ರೆಡ್ಮಿ ಎಕ್ಸ್ಚೇಂಜ್ ಡೇಸ್ ಸೇಲ್: ರೆಡ್ಮಿ ಫೋನ್ಗಳು ರಿಯಾಯಿತಿಯಲ್ಲಿ ಲಭ್ಯ!
ಇ ಕಾಮರ್ಸ್ ದೈತ್ಯ ಅಮೆಜಾನ್ ಶಾಪಿಂಗ್ ಪ್ರಿಯರನ್ನು ಸೆಳೆಯಲು ಏನಾದರೊಂದು ಕೊಡುಗೆ ನೀಡುತ್ತಲೇ ಸಾಗಿದೆ. ಅದರಲ್ಲಿಯೂ ಹಬ್ಬ ಹಾಗೂ ವಿಶೇಷ ದಿನಗಳು ಬಂದರೇ, ಮಾರಾಟ ಮೇಳಗಳನ್ನು ಆಯೋಜಿಸಿ ಗ್ಯಾಡ್ಜೆಟ್ಸ್ ಉತ್ಪನ್ನಗಳಿಗೆ ಭರ್ಜರಿ ರಿಯಾಯಿತಿ ಕೊಡುಗೆ ಘೋಷಿಸುತ್ತದೆ. ಇದೀಗ ಅಮೆಜಾನ್ ತಾಣವು 'ರೆಡ್ಮಿ ಎಕ್ಸ್ಚೇಂಜ್ ಡೇಸ್' ಸೇಲ್ ಮೇಳ ವನ್ನು ಆಯೋಜಿಸಿ ಗ್ರಾಹಕರನ್ನು ತನ್ನತ್ತ ಸೆಳೆದಿದೆ.

ಹೌದು, ಅಮೆಜಾನ್ ಪ್ಲಾಟ್ಫಾರ್ಮ್ ಇದೀಗ 'ರೆಡ್ಮಿ ಎಕ್ಸ್ಚೇಂಜ್ ಡೇಸ್' ಸೇಲ್ ಆಯೋಜಿಸಿದೆ. ಈ ಮಾರಾಟ ಮೇಳವು ಏ. 16 ರಿಂದ ಪ್ರಾರಂಭವಾಗಿದ್ದು, ಏ. 20ರ ವರೆಗೂ ಚಾಲ್ತಿ ಇರಲಿದೆ. ಈ ವೇಳೆ ರೆಡ್ಮಿ ಸಂಸ್ಥೆಯ ಆಯ್ದ ಸ್ಮಾರ್ಟ್ಫೋನ್ಗಳಿಗೆ ಭರ್ಜರಿ ವಿನಿಮಯ ಡಿಸ್ಕೌಂಟ್ ಸಿಗಲಿದೆ. ಹೊಸ ರೆಡ್ಮಿ ಫೋನ್ಗೆ ಅಪ್ಡೇಟ್ ಆಗಲು ಇದು ಅತ್ಯುತ್ತಮ ಸಮಯ ಆಗಿದೆ. ಹಾಗಾದರೇ ಅಮೆಜಾನ್ ತಾಣವು ಆಯೋಜಿಸಿರುವ 'ರೆಡ್ಮಿ ಎಕ್ಸ್ಚೇಂಜ್ ಡೇಸ್' ಸೇಲ್ ನಲ್ಲಿ ಕೊಡುಗೆ ಪಡೆದ ಫೋನ್ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ರೆಡ್ಮಿ ನೋಟ್ 10T 5G ಸ್ಮಾರ್ಟ್ಫೋನ್
ರೆಡ್ಮಿ ನೋಟ್ 10T 5G ಸ್ಮಾರ್ಟ್ಫೋನ್ 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5 ಇಂಚಿನ ಫುಲ್ ಹೆಚ್ಡಿ + ಡಿಸ್ಪ್ಲೇ ಹೊಂದಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್ ಸಾಮರ್ಥ್ಯ ಹೊಂದಿದೆ. ಇದು ಆಂಡ್ರಾಯ್ಡ್ 11 ನಲ್ಲಿ MIUI ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ ಈ ಫೋನ್ 4GB + 64 GB ಮತ್ತು 6GB RAM + 128 GB ಆಂತರಿಕ ಸ್ಟೋರೇಜ್ ಆಯ್ಕೆಯಗಳನ್ನು ಹೊಂದಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಹಾಗೆಯೇ ಇದು 5,000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 18W ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ.
ರೆಡ್ಮಿ ನೋಟ್ 10S ಸ್ಮಾರ್ಟ್ಫೋನ್
ರೆಡ್ಮಿ ನೋಟ್ 10s ಸ್ಮಾರ್ಟ್ ಫೋನ್ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.43 ಇಂಚಿನ AMOLED ಫುಲ್ ಹೆಚ್ಡಿ ಡಿಸ್ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್ಪ್ಲೇ 20: 9 ರಚನೆಯ ಅನುಪಾತ ವನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಹೆಲಿಯೊ G95 SoC ಪ್ರೊಸೆಸರ್ ಸಾಮರ್ಥ್ಯ ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಆಧಾರಿತ MIUI 12.5 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಕ್ವಾಡ್ ರಿಯರ್ ಕ್ಯಾಮೆರಾ ಸೆಟಅಪ್ ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 13 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ. 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 33W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.
ರೆಡ್ಮಿ ನೋಟ್ 11 ಪ್ರೊ + 5G ಸ್ಮಾರ್ಟ್ಫೋನ್
ರೆಡ್ಮಿ ನೋಟ್ 11 ಪ್ರೊ + 5G ಸ್ಮಾರ್ಟ್ಫೋನ್ 6.67 ಇಂಚಿನ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 695 SoC ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿರಲಿದೆ. ಈ ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಶೂಟರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಶೂಟರ್ ಅನ್ನು ಒಳಗೊಂಡಿರಲಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿರುವ ಸೆಲ್ಫಿ ಕ್ಯಾಮೆರಾ ವನ್ನು ಹೊಂದಿದೆ. ಜೊತೆಗೆ 5,000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು 67W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ.
ಶಿಯೋಮಿ 11T ಪ್ರೊ 5G ಸ್ಮಾರ್ಟ್ಫೋನ್
ಶಿಯೋಮಿ 11T ಪ್ರೊ 5G ಸ್ಮಾರ್ಟ್ಫೋನ್ 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.67 ಇಂಚಿನ ಫುಲ್ ಹೆಚ್ಡಿ + ಡಿಸ್ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 888 SoC ಪ್ರೊಸೆಸರ್ ಬಲವನ್ನು ಪಡೆದಿದೆ. ಹಾಗೆಯೇ 8GB + 128 GB, 8GB + 256GB ಮತ್ತು 12GB + 256 GB ಸಾಮರ್ಥ್ಯದ ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಸ್ಮಾರ್ಟ್ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಯನ್ನು ಹೊಂದಿದೆ.
ರೆಡ್ಮಿ ನೋಟ್ 11 ಪ್ರೊ ಸ್ಮಾರ್ಟ್ಫೋನ್
ರೆಡ್ಮಿ ನೋಟ್ 11 ಪ್ರೊ ಸ್ಮಾರ್ಟ್ಫೋನ್ 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.67 ಇಂಚಿನ ಫುಲ್ HD+ ಡಿಸ್ಪ್ಲೇಯನ್ನು ಹೊಂದಿರಲಿದೆ. ಈ ಡಿಸ್ಪ್ಲೇ 120Hz ರಿಫ್ರೆಶ್ ರೇಟ್ ಮತ್ತು 1,200 ವರೆಗೆ ಗರಿಷ್ಠ ಬ್ರೈಟ್ನೆಸ್ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಇದು ಮೀಡಿಯಾಟೆಕ್ ಹಿಲಿಯೋ G96 SoC ಪ್ರೊಸೆಸರ್ ಹೊಂದಿದೆ. ಹಾಗೆಯೇ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿರಲಿದೆ. ಇನ್ನು ಈ ಸ್ಮಾರ್ಟ್ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 67W ವೇಗದ ಚಾರ್ಜಿಂಗ್ಗೆ ಬೆಂಬಲಿಸಲಿದೆ.
Disclaimer: This site contains affiliate links to products. We may receive a commission for purchases made through these links. However, this does not influence or impact any of our articles, such as reviews, comparisons, opinion pieces and verdicts.