ಅಮೆಜಾನ್ ಸೇಲ್‌ನಲ್ಲಿ ಆಪಲ್ ಪ್ರಾಡಕ್ಟ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌!

ಇ-ಕಾಮರ್ಸ್‌ ದೈತ್ಯ ಎನಿಸಿಕೊಂಡಿರುವ ಅಮೆಜಾನ್‌ ವಿಶೇಷ ಸೇಲ್‌ಗಳಿಗೆ ಹೆಸರುವಾಸಿಯಾಗಿದೆ. ಸದ್ಯ ದೇಶದಲ್ಲಿ ನವರಾತ್ರಿಯ ಸಂಭ್ರಮಕ್ಕೆ ಇನ್ನಷ್ಟು ರಂಗು ತುಂಬಲು ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಅನ್ನು ಆಯೋಜಿಸಿದೆ. ಈ ಸೇಲ್‌ ಈಗಾಗಲೇ ಆಕ್ಟೋಬರ್‌ 3 ರಿಂದ ಶುರುವಾಗಿದ್ದು, ಗ್ರಾಹಕರಿಗೆ ಭರ್ಜರಿ ಆಫರ್‌ಗಳನ್ನು ನೀಡುತ್ತಿದೆ. ಇನ್ನು ಈ ಸೇಲ್‌ನಲ್ಲಿ ಎಲ್ಲಾ ಮಾದರಿಯ ಪ್ರಾಡಕ್ಟ್‌ಗಳಿಗೂ ವಿಶೇಷವಾದ ಡಿಸ್ಕೌಂಟ್‌ ಅನ್ನು ನೀಡಲಾಗ್ತಿದೆ. ಅದರಲ್ಲೂ ಆಪಲ್‌ ಐಫೋನ್‌ಗಳ ಮೆಲೆ ಬಿಗ್‌ ಡಿಸ್ಕೌಂಟ್‌ ಅನ್ನು ನೀಡುತ್ತಿದೆ.

ಅಮೆಜಾನ್ ಸೇಲ್‌ನಲ್ಲಿ ಆಪಲ್ ಪ್ರಾಡಕ್ಟ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌!

ಹೌದು, ಅಮೆಜಾನ್ ಗ್ರೇಟ್‌ ಇಂಡಿಯನ್‌ ಫೇಸ್ಟಿವಲ್‌ ಸೇಲ್‌ನಲ್ಲಿ ಐಫೋನ್‌ಗಳು, ಐಪ್ಯಾಡ್‌ಗಳು, ಏರ್‌ಪಾಡ್‌ಗಳು ಮತ್ತು ಇತರ ಡಿವೈಸ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌ ದೊರೆಯುತ್ತಿದೆ. ಆಪಲ್‌ ಸಂಸ್ಥೆಯ ವಿವಿಧ ಉತ್ಪನ್ನಗಳ ಮೇಲೆ ವಿವಿಧ ಡೀಲ್‌ಗಳನ್ನು ನೀಡುತ್ತಿದೆ. ನೀವು ಕೂಡ ಆಪಲ್ ಪ್ರಾಡಕ್ಟ್‌ಗಳನ್ನು ಖರೀದಿಸುವುದಾದರೆ ಇದಕ್ಕಿಂತ ಉತ್ತಮವಾದ ಸಮಯವಿಲ್ಲ ಎಂದೇ ಹೇಳಬಹುದು. ಇನ್ನು ಐಫೋನ್ ಖರೀದಿಯಲ್ಲಿ 13,650 ರೂ.ಗಳ ವರೆಗಿನ ಎಕ್ಸ್‌ಚೇಂಜ್‌ ಆಫರ್‌ ಸಿಗಲಿದೆ. ಹಾಗಾದ್ರೆ ಅಮೆಜಾನ್‌ ಸೇಲ್‌ನಲ್ಲಿ ನೀವು ಡಿಸ್ಕೌಂಟ್‌ನಲ್ಲಿ ಖರೀದಿಸಬಹುದಾದ ಐಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮೆಜಾನ್ ಸೇಲ್‌ನಲ್ಲಿ ಆಪಲ್ ಪ್ರಾಡಕ್ಟ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌!

ಐಫೋನ್ 12 ಪ್ರೊ ಮ್ಯಾಕ್ಸ್‌

ಅಮೆಜಾನ್‌ ಸೇಲ್‌ನಲ್ಲಿ ಐಫೋನ್ 12 ಪ್ರೊ ಮ್ಯಾಕ್ಸ್‌ 128GB ರೂಪಾಂತರವು ಡಿಸ್ಕೌಂಟ್‌ನಲ್ಲಿ 10,000ರೂ. ಇಳಿಕೆ ಆಗಿದ್ದು, ಪ್ರಸ್ತುತ 1,19,900ರೂ.ಗಳಿಗೆ ಲಭ್ಯವಿದೆ. ಹಾಗೆಯೇ ಐಫೋನ್ 12 ಪ್ರೊ ಮ್ಯಾಕ್ಸ್ 256GB ರೂಪಾಂತರದ ಆಯ್ಕೆಯನ್ನು 129,900ರೂ.ಗಳಿಗೆ ಖರೀದಿಸಬಹುದಾಗಿದೆ. ಈ ಐಫೋನ್‌ 6.7-ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇಯನ್ನು ಹೊಂದಿದೆ. ಇದು ಆಪಲ್‌ನ A14 ಬಯೋನಿಕ್ SoC ಪ್ರೊಸೆಸರ್‌ ಅನ್ನು ಪಡೆದುಕೊಂಡಿದೆ. ಇನ್ನು ಈ ಐಫೋನ್‌ ಟ್ರಿಪಲ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಅಲ್ಲದೆ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಫೋನ್ ಅನ್ನು IP68 ಎಂದು ರೇಟ್ ಮಾಡಲಾಗಿದೆ.

New Apple iPhone 12 Pro Max (128GB) - Gold
₹1,19,900.00
₹129,900.00
8%

ಆಪಲ್‌ ಐಫೋನ್‌ 12 Pro
ಆಪಲ್‌ ಐಫೋನ್‌ 12 ಪ್ರೊ 128GB ಮಾದರಿಯ ಆಯ್ಕೆ ಅಮೆಜಾನ್‌ ಸೇಲ್‌ನಲ್ಲಿ 1,09,900ರೂ.ಗಳಿಗೆ ಲಭ್ಯವಾಗಲಿದೆ. ಇದು 6.1 ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಸೆರಾಮಿಕ್ ಶೀಲ್ಡ್ ಗ್ಲಾಸ್‌ ಪ್ರೊಟೆಕ್ಷನ್‌ ಅನ್ನು ಹೊಂದಿದೆ. ಇದು ಆಪಲ್‌ನ A14 ಬಯೋನಿಕ್ SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಆಪಲ್‌ ಐಫೋನ್‌ 12 Pro ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ.

New Apple iPhone 12 Pro (128GB) - Graphite
₹1,09,900.00
₹119,900.00
8%

ಆಪಲ್ ಐಪ್ಯಾಡ್ ಮಿನಿ (2019)
ಆಪಲ್ ಐಪ್ಯಾಡ್ ಮಿನಿ (2019) ಅಮೆಜಾನ್‌ನಲ್ಲಿ ಕೇವಲ 34,900ರೂ.ಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ಡಿಸ್‌ವೈಸ್‌ 7.9 ಇಂಚಿನ ರೆಟಿನಾ ಡಿಸ್‌ಪ್ಲೇ ಹೊಂದಿದೆ. ಇದು ಆಪಲ್‌ನ A12 ಬಯೋನಿಕ್ ಪ್ರೊಸೆಸರ್ ಹೊಂದಿದೆ. ಜೊತೆಗೆ 64GB ಆನ್‌ಬೋರ್ಡ್ ಸ್ಟೋರೇಜ್ ಅನ್ನು ಹೊಂದಿದೆ. ಆಪಲ್ ಐಪ್ಯಾಡ್ ಮಿನಿ (2019) 8MP ಪ್ರೈಮರಿ ಕ್ಯಾಮೆರಾ ಮತ್ತು 7MP ಸೆಲ್ಫಿ ಕ್ಯಾಮೆರಾ ಹೊಂದಿದೆ.

2019 Apple iPad Mini with A12 Bionic chip (7.9-inch/20.1 cm, Wi‑Fi, 64GB) - Space Grey (5th Generation)
₹34,900.00

ಆಪಲ್ ಮ್ಯಾಕ್‌ಬುಕ್ ಪ್ರೊ (2020)
ಆಪಲ್ ಮ್ಯಾಕ್‌ಬುಕ್ ಪ್ರೊ (2020) ಅಮೆಜಾನ್‌ ಸೇಲ್‌ನಲ್ಲಿ 1,09,990 ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ಈ ಡಿವೈಸ್‌ 13.3-ಇಂಚಿನ ರೆಟಿನಾ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಪಲ್ ವಿನ್ಯಾಸಗೊಳಿಸಿದ M1 ಚಿಪ್ ಪ್ರೊಸೆಸರ್‌ ಹೊಂದಿದೆ. ಇದು 8GB RAM ಸಾಮರ್ಥ್ಯವನ್ನು ಪಡೆದುಕೊಂಡಿದೆ.

2020 Apple MacBook Pro (13.3-inch/33.78 cm, Apple M1 chip with 8‑core CPU and 8‑core GPU, 8GB RAM, 256GB SSD) - Space Grey
₹1,09,990.00
₹122,900.00
11%

ಆಪಲ್ ಏರ್‌ಪಾಡ್ಸ್ ಮ್ಯಾಕ್ಸ್ (ಸ್ಪೇಸ್‌ ಗ್ರೇ)
ಇನ್ನು ಅಮೆಜಾನ್‌ ಸೇಲ್‌ನಲ್ಲಿ ಆಪಲ್ ಏರ್‌ಪಾಡ್ಸ್ ಮ್ಯಾಕ್ಸ್ 59,900ರೂ.ಗಳಿಗೆ ಲಭ್ಯವಿದೆ. ಇನ್ನು ಈ ಹೆಡ್‌ಫೋನ್‌ಗಳು ಆಪಲ್-ವಿನ್ಯಾಸಗೊಳಿಸಿದ ಡೈನಾಮಿಕ್ ಡ್ರೈವರ್ ಅನ್ನು ಹೊಂದಿದ್ದು ಹೆಚ್ಚಿನ ವಿಶ್ವಾಸಾರ್ಹತೆಯ ಆಡಿಯೋವನ್ನು ಒದಗಿಸುತ್ತವೆ. ಇದು ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಬೆಂಬಲವನ್ನು ಪಡೆದುಕೊಂಡಿದೆ.

New Apple AirPods Max - Space Grey
₹59,900.00

ಆಪಲ್ ಏರ್‌ಪಾಡ್ಸ್ ಪ್ರೊ
ಆಪಲ್ ಏರ್‌ಪಾಡ್ಸ್ ಪ್ರೊ ಪ್ರಸ್ತುತ ಅಮೆಜಾನ್‌ ಸೇಲ್‌ನಲ್ಲಿ 17,990ರೂ.ಗಳಿಗೆ ಲಭ್ಯವಿದೆ. ಇನ್ನು ಈ ಏರ್‌ಪಾಡ್ಸ್‌ ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ ಆಗಿದ್ದು, ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಹೊಂದಿದೆ. ಇದರಿಂದ ಸುತ್ತಮುತ್ತಲಿನ ಶಬ್ದವನ್ನು ಕೇಳಲು ಪಾರದರ್ಶಕ ಮೋಡ್ ಅನ್ನು ಒಳಗೊಂಡಿರುತ್ತವೆ.

Apple AirPods Pro
₹17,990.00
₹24,900.00
28%

Disclaimer: This site contains affiliate links to products. We may receive a commission for purchases made through these links. However, this does not influence or impact any of our articles, such as reviews, comparisons, opinion pieces and verdicts.

Best Deals and Discounts
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X