ಡೆಲ್‌ನಿಂದ ಹೊಸ ಕಂಪ್ಯೂಟರ್‌ಗಳ ಬಿಡುಗಡೆ...ನಿಮಗೂ ಬೇಕಿದ್ದರೆ, ಇಂದೇ ಖರೀದಿಸಿ..!

By GizBot Bureau
|

ಡೆಲ್ ಕಂಪೆನಿಯು ತನ್ನ 25 ನೇ ವಾರ್ಷಿಕೋತ್ಸವ ಅಂಗವಾಗಿ ಭಾರತದಲ್ಲಿ ಎರಡು ಕಂಪ್ಯೂಟರ್ ಗಳನ್ನು ಬಿಡುಗಡೆಗೊಳಿಸಿದೆ. ಅದುವೇ ಆಪ್ಟಿಫ್ಲೆಕ್ಸ್ ಸರಣಿಯ ಆಪ್ಟಿಫ್ಲೆಕ್ಸ್ ಆಲ್-ಇನ್-ಒನ್ (AIO) ಮತ್ತು ಆಪ್ಟಿಫ್ಲೆಕ್ಸ್ ಟವರ್ಸ್. ಈ ಹೊಸ ಸರಣಿಯಲ್ಲಿ ಹಲವು ವೈಶಿಷ್ಟ್ಯತೆಗಳಿದ್ದು ಇಂಟೆಲ್ ನ 8ನೇ ಪೀಳಿಗೆಯ ಪ್ರೊಸೆಸರ್ ನ್ನು ಹೊಂದಿದೆ.

ಇದು ವಿಶೇಷವಾಗಿ ಬುದ್ಧಿವಂತಿಕೆಗೆ ಮತ್ತು ವಿಶ್ವಾಸಾರ್ಹತೆಗಾಗಿಯೇ ರಚಿಸಲ್ಪಟ್ಟಿದೆ ಎಂದು ಕಂಪೆನಿಯು ಇದರ ಅಪ್ ಡೇಟನ್ನು ಪ್ರಕಟಿಸುವ ಸಂದರ್ಬದಲ್ಲಿ ಹೇಳಿಕೆ ನೀಡಿದೆ.. ಕಳೆದ ಎಪ್ರಿಲ್ ನಲ್ಲಿ ಡೆಲ್ ಕಂಪೆನಿಯು ಭಾರತದಲ್ಲಿ ಲ್ಯಾಟಿಟ್ಯೂಡ್ ಸೀರೀಸ್ ನ್ನು ಬಿಡುಗಡೆಗೊಳಿಸಿತ್ತು. ಈಗ ಕಂಪೆನಿಯು ಹೊಸದಾಗಿ ಆಪ್ಟಿಫ್ಲೆಕ್ಸ್ ಸರಣಿಯನ್ನು ದೇಶಾದ್ಯಂತ ಬಿಡುಗಡೆಗೊಳಿಸಿದೆ.

ಡೆಲ್‌ನಿಂದ ಹೊಸ ಕಂಪ್ಯೂಟರ್‌ಗಳ ಬಿಡುಗಡೆ...ನಿಮಗೂ ಬೇಕಿದ್ದರೆ, ಇಂದೇ ಖರೀದಿಸಿ..!

" ಡೆಸ್ಕ್ ಟಾಪ್ ಗಳು ಭಾರತದಲ್ಲಿ ವ್ಯವಹಾರಕ್ಕೆ ಬಹಳವಾಗಿ ಬೇಕಾಗಿದೆ ಮತ್ತು ಡೆಲ್ ಈ ನಿಟ್ಟಿನಲ್ಲಿ ನಾಯಕನಾಗಿದ್ದು, ಕಳೆದ 33 ವರ್ಷದಿಂದ ಉತ್ತಮ ಸೇವೆಯನ್ನು ನೀಡಿದೆ ಮತ್ತು ಆಪ್ಟಿಫ್ಲೆಕ್ಸ್ ಕಳೆದ 25 ವರ್ಷದಿಂದ ಮಾರುಕಟ್ಟೆಯಲ್ಲಿದೆ. ಹಾಸ ಹೊಸ ಅನ್ವೇಷಣೆಗೆ ಇದು ಸಹಕಾರ ನೀಡಿದೆ. ಇದೇ ರೀತಿಯ ಬೆಳವಣಿಗೆ ಮುಂದಿನ ದಿನಗಳಲ್ಲೂ ನಿರೀಕ್ಷಿಸುತ್ತೇವೆ” ಎಂದು ಡೆಲ್ ನ ಭಾರತೀಯ ಗ್ರೂಪ್ ನ ಡೈರೆಕ್ಟರ್ ಮತ್ತು ಜನರಲ್ ಮ್ಯಾನೇಜರ್ ಆಗಿರುವ ಇಂದ್ರಜಿತ್ ಬೆಲ್ಗುಂಡಿ ತಿಳಿಸಿದ್ದಾರೆ.

ರಿಫ್ರೆಶ್ ಆಪ್ಟಿಪ್ಲೆಕ್ಸ್ ಪೋರ್ಟ್ಫೋಲಿಯೋ ಸಂಬಂಧಿಸಿದಂತೆ ಹೇಳುವುದಾದರೆ, ಕಂಪೆನಿಯು ಎರಡು AIOs, ಮತ್ತು ಒಂದು ಕಮರ್ಶಿಯಲ್ PC ಮತ್ತು ಮೂರು ಟವೆರ್ಸ್ ನ್ನು ಬಿಡುಗಡೆಗೊಳಿಸಿದೆ.. ಆಪ್ಟಿಫ್ಲೆಕ್ಸ್ 7760 AIO ವೈಶಿಷ್ಟ್ಯತೆಯೆಂದರೆ 27-ಇಂಚಿನ ಇನ್ಫಿನಿಟಿ ಎಡ್ಜ್ ಡಿಸ್ಪ್ಲೇ ಇದೆ ಜೊತೆಗೆ ಆಪ್ಶನಲ್ glare-free 4K Ultra HD ಜೊತೆಗೆ HDR ಮತ್ತು High-Gamut sRGB ಅಥವಾ Full HD IPS ಜೊತೆ ಟಚ್ ಡಿಸ್ಪ್ಲೇಯನ್ನು ಒಳಗೊಂಡಿದೆ.

ಇದು ಮುಂದಿನ ಜನರೇಷನ್ನಿನ ಡಿಸ್ಕ್ರೀಟ್ ಗ್ರಾಫಿಕ್ಸ್ ಮತ್ತು quad mic array ಜೊತೆಗೆ Waves Maxx ತಂತ್ರಜ್ಞಾನವನ್ನು ಹೊಂದಿದೆ. ಇದು ಕ್ರಿಸ್ಟಲ್ ಕ್ರಿಯಲ್ ಸೌಂಡ್ ನ್ನು ಸುಮಾರು 12 ಫೀಟ್ ವರೆಗೆ ನೀಡುವ ಸಾಮರ್ಥ್ಯ ಹೊಂದಿದೆ ಮತ್ತು ಇದು Intel Integrated HD Graphics 630 ಮತ್ತು optional NVIDIA 4ಜಿಬಿ GeForce GTX 1050 ನ ಪವರ್ ನ್ನು ಹೊಂದಿದೆ..

ಇನ್ನೊಂದೆಡೆ OptiPlex 7460 AIO, 23.8-ಇಂಚಿನ ಇನ್ಫಿನಿಟಿ ಎಡ್ಜ್ ಡಿಸ್ಪ್ಲೇ ಜೊತೆಗೆ edge-to-edge Full HD IPS ಡಿಸ್ಪ್ಲೇ ತಂತ್ರಜ್ಞಾನವನ್ನು ಒಳಗೊಂಡಿದೆ.. 2.5-ಇಂಚಿನ 2ಟಿಬಿ 5400rpm SATA HDD, 16GB Intel Optane Memory ಆಯ್ಕೆ ಇದ್ದು ಡುಯಲ್ ಸ್ಟೋರೇಜ್ ಮತ್ತು RAID support ಹೊಂದಿದೆ.

ಡೆಲ್‌ನಿಂದ ಹೊಸ ಕಂಪ್ಯೂಟರ್‌ಗಳ ಬಿಡುಗಡೆ...ನಿಮಗೂ ಬೇಕಿದ್ದರೆ, ಇಂದೇ ಖರೀದಿಸಿ..!

OptiPlex towers ಗೆ ಬಂದರೆ, OptiPlex XE3 tower 8th ಜನರೇಷನ್ನಿನ ಇಂಟೆಲ್ ಕೋರ್ ಪ್ರೊಸೆಸರ್ ಜೊತೆಗೆ 64ಜಿಬಿ DDR4 ಮೆಮೊರಿಯನ್ನು ಹೊಂದಿದೆ.. ಕಂಪೆನಿಯ ಮಾಹಿತಿಯಂತೆ XE3 ಹೆಚ್ಚಿನ ಹವಾಮಾನದಲ್ಲೂ ಕೆಲಸ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

ಶಾಕ್ ಹೊಡೆಯುವುದು, ಮತ್ತು ವೈಬ್ರೇಷನ್ ಗೆ ಒಳಗಾಗುವುದು, ಧೂಳಿನಿಂದ ಸಮಸ್ಯೆ ಇದ್ಯಾವುದಕ್ಕೂ ಈ ಕಂಪ್ಯೂಟರ್ ಬಗ್ಗುವುದಿಲ್ಲವಂತೆ., ಆಫೀಸ್ ಬಳಕೆಗೆ ಇದು ಬಹಳ ಯೋಗ್ಯವಾದ ಕಂಪ್ಯೂಟರ್ ಆಗಿದೆ ಎಂದು ಹೇಳುತ್ತದೆ ಕಂಪೆನಿ. ಡೆಲ್ ನ ಆಪ್ಟಿಫ್ಲೆಕ್ಸ್ 7060 ಮತ್ತು 5060 ಟವರ್ಸ್ , ಕಂಪೆನಿಯ ಅಪ್ ಡೇಟ್ ಎಂಬಂತೆ ಹೇಳಿಕೆ ನೀಡಿರುವ ಕಂಪೆನಿ,

ಇದು Intel HD, Dual AMD Radeon, NVIDIA graphics ಆಯ್ಕೆಗಳಿಂದ ಕೂಡಿದೆ ಎಂದು ತಿಳಿಸಿದೆ. .ಇವೆರಡೂ ಕೂಡ MIL-STD 810G ಮಿಲಿಟರಿ ಗ್ರೇಡ್ ಸರ್ಟಿಫಿಕೇಟನ್ನೂ ಕೂಡ ಪಡೆದಿದೆಯಂತೆ. ಕೊನೆಯದಾಗಿ, ಇದು ಕಮರ್ಷಿಯಲ್ ಪಿಸಿ ಆಗಿದ್ದು OptiPlex 3060ಯು 32GB DDR4 ಮೆಮೊರಿ ಮತ್ತು supports Dell Data Security ಯನ್ನು ಇದು ಬೆಂಬಲಿಸುತ್ತದೆ. ಮತ್ತು TPM 2.0 ನ್ನು ಸಹಕರಿಸುತ್ತದೆ.

ಇದನ್ನು ಲಾಕ್ ಮಾಡುವ ಕೇಬಲ್ ಕವರ್ ಮತ್ತು optional chassis intrusion ಸ್ವಿಚ್ ಗಳಿಂದ ಸುರಕ್ಷಿತವಾಗಿ ಕನೆಕ್ಟ್ ಮಾಡುವ ಸಾಮರ್ಥ್ಯವಿದೆ. ಎಂದು ಕಂಪನಿ ತಿಳಿಸಿದೆ.

Most Read Articles
Best Mobiles in India

English summary
Dell wants to sell you some new computers and some of them look really cool. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more