Just In
- 8 hrs ago
ಆಂಡ್ರಾಯ್ಡ್ ಗೆ ಬಂದಿದೆ ಅತ್ಯಂತ ಅಪಾಯಕಾರಿ ವೈರಸ್..! ಈ ಬಗ್ಗೆ ಗೂಗಲ್ ಏನೇಳುತ್ತೆ..?
- 11 hrs ago
ಏರ್ಟೆಲ್, ಜಿಯೋದಿಂದ ಮುಂದುವರೆದ ಸ್ಪರ್ಧೆ..! ರಿಟೇಲ್ ವ್ಯಾಪಾರಿಗಳಿಗೆ ಬಂಪರ್..!
- 12 hrs ago
ವಾಟ್ಸಪ್ ಸ್ಟೇಟಸ್ಗಳನ್ನು ಸುಲಭವಾಗಿ ಸೇವ್ ಮಾಡುವುದು ಹೇಗೆ ಗೊತ್ತಾ?
- 13 hrs ago
ಐಫೋನ್ 11 ಪ್ರೊ ಅರ್ಡರ್ ಮಾಡಿದ್ದ ಬೆಂಗಳೂರು ವ್ಯಕ್ತಿಗೆ ಸಿಕ್ಕಿದ್ದೇನು ಗೊತ್ತಾ?
Don't Miss
- News
ಫಲ ನೀಡಿದ ಬ್ರೆಕ್ಸಿಟ್ ವಚನ, ಬೋರಿಸ್ ಜಾನ್ಸನ್ಗೆ ಐತಿಹಾಸಿಕ ಬಹುಮತ
- Sports
ಐಎಸ್ಎಲ್ 2019: ಕೊಚ್ಚಿಯಲ್ಲಿ ಕೇರಳ ಗೆದ್ದಿಲ್ಲ, ಜೆಮ್ಶೆಡ್ಪುರ ಸೋತಿಲ್ಲ
- Movies
ದಬಾಂಗ್-3 ರಿಲೀಸ್ ಗೂ ಮೊದಲೇ ಅಚ್ಚರಿ ನೀಡಿದ ಸಲ್ಮಾನ್ ಖಾನ್
- Finance
ಬ್ರಿಟಿಷ್ ಬಿಲಿಯನೇರ್ ಉದ್ಯಮಿ ಬ್ರಾನ್ಸನ್ ಪೂರ್ವಜರ ಮೂಲ ತ.ನಾಡಿನ ಕಡಲೂರು
- Automobiles
ದುಬಾರಿ ಬೆಲೆಯೊಂದಿಗೆ ಪೋರ್ಷೆ ಕಯೆನಿ ಕೂಪೆ ಎಸ್ಯುವಿ ಬಿಡುಗಡೆ
- Lifestyle
ಅಸ್ತಮಾ ರಾತ್ರಿ ಹೊತ್ತೇ ಏಕೆ ಹೆಚ್ಚಾಗುತ್ತದೆ?
- Education
DRDO: 1817 ಹುದ್ದೆಗಳ ನೇಮಕಾತಿ...ತಿಂಗಳಿಗೆ 56,900/-ರೂ ವೇತನ
- Travel
ವಾರಾಂತ್ಯದಲ್ಲಿ ನಿಮ್ಮ ಕುಟುಂಬದೊಂದಿಗೆ ಮೋಜು ಮಾಡಲು ಬೆಂಗಳೂರಿನ ಸುತ್ತಮುತ್ತ ಈ ಸ್ಥಳಗಳೇ ಬೆಸ್ಟ್
ವಾಟ್ಸ್ಆಪ್ ಬ್ಯುಸಿನೆಸ್ನಲ್ಲಿ ಹೊಸ ಫೀಚರ್..! ವ್ಯಾಪಾರಿಗಳಿಗೆ ಅನುಕೂಲ..!
ವಾಟ್ಸ್ಆಪ್ ತನ್ನ ಬ್ಯುಸಿನೆಸ್ ಆಪ್ನಲ್ಲಿ ಹೊಸ ವೈಶಿಷ್ಟ್ಯವನ್ನು ಹೊರತಂದಿದ್ದು, ಇದರ ಮೂಲಕ ಗ್ರಾಹಕರು ತಮ್ಮ ಉತ್ಪನ್ನಗಳನ್ನು ಸುಲಭವಾಗಿ ಖರೀದಿಸಬಹುದಾಗಿದೆ. ಭಾರತ, ಬ್ರೆಜಿಲ್, ಜರ್ಮನಿ, ಇಂಡೋನೇಷ್ಯಾ, ಮೆಕ್ಸಿಕೊ, ಯುಕೆ ಮತ್ತು ಯುಎಸ್ನಲ್ಲಿ ವಾಟ್ಸ್ಆಪ್ ಬ್ಯುಸಿನೆಸ್ ಅಪ್ಲಿಕೇಶನ್ ಬಳಸುವ ವ್ಯವಹಾರಗಳಿಗೆ ಕ್ಯಾಟಲಾಗ್ಸ್ ಎಂಬ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲಾಗಿದೆ.

ಏಳು ದೇಶಗಳಲ್ಲಿ ಲಭ್ಯ
ವಾಟ್ಸ್ಆಪ್ ಬ್ಯುಸಿನೆಸ್ನ ಕ್ಯಾಟಲಾಗ್ ಫೀಚರ್ ಈಗಾಗಲೇ ಏಳು ದೇಶಗಳಲ್ಲಿ ಲಭ್ಯವಿದ್ದು, ಶೀಘ್ರದಲ್ಲಿಯೇ ಇತರ ದೇಶಗಳಿಗೂ ವಿಸ್ತರಣೆಯಾಗುವ ನಿರೀಕ್ಷೆಯಿದೆ. ಹೊಸ ವೈಶಿಷ್ಟ್ಯವು ಆಂಡ್ರಾಯ್ಡ್ ಮತ್ತು ಐಒಎಸ್ ಎರಡು ಸಾಧನಗಳ ಬಳಕೆದಾರರಿಗೆ ಲಭ್ಯವಿದೆ,

ಮೊಬೈಲ್ ಶೋರೂಂ
ಕ್ಯಾಟಲಾಗ್ಗಳು ವ್ಯಾಪಾರಿಗಳು ತಮ್ಮ ವಸ್ತುಗಳನ್ನು ಪ್ರದರ್ಶಿಸಲು ಮತ್ತು ಹಂಚಿಕೊಳ್ಳಲು ಮೊಬೈಲ್ ಶೋರೂಂ ಆಗಿದೆ. ಇದರಿಂದ ಜನರು ಖರೀದಿಸಲು ಬಯಸುವ ಯಾವ ವಸ್ತುವನ್ನಾದರೂ ಸುಲಭವಾಗಿ ಬ್ರೌಸ್ ಮಾಡಬಹುದು ಮತ್ತು ಕಂಡುಹಿಡಿಯಬಹುದು. ಈ ಹಿಂದೆ ವ್ಯಾಪಾರಿಗಳು ಉತ್ಪನ್ನಗಳ ಫೋಟೋಗಳನ್ನು ಒಂದೊಂದಾಗಿ ಕಳುಹಿಸಬೇಕಾಗಿತ್ತು. ಮತ್ತು ಪದೇ ಪದೇ ಮಾಹಿತಿಯನ್ನು ಒದಗಿಸಬೇಕಾಗಿತ್ತು. ಆದರೆ, ಈಗ ಗ್ರಾಹಕರು ವ್ಯಾಪಾರಿಗಳ ಪೂರ್ಣ ಕ್ಯಾಟಲಾಗ್ನ್ನು ವಾಟ್ಸ್ಆಪ್ನಲ್ಲಿಯೇ ನೋಡಬಹುದಾಗಿದೆ.

ಹೆಚ್ಚಿನ ಆಯ್ಕೆಗಳು
ಕ್ಯಾಟಲಾಗ್ಗಳ ಭಾಗವಾಗಿ ಉತ್ಪನ್ನದ ಚಿತ್ರಗಳು, ಹೆಸರು, ಬೆಲೆ, ವಿವರಣೆ ಮತ್ತು ಲಿಂಕ್ನಂತಹ ಮಾಹಿತಿಯನ್ನು ಸೇರಿಸಬಹುದು. ವಾಟ್ಸ್ಆಪ್ನಲ್ಲಿ ಅಂತಹ ಎಲ್ಲ ಮಾಹಿತಿಯನ್ನು ಒದಗಿಸಲು ಸಾಧ್ಯವಾಗುವುದರಿಂದ ವ್ಯಾಪಾರಿಯ ವೆಬ್ಸೈಟ್ಗೆ ಹೋಗುವ ಅಗತ್ಯ ನಿವಾರಿಸುತ್ತದೆ. ಮತ್ತು ಫೇಸ್ಬುಕ್ ಒಡೆತನದ ವಾಟ್ಸ್ಆಪ್ ಮೂಲಕ ನೇರವಾಗಿ ಉತ್ಪನ್ನವನ್ನು ಕಾಯ್ದಿರಿಸಬಹುದು.

ಪ್ರತಿದಿನದ ವ್ಯವಹಾರ
ನಾವು ವಾಣಿಜ್ಯ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ತೆರೆಯುತ್ತಿದ್ದೇವೆ. ಗ್ರಾಹಕರನ್ನು ಉತ್ಪನ್ನಗಳ ಮಾಹಿತಿಗಾಗಿ ವೆಬ್ಸೈಟ್ಗೆ ಕಳುಹಿಸುವುದಕ್ಕಿಂತ ಹೆಚ್ಚಾಗಿ, ಅವರು ವಾಟ್ಸ್ಆಪ್ನಲ್ಲಿ ಪ್ರತಿದಿನದ ವ್ಯವಹಾರಗನ್ನು ಮಾಡಬಹುದು ಎಂದು ವಾಟ್ಸ್ಆಪ್ನ ಉತ್ಪನ್ನ ವ್ಯವಸ್ಥಾಪಕ ಅಮೃತ್ ಪಾಲ್ ಹೇಳಿದ್ದಾರೆ.

ವ್ಯಾಪಾರಕ್ಕೆ ವೇದಿಕೆ
ವಾಟ್ಸ್ಆಪ್ ಬ್ಯುಸಿನೆಸ್ ಆಪ್ನ್ನು 2018ರಲ್ಲಿ ಪ್ರಾರಂಭಿಸಲಾಯಿತು, ಇದು ವ್ಯಾಪಾರಿಗಳಿಗೆ ತಮ್ಮ ಸಂಭಾವ್ಯ ಗ್ರಾಹಕರೊಂದಿಗೆ ಸಂವಹನ ನಡೆಸಲು ಒಂದು ವೇದಿಕೆಯನ್ನು ಒದಗಿಸಿದೆ. ಈ ಅಪ್ಲಿಕೇಶನ್ನಲ್ಲಿ ವ್ಯಾಪಾರಿಗಳು ತಮ್ಮ ಅಧಿಕೃತ ಜೈವಿಕ, ಇಮೇಲ್, ವಿಳಾಸ ಮತ್ತು ಸಂಪರ್ಕ ಸಂಖ್ಯೆಯನ್ನು ಸೇರಿಸಬಹುದು.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
32,990
-
33,530
-
14,030
-
6,990
-
20,340
-
12,790