ಎಂಟರ್ಪ್ರೈಸ್ ಗಳಿಗೆ ಬ್ರ್ಯಾಂಡ್-ನಿರ್ದಿಷ್ಟ ಕಸ್ಟಮೈಸೇಶನ್ ನೀಡಲಿರುವ ಸ್ವೈಪ್

By Tejaswini P G
|

ಭಾರತದ ಬಜೆಟ್ ಸ್ಮಾರ್ಟ್ಫೋನ್ ಮತ್ತು ಟ್ಯಾಬ್ಲೆಟ್ ಬ್ರ್ಯಾಂಡ್ ಆದ ಸ್ವೈಪ್ ಇಂಡಿಯಾ ಇಂಕ್ ನಲ್ಲಿ ಹೊಸದೊಂದು ಟ್ರೆಂಡ್ ಶುರುಮಾಡಲಿದೆ. ಎಂಟರ್ಪ್ರೈಸ್ ಮಟ್ಟದಲ್ಲಿ ತಂತ್ರಜ್ಞಾನದ ಕಸ್ಟಮೈಸೇಶನ್ ಗೆ ಮುಂದಾಗಿದೆ ಸ್ವೈಪ್. ಉದ್ಯಮ ಚಿಕ್ಕದಾಗಿರಲಿ ಅಥವಾ ದೊಡ್ಡದಿರಲಿ, ಸ್ಥಳೀಯ ಅಥವ ರಾಷ್ಟ್ರಮಟ್ಟದ ಉದ್ಯಮಗಳೇ ಇರಲಿ, ಕಂಪೆನಿಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಕಸ್ಟಮೈಸ್ ಮಾಡಲಾದ ಟ್ಯಾಬ್ಲೆಟ್ ಪಿಸಿ ಅಥವಾ ಸ್ಮಾರ್ಟ್ಫೋನ್ಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಬಯಸುತ್ತಿದ್ದು, ಈ ಮೂಲಕ ತಮ್ಮ ಬ್ರ್ಯಾಂಡ್ ನ ಲಾಯಲ್ಟಿ ಹೆಚ್ಚಿಸುವ ಯೋಚನೆ ಅವರದ್ದು.

ಎಂಟರ್ಪ್ರೈಸ್ ಗಳಿಗೆ ಬ್ರ್ಯಾಂಡ್-ನಿರ್ದಿಷ್ಟ ಕಸ್ಟಮೈಸೇಶನ್ ನೀಡಲಿರುವ ಸ್ವೈಪ್

ಶಿಕ್ಷಣ, ಆರೋಗ್ಯ ಮತ್ತು ಇನ್ಫೋಮಿಡಿಯಾ ಮೊದಲಾದ ಕ್ಷೇತ್ರಗಳು ಇಂತಹ ಕಸ್ಟಮೈಸ್ಡ್ ಗ್ಯಾಜೆಟ್ಗಳನ್ನು ಬಳಸಲು ಮುಂದಾಗಿದೆ.ಈ ಕ್ಷೇತ್ರಗಳ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ, ಗ್ರಾಹಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ವೆಂಡರ್ಗಳಿಗೆ ಇಂತಹ ಕಸ್ಟಮೈಸ್ಡ್ ಕಮ್ಯುನಿಕೇಶನ್ ಸಾಧನಗಳನ್ನು ಈಗಾಗಲೇ ನೀಡುತ್ತಿದ್ದಾರೆ.

ಖ್ಯಾತ ಬಜೆಟ್ ಸ್ಮಾರ್ಟ್ಫೋನ್ ಮತ್ತು ಟ್ಯಾಬ್ಲೆಟ್ ಬ್ರ್ಯಾಂಡ್ ಆದ ಸ್ವೈಪ್ ಇಂತಹ ಹಲವು ಆಫರ್ಗಳನ್ನು ಬಜೆಟ್ ಮಾರುಕಟ್ಟೆಯಲ್ಲಿ ನೀಡಿದೆ.ಫಾಸೂಸ್ ಫುಡ್ ಸರ್ವೀಸಸ್, ಸ್ಟೇಟ್ ಬ್ಯಾಂಕ್ ಆಫ್ ಬಿಕನೀರ್ ಆಂಡ್ ಜೈಪುರ್, ಮೆಟ್ರೋ ಶೂಸ್, ಕ್ಯಾಬಿ ಟ್ಯಾಬಿ, ಆಕಾಂಕ್ಷಾ ಫೌಂಡೇಶನ್, NM ವಾಡಿಯಾ ಮೆಡಿಕಲ್ ಕಾಲೇಜ್, ಅಮನೋರಾ ಪಾರ್ಕ್ ಟೌನ್, ವಿಬ್ಬಲ್ ಇಂಡಿಯಾ, ಎಮೆನಾಕ್ಸ್ ಹೆಲ್ತ್ಕೇರ್, ಸೀಸನ್ಸ್ ಮಾರ್ಕೆಟಿಂಗ್, ಚಾಕಲೇಟ್ ಬೈಕ್ಲೇಟ್, ಮೂವಿಂಗ್ ಡಿಜಿಟಲ್ ಫ್ರೇಮ್ಸ್, ಈಗಲ್ ಐ ಸೊಲ್ಯೂಶನ್ಸ್, ರಿಕಿ ರಿಕ್ಷಾ, IOEMAS & ಮೋಟಿವೇಶನ್ ಫಾರ್ ಎಕ್ಸೆಲೆನ್ಸ್ ಇನಿಶಿಯೇಟಿವ್ ಸ್ವೈಪ್ ನ ನೂತನ ಕ್ಲೈಂಟ್ಗಳಾಗಿದ್ದಾರೆ.

ಹೊಸ ಮೊಬೈಲ್ ಬಿಡುಗಡೆಯಾದರೆ ಹಳೆ ಫೋನ್ ವೇಗ ಕಡಿಯಾಗುವುದೇಕೆ?..ಇದು ಮೋಸವೇ?!!

ಸ್ವೈಪ್ ತಮ್ಮ ಸ್ಮಾರ್ಟ್ಫೋನ್ ಮತ್ತು ಟ್ಯಾಬ್ಲೆಟ್ ಗಳಲ್ಲಿ ವಿವಿಧ ಸ್ತರಗಳ ಕಸ್ಟಮೈಸೇಶನ್ ನೀಡುತ್ತದೆ. ಕಸ್ಟಮ್ ಆಪ್ ಗಳು, ಅಗತ್ಯ ಹಾರ್ಡ್ವೇರ್ ಕಾನ್ಫಿಗರೇಶನ್ಗಳು, ಬ್ರ್ಯಾಂಡಿಂಗ್ ಗಳು ಮತ್ತು ಕಸ್ಟಮರ್ ಸಪೋರ್ಟ್ಗಳು ಇವೆಲ್ಲವನ್ನೂ ನೀಡುತ್ತದೆ ಸ್ವೈಪ್. ಕರ್ನಲ್ ಮಟ್ಟದಲ್ಲಿ ಈ ರೀತಿಯ ಕಸ್ಟಮೈಸೇಶನ್ಗಳನ್ನು ಮಾಡುವ ಮೂಲಕ ಅನಗತ್ಯ ಆಪ್ಗಳನ್ನು ತೆಗೆದು ಅಗತ್ಯ ಸಾಫ್ಟವೇರ್ಗಳನ್ನು ಮಾತ್ರ ಉಳಿಸಿಕೊಳ್ಳಬಹುದು.ಈ ರೀತಿ ಮಾಡುವುದರಿಂದ ಸರಳ UI ಪಡೆಯಬಹುದಲ್ಲದೆ ಇರುವ ಹಾರ್ಡ್ವೇರ್ ಅನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬಹುದು. ಇದರಿಂದ ಸಾಧನಗಳು ವೇಗವಾಗಿ ಕೆಲಸಮಾಡುತ್ತದಲ್ಲದೆ ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡುತ್ತದೆ.

ಗ್ರಾಹಕರ ಬೇಕು ಬೇಡಗಳ ಆಧಾರದ ಮೇಲೇ ಸ್ವೈಪ್ ಸ್ಕ್ರೀನ್ ಸೈಜ್, ಪ್ರಾಸೆಸರ್, ಕ್ಯಾಮೆರಾ ರೆಸೊಲ್ಯೂಶನ್, ಕನೆಕ್ಟಿವಿಟಿ, ಮೆಮೋರಿ ಮೊದಲಾದ ಹಾರ್ಡ್ವೇರ್ ಅಂಶಗಳನ್ನು ಕಸ್ಟಮೈಸ್ ಮಾಡುತ್ತದೆ. ಇನ್ನು ಬ್ರ್ಯಾಂಡಿಂಗ್ ಬಗ್ಗೆ ಹೇಳುವುದಾದರೆ, ಗ್ರಾಹಕರು ಅವರ ಕಂಪೆನಿಯ ಲೋಗೋಗಳನ್ನು ಬೂಟ್ ಸ್ಕ್ರೀನ್ ಮತ್ತು ಬ್ಯಾಕ್ ಪ್ಯಾನೆಲ್ಗಳಲ್ಲಿ ಪಡೆಯಬಹುದು. ಅಲ್ಲದೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ಪ್ಯಾಕೇಜ್ಗಳನ್ನು ಸಿದ್ಧಪಡಿಸುವ ಮೂಲಕ ಇನ್ನೂ ಆಕರ್ಷಕವಾಗಿಸಬಹುದು.

ಕಸ್ಟಮೈಸ್ಡ್ ಸಾಧನಗಳನ್ನು ಬಳಸುವ ಮೂಲಕ ಸಂವಹನ ಮತ್ತು ಕೆಲಸ ಹೆಚ್ಚು ಸರಳವಾಗಿ ಮತ್ತು ಕ್ರಮಬದ್ಧವಾಗಿ ನಡೆಯುತ್ತದೆ. ಅಗತ್ಯ ಡೇಟಾ ಅನ್ನು ಎಲ್ಲಾ ಸಾಧನಗಳ ಮೂಲಕ ತಲುಪಲು ಸುಲಭವಾಗುತ್ತದೆ. ಎಂಟರ್ಪ್ರೈಸ್ಗಳು ಬಯಸುವ ಕಾರ್ಯಗಳನ್ನು ಪೂರೈಸಲು ಈ ಸಾಧನಗಳು ಹೆಚ್ಚು ಸಮರ್ಥವಾಗಿರುತ್ತದೆ.

Most Read Articles
Best Mobiles in India

Read more about:
English summary
Swipe has come up with a brand-specific customization technology for the enterprise clients based on their requirements.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more