Just In
Don't Miss
- News
ಭಾರತ ಈಗ ಅತ್ಯಾಚಾರದ ರಾಜಧಾನಿಯಾಗಿದೆ: ರಾಹುಲ್ ಗಾಂಧಿ
- Automobiles
390 ಅಡ್ವೆಂಚರ್ ಜೊತೆಗೆ 790 ಅಡ್ವೆಂಚರ್ ಆವೃತ್ತಿಯನ್ನು ಸಹ ಪ್ರದರ್ಶನಗೊಳಿಸಿದ ಕೆಟಿಎಂ
- Movies
ಮುಂದಿನ ವರ್ಷವೇ ಮದುವೆ ಎನ್ನುತ್ತಾರೆ ಮನುರಂಜನ್..!
- Finance
ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್ : ಡಿಸೆಂಬರ್ 16ರಿಂದ NEFT 24x7 ಸೌಲಭ್ಯ
- Sports
ಬರೋಬ್ಬರಿ 10 ವರ್ಷಗಳ ಬಳಿಕ ಮತ್ತೆ ಪಾಕ್ ತಂಡಕ್ಕೆ ಮರಳಿದ ಫವಾದ್!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Lifestyle
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಫೋನಿನಲ್ಲಿ ನೆಟ್ ಇಲ್ಲದಿದ್ದರೂ, ನೆಟ್ಟಗೆ ದಾರಿ ತೋರಿಸೊ ಆಪ್ಸ್!
ಸ್ಮಾರ್ಟ್ಫೋನ್ನಲ್ಲಿ ನ್ಯಾವಿಗೇಶನ್ ಮ್ಯಾಪ್ ಆಪ್ಗಳೂ ಇದ್ದರೇ, ಈಗ ಎಲ್ಲಿಗಾದರು ಹೋಗಬೇಕಿದ್ದರೂ ಏನು ಚಿಂತೆಯೇ ಇಲ್ಲ ಎನ್ನುವ ಕಾನ್ಫಿಡೆಂಟ್ ಎಲ್ಲರಲ್ಲೂ ಇದೆ. ಹೀಗೆ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಲ್ಲಿ ಗೂಗಲ್ ಮ್ಯಾಪ್ ಹೆಚ್ಚಾಗಿ ಬಳಸಿದರೇ, ಐಫೋನ್ ಬಳಕೆದಾರರು ಆಪಲ್ ಮ್ಯಾಪ್ ಬಳಕೆ ಮಾಡುತ್ತಾರೆ. ಆದರೆ ಯಾವುದೇ ಆಪ್ ಮಾರ್ಗ ಸರಿಯಾಗಿ ತೋರಿಸಬೇಕಿದ್ದರೂ ಇಂಟರ್ನೆಟ್ ಬೇಕು. ಆದ್ರೆ ನಿಮಗೆ ಗೊತ್ತಾ ನೆಟ್ ಇಲ್ಲದೇ ನೆಟ್ಟಗೆ ದಾರಿ ತೋರುವ ಆಪ್ಗಳು ಇವೆ.

ಹೌದು, ಸ್ಮಾರ್ಟ್ಫೋನ್ಗಳಲ್ಲಿ ಎಲ್ಲರೂ ಒಂದಲ್ಲಾ ಒಂದು ಸಂದರ್ಭದಲ್ಲಿ ನ್ಯಾವಿಗೇಶನ್ ಆಪ್ ಅನ್ನು ಬಳಕೆಯನ್ನು ಮಾಡಿಯೇ ಇರುತ್ತಾರೆ. ಕೆಲವು ವೇಳೆ ಇಂಟರ್ನೆಟ್ ಕೈ ಕೊಟ್ಟು ಅವಾಂತರ ಎದುರಿಸಿರುತ್ತಾರೆ. ಇಂಟರ್ನೆಟ್ ಇಲ್ಲದೇ ಇರುವ ಸಂದರ್ಭದಲ್ಲಿಯೂ ಸಹ ನಾವು ಆಫ್ಲೈನ್ ನ್ಯಾವಿಗೇಶನ್ ಆಯ್ಕೆ ಬಳಸಬಹುದಾಗಿದೆ. ಅದಕ್ಕೆ ಕೆಲವು ಮ್ಯಾಪ್ ಆಪ್ಸ್ಗಳು ಸಪೋರ್ಟ್ ಮಾಡುತ್ತವೆ. ಹಾಗಾದರೇ ಆಂಡ್ರಾಯ್ಡ್ ಡಿವೈಸ್ನಲ್ಲಿ ಇಂಟರ್ನೆಟ್ ಇಲ್ಲದಿದ್ದಾಗ ಯಾವೆಲ್ಲಾ ಆಫ್ಲೈನ್ ನ್ಯಾವಿಗೇಶನ ಆಪ್ ಬಳಸಬಹುದು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಬಹುತೇಕ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರು ಗೂಗಲ್ ಮ್ಯಾಪ್ ಆಪ್ ಅನ್ನೇ ಹೆಚ್ಚಾಗಿ ಬಳಸುತ್ತಿದ್ದು, ಆಂಡ್ರಾಯ್ಡ್ ಸಹ ಅತ್ಯುತ್ತಮ ನಾವಿಗೇಶನ್ ಪ್ಲಾಟ್ಫಾರ್ಮ್ ಸೇವೆ ನೀಡುತ್ತಿದೆ. ಇಂಟರ್ನೆಟ್ ಇಲ್ಲದೇ ಇದ್ದಾಗಲೂ ಗೂಗಲ್ ಮ್ಯಾಪ್ ನಾವಿಗೇಶನ್ ಬಳಸಬಹುದಾಗಿದೆ. ಅದಕ್ಕಾಗಿ ಗೂಗಲ್ ಮ್ಯಾಪ್ನಲ್ಲಿ ಆಫ್ಲೈನ್ ಆಯ್ಕೆ ನೀಡಲಾಗಿದೆ. ಬಳಕೆದಾರರು ಮೆನು ಆಯ್ಕೆ ಸೆಲೆಕ್ಟ್ ಮಾಡಿ, ನಂತರ ಆಫ್ಲೈನ್ ಆಯ್ಕೆ ಕ್ಲಿಕ್ಕ್ ಮಾಡಿ, ಸೆಲೆಕ್ಟ್ ಯೂವರ್ ಓನ್ ಮ್ಯಾಪ್ ಆಯ್ಕೆ ಬಳಸಬಹುದು.
ಓದಿರಿ : ಬ್ರಾಡ್ಬ್ಯಾಂಡ್ ಸಮರ : ಬೆಲೆ ಇಳಿಕೆ ಮಾಡಿದ 'ವೊಡಾಫೋನ್ ಯೂ'!

Sygic GPS ನ್ಯಾವಿಗೇಶನ್ ಆಫ್ಲೈನ್ ಆಪ್ನ ಸೇವೆಯು ಎಲ್ಲ ರಾಷ್ಟ್ರಗಳಲ್ಲಿಯೂ ಲಭ್ಯವಿದೆ. ಈಗಾಗಲೇ ಗೂಗಲ್ ಪ್ಲೇ ಸ್ಟೋರ್ನಲ್ಲಿ ಹೆಚ್ಚಾಗಿ ಡೌನ್ಲೋಡ್ ಆಗಿರುವ ಆಪ್ ಆಗಿದೆ. ಆಫ್ಲೈನ್ ಸೇವೆಯನ್ನು ನೀಡುವ ಈ ಆಪ್ ವಾಯಿಸ್ ಗೈಡ್ ಆಯ್ಕೆಯನ್ನು ಮತ್ತು ಪಾದಚಾರಿ(pedestrian GPS) ಜಿಪಿಎಸ್ ಮಾರ್ಗದ ಆಯ್ಕೆಯನ್ನು ಸಹ ಒಳಗೊಂಡಿದೆ. ಇಂಟರ್ನೆಟ್ ಕನೆಕ್ಷನ್ ಇದ್ದರೇ ಹಲವು ಮಾಹಿತಿಗಳ ಬಗ್ಗೆ ವಾಯಿಸ್ ಇನ್ಫೋ ನೀಡುತ್ತದೆ.

ಪ್ರಮುಖ ಆಫ್ಲೈನ್ ಮಾದರಿಯ ನ್ಯಾವಿಗೇಶನ್ ಆಪ್ಗಳಿಲ್ಲಿ 'ಓಸ್ಮಾಂಡ್ ನಾವಿಗೇಶನ್ ಆಪ್' ಸಹ ಒಂದಾಗಿದೆ. ಈ ಆಪ್ ವಾಯಿಸ್ ಗೈಡ್, ಲೈನ್ ಗೈಡ್, ಲೈವ್ ಎಸ್ಟಿಮೆಟೆಡ್ ಟೈಮ್, ಡೇ/ನೈಟ್ ಮೋಡ್ ಆಯ್ಕೆಗಳೊಂದಿಗೆ ಜಿಪಿಎಸ್ನ ಹಲವು ಸೌಲಭ್ಯಗಳನ್ನು ಒಳಗೊಂಡಿದೆ. ಸೈಕ್ಲಿಂಗ್ ರೋಟ್ಗೆ ಬೆಸ್ಟ್ ಎನಿಸಿಕೊಂಡಿದ್ದು, ಕೆಲವು ದೇಶಗಳಲ್ಲಿ ಈ ಆಪ್ ಆಫ್ಲೈನ್ ಸೇವೆ ಹೆಚ್ಚು ಪರಿಣಾಮಕಾರಿಯಾಗಿದೆ.

MAPS.ME ಮ್ಯಾಪ್ ಇದೊಂದು ಸಂಪೂರ್ಣ ಉಚಿತ ಜಿಪಿಎಸ್ ಆಪ್ ಆಗಿದ್ದು, ಆಫ್ಲೈನ್ ಮೋಡ್ನಲ್ಲಿ ನಾವಿಗೇಶನ್ ಮಾಹಿತಿ ನೀಡುವ ಸೌಲಭ್ಯವನ್ನು ಒಳಗೊಂಡಿದೆ. ಬಳಕೆದಾರರಿಗೆ ಆಫ್ಲೈನ್ ಮೋಡ್ನಲ್ಲಿಯೂ ಸರ್ಚ್ ಆಯ್ಕೆಗಳು, ವಾಯಿಸ್ ನ್ಯಾವಿಗೇಶನ್, ರೀ-ರೋಟಿಂಗ್ ಕ್ಯಾಲ್ಕುಲೇಶನ್ ಮತ್ತು ಪಬ್ಲಿಕ್ ಟ್ರಾನ್ಸ್ಫೋಟೆಶನ್ ಮಾಹಿತಿಗಳು ದೊರೆಯಲಿದೆ. ಹಾಗೆಯೇ ಎಟಿಎಮ್, ಶಾಪ್, ಅಗತ್ಯ ಸೇವೆಗಳ ಸೂಚನೆ ಸಿಗಲಿದೆ. ನೆಟ್ ಸೌಲಭ್ಯ ಇದ್ದರೇ ಲೊಕೇಶನ್ ಶೇರ್ ಮಾಡಬಹುದಾಗಿದೆ.

HERE WeGo ನಾವಿಗೇಶನ್ ಮ್ಯಾಪ್ ಆಫ್ಲೈನ್ ನಾವಿಗೇಶನ್ಗೆ ಬೆಸ್ಟ್ ಎನಿಸಿದ್ದು, ಸುಮಾರು 100 ದೇಶಗಳಲ್ಲಿ ಲಭ್ಯವಿದೆ. ಆಫ್ಲೈನ್ ಮೋಡ್ನಲ್ಲಿಯೂ ಪಬ್ಲಿಕ್ ಟ್ರಾನ್ಸ್ಪೋಟೆಶನ್, ಟಿಕೆಟ್ ಬಿಲ್ಲಿಂಗ್, ಕಾರ್ ಶೇರಿಂಗ್ ಪ್ರೈಸ್, ಟ್ರಾನ್ಸ್ಪೋಟೆಶನ್ ರೋಟ್ಸ್, ಸೇರಿದಂತೆ ವೇಗದ ಮಾರ್ಗ ಮತ್ತು ಕಾಸ್ಟ್ ಎಫೆಕ್ಟಿವ್ ಮಾರ್ಗಗಳ ಬಗ್ಗೆ ಮಾಹಿತಿ ನೀಡಲಿದೆ. ಹಾಗೆಯೇ ಅಪ್ಹಿಲ್ ಮತ್ತು ಡೌನ್ಹಿಲ್ ರಸ್ತೆಗಳ ಸೂಚನೆ ನೀಡಲಿದೆ. ಅಮೆರಿಕಾ ಮತ್ತು ಯುರೋಪ್ ಸೇರಿದಂತೆ 1,300ರಾಷ್ಟ್ರಗಳಲ್ಲಿ ಬಳಕೆಗೆ ಲಭ್ಯ.
ಓದಿರಿ : ಈ ವರ್ಷ ವಿಶ್ವದಲ್ಲಿಯೇ ಅತೀ ಹೆಚ್ಚು ಮಾರಾಟವಾದ ಫೋನ್ಗಳು ಯಾವುವು ಗೊತ್ತೆ!
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090