10.1 ಇಂಚ್ ನ ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ 2 ಬಂತು

By Varun
|

10.1 ಇಂಚ್ ನ ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ 2 ಬಂತು

ಸ್ಯಾಮ್ಸಂಗ್ ಈ ವಾರ ಗ್ಯಾಲಕ್ಸಿ ನಾಟ್ ಫ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ, ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ 750 ನ ಹೊಸ ಆವೃತ್ತಿಯಾದ, 10.1 ಇಂಚ್ ಸ್ಕ್ರೀನ್ ಇರುವ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ 2 10.1 ಎಂಬ ಹೆಸರಿನ ಈ ಟ್ಯಾಬ್ಲೆಟ್ ಫೆಬ್ ತಿಂಗಳಲ್ಲಿ ನಡೆದ ಮೊಬೈಲ್ ವಾರದಲ್ ಕಾಂಗ್ರೆಸ್ ನಲ್ಲಿ ಅನಾವರಣಗೊಂಡಿತ್ತು. ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ ವಿಚ್  ತಂತ್ರಾಂಶವಿರುವ ಇದು 16 GB ಮಾಡಲ್ ನಲ್ಲಿ ಬಿಡುಗಡೆಯಾಗಿದೆ.

ಇದರ ಫೀಚರುಗಳು ಈ ರೀತಿ ಇವೆ:
 • 10.1ಇಂಚ್ ಕೆಪಾಸಿಟಿವ್ ಟಚ್ ಸ್ಕ್ರೀನ್

 • PLS (ಪ್ಲೇನ್ ಲೈನ್ ಸ್ವಿಚಿಂಗ್) ತಂತ್ರಜ್ಞಾನ ದ ಡಿಸ್ಪ್ಲೇ
 • 1GHz DDR 2 ರಾಮ್
 • 1GB ಡ್ಯುಯಲ್ ಕೋರ್ ಪ್ರೊಸೆಸರ್
 • ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ ವಿಚ್  ತಂತ್ರಾಂಶ
 •  HSPA + HSPA + 3G ಸಂಪರ್ಕ
 • ವೈಫೈ, ಬ್ಲೂಟೂತ್, A-GPS ಸಂಪರ್ಕ
 • 3G ಮೆಗಾಪಿಕ್ಸೆಲ್ ಕ್ಯಾಮರಾ (HD 720p ವೀಡಿಯೋ ತೆಗೆಯಬಹುದು)
 • ವಿಡಿಯೋ ಕಾನ್ಫರೆನ್ಸಿಂಗ್ ಮತ್ತು ವೀಡಿಯೊ ಕರೆ ಮಾಡಬಹುದಾದ VGA​​ಕ್ಯಾಮೆರಾ.
 • 7000 mAh ಬ್ಯಾಟರಿ
 • ಸ್ಯಾಮ್ಸಂಗ್ ಆನ್ಲೈನ್ ಮಳಿಗೆಯಲ್ಲಿ ಇದನ್ನ್ನು ನೀವು 32,990 ರೂಪಾಯಿಗೆ ಖರೀದಿ ಮಾಡಬಹುದಾಗಿದೆ.

  Most Read Articles
  Best Mobiles in India

  ಉತ್ತಮ ಫೋನ್‌ಗಳು

  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X