ಬಜೆಟ್‌ ಬೆಲೆಯಲ್ಲಿ DSLR ಕ್ಯಾಮೆರಾ ಖರೀದಿಸಬೇಕೆ?.ಇಲ್ಲಿವೇ ನೋಡಿ ಬೆಸ್ಟ್‌ ಆಯ್ಕೆ!

|

ಫೋಟೊ ಸೆರೆಹಿಡಿಯುವುದು ಒಂದು ಕಲೆ. ಅತ್ಯುತ್ತಮ ಕ್ಯಾಮೆರಾದೊಂದಿಗೆ ಆಸಕ್ತಿ ಬೇರೆತರೇ ದೃಶ್ಯಕಾವ್ಯ ಮೂಡಿಬರಲು ಸಾಧ್ಯ. ಪ್ರಸ್ತುತ ಸ್ಮಾರ್ಟ್‌ಫೋನ್‌ಗಳಲ್ಲಿಯೇ ಬೆಸ್ಟ್‌ ಕ್ಯಾಮೆರಾ ಫೀಚರ್ಸ್‌ಗಳನ್ನು ನೀಡುತ್ತಿದ್ದರೂ ಸಹ ಅವು ಡಿಎಸ್‌ಎಲ್‌ಆರ್‌ ಕ್ಯಾಮೆರಾಗಳ ತರಹ ಗುಣಮಟ್ಟವನ್ನು ಹೊಂದುವುದಿಲ್ಲ. ಹೀಗಾಗಿ ಫೋಟೊಗ್ರಾಫಿ ಪ್ರಿಯರಿಗೆ 'ಡಿಎಸ್‌ಎಲ್‌ಆರ್‌' ಕ್ಯಾಮೆರಾನೇ ಯಾವಾಗಲೂ ಫೇವರೇಟ್‌.

ಬಜೆಟ್‌ ಬೆಲೆಯಲ್ಲಿ DSLR ಕ್ಯಾಮೆರಾ ಖರೀದಿಸಬೇಕೆ?.ಇಲ್ಲಿವೇ ನೋಡಿ ಬೆಸ್ಟ್‌ ಆಯ್ಕೆ!

ಹೌದು, ಡಿಎಸ್‌ಎಲ್‌ಆರ್‌ ಕ್ಯಾಮೆರಾಗಳು ಅತ್ಯುತ್ತಮ ಲೆನ್ಸ್‌ ಸಾಮರ್ಥ್ಯವನ್ನು ಒಳಗೊಂಡಿರುತ್ತವೆ ಮತ್ತು ಪಿಕ್ಸಲ್‌ ರೆಸಲ್ಯೂಶನ್‌ ಸಹ ಅಧಿಕವಾಗಿರುತ್ತದೆ. ಈ ಕ್ಯಾಮೆರಾಗಳ ಮೂಲಕ ಕಲಾತ್ಮಕವಾಗಿ ಫೋಟೊಗಳನ್ನು ಸೆರೆಹಿಡಿಯಬಹುದಾಗಿದ್ದು, ಫೋಟೊಗಳ ಗುಣಮಟ್ಟ ಉತ್ತಮವಾಗಿರುತ್ತವೆ. ಆದರೆ ಡಿಎಸ್‌ಎಲ್‌ಆರ್‌ ಕ್ಯಾಮೆರಾಗಳು ದುಬಾರಿ ಎಂದು ಸುಮ್ಮನಾಗಬೇಡಿ ಏಕೆಂದರೇ ವಿವಿಧ ಶ್ರೇಣಿಗಳಲ್ಲಿ ಕ್ಯಾಮೆರಾಗಳು ಲಭ್ಯ.

ಬಜೆಟ್‌ ಬೆಲೆಯಲ್ಲಿ DSLR ಕ್ಯಾಮೆರಾ ಖರೀದಿಸಬೇಕೆ?.ಇಲ್ಲಿವೇ ನೋಡಿ ಬೆಸ್ಟ್‌ ಆಯ್ಕೆ!

ಮಾರುಕಟ್ಟೆಯಲ್ಲಿ ಕೆನಾನ್, ನಿಕಾನ್, ಸೇರಿದಂತೆ ಪ್ರಮುಖ ಕಂಪನಿಗಳ ಡಿಎಸ್‌ಎಲ್‌ಆರ್‌ ಕ್ಯಾಮೆರಾಗಳು ಕಡಿಮೆ ಪ್ರೈಸ್‌ಟ್ಯಾಗ್‌ನಿಂದ ಹಿಡಿದು ದುಬಾರಿ ಬೆಲೆಯ ಆಯ್ಕೆಗಳನ್ನು ಹೊಂದಿವೆ. ಆದರೆ ಬಹುತೇಕ ಹವ್ಯಾಸಿ ಫೋಟೊಗ್ರಾಫಿ ಪ್ರೇಮಿಗಳು ಬಜೆಟ್‌ ದರದತ್ತ ಮುಖ ಮಾಡುತ್ತಾರೆ. ಹಾಗಾದರೇ ಸದ್ಯ ಮಾರುಕಟ್ಟೆಯಲ್ಲಿ 40,000ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಲಭ್ಯವಿರುವ ಬೆಸ್ಟ್‌ 5 ಡಿಎಸ್‌ಎಲ್‌ಆರ್‌ ಕ್ಯಾಮೆರಾಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ಶಿಯೋಮಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಬ್ಯಾಡ್‌ ನ್ಯೂಸ್‌!

ಕೆನಾನ್‌ EOS 200D

ಕೆನಾನ್‌ EOS 200D

ಕೆನಾನ್‌ EOS 200D 24.2 ಮೆಗಾಪಿಕ್ಸಲ್‌ ಸಾಮರ್ಥ್ಯದ ಕ್ಯಾಮೆರಾವನ್ನು ಹೊಂದಿದ್ದು, ಡ್ಯುಯಲ್‌ ಪಿಕ್ಸಲ್‌ ಆಟೋಫೋಕಸ್‌ ಬೆಂಬಲದೊಂದಿಗೆ APS-C CMOS ಸೆನ್ಸಾರ್‌ ಅನ್ನು ಸಹ ಒಳಗೊಂಡಿದೆ. ಡಿಜಿಕ್‌ 7 ಪ್ರೊಸೆಸರ್ ಮತ್ತು ಶೇ. 95% ಕವರೇಜ್‌ನಲ್ಲಿ ಪೆಂಟಾಮಿರರ್‌ ವ್ಯೂವ್‌ಫೈಂಡರ್‌ಗಳನ್ನು ಹೊಂದಿದೆ. EF-S 18-55mm IS STM ಲೆನ್ಸ್‌ಗಳನ್ನು ಒಳಗೊಂಡಿದ್ದು, ಇದು 10x zoom ಗೆ ಬೆಂಬಲಿಸಲಿದೆ. ಇದರ ಬೆಲೆ 39,990ರೂ.

ನಿಕಾನ್‌ D5600

ನಿಕಾನ್‌ D5600

ಆರಂಭಿಕ ಫೋಟೊಗ್ರಾಫ್‌ರಗಳಿಗೆ ನಿಕಾನ್‌ D5600 ಬೆಸ್ಟ್‌ ಎನಿಸಿದ್ದು, 24.2MP ಮೆಗಾಪಿಕ್ಸಲ್‌ ಸಾಮರ್ಥ್ಯವನ್ನು ಹೊಂದಿದೆ. CMOS ಸೆನ್ಸಾರ್‌ ಜೊತೆಗೆ 39 ಪಾಯಿಂಟ್‌ AF ಸಿಸ್ಟಮ್‌ ಇದ್ದು, ಗರಿಷ್ಠ ISO 25,600 ಆಗಿದೆ. ಪ್ರತಿ ಸೆಕೆಂಡಿನ ಶಟರ್‌ ವೇಗವು 1/4000-30 ಆಗಿದ್ದು, ಅಪಾರ್ಚರ್‌ ರೇಂಜ್‌ f/3.5-5.6G ಆಗಿದೆ. ಇದರೊಂದಿಗೆ ಕಿಟ್‌ನಲ್ಲಿ 16GB ಎಸ್‌ಡಿ ಕಾರ್ಡ್‌ ಆಯ್ಕೆ ದೊರೆಯಲಿದೆ. ಈ ಕ್ಯಾಮೆರಾದ ಬೆಲೆಯು 35,999ರೂ.

ಓದಿರಿ : ವಾಟ್ಸಪ್‌ನಲ್ಲಿ 'ಪ್ರೊಫೈಲ್‌ ಫೋಟೊ ಸೇವ್' ಆಯ್ಕೆ ಇನ್ನಿಲ್ಲ!

ಕೆನಾನ್ EOS 1500D

ಕೆನಾನ್ EOS 1500D

ಈ ಕ್ಯಾಮೆರಾವು 24.1 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಒಳಗೊಂಡಿದ್ದು, CMOS ಸೆನ್ಸಾರ್‌ ಜೊತೆಗೆ 9 ಪಾಯಿಂಟ್ AF ಸಿಸ್ಟಮ್‌ ಹೊಂದಿದೆ. 100-6400 ಸಾಮರ್ಥ್ಯದಲ್ಲಿ ISO ವ್ಯಾಪ್ತಿಯನ್ನು ಹೊಂದಿದ್ದು, ಆಪ್ಟಿಕಲ್‌ ವ್ಯೂವ್‌ಫೈಂಡರ್ ಶೇ. 95% ಕವರೇಜ್‌ ನೀಡಲಿದೆ. ಕಾಂಬೊ ಆಯ್ಕೆಯಲ್ಲಿ EF-S 18-55mm IS ಸ್ಟ್ಯಾಂಡರ್ಡ್ ಲೆನ್ಸ್ ಮತ್ತ 55-250 IS ಝೂಮ್‌ ಲೆನ್ಸ್‌ಗಳು ಲಭ್ಯವಾಗಲಿವೆ. ಈ ಡಿವೈಸ್‌ ಬೆಲೆಯು 34,999ರೂ.

ನಿಕಾನ್ D3400 ಡ್ಯುಯಲ್‌ ಲೆನ್ಸ್‌

ನಿಕಾನ್ D3400 ಡ್ಯುಯಲ್‌ ಲೆನ್ಸ್‌

ನಿಕಾನ್‌ ಸಂಸ್ಥೆಯ ಈ ಕ್ಯಾಮೆರಾವು 24.2 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದ್ದು, CMOS ಸೆನ್ಸಾರ್‌ ಅನ್ನು ಒಳಗೊಂಡಿರುವ ಜೊತೆಗೆ 11 ಪಾಯಿಂಟ್ AF ಸಿಸ್ಟಮ್‌ ಹೊಂದಿದೆ. ಪೆಂಟಾಮೀಟರ್‌ ವ್ಯೂವ್‌ಫೈಂಡರ್‌ ನೀಡಲಾಗಿದ್ದು, ನಾನ್‌ ಟಚ್‌ TFT ಸ್ಕ್ರೀನ್‌ ಅನ್ನು ಪಡೆದಿದೆ. ಕಿಟ್‌ನಲ್ಲಿ NIKKOR 18-55mm VR ಸ್ಟ್ಯಾಂಡರ್ಡ್‌ ಲೆನ್ಸ್‌ ಇದ್ದು, ಅಪಾರ್ಚರ್ ವ್ಯಾಪ್ತಿ f/3.5-5.6 ಆಗಿದೆ. ಇದರ ಬೆಲೆಯು 33,999ರೂ.ಗಳು

ನಿಕಾನ್‌ D3300 ಡ್ಯುಯಲ್‌ ಲೆನ್ಸ್‌

ನಿಕಾನ್‌ D3300 ಡ್ಯುಯಲ್‌ ಲೆನ್ಸ್‌

ಈ ಕ್ಯಾಮೆರಾವು 3 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, 24 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದ್ದು, CMOS ಸೆನ್ಸಾರ್‌ ಅನ್ನು ಒಳಗೊಂಡಿದೆ. ISO ವ್ಯಾಪ್ತಿಯು 200-6,400 ಆಗಿದ್ದು, ಪೆಂಟಾಮೀಟರ್‌ ವ್ಯೂವ್‌ಫೈಂಡರ್‌ ನೀಡಲಾಗಿದೆ. ಕಿಟ್‌ನಲ್ಲಿ NIKKOR 18-55mm VR ಲೆನ್ಸ್‌ ನೀಡಲಾಗಿದ್ದು, ಅಪರ್ಚರ್‌ ಸಾಮರ್ಥ್ಯವು f/3.5-5.6 ವ್ಯಾಪ್ತಿಯನ್ನು ಹೊಂದಿದೆ. ಇದರ ಬೆಲೆಯು 29,999ರೂ.

ಓದಿರಿ : ಬಜೆಟ್‌ ಬೆಲೆಯಲ್ಲಿ ಬಿಡುಗಡೆ ಆಯ್ತು 'ಸಿಸ್ಕಾ HE1100 ಬೀಟ್‌ ಪ್ರೊ' ಇಯರ್‌ಫೋನ್‌!

Most Read Articles
Best Mobiles in India

English summary
Modern-day smartphones offer better photography than ever, they fail to compete with dedicated devices such as DSLRs aka Digital single-lens reflex cameras. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more