ಸೋನಿ ಸಂಸ್ಥೆಯ 5 ಅತ್ಯುತ್ತಮ ಹೆಡ್‌ಫೋನ್‌ಗಳ ಲಿಸ್ಟ್ ಇಲ್ಲಿದೆ!

|

ಸ್ಮಾರ್ಟ್‌ಪೋನಿನಲ್ಲಿ ಸಂಗೀತ ಆಲಿಸುವುದು ಅಂದರೇ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು. ಹೀಗಾಗಿ ಬಹುತೇಕ ಬಳಕೆದಾರರು ಜರ್ನಿ ಸಮಯದಲ್ಲಿ ಹಾಡು ಕೇಳಲು ಅತ್ಯುತ್ತಮ ಸೌಂಡ್‌ ಕ್ವಾಲಿಟಿಯ ಬೆಸ್ಟ್‌ ಹೆಡ್‌ಫೋನ್‌ ಖರೀದಿಸಿಲು ಇಷ್ಟಪಡಿತ್ತಾರೆ. ಮಾರುಕಟ್ಟೆಯಲ್ಲಿ ಅನೇಕ ಬ್ರ್ಯಾಂಡ್‌ಗಳ ಹೆಡ್‌ಫೋನ್‌ಗಳು ಲಭ್ಯ ಇದ್ದರೂ ಖರೀದಿಸುವ ಗ್ರಾಹಕ ಮುಖ್ಯವಾಗಿ ಸೋನಿ ಸಂಸ್ಥೆಯ ಚಿತ್ತ ನೀಡುತ್ತಾರೆ.

ಮ್ಯೂಸಿಕ್

ಹೌದು, ಸೋನಿ ಬ್ರ್ಯಾಂಡ್‌ನ ಆಡಿಯೊ ಉಪಕರಣಗಳಿಗೆ ಮೊದಲಿನಿಂದಲೂ ಅತ್ಯುತ್ತಮ ಬೇಡಿಕೆ ಇದ್ದೇ ಇದೆ. ಸೋನಿ ಈಗಾಗಲೇ ಗುಣಮಟ್ಟದ ಸೌಂಡ್‌ ಕ್ವಾಲಿಟಿ ನೀಡುತ್ತಾ ಅಪಾರ ಗ್ರಾಹಕರನ್ನು ಸೆಳೆದಿದೆ. ಸೋನಿ ಇತ್ತೀಚಿಗೆ ವೈಯರ್‌ಲೆಸ್‌ ಹೆಡ್‌ಫೋನ್‌ಗಳನ್ನು ಪರಿಚಯಿಸಿದ್ದು, ಮ್ಯೂಸಿಕ್‌ ಕೇಳುವಾಗ ಹೊರಗಿನ ಶಬ್ದ ಕೇಳಿಸದಂತಹ ರಚನೆಯನ್ನು ಹೊಂದಿವೆ. ಹಾಗಾದರೇ ಸೋನಿ ಕಂಪನಿಯ ಪ್ರಮುಖ ಹೆಡ್‌ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ಎಂಬ ಮಾಹಿತಿ ನೀಡಲಾಗಿದೆ. ಮುಂದೆ ಓದಿರಿ.

ಸೋನಿ WH-1000XM2

ಸೋನಿ WH-1000XM2

ಈ ಹೆಡ್‌ಫೋನ್ ಹೊರಗಿನ ಶಬ್ದ ಕೇಳಿಸದ ಅಡಚಣೆ ಮುಕ್ತವಾಗಿದ್ದು, ಬೆಸ್ಟ್ ಎನಿಸಿಕೊಂಡಿದೆ. ಅತೀ ಹಗುರವಾದ ರಚನೆ ಇದ್ದು, ಇದರ ತೂಕ ಕೇವಲ 23ಗ್ರಾಂ ಆಗಿದೆ. ಇದೊಂದು ಉತ್ತಮ ವೈಯರ್‌ ಲೆಸ್‌ ಹೆಡ್‌ಫೋನ್‌ ಆಗಿದ್ದು, ಸುಮಾರು 33 ಅಡಿಯ ವ್ಯಾಪ್ತಿಯಲ್ಲಿ ವೈಯರ್‌ಲೆಸ್‌ ಕನೆಕ್ಟ್‌ ಆಗುವ ಸಾಮರ್ಥ್ಯವಿದೆ. 10 ಗಂಟೆಗಳ ಕಾಲ ನಿರಂತರ ಬಾಳಕೆ ಬರುವ ಬ್ಯಾಟರಿಯನ್ನು ಸಾಮರ್ಥ್ಯವನ್ನು ಹೊಂದಿದೆ.

ಸೋನಿ WH-1000XM3

ಸೋನಿ WH-1000XM3

ಅತ್ಯುತ್ತಮ ವೈಯರ್‌ಲೆಸ್‌ ಹೆಡ್‌ಫೋನ್‌ ಆಗಿದ್ದು, ಇದರ ವೈಯರ್‌ಲೆಸ್‌ ವ್ಯಾಪ್ತಿಯು 30ಮೀಟರ್ ಆಗಿದೆ. ಡೈನಾಮಿಕ್‌ ಮಾದರಿಯ 40mmನ ಡ್ಯುಯಲ್‌ ಡ್ರೈವರ್ಗಳನ್ನು ಹೊಂದಿರುವ ಈ ಹೆಡ್‌ಫೋನಿಗೆ 30 ಗಂಟೆಗಳ ಬ್ಯಾಟರಿ ಬಾಳಿಕೆ ಶಕ್ತಿಯನ್ನು ಒದಗಿಸಲಾಗಿದೆ. 4Hz to 40kHz ತರಂಗಾಂತರದ ಸಾಮರ್ಥ್ಯದಲ್ಲಿರಲಿದ್ದು, ಇದರೊಂದಿಗೆ 3.94 ಅಡಿ ಉದ್ದದ ಕೇಬಲ್‌ ನೀಡಲಾಗಿದೆ. ಸೌಂಡ್‌ ಕ್ವಾಲಿಟಿ ಉತ್ತಮವಾಗಿದೆ.

ಸೋನಿ WF-1000X ಏರ್‌ಬಡ್ಸ್‌

ಸೋನಿ WF-1000X ಏರ್‌ಬಡ್ಸ್‌

ಸೋನಿಯ ಈ ವೈಯರ್‌ಲೆಸ್ಸ್ ಏರ್‌ಬಡ್ಸ್‌ ಸುಮಾರು 9ಗಂಟೆಗಳ ಕಾಲ ನಿರಂತರ ಬಾಳುವ ಸಾಮರ್ಥ್ಯವನ್ನು ಹೊಂದಿದೆ. 6mm ಡ್ಯುಯಲ್‌ ಡ್ರೈವರ್‌ಗಳನ್ನು ಒಳಗೊಂಡಿದ್ದು, 20Hz-20,000Hz ತರಂಗಾಂತರದ ವ್ಯಾಪ್ತಿಯನ್ನು ಹೊಂದಿದೆ. ಇದರ ತೂಕವು 6.8 ಗ್ರಾಂ ಆಗಿದೆ. ಆಂಬಿಯೆಂಟ್ ನಾಯ್ಸ್‌ ಮೋಡ್‌ ಆಯ್ಕೆಯು ಇರಲಿದೆ.

ಸೋನಿ MDR-ZX330BT

ಸೋನಿ MDR-ZX330BT

ಅತ್ಯುತ್ತಮ ವೈಯರ್‌ಲೆಸ್‌ ಹೆಡ್‌ಫೋನ್‌ ಆಗಿದ್ದು, ಇದರ ವೈಯರ್‌ಲೆಸ್‌ ವ್ಯಾಪ್ತಿಯು 30ಮೀಟರ್ ಆಗಿದೆ. ಡೈನಾಮಿಕ್‌ ಮಾದರಿಯ 30mm ನ ಡ್ಯುಯಲ್‌ ಡ್ರೈವರ್ಗಳನ್ನು ಹೊಂದಿರುವ ಈ ಹೆಡ್‌ಫೋನಿಗೆ 30 ಗಂಟೆಗಳ ಬ್ಯಾಟರಿ ಬಾಳಿಕೆ ಶಕ್ತಿಯನ್ನು ಒದಗಿಸಲಾಗಿದೆ. 20Hz-20,000H ತರಂಗಾಂತರದ ಸಾಮರ್ಥ್ಯದಲ್ಲಿರಲಿದ್ದು, ಇದರೊಂದಿಗೆ 3.94 ಅಡಿ ಉದ್ದದ ಕೇಬಲ್‌ ನೀಡಲಾಗಿದೆ. ಸೌಂಡ್‌ ಕ್ಲಿಯರಿಟಿ ಉತ್ತಮವಾಗಿದೆ.

ಸೋನಿ WI-SP600N

ಸೋನಿ WI-SP600N

20Hz-20,000Hz ತರಂಗಾಂತರಗಳ ಸಾಮರ್ಥ್ಯವನ್ನು ಹೊಂದಿರುವ ಈ ವೈಯರ್‌ಲೆಸ್‌ ಹೆಡ್‌ಫೋನ್ 10ಮೀಟರ್‌ ವ್ಯಾಪ್ತಿಯ ಅಂತರವರೆಗೂ ಕನೆಕ್ಟ್‌ ಆಗಲಿದೆ. ಶಕ್ತಿಯುತ ಬ್ಯಾಟರಿ ನೀಡಲಾಗಿದ್ದು, ಸುಮಾರು 6 ಗಂಟೆಗಳ ಕಾಲ ನಿರಂತರ ಬಾಳಿಕೆ ಬರುವ ಸಾಮರ್ಥ್ಯ ಹೊಂದಿದೆ. 6mm ಡ್ರೈವರ್‌ಗಳನ್ನು ಒಳಗೊಂಡಿದ್ದು, ಇದರ ತೂಕವು 21ಗ್ರಾಂ ಆಗಿದೆ. ಆಂಬಿಯಂಟ್ ಮೋಡ್‌ ಆಯ್ಕೆ ಇದೆ.

Most Read Articles
Best Mobiles in India

English summary
Evergreen audio brand Sony top five headphone list.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X