ಇಷ್ಟು ದಿನ ಕಾಯುತ್ತಿದ್ದ ಫೀಚರ್ ಸದ್ಯದಲ್ಲೇ ವಾಟ್ಸ್ ಆಪ್ ನಲ್ಲಿ ಬರಲಿದೆ!

|

ಕಳೆದ ಹಲವು ದಿನಗಳಿಂದ ವಾಟ್ಸ್ ಆಪ್ ನ ಡಾರ್ಕ್ ಮೋಡ್ ಫೀಚರ್ ಗಾಗಿ ಕೆಲಸಗಳು ನಡೆಯುತ್ತಿದೆ. ಸೋಷಿಯಲ್ ಮೆಸೇಜಿಂಗ್ ಆಪ್ ನಲ್ಲಿ ಭಾರೀ ಕಾತುರದಿಂದ ಕಾಯುತ್ತಿರುವ ಫೀಚರ್ ಇದಾಗಿದ್ದು ಆಂಡ್ರಾಯ್ಡ್ ಮತ್ತು ಐಓಎಸ್ ಎರಡೂ ಫ್ಲಾಟ್ ಫಾರ್ಮ್ ಗಳಲ್ಲಿ ಇದು ಬರಲಿದೆ.

ಫೋಟೋ ರಿಲೀಸ್:

ಫೋಟೋ ರಿಲೀಸ್:

ಮುಂಬರುವ ಈ ಫೀಚರ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಬಗೆಗಿನ ಕೆಲವು ಫೋಟೋಗಳು ಇದೀಗ ಲಭ್ಯವಾಗಿದೆ.ಟ್ವೀಟರ್ ನಲ್ಲಿ ವಾಬೇಟಾಇನ್ಫೋ ಡಾರ್ಕ್ ಮೋಡ್ ಕಾನ್ಸೆಪ್ಟ್ ಆಂಡ್ರಾಯ್ಡ್ ನಲ್ಲಿ ಹೇಗೆ ಕೆಲಸ ನಿರ್ವಹಿಸುತ್ತದೆ ಎಂಬ ಬಗೆಗಿನ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಹಾಗಂತ ಇದೇ ಮೊದಲ ಬಾರಿಗೆ ವಾಟ್ಸ್ ಆಪ್ ನ ಡಾರ್ಕ್ ಮೋಡ್ ಫೀಚರ್ ಬಗೆಗಿನ ಫೋಟೋ ಬಿಡುಗಡೆಗೊಂಡಿರುವುದಲ್ಲ. ಈ ಮೊದಲೂ ಕೂಡ ಕೆಲವು ಫೋಟೋಗಳು ಬಿಡುಗಡೆಗೊಂಡಿದ್ದವು.

ಫೀಚರ್ ಹೇಗಿರುತ್ತದೆ?

ಫೀಚರ್ ಹೇಗಿರುತ್ತದೆ?

ಹೆಸರೇ ಸೂಚಿಸುವಂತೆ, ಈ ಫೀಚರ್ ವಾಟ್ಸ್ ಆಪ್ ಚಾಟ್ ನ ಬ್ಯಾಕ್ ಗ್ರೌಂಡ್ ನ್ನು ಡಾರ್ಕ್ ಮಾಡುತ್ತದೆ. ಯುಟ್ಯೂಬ್, ಟ್ವೀಟರ್, ಗೂಗಲ್ ಮ್ಯಾಪ್ ಮತ್ತು ಇತರೆ ಕೆಲವು ಆಪ್ ಗಳಲ್ಲಿ ಈಗಾಗಲೇ ಲಭ್ಯವಿರುವ ಡಾರ್ಕ್ ಮೋಡ್ ಫೀಚರ್ ನಂತೆಯೇ ಈ ಫೀಚರ್ ಕಾರ್ಯ ನಿರ್ವಹಿಸುತ್ತದೆ.

ಫೀಚರ್ ಸೆಟ್ ಮಾಡುವಿಕೆ:

ಫೀಚರ್ ಸೆಟ್ ಮಾಡುವಿಕೆ:

ಈ ಹಿಂದಿನ ವರದಿಯು ತಿಳಿಸಿರುವಂತೆ ಬಳಕೆದಾರರಿಗೆ ಅಗತ್ಯವಿದ್ದಾಗ ಈ ಫೀಚರ್ ನ್ನು ಸ್ವಿಚ್ ಆನ್ ಮಾಡಲು ಅವಕಾಶ ನೀಡಲಾಗಿತ್ತು. ಇನ್ನೊಂದು ವರದಿಯು ಹೇಳುವಂತೆ ಬಳಕೆದಾರರು ಸೆಟ್ ಮಾಡಿಕೊಳ್ಳುವ ಸಮಯಕ್ಕೆ ಸರಿಯಾಗಿ ಡಾರ್ಕ್ ಮೋಡ್ ಫೀಚರ್ ಆಕ್ಟಿವೇಟ್ ಆಗುತ್ತದೆ ಎನ್ನಲಾಗಿದೆ.

ಸದ್ಯದಲ್ಲೇ ಬಿಡುಗಡೆಗೊಳ್ಳಲಿರುವ ಫೀಚರ್:

ಸದ್ಯದಲ್ಲೇ ಬಿಡುಗಡೆಗೊಳ್ಳಲಿರುವ ಫೀಚರ್:

ಆದರೆ ಮುಂಬರುವ ಈ ಫೀಚರ್ ಬಗ್ಗೆ ಅಧಿಕೃತವಾಗಿ ವಾಟ್ಸ್ ಆಪ್ ಸಂಸ್ಥೆ ಪ್ರಕಟಣೆ ನೀಡಬೇಕಿದೆ. ಇದುವರೆಗೂ ಈ ಫೀಚರ್ ಬಿಡುಗಡೆಯ ಬಗ್ಗೆ ವಾಟ್ಸ್ ಆಪ್ ಸಂಸ್ಥೆ ಏನನ್ನೂ ಹೇಳಿಲ್ಲ ಮತ್ತು ಸದ್ಯ ಸಿಗುತ್ತಿರುವ ವರದಿಗಳ ಅನುಸಾರ ಕೆಲವೇ ದಿನಗಳಲ್ಲಿ ಡಾರ್ಕ್ ಮೋಡ್ ಫೀಚರ್ ಜನಸಾಮಾನ್ಯರಿಗೆ ವಾಟ್ಸ್ ಆಪ್ ನಲ್ಲಿ ಲಭ್ಯವಾಗಲಿದೆ ಎಂದು ನಂಬಬಹುದಾಗಿದೆ.

ಆಂಡ್ರಾಯ್ಡ್ ಪೈ ನಲ್ಲಿ ಡಿಫಾಲ್ಟ್ ಫೀಚರ್:

ಆಂಡ್ರಾಯ್ಡ್ ಪೈ ನಲ್ಲಿ ಡಿಫಾಲ್ಟ್ ಫೀಚರ್:

ಡಾರ್ಕ್ ಮೋಡ್ ಫೀಚರ್ ಆಪರೇಟಿಂಗ್ ಸಿಸ್ಟಮ್ ನಲ್ಲಿ ಡಿಫಾಲ್ಟ್ ಆಗಿ ಲಭ್ಯವಾಗಲಿದೆ. ಆಂಡ್ರಾಯ್ಡ್ 9.0 ಪೈ ಆಪರೇಟಿಂಗ್ ಸಿಸ್ಟಮ್ ಪ್ರಮುಖ ಫೀಚರ್ ಇದಾಗಿರುತ್ತದೆ. ಈ ವೈಶಿಷ್ಟ್ಯತೆಯು ಕಡಿಮೆ ಬೆಳಕಿನಲ್ಲಿಯೂ ಕೂಡ ಫೋನ್ ಬಳಕೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಬಿಳಿಯ ಬಣ್ಣದ ಬೆಳಕಿನ ಇಂಟರ್ಫೇಸ್ ನ್ನು ಇದು ಕಡಿಮೆ ಮಾಡುತ್ತದೆ ಮತ್ತು ಆ ಮೂಲಕ ನಿಮ್ಮ ಕಣ್ಣುಗಳಿಗೆ ಹೆಚ್ಚು ಒತ್ತಡ ಆಗುವುದನ್ನು ತಪ್ಪಿಸುತ್ತದೆ.

ಅಧಿಕವಾಗುವ ಬ್ಯಾಟರಿ ಲೈಫ್:

ಅಧಿಕವಾಗುವ ಬ್ಯಾಟರಿ ಲೈಫ್:

ಅಷ್ಟೇ ಅಲ್ಲ ಇದು ಸ್ಮಾರ್ಟ್ ಫೋನಿನ ಬ್ಯಾಟರಿ ಲೈಫ್ ನ್ನು ಕೂಡ ಹೆಚ್ಚಿಸುತ್ತದೆ. ಗೂಗಲ್ ಈಗಾಗಲೇ ತಿಳಿಸಿರುವಂತೆ ಡಾರ್ಕ್ ಮೋಡ್ ವೈಶಿಷ್ಟ್ಯತೆಯು ಸುಮಾರು 43% ಕಡಿಮೆ ಬ್ಯಾಟರಿಯನ್ನು ಬಳಕೆ ಮಾಡುತ್ತದೆ ಹಾಗಾಗಿ ಬ್ಯಾಟರಿ ಎಫೀಷಿಯನ್ಸಿ ಅಧಿಕಗೊಳ್ಳುತ್ತದೆ.

Best Mobiles in India

Read more about:
English summary
This much-awaited feature may soon come on WhatsApp

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X