷತೆಗಳೇನು ಎಂಬುದನ್ನು ಮುಂದೆ ತಿಳಿಯಿರಿ.

ಪೊಲೀಸ್ ಠಾಣೆ ವಿಳಾಸ!

ಪೊಲೀಸ್ ಠಾಣೆ ವಿಳಾಸ!

‘ಕರ್ನಾಟಕ ರಾಜ್ಯ ಪೊಲೀಸ್' ಆಪ್‌ ಮೂಲಕ ಈ ಆಪ್ ಬಳಕೆದಾರರು ಇರುವ ಸ್ಥಳ ಯಾವ ಪೊಲೀಸ್‌ ಠಾಣೆ ವ್ಯಾಪ್ತಿಗೆ ಬರುತ್ತದೆ ಅಥವಾ ಹತ್ತಿರದ ಪೊಲೀಸ್‌ ಠಾಣೆ ಯಾವುದು, ವಿಳಾಸ ಮತ್ತು ಪೊಲೀಸ್‌ ಸಂಪರ್ಕ ಸಂಖ್ಯೆ, ಇ ಮೇಲ್‌ ಐಡಿ ಸೇರಿದಂತೆ ನ್ಯಾವಿಗೇಷನ್ ಮಾರ್ಗದರ್ಶನದಂತಹ ವಿವರಗಳು ಕೂಡ ಈ ಆಪ್‌ನಲ್ಲಿ ಲಭಿಸಲಿದೆ.

ತುರ್ತು ಸಂದೇಶಗಳು!

ತುರ್ತು ಸಂದೇಶಗಳು!

‘ಕರ್ನಾಟಕ ರಾಜ್ಯ ಪೊಲೀಸ್' ಆಪ್‌ ಮೂಲಕ ಜನರು ತಾವು ಇರುವ ಸ್ಥಳದ ಸಹಿತ ತುರ್ತು ಸಂದೇಶಗಳನ್ನು ಪೊಲೀಸರಿಗೆ ಕಳುಹಿಸಬಹುದಾದ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇಷ್ಟು ಮಾತ್ರವಲ್ಲದೇ, ರಾಜ್ಯ ಪೊಲೀಸ್‌ ಇಲಾಖೆಯ ಅಧಿಕಾರಿಗಳನ್ನು ಕ್ಷಣ ಮಾತ್ರದಲ್ಲಿ ಸಂಪರ್ಕಿಸುವ ಆಯ್ಕೆ ಸೌಲಭ್ಯವನ್ನು ಆಪ್‌ನಲ್ಲಿ ನೀಡಲಾಗಿದೆ.

ಹತ್ತಿರದವ ಮೊಬೈಲ್ ನಂಬರ್!

ಹತ್ತಿರದವ ಮೊಬೈಲ್ ನಂಬರ್!

‘ಕರ್ನಾಟಕ ರಾಜ್ಯ ಪೊಲೀಸ್' ಆಪ್‌ ಬಳಕೆದಾರರು ತನ್ನ ನಂಬಿಕಸ್ಥರ ಮೊಬೈಲ್ ನಂಬರ್ ಅನ್ನು ನಮೂದಿಸಿದರೇ, ನೀವು ಅಪಾಯದಲ್ಲಿದ್ದ ಸಂದರ್ಭಗಳಲ್ಲಿ ಅವರಿಗೆ ತುರ್ತು ಸಂದೇಶಗಳು ಹೋಗಲಿವೆ. ತಮ್ಮ ಕುಟುಂಬ ಅಥವಾ ಆಪ್ತರು ಸೇರಿದಂತೆ ಐವರ ನಂಬರ್‌ಗಳನ್ನು ಆಪ್‌ನಲ್ಲಿ ನಮೂದಿಸಿಸಬಹುದಾಗಿದೆ.

ಕನ್ನಡ ಹಾಗೂ ಇಂಗ್ಲಿಷ್!

ಕನ್ನಡ ಹಾಗೂ ಇಂಗ್ಲಿಷ್!

ಅಪರಾಧ ಕೃತ್ಯಗಳ ಬಗ್ಗೆ ಮಾಹಿತಿ ನೀಡಬಹುದಾದ ಮತ್ತು ತುರ್ತು ಸಂದರ್ಭಗಳಲ್ಲಿ ನಿಯಂತ್ರಣ ಕೊಠಡಿಗೆ ಕರೆ ಮಾಡಬಹುದಾದ ‘ಕರ್ನಾಟಕ ರಾಜ್ಯ ಪೊಲೀಸ್' ಆಪ್‌ ಅನ್ನು ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಯಲ್ಲಿ ಈ ಬಳಸಬಹುದಾಗಿದೆ. ಈ ಮೂಲಕ ಸಾಮಾನ್ಯ ಬಳಕೆದಾರರಿಗೂ ಸಹಾಯವಾಗುವಂತೆ ಆಪ್ ಲಭ್ಯವಿದೆ.

ಇತರೆ ಸೇವೆಗಳು?

ಇತರೆ ಸೇವೆಗಳು?

‘ಕರ್ನಾಟಕ ರಾಜ್ಯ ಪೊಲೀಸ್' ಆಪ್‌ನಲ್ಲಿ ಪೊಲೀಸ್‌ ಸಲಹೆ-ಸೂಚನೆಗಳ ಕುರಿತು ನೋಟಿಫಿಕೇಷನ್‌ಗಳು, ಅಪ್‌ಡೇಟ್‌ಗಳು, ನಾಪತ್ತೆಯಾದ ವ್ಯಕ್ತಿಗಳ ವಿವರಗಳನ್ನು ಕೂಡಾ ಅಪ್‌ಲೋಡ್‌ ಮಾಡಲಾಗುತ್ತದೆ. ಪೊಲೀಸ್‌ ಇಲಾಖೆಯ ಸಾಮಾಜಿಕ ಜಾಲತಾಣಗಳನ್ನು ವೀಕ್ಷಿಸಬಹುದಾ ಈ ಆಪ್ ಪ್ಲೇ ಸ್ಟೋರ್‌ನಲ್ಲಿ ‘Karnataka State Po*ice (Officia*)' ಲಭ್ಯವಿದೆ.

Best Mobiles in India

English summary
Karnataka State Police app hopes to make interface with the force easier. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X