ವಾಟ್ಸ್‌ಆಪ್‌ಗೆ ಬರುತ್ತಿವೆ ಸಾಲು ಸಾಲು ಹೊಸ ಫೀಚರ್ಸ್‌..!

By Gizbot Bureau
|

ಜಗತ್ತಿನ ಪ್ರಮುಖ ತ್ವರಿತ ಸಂದೇಶ ಪ್ಲಾಟ್‌ಫಾರ್ಮ್‌ ಆಗಿರುವ ವಾಟ್ಸ್‌ಆಪ್ ತನ್ನ ಬಳಕೆದಾರರಿಗೆ ಹೊಸ ಫೀಚರ್‌ಗಳನ್ನು ನೀಡಲು ಕಾರ್ಯನಿರ್ವಹಿಸುತ್ತಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಸ್ಮಾರ್ಟ್‌ಫೋನ್‌ಗಳಿಗೆ ಬೀಟಾ ಆವೃತ್ತಿಯ ಮೂಲಕ ಅನೇಕ ಹೊಸ ಫೀಚರ್‌ಗಳನ್ನು ನೀಡಲು ಪ್ರಯತ್ನಿಸುತ್ತಿದೆ. ಈಗಾಗಲೇ ವಾಟ್ಸ್‌ಆಪ್ ಡಾರ್ಕ್ ಮೋಡ್ ಮತ್ತು ಇನ್‌ಸ್ಟಾಗ್ರಾಮ್ ತರಹದ ಬೂಮರಾಂಗ್ ವಿಡಿಯೋ ಫೀಚರ್‌ ತರಲು ಕಾರ್ಯನಿರ್ವಹಿಸುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗಾಗಿ ಶೀಘ್ರದಲ್ಲೇ ಬರಲಿರುವ ಇನ್ನಷ್ಟು ಆಸಕ್ತಿದಾಯಕ ಫೀಚರ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ.

ಐಫೋನ್ ಬಳಕೆದಾರರಿಗೆ ಆಡಿಯೊ ಪ್ಲೇಬ್ಯಾಕ್

ಐಫೋನ್ ಬಳಕೆದಾರರಿಗೆ ಆಡಿಯೊ ಪ್ಲೇಬ್ಯಾಕ್

ಐಒಎಸ್‌ನಲ್ಲಿ ವಾಟ್ಸ್‌ಆಪ್‌ ಬೀಟಾ ಆವೃತ್ತಿಯ ಅಪ್‌ಡೇಟ್‌ನಲ್ಲಿ ಆಡಿಯೊ ಪ್ಲೇಬ್ಯಾಕ್ ಫೀಚರ್‌ ಬರುತ್ತದೆ. 2.19.91.1 ಆವೃತ್ತಿಯು ನೊಟಿಫಿಕೇಷನ್ ಪಾಪ್-ಅಪ್‌ನಲ್ಲಿಯೇ ವಾಟ್ಸ್‌ಆಪ್ ಮೂಲಕ ಹಂಚಿಕೊಂಡು ಆಡಿಯೊವನ್ನು ಪ್ಲೇ ಮಾಡಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಇದರ ಅರ್ಥವೇನೆಂದರೆ, ಬಳಕೆದಾರರು ಅಪ್ಲಿಕೇಶನ್ ತೆರೆಯುವ ಅಗತ್ಯವಿಲ್ಲದೆ ಮತ್ತು ನೊಟಿಫಿಕೇಷನ್‌ನಲ್ಲಿಯೇ ನೇರವಾಗಿ ಧ್ವನಿ ಸಂದೇಶ ಅಥವಾ ಆಡಿಯೊ ಫೈಲ್ ಅನ್ನು ಪ್ಲೇ ಮಾಡಬಹುದು. ಆಡಿಯೊ ಪ್ಲೇಬ್ಯಾಕ್‌ಗಾಗಿ, ನೀವು ನೊಟಿಫಿಕೇಷನ್‌ ಪಾಪ್-ಅಪ್ ವಿಸ್ತರಿಸಬೇಕಾಗುತ್ತದೆ.

ಗೂಗಲ್ ಅಸಿಸ್ಟೆಂಟ್ ಮೂಲಕ ವಾಟ್ಸಾಪ್ ಕರೆ

ಗೂಗಲ್ ಅಸಿಸ್ಟೆಂಟ್ ಮೂಲಕ ವಾಟ್ಸಾಪ್ ಕರೆ

ಇಲ್ಲಿಯವರೆಗೆ, ಬಳಕೆದಾರರು ಗೂಗಲ್ ಅಸಿಸ್ಟೆಂಟ್ ಮೂಲಕ ಪಠ್ಯ ಸಂದೇಶಗಳನ್ನು ಹಂಚಿಕೊಳ್ಳಬಹುದಿತ್ತು. ಆದರೆ, ಈಗ, ನೀವು ವಿಡಿಯೋ ಮತ್ತು ಆಡಿಯೋ ಕರೆಗಳನ್ನು ಮಾಡಲು ಗೂಗಲ್ ಅಸಿಸ್ಟೆಂಟ್‌ನ್ನು ಬಳಸಬಹುದು. ಈ ಫೀಚರ್‌ ಉಪಯೋಗಿಸಲು ನಿಮ್ಮ ವಾಟ್ಸಾಪ್ ಮತ್ತು ಗೂಗಲ್ ಅಸಿಸ್ಟೆಂಟ್ ಆಪ್‌ಗಳನ್ನು ನವೀಕರಿಸಿ. ಮುಂದೆ, ಗೂಗಲ್ ಅಸಿಸ್ಟೆಂಟ್‌ನ್ನು ಪ್ರಾರಂಭಿಸಿ ಮತ್ತು "ಹೇ ಗೂಗಲ್, ವಾಟ್ಸಾಪ್ ವಿಡಿಯೋ <ಸಂಪರ್ಕ ಹೆಸರು>" ಎಂದು ಹೇಳಿ. ಈ ಫೀಚರ್‌ ಪ್ರಸ್ತುತ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ.

ವೆಬ್‌ಗಾಗಿ ಆಲ್ಬಮ್‌

ವೆಬ್‌ಗಾಗಿ ಆಲ್ಬಮ್‌

ವಾಟ್ಸ್‌ಆಪ್‌ನಲ್ಲಿ ನೀವು ಅನೇಕ ಚಿತ್ರಗಳನ್ನು ಅಥವಾ ವಿಡಿಯೋಗಳನ್ನು ಯಾರಿಗಾದರೂ ಹಂಚಿಕೊಂಡಾಗ ಆ ಫೈಲ್‌ಗಳನ್ನು ಆಲ್ಬಮ್ ಸ್ವರೂಪದಲ್ಲಿ ಕ್ಲಬ್ ಮಾಡುತ್ತದೆ. ಆದರೆ, ನೀವು ವೆಬ್‌ನಲ್ಲಿ ವಾಟ್ಸ್‌ಆಪ್ ಬಳಸಿದರೆ, ಈ ಚಿತ್ರಗಳು ಆಲ್ಬಮ್‌ ಸ್ವರೂಪದಲ್ಲಿ ಗೋಚರಿಸುವುದಿಲ್ಲ, ಬದಲಾಗಿ, ಅವೆಲ್ಲವೂ ಒಂದೊಂದಾಗಿ ಬರುತ್ತವೆ. ಈ ಫೀಚರ್‌ನ್ನು ವಾಟ್ಸ್‌ಆಪ್ ಫಿಕ್ಸ್ ಮಾಡಲು ಕೆಲಸ ಮಾಡುತ್ತಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ವಾಟ್ಸ್‌ಆಪ್ ಶೀಘ್ರದಲ್ಲಿಯೇ ಡೆಸ್ಕ್‌ಟಾಪ್ ವೆಬ್ ಬಳಕೆದಾರರಿಗಾಗಿ ಹೆಚ್ಚು ಸಹಾಯಕವಾಗುವಂತಹ ಇಂಟರ್‌ಫೇಸ್‌ಗಾಗಿ ಆಲ್ಬ್‌ಮ್‌ನ್ನು ಹೊರತರುತ್ತಿದೆ.

ಬಹು-ವೇದಿಕೆ ಬೆಂಬಲ

ಬಹು-ವೇದಿಕೆ ಬೆಂಬಲ

ವಾಟ್ಸ್‌ಆಪ್ ಹೊಸ ವೈಶಿಷ್ಟ್ಯಕ್ಕಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದ್ದು, ಬಳಕೆದಾರರಿಗೆ ಏಕಕಾಲದಲ್ಲಿ ಅನೇಕ ಸಾಧನಗಳಲ್ಲಿ ತಮ್ಮ ಖಾತೆಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ವಾಟ್ಸ್‌ಆಪ್ ವೆಬ್ ಹೊರತುಪಡಿಸಿ ಮುಖ್ಯವಾಗಿ ಮೊಬೈಲ್ ಆಪ್‌ನಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಸದ್ಯ ಎರಡು ಪ್ಲಾಟ್‌ಫಾರ್ಮ್‌ಗಳಲ್ಲಿ ಖಾತೆಯನ್ನು ಚಲಾಯಿಸಲು ವಾಟ್ಸ್‌ಆಪ್ ಬಳಕೆದಾರರಿಗೆ ಅನುಮತಿಸುವುದಿಲ್ಲ. ಬಹು-ವೇದಿಕೆ ಬೆಂಬಲವು ಆಪಲ್‌ನ ಐಪ್ಯಾಡ್‌ಗಾಗಿ ಸ್ವತಂತ್ರ ಅಪ್ಲಿಕೇಶನ್‌ನಂತೆ ಮೊದಲು ಬರುತ್ತದೆ ಎಂದು ಹೇಳಲಾಗುತ್ತಿದ್ದು, ನಂತರ, ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ತಮ್ಮ ಖಾತೆಗಳನ್ನು ಪ್ರವೇಶಿಸಲು ಅನುಮತಿಸುತ್ತದೆ.

Most Read Articles
Best Mobiles in India

Read more about:
English summary
Upcoming WhatsApp Features Will Have Better Implementation On Android OS

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X