Just In
Don't Miss
- News
ಸಾಯುವ ಮುನ್ನಾ ಅತ್ಯಾಚಾರ ಸಂತ್ರಸ್ತೆ ಹೇಳಿದ ಕೊನೆಯ ಮಾತು
- Automobiles
ಇನ್ಮುಂದೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಡೀಸೆಲ್..!
- Sports
ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ನಡೆದ ಬೆಟ್ ಮೌಲ್ಯವೆಷ್ಟು ಗೊತ್ತ?!
- Movies
ಮೇಕಪ್ ಆರ್ಟಿಸ್ಟ್ ನಿಧನ: ಕಣ್ಣೀರಿಟ್ಟ ನಟಿ ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Finance
7,000 ರುಪಾಯಿ ಗುಜರಿ ಕಾರಿಗೆ 7 ಕೋಟಿ ಕೊಟ್ಟು ಖರೀದಿಸಿದ್ದ ಎಲಾನ್ ಮಸ್ಕ್
- Lifestyle
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಲೆನೊವೊ ಪರಿಚಯಿಸಲಿದೆ ವಿಶ್ವದ ಮೊದಲ ಫೋಲ್ಡೆಬಲ್ ಲ್ಯಾಪ್ಟಾಪ್!
ತಂತ್ರಜ್ಞಾನದಲ್ಲಿ ಸಾಕಷ್ಟು ಹೊಸ ಬೆಳವಣಿಗೆಗಳು ಆಗುತ್ತಿದ್ದು, ಅವುಗಳಲ್ಲಿ ಫೋಲ್ಡೆಬಲ್ ಸ್ಮಾರ್ಟ್ಫೋನ್ಗಳು ಮೊಬೈಲ್ ಲೋಕದಲ್ಲಿ ಹೊಸ ಅಲೆಯನ್ನು ಸೃಷ್ಠಿಸಿವೆ. ಅದೇ ತರಹ ಲ್ಯಾಪ್ಟಾಪ್ಗಳಲ್ಲಿಯೂ ಈಗ ಫೋಲ್ಡೆಬಲ್ ಜಮಾನ ಶುರುವಾಗಲಿದ್ದು, ಲೆನೊವಾ ಕಂಪನಿಯು ಫೋಲ್ಡೆಬಲ್ ಲ್ಯಾಪ್ಟಾಪ್ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಮೂಲಕ ವಿಶ್ವದ ಮೊದಲ ಫೋಲ್ಡೆಬಲ್ ಲ್ಯಾಪ್ಟಾಪ್ ಪರಿಚಯಿಸಿದ ಹೆಗ್ಗಳಿಕೆಗೆ ಲೆನೊವೊ ಕಂಪನಿ ತನ್ನದಾಗಿಸಿಕೊಳ್ಳಲಿದೆ.
ಹೌದು, ಲೆನೊವೊ ಕಂಪನಿಯು ಜನಪ್ರಿಯ 'ಥಿಂಕ್ಪ್ಯಾಡ್ ಎಕ್ಸ್1' (Thinkpad X1) ಸರಣಿಯಲ್ಲಿ ಮೊದಲ ಫೋಲ್ಡೆಬಲ್ ಲ್ಯಾಪ್ಟಾಪ್ ತಯಾರಿಸಿದ್ದು, ಮುಂದಿನ ವರ್ಷ(2020) ಗ್ರಾಹಕರ ಕೈ ಸೇರಲಿದೆ. ಕಂಪನಿಯ ಮುಂಬರಲಿರುವ ಫೋಲ್ಡೆಬಲ್ ಲ್ಯಾಪ್ಟಾಪ್ ಎರಡು ಬದಿಯಲ್ಲಿ ವಿಶಾಲ ಡಿಸ್ಪ್ಲೇಯನ್ನು ಹೊಂದಿರಲಿದ್ದು, ಆ ಪೈಕಿ ಒಂದು ಬದಿ ಡಿಸ್ಪ್ಲೇಯು ಟಚ್ ಸ್ಕ್ರೀನ್ ಮಾದರಿಯಲ್ಲಿ ಇರಲಿದೆ ಎನ್ನಲಾಗಿದೆ.
ಲೆನೊವೊ ಕಂಪನಿಯು ಬರಲಿರುವ ಫೋಲ್ಡೆಬಲ್ ಲ್ಯಾಪ್ಟಾಪ್ ಸುಮಾರು 90 ಡಿಗ್ರಿ ಆಂಗಲ್ನಲ್ಲಿ ಮಡುಚುವ ಆಕಾರದಲ್ಲಿರಲಿದ್ದು, ಅತೀ ತೆಳುವಾದ ರಚನೆಯನ್ನು ಹೊಂದಿದೆ. ಟಚ್ ಸ್ಕ್ರೀನ್ ಮಾದರಿಯಲ್ಲಿ ಇದರ ಡಿಸ್ಫ್ಲೇ ಇದ್ದು, ಅಬಳಕೆದಾರರಿಗೆ ಕೀಬೋರ್ಡ್ ಬೇಕಿದ್ದರೇ ಪೊಲ್ಡೆಬಲ್ ಲ್ಯಾಪ್ಟಾಪ್ಗೆ ಜೋಡಿಸಿಕೊಳ್ಳುವ ಆಯ್ಕೆ ನೀಡಲಾಗಿದೆ. ಆದರೆ ಇನ್ನು ಅಧಿಕೃತವಾಗಿ ಲ್ಯಾಪ್ಟಾಪ್ ಹೆಸರನ್ನು ಅಂತಿಮಗೊಳಿಸಿಲ್ಲ. ಹಾಗಾದರೇ ಲೆನೊವೊ ಫೊಲ್ಡೆಬಲ್ ಲ್ಯಾಪ್ಟಾಪ್ ಯಾವೆಲ್ಲಾ ಫೀಚರ್ಸ್ಗಳನ್ನು ಹೊಂದಿರಲಿದೆ ಎಂಬುದನ್ನು ಮುಂದೆ ನೋಡೋಣ.
ಓದಿರಿ : ಆಡುವ ವಯಸ್ಸಿನಲ್ಲೇ ದೇಶವೇ ಮೆಚ್ಚುವಂತಹ ಸಾಧನೆ ಮಾಡಿದ 'ಅಯುಷ್'!

ಡಿಸ್ಪ್ಲೇ
13.3 ಇಂಚಿನ ಪೂರ್ಣ ಹೆಚ್ಡಿ OLED ಡಿಸ್ಪ್ಲೇ ಸಾಮರ್ಥ್ಯವನ್ನು ಹೊಂದಿರಲಿದ್ದು, 2K ರೆಸಲ್ಯೂಶನ್ ಸ್ಕ್ರೀನ್ ಇದಾಗಿರಲಿದೆ. ಡಿಸ್ಪ್ಲೇಯನ್ನು ಮಡಚಿದಾಗ 9.6 ಇಂಚಿನಲ್ಲಿ ಕಾಣಿಸಿಕೊಳ್ಳಲಿದೆ. ಮಡುಚುವ ಡಿಸ್ಪ್ಲೇ ಮಾದರಿಯಲ್ಲಿರುವ ಈ ಲ್ಯಾಪ್ಟಾಪ್ನ ಅರ್ಧ ಸ್ಕ್ರೀನ್ ಅನ್ನು ಡಿಸ್ಪ್ಲೇ ಆಗಿ ಮತ್ತು ಇನ್ನರ್ಧ ಸ್ಕ್ರೀನ್ ಕೀಬೋರ್ಡ್ ಆಗಿ ಬಳಸಬಹುದಾಗಿದೆ.

ಬಹುಉಪಯೋಗಿ ಪಿಸಿ
ಪೋಲ್ಡೆಬಲ್ ಪಿಸಿ ಬಹುಉಪಯೋಗಿ ಡಿವೈಸ್ ಆಗಿದ್ದು, ಇದನ್ನು ಲ್ಯಾಪ್ಟಾಪ್, ನೋಟ್ಬುಕ್, ವಿಡಿಯೊ ಪ್ಲೇಯರ್, ಟಾಬ್ಲೆಟ್ ಜೊತೆ ಪೆನ್ ಮಾದರಿ ಆಗಿಯೂ ಸಹ ಬಳಸಬಹುದಾಗಿದೆ. ಹಾಗೆಯೇ ಇದಕ್ಕೊಂದು ಸ್ಯ್ಟಾಂಡ್ ನೀಡಲಾಗಿದ್ದು, ಸ್ಟ್ಯಾಂಡ್ ಬಳಸಿ ಡೆಸ್ಕ್ಟಾಪ್ ಪಿಸಿ ಮಾದರಿಯಂತೆಯೂ ಸಹ ಉಪಯೋಗಿಸುವ ಆಯ್ಕೆಗಳನ್ನು ಇದು ಹೊಂದಿರುವುದು ವಿಶೇಷ.

ಇತರೆ ಫೀಚರ್ಸ್
ಫೊಲ್ಡೆಬಲ್ ಪಿಸಿಯು ವಿಂಡೊಸ್ ಓಎಸ್ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನುವ ಮಾಹಿತಿಯಷ್ಟೆ ಕಂಪನಿಯು ಹೊರಹಾಕಿದ್ದು, ಇನ್ನುಳಿದಂತೆ ಎರಡು ಯುಎಸ್ಬಿ ಪೋರ್ಟ್ ಆಯ್ಕೆಗಳು ಇರಲಿದೆ. ಇದರೊಂದಿಗೆ IR ಕ್ಯಾಮೆರಾ ಆಯ್ಕೆ ಇರಲಿರುವ ಜೊತೆಗೆ ಸೌಂಡ್ಗಾಗಿ ಸ್ಟೀರಿಯೊ ಸ್ಪೀಕರ್ಸ್ಗಳನ್ನು ಒದಗಿಸಲಾಗಿದೆ.

2020ಕ್ಕೆ ಬರಲಿದೆ
ಲೆನೊವೊ ಕಂಪನಿಯು ಮಡಚುವ ಸ್ಕ್ರೀನ್ ಮಾದರಿ ಲ್ಯಾಪ್ಟಾಪ್ ಅನ್ನು ತಯಾರಿಸುತ್ತಿದ್ದು, ಇದು ವಿಶ್ವದಲ್ಲಿಯೇ ಮೊದಲ ಮಡಚುವ ಪಿಸಿ ಎಂದೆನಿಸಿಕೊಳ್ಳಲಿದೆ. ಸದ್ಯ ಸುದ್ದಿ ಮಾಡುತ್ತಿರುವ ಈ ಫೋಲ್ಡೆಬಲ್ ಲ್ಯಾಪ್ಟಾಪ್ ಸೇಲ್ ಆರಂಭಿಸುವುದು ಮಾತ್ರ ಮುಂದಿನ ವರ್ಷ 2020 ರ ಜನೆವರಿಯಲ್ಲಿ ಎನ್ನಲಾಗುತ್ತಿದೆ.
ಓದಿರಿ : ಫ್ಲ್ಯಾಗ್ಶಿಫ್ ಸ್ಮಾರ್ಟ್ಫೋನ್!..ಗ್ರಾಹಕರ ಫೇವರೇಟ್ ಯಾವುದು ಗೊತ್ತಾ?
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090